INDWvsIREW: ಜೆಮಿಮಾ ಚೊಚ್ಚಲ ಶತಕ: ದಾಖಲೆಯ ರನ್ ಪೇರಿಸಿದ ಭಾರತ ವನಿತೆಯರು
Team Udayavani, Jan 12, 2025, 4:11 PM IST
ರಾಜಕೋಟ್: ಪ್ರವಾಸಿ ಐರ್ಲೆಂಡ್ ವನಿತೆಯರ ವಿರುದ್ದದ ದ್ವಿತೀಯ ಪಂದ್ಯದಲ್ಲಿ ಸ್ಮೃತಿ ಮಂಧನಾ ನಾಯಕತ್ವದ ಭಾರತ ವನಿತೆಯರ ತಂಡವು ದಾಖಲೆಯ ರನ್ ಗಳಿಸಿದೆ. ಜೆಮಿಮಾ ರೋಡ್ರಿಗಸ್ ಶತಕದ ನೆರವಿನಿಂದ ಭಾರತವು ಐದು ವಿಕೆಟ್ ನಷ್ಟಕ್ಕೆ 370 ರನ್ ಗಳಿಸಿದ್ದು, ಅತ್ಯಧಿಕ ಏಕದಿನ ಮೊತ್ತವನ್ನು ದಾಖಲಿಸಿದೆ.
ಮೊದಲ ನಾಲ್ಕು ಬ್ಯಾಟರ್ ಗಳು ಅರ್ಧಶತಕದ ಗಡಿ ದಾಟಿದ್ದು ಭಾರತೀಯ ಇನ್ನಿಂಗ್ಸ್ ನ ವಿಶೇಷವಾಗಿತ್ತು. ನಾಯಕಿ ಸ್ಮೃತಿ ಮಂಧನಾ, ಪ್ರತಿಕಾ ರಾವಲ್, ಜೆಮಿಮಾ ರೋಡ್ರಿಗಸ್ ಮತ್ತು ಹರ್ಲೀನ್ ಡಿಯೋಲ್ ಮಿಂಚಿದರು. ಜೆಮಿಮಾ ಶತಕ ಬಾರಿಸಿ ಮಿಂಚಿದರೆ, ಹರ್ಲೀನ್ ಶತಕದಂಚಿನಲ್ಲಿ ಔಟಾದರು.
ಮಂಧಾನಾ 54 ಎಸೆತಗಳಲ್ಲಿ 73 ರನ್ ಗಳಿಸುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು. ತನ್ನ ಅಮೋಘ ಫಾರ್ಮ್ ಮುಂದುವರಿಸಿದ ಪ್ರತೀಕಾ ರಾವಲ್ 61 ಎಸೆತಗಳಲ್ಲಿ 67 ರನ್ ಗಳಿಸಿದರು. ಈ ಜೋಡಿ 70 ರನ್ ಗಳ ಭರ್ಜರಿ ಜೊತೆಯಾಟ ನಡೆಸಿ ಭಾರತದ ಪ್ರಾಬಲ್ಯಕ್ಕೆ ಅಡಿಪಾಯ ಹಾಕಿತು. ಮೊದಲ ಏಕದಿನ ಪಂದ್ಯದಲ್ಲಿ 89 ರನ್ ಗಳಿಸಿದ ನಂತರ ರಾವಲ್ ಅವರ ಸ್ಥಿರತೆ ಭಾರತದ ಬ್ಯಾಟಿಂಗ್ ಯಶಸ್ಸಿನಲ್ಲಿ ಪ್ರಮುಖ ಅಂಶವಾಗಿದೆ.
ಜೆಮಿಮಾ ರೊಡ್ರಿಗಸ್ ಅವರು ತನ್ನ ಹಿಂದಿನ ಹೈಯೆಸ್ಟ್ ಸ್ಕೋರ್ 86 ಅನ್ನು ಹಿಂದಿಕ್ಕಿ ಶತಕ ಬಾರಿಸಿದರು. ಭಾರತದ ಆಟಗಾರ್ತಿಯಾಗಿ ತಮ್ಮ ಏಳನೇ ವರ್ಷದಲ್ಲಿ ತಮ್ಮ ಚೊಚ್ಚಲ ಅಂತರರಾಷ್ಟ್ರೀಯ ಶತಕವನ್ನು ಗಳಿಸಿದರು.
Jemimah Rodrigues celebrates her maiden ODI century with a guitar celebration! 🎸#INDvIRE pic.twitter.com/L9tKXU3RY4
— OneCricket (@OneCricketApp) January 12, 2025
ಹಿಂದಿನ ಪಂದ್ಯದಲ್ಲಿ ಆರಂಭದಲ್ಲೇ ವಿಕೆಟ್ ನೀಡಿದ್ದ ಹರ್ಲೀನ್ ಡಿಯೋಲ್ ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ 89 ರನ್ ಗಳಿಸಿದರು. ಡಿಯೋಲ್ ಮತ್ತು ಜೆಮಿಮಾ ರೊಡ್ರಿಗಸ್ ಅವರ ಅದ್ಭುತ 183 ರನ್‌ಗಳ ಜೊತೆಯಾಟವು ಭಾರತವನ್ನು ದಾಖಲೆಯ ಮೊತ್ತಕ್ಕೆ ಕೊಂಡೊಯ್ದಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India: ಬಿಸಿಸಿಐ ಬಳಿ ಕೆಲವು ತಿಂಗಳ ಅವಕಾಶ ಕೇಳಿದ ರೋಹಿತ್: ಸಭೆಯಲ್ಲಿ ಏನಾಯ್ತು?
IPL 2025 ಮಾರ್ಚ್ 23 ರಿಂದ ಆರಂಭ: ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ
Champions Trophy: ಬಾಂಗ್ಲಾದೇಶ ತಂಡ ಪ್ರಕಟ; ಇಬ್ಬರು ಹಿರಿಯ ಆಟಗಾರರಿಗೆ ಇಲ್ಲ ಸ್ಥಾನ
Saikia: ಬಿಸಿಸಿಐ ಕಾರ್ಯದರ್ಶಿಯಾಗಿ ಮಾಜಿ ಅಸ್ಸಾಂ ಕ್ರಿಕೆಟರ್ ದೇವಜಿತ್ ಸೈಕಿಯಾ ನೇಮಕ
Champions Trophy: ಟೀಂ ಇಂಡಿಯಾಗೆ ಗಾಯದ ಸಂಕಷ್ಟ; ಪ್ರಮುಖ ಬೌಲರ್ ಕೂಟದಿಂದ ಔಟ್!
MUST WATCH
ಹೊಸ ಸೇರ್ಪಡೆ
Kudremukh National Park: ವನ್ಯಜೀವಿ ಬೇಟೆಗೆ ಯತ್ನ; ಆರೋಪಿ ಬಂಧನ
ಮೋಹ ಪರವಶ, ಅಧಿಕಾರ ಮದ, ಮತ್ಸರದ ರಾಜಕಾರಣ ಮಾಡೋರಿಗೆ ಸತ್ಯ ಅರ್ಥವಾಗಲ್ಲ: ಸಿ.ಟಿ.ರವಿ
Bengaluru: ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು; ಭುಗಿಲೆದ್ದ ಆಕ್ರೋಶ
Tulu Film: ರೂಪೇಶ್ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಬಾಲಿವುಡ್ ಸೂಪರ್ ಸ್ಟಾರ್
ಮಕ್ಕಳ ಮೇಲೆ ಗದರದೇ, ಕೈ ಮಾಡದೆ ಶಿಸ್ತನ್ನು ಮೂಡಿಸುವುದು ಹೇಗೆ? ಇಲ್ಲಿದೆ ಕೆಲವು ಸಲಹೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.