![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Feb 19, 2024, 4:39 PM IST
ಹೊಸಬರ ಪ್ರಯತ್ನವಿರುವ “ಜುಗಲ್ ಬಂದಿ’ ಸಿನಿಮಾ ಮಾರ್ಚ್ 1 ರಂದು ತೆರೆಕಾಣಲಿದೆ. ದಿವಾಕರ ಡಿಂಡಿಮ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಒಳಗೊಂಡಿದೆ.
ಡಿಂಡಿಮ ಪ್ರೊಡಕ್ಷನ್ಸ್‌ನಡಿ ನಿರ್ಮಾಣವಾದ ಈ ಚಿತ್ರ ಹಲವು ಕಥೆಗಳ ಜುಗಲ್ ಬಂದಿ. ತಾಯಿ ಹೃದಯದ ಮಿಡಿತ, ಪ್ರೀತಿ, ವಂಚನೆ ಒಳಗೊಂಡ ಟ್ರೇರ್ಲ ತುಣುಕು ಕೂಡ ಅದರ ಝಲಕ್ ಕಟ್ಟಿಕೊಟ್ಟಿದೆ.
ಚಿತ್ರದಲ್ಲಿ ಕಾಂತಾರ ಖ್ಯಾತಿಯ ಮಾನಸಿ ಸುಧೀರ್, ಅರ್ಚನಾ ಕೊಟ್ಟಿಗೆ, ಅಶ್ವಿನ್ ರಾವ್ ಪಲ್ಲಕ್ಕಿ, ಸಂತೋಷ್ ಆಶ್ರಯ್, ಯಶ್ ಶೆಟ್ಟಿ ಒಳಗೊಂಡ ಮುಖ್ಯ ಭೂಮಿಕೆಯಿದೆ. ಪ್ರಕಾಶ್ ಬೆಳಗಲ್, ಚಂದ್ರಪ್ರಭಾ ಜಿ ಯುವಕ, ರಂಜನ್, ಯುಕ್ತ ಅಲ್ಲು ಸುಶ್, ಅರವಿಂದ್ ರಾವ್ ಒಳಗೊಂಡ ತಾರಾಬಳಗ “ಜುಗಲ್ ಬಂದಿ’ ಸಿನಿಮಾದಲ್ಲಿದೆ. ದಿವಾಕರ ಡಿಂಡಿಮ ನಿರ್ದೇಶನದ ಜೊತೆಗೆ ಡಿಂಡಿಮ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ಸಿನಿಮಾ ನಿರ್ಮಾಣ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ.
ಪ್ರದ್ಯೋತ್ತನ್ ಸಂಗೀತ ನಿರ್ದೇಶನ, ಪ್ರಸಾದ್ ಹೆಚ್ ಎಂ ಸಂಕಲನ ಚಿತ್ರಕ್ಕಿದೆ. ಚಿತ್ರದಲ್ಲಿ 3 ಹಾಡುಗಳಿದ್ದು, ನಿರ್ದೇಶಕ ದಿವಾಕರ್ ಡಿಂಡಿಮ ಸಾಹಿತ್ಯ ಬರೆದಿದ್ದಾರೆ. ರಿಷಿಕಾ ಫಿಲಂಸ್ ಸಿನಿಮಾದ ವಿತರಣೆಯ ಜವಾಬ್ದಾರಿ ಹೊತ್ತಿದೆ.
You seem to have an Ad Blocker on.
To continue reading, please turn it off or whitelist Udayavani.