Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?

ಎರಡೇ ವರ್ಷದಲ್ಲಿ 459 ಚ.ಕಿ.ಮೀ. ಕಾಡು ನಾಶ

Team Udayavani, Dec 23, 2024, 7:45 AM IST

Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?

ಭಾರತ ರಾಜ್ಯಗಳ ಅರಣ್ಯ ವರದಿ (ಐಎಫ್ಎಸ್‌ಆರ್‌-2023) ಪ್ರಕಟವಾಗಿದ್ದು, 2 ವರ್ಷ­ದಲ್ಲಿ ದೇಶದಲ್ಲಿ ಅರಣ್ಯ ಪ್ರದೇಶ ಹೆಚ್ಚಳವಾಗುತ್ತಿರು­ವುದು ಸಂತಸದ ಸಂಗತಿಯಾಗಿದೆ. ಆದರೆ ರಾಜ್ಯ­ದಲ್ಲಿ ಅರಣ್ಯ ಕುಸಿತವಾಗುತ್ತಿರುವುದು ಆಘಾತ­ಕಾರಿಯಾಗಿದೆ. ವರದಿ ಅನುಸಾರ ರಾಜ್ಯದ ಅರಣ್ಯದ ಒಟ್ಟು ಸ್ಥಿತಿಗತಿಯ ಮಾಹಿತಿ ಇಲ್ಲಿದೆ.

ಕಳೆದೆರಡು ವರ್ಷದಲ್ಲಿ ನಮ್ಮ ರಾಜ್ಯದ ಕಾಡಿನ ವಿಸ್ತೀರ್ಣ ರಾಜ್ಯ ರಾಜಧಾನಿ ಬೆಂಗಳೂರಿನ ವಿಸ್ತೀರ್ಣದ ಅರ್ಧಕ್ಕಿಂತ ಹೆಚ್ಚು ಕಡಿತವಾಗಿದೆ ಎಂಬ ಆಘಾತಕಾರಿ ಅಂಶವನ್ನು ಇಂಡಿಯಾ ಸ್ಟೇಟ್‌ ಆಫ್ ಫಾರೆಸ್ಟ್‌ ರಿಪೋರ್ಟ್‌ (ಐಎಫ್ಎಸ್‌ಆರ್‌) ಬಹಿರಂಗ ಪಡಿಸಿದೆ. ತನ್ಮೂಲಕ ರಾಜ್ಯದಲ್ಲಿ ಪರಿಸರ ಸಂರಕ್ಷಣೆಯ ಪ್ರಯತ್ನಗಳು ಸಂಪೂರ್ಣವಾಗಿ ಕೈಕೊಡುತ್ತಿರುವ ಸ್ಪಷ್ಟ ಸೂಚನೆ ಲಭಿಸಿದೆ.

ಒಂದೆಡೆ ರಾಜ್ಯದ ಅರಣ್ಯಗಳಲ್ಲಿ ಹುಲಿ, ಆನೆಗಳ ಆನೆಗಳ ಸಂಖ್ಯೆ ಹೆಚ್ಚುತ್ತ ಸಾಗುತ್ತಿದ್ದರೆ, ಇನ್ನೊಂದೆಡೆ ರಾಜ್ಯದ ಅರಣ್ಯ ಪ್ರದೇಶ ಕಡಿಮೆ ಆಗುತ್ತ ಹೋಗುತ್ತಿರುವುದು ಮುಂದಿನ ದಿನಗಳಲ್ಲಿ ಮಾನವ-ವನ್ಯಜೀವಿಗಳ ಸಂಘರ್ಷ ಇನ್ನಷ್ಟು ತೀವ್ರ­ಗೊಳ್ಳುವ ಸಾಧ್ಯತೆಯನ್ನು ಹೆಚ್ಚಿಸಿದೆ.

ಐಎಫ್ಎಸ್‌ಆರ್‌ ವರದಿ -2023ರಲ್ಲಿ ಈ ಹಿಂದೆ 2021ರಲ್ಲಿ ಪ್ರಕಟವಾದ ವರದಿಗೆ ಹೋಲಿಸಿದರೆ ಎರಡೇ ಎರಡು ವರ್ಷದಲ್ಲಿ ರಾಜ್ಯದ ಅರಣ್ಯ ಪ್ರದೇಶದಲ್ಲಿ 459.36 ಚ.ಕಿ.ಮೀ. ನಷ್ಟು (ಬೆಂಗಳೂರಿನ ವಿಸ್ತೀರ್ಣ 741 ಚದರ ಕಿ.ಮೀ.) ಕಡಿತ ಗೊಂಡಿರವುದು ರಾಜ್ಯದ ಅರಣ್ಯ ಇಲಾಖೆ, ಪರಿಸರ ಪ್ರೇಮಿಗಳಿಗೆ ಆತಂಕದ ಜತೆಗೆ ದೊಡ್ಡ ಸವಾಲನ್ನು ಮುಂದಿಟ್ಟಿದೆ. ದೇಶದಲ್ಲಿ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅರಣ್ಯ ಪ್ರಮಾಣದಲ್ಲಿ ಹೆಚ್ಚಳ ತೋರಿಸುತ್ತಿದ್ದರೆ ಕರ್ನಾಟಕ ಅರಣ್ಯ ವಿಸ್ತೀರ್ಣ ಕಡಿಮೆಯಾದ ರಾಜ್ಯಗಳಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ದಕ್ಷಿಣ ಭಾರತದಲ್ಲಿ ತಮಿಳುನಾಡು ಹೊರತು ಪಡಿಸಿದರೆ ಕರ್ನಾಟಕವೇ ತನ್ನ ಭೂ ವಿಸ್ತೀರ್ಣದಲ್ಲಿ ಅತ್ಯಂತ ಕಡಿಮೆ ಭಾಗ ಅರಣ್ಯ ಹೊಂದಿದೆ. ದೇಶದದಲ್ಲಿ ಶೇ. 25.17 ಭಾಗ ಅರಣ್ಯವಿದ್ದರೆ ರಾಜ್ಯದಲ್ಲಿ ಶೇ 20.47 ಮಾತ್ರ ಅರಣ್ಯವಿದ್ದು, ಅರಣ್ಯ ಸಂರಕ್ಷಣೆಯ ಜತೆಗೆ ಅರಣ್ಯ ವಿಸ್ತರಣೆಯ ಅಗತ್ಯವನ್ನು ಒತ್ತಿ ಹೇಳುತ್ತಿದೆ.

ಇದರ ಜತೆಗೆ ರಾಜ್ಯದಲ್ಲಿ ಬಿದಿರು ಬೆಳೆಯುವ ಪ್ರದೇಶ ದಲ್ಲಿಯೂ ಭಾರೀ ಇಳಿಕೆ ಕಂಡು ಬಂದಿದ್ದು, ದೇಶದಲ್ಲೇ ಅತೀ ಹೆಚ್ಚು ಬಿದಿರು ಬೆಳೆಯುವ ಪ್ರದೇಶದಲ್ಲಿನ ಕುಸಿತ ರಾಜ್ಯ ದಲ್ಲಾಗಿದೆ. 2021ರ ವರದಿ ಪ್ರಕಾರ ರಾಜ್ಯದಲ್ಲಿ 8,624 ಚದರ ಕಿ.ಮೀ. ಬಿದಿರು ಪ್ರದೇಶವಿದ್ದರೆ 2023ಕ್ಕೆ 7,334 ಚದರ ಕಿ.ಮೀ. (1,290 ಚದರ ಕಿ.ಮೀ.) ಕುಸಿತ ಕಂಡಿದೆ. ಅಂದರೆ ಶೇ. 14.96 ಪ್ರದೇಶ ಕಡಿಮೆಯಾಗಿದೆ.

ಈ ಮಧ್ಯೆಯು ಕರ್ನಾಟಕವು ಮೀಸಲು ಅರಣ್ಯ ಪ್ರದೇಶ ದೊಳಗೆ 93.14 ಚದರ ಕಿ.ಮೀ. ಅರಣ್ಯ ವಿಸ್ತೀರ್ಣವನ್ನು ಹೆಚ್ಚಿಸಿ ಕೊಂಡಿದೆ. ಅರಣ್ಯದ ಹೊರಗಿರುವ ಮರಗಳ ಸಂಖ್ಯೆಯಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ 213.93 ದಶಲಕ್ಷ ಕ್ಯೂಬಿಕ್‌ ಮೀಟರ್‌ನಷ್ಟು ಮರ ಕಾಡಿನ ಹೊರಗಿದ್ದರೆ ರಾಜ್ಯದಲ್ಲಿ 137.62 ದಶಲಕ್ಷ ಕ್ಯೂಬಿಕ್‌ ಮೀಟರ್‌ನಷ್ಟು ಮರ ಅರಣ್ಯದ ಹೊರಗಿದೆ. ಇನ್ನು ಅರಣ್ಯ ಕೃಷಿ ಹೆಚ್ಚಳದಲ್ಲಿ ಮಹಾ ರಾಷ್ಟ್ರ (136.45 ಮಿಲಿಯನ್‌ ಚ.ಕಿ.ಮೀ.) ಮೊದಲ ಸ್ಥಾನದ ಲ್ಲಿದ್ದರೆ ಕರ್ನಾಟಕ (98.31 ಮಿಲಿಯನ್‌ ಕ್ಯೂಬಿಕ್‌ ಚ.ಕಿ.ಮೀ) ಎರಡನೇ ಸ್ಥಾನದಲ್ಲಿದೆ. ಅರಣ್ಯ ಕೃಷಿಯಲ್ಲಿ ಮಾವು, ತೆಂಗು, ಬೇವು, ಅಕೇಷಿಯಾವನ್ನು ರಾಜ್ಯದಲ್ಲಿ ಹೆಚ್ಚಾಗಿ ಬೆಳೆಯ ಲಾಗುತ್ತದೆ. ಇನ್ನು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಅರಣ್ಯ ವಿಸ್ತೀರ್ಣ ಅಳೆಯಲು ಬಳಸಿರುವುದು ಉಪಗ್ರಹ. ಉಪಗ್ರಹದಲ್ಲಿ ಹಸುರು ಕಂಡ ಪ್ರದೇಶಗಳನ್ನು ಅರಣ್ಯವೆಂದು ಪರಿಗಣಿಸಿಯೇ ಅದು ತನ್ನ ವರದಿ ತಯಾರಿಸಿದೆ.

ಬೆಂಕಿಗೆ ರಾಜ್ಯದ ಅರಣ್ಯ ಪ್ರದೇಶ ಆಹುತಿ
ಕರ್ನಾಟಕದಲ್ಲಿ 2023ರ ನವೆಂಬರ್‌ನಿಂದ 2024ರ ಜೂನ್‌ ಮಧ್ಯೆ 2088.35 ಚದರ ಕಿ.ಮೀ. ಅರಣ್ಯ ಕಾಳಿYಚ್ಚಿಗೆ ಬಲಿ ಯಾಗಿದೆ.

ರಾಜ್ಯದಲ್ಲಿ ಹೆಚ್ಚಿರುವ ಮರಗಳು
ರಾಜ್ಯದಲ್ಲಿ ದಿಂಡಿಗ, ನೀಲಗಿರಿ, ನಂದಿ, ಸರೋಳಿ, ಚಕೋತ, ನೇರಳೆ, ತೇಗ, ಕರಿಮತ್ತಿ, ಜಂಬೆ ಮರಗಳು ಸೇರಿದಂತೆ ವಿವಿಧ ಜಾತಿಯ ಮರಗಳು ಹೆಚ್ಚಿನ ಸಂಖ್ಯೆಯಲ್ಲಿವೆ.

ಮೆಗಾಸಿಟಿಗಳ ಪೈಕಿ ಬೆಂಗಳೂರಿಗೆ 3ನೇ ಸ್ಥಾನ
ಮಾಲಿನ್ಯದ ಕೂಗಿನ ನಡುವೆಯೇ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಮೆಗಾ ಸಿಟಿಗಳ ಪೈಕಿ ಅತೀ ಹೆಚ್ಚು ಅರಣ್ಯವಿದೆ. ಅಂದರೆ, ದಿಲ್ಲಿಯಲ್ಲಿ 194.15 ಚದರ ಕಿ.ಮೀ., ಮುಂಬಯಿ ಮಹಾನಗರದಲ್ಲಿ 110.84 ಚದರ ಕಿ.ಮೀ. ಅರಣ್ಯವಿದ್ದರೆ ಬೆಂಗಳೂರು ಮಹಾನಗರದಲ್ಲಿ 89.61 ಚದರ ಕಿ.ಮೀ. ಅರಣ್ಯವಿದೆ. 2021ರ ವರದಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಈಗ 0.59 ಚದರ ಕಿ.ಮೀ. ಅರಣ್ಯ ಹೆಚ್ಚಳವಾಗಿದೆ.

ದಟ್ಟ ಕಾಡು: ಉತ್ತರ ಕನ್ನಡ ನಂ.1
ಉತ್ತರ ಕನ್ನಡದಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ದಟ್ಟ ಕಾಡು ಮತ್ತು ಸಾಧಾರಣ ಕಾಡಿರುವ ಜಿಲ್ಲೆಯಾಗಿದೆ. ಈ ಜಿಲ್ಲೆಯಲ್ಲಿ 1,166.52 ಚದರ ಕಿ.ಮೀ. ದಟ್ಟ ಕಾಡು ಮತ್ತು 5,861.31 ಚದರ ಕಿ.ಮೀ.ನಷ್ಟು ಸಾಧಾರಣ ಕಾಡಿದೆ. ತದನಂತರದ ಸ್ಥಾನದಲ್ಲಿ ಚಿಕ್ಕಮಗಳೂರು ಇದ್ದು ಅಲ್ಲಿ 900.78 ಚದರ ಕಿ.ಮೀ. ದಟ್ಟ ಕಾಡು, 2,609.11 ಚದರ ಕಿ.ಮೀ. ಸಾಧಾರಣ ಕಾಡಿದೆ. ಉಳಿದಂತೆ ಪಶ್ಚಿಮ ಘಟ್ಟ ವ್ಯಾಪ್ತಿಯ ಇತರ ಜಿಲ್ಲೆಗಳಾದ ಕೊಡಗು, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿವೆ. ಇನ್ನು ತುಮಕೂರಿನಲ್ಲಿ ರಾಜ್ಯದಲ್ಲೇ ಹೆಚ್ಚು (1,347 ಚದರ ಕಿಮೀ) ತೆರೆದ ಅರಣ್ಯವಿದೆ.

18 ಜಿಲ್ಲೆಗಳಲ್ಲಿ ದಟ್ಟ ಅರಣ್ಯವೇ ಇಲ್ಲ!
ಬಾಗಲಕೋಟೆ, ಬಳ್ಳಾರಿ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಬೀದರ್‌, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ತುಮಕೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ದಟ್ಟ ಅರಣ್ಯವೇ ಇಲ್ಲ ಎಂಬುದು ಆಘಾತಕಾರಿ ಅಂಶವಾಗಿದೆ.

-ರಾಕೇಶ್‌ ಎನ್‌.ಎಸ್‌.

ಟಾಪ್ ನ್ಯೂಸ್

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.