ಕೊಲ್ಲಿ ವ್ಯಾಪಾರಿಯ ನಿಗೂಢ ಸಾವು: 612 ಪವನ್ ಚಿನ್ನಾಭರಣ ಕಳವು
Team Udayavani, Apr 25, 2023, 6:55 AM IST
ಕಾಸರಗೋಡು: ಕೊಲ್ಲಿಯ ಶಾರ್ಜಾದಲ್ಲಿ ಸುಪರ್ ಮಾರ್ಕೆಟ್ ಸಮೂಹ ಸಂಸ್ಥೆಗಳ ಮಾಲಕರಾಗಿದ್ದ ಪೂಚಕ್ಕಾಡ್ ನಿವಾಸಿ ಎಂ.ಸಿ.ಗಫೂರ್ ಹಾಜಿ(53) ಅವರು ನಿಗೂಢ ಸಾವು ಕೊಲೆಯಾಗಿರಬಹುದೆಂದು ಶಂಕಿಸಲಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿ ಕುಟುಂಬದ ಸದಸ್ಯರು ದೂರು ನೀಡಿದ್ದು ಡಿವೈಎಸ್‌ಪಿ ಸಿ.ಕೆ.ಸುನಿಲ್ ಕುಮಾರ್ ನೇತೃತ್ವದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಎ.14 ರಂದು ಮುಂಜಾನೆ ಸ್ವಂತ ಮನೆಯಲ್ಲಿ ಎಂ.ಸಿ.ಗಫೂರ್ ಹಾಜಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇದೇ ವೇಳೆ ಮನೆ ಮಂದಿಯ 612 ಪವನ್ ಚಿನ್ನಾಭರಣ ಕಳವಾಗಿದೆ. ನಿಗೂಢ ಸಾವು ಮತ್ತು ಚಿನ್ನಾಭರಣ ಕಳವು ಬಗ್ಗೆ ಶಂಕೆ ಮೂಡಿದ್ದು, ಪುತ್ರ ಅಹಮ್ಮದ್ ಮುಸಮ್ಮಲ್ ಬೇಕಲ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆ ದಿನದಂದು ಮನೆಯ ಸಿಸಿ ಟಿವಿ ಕೂಡಾ ಕಾರ್ಯಾಚರಿಸಿಲ್ಲವೆಂದು ತಿಳಿದು ಬಂದಿದೆ. ಇದು ಕೂಡಾ ಶಂಕೆ ಬಲಗೊಳ್ಳಲು ಕಾರಣವಾಗಿದೆ.
ಇದೇ ವೇಳೆ ಮಂತ್ರವಾದಿನಿಯೊಂದಿಗೆ ಎಂ.ಸಿ.ಗಫೂರ್‌ಗೆ ಸಂಪರ್ಕವಿದ್ದು, ಈಕೆ ಈ ದಿನ ಮನೆಗೆ ತಲುಪಿರಬೇಕೆಂದು ಶಂಕಿಸಲಾಗಿದೆ. ಆರೋಪಿ ಮಂತ್ರವಾದಿನಿ(ಜಿನ್) ಈಗ ಪೊಲೀಸರು ವಶದಲ್ಲಿರುವುದಾಗಿ ತಿಳಿದುಬಂದಿದೆ. ಆಕೆಯ ವಿಚಾರಣೆ ನಡೆಯುತ್ತಿದೆ. ಮಾಂಙಾಡ್ ಕುಳಿಕುನ್ನು ನಿವಾಸಿಯಾಗಿರುವ ಈಕೆ ಗಫೂರ್‌ನೊಂದಿಗಿನ ಸಂಪರ್ಕವೇ ಕೊಲೆ ಹಾಗು ಚಿನ್ನಾಭರಣ ಕಳವಿಗೆ ಕಾರಣವಾಗಿರಬೇಕೆಂದು ಶಂಕಿಸಲಾಗಿದೆ.
ಗಫೂರ್ ಹಾಜಿ ಸಾವಿಗೀಡಾಗುವ ಒಂದು ದಿನ ಮೊದಲು ಪತ್ನಿ ಮತ್ತು ಮಕ್ಕಳು ತಮ್ಮ ತವರು ಮನೆಗೆ ಹೋಗಿರುವ ಕಾರಣ ಗಫೂರ್ ಹಾಜಿ ಮಾತ್ರವೇ ಮನೆಯಲ್ಲಿದ್ದರೆನ್ನಲಾಗಿದೆ. ಸಂಜೆ ವ್ರತ ಕೊನೆಗೊಳಿಸಲು ಸಹೋದರನ ಮನೆಯಿಂದ ಆಹಾರ ಸಾಮಗ್ರಿಗಳನ್ನು ಗಫೂರ್ ಹಾಜಿಗೆ ನೀಡಲಾಗಿತ್ತು. ಆದರೆ ಮರುದಿನ ಮುಂಜಾನೆ ಮನೆಯಲ್ಲಿ ಯಾವುದೇ ಚಲನೆ ಕಂಡು ಬಾರದ ಕಾರಣ ನೆರೆಮನೆಯವರು ಬಂದು ನೋಡಿದಾಗ ಗಫೂರ್ ಹಾಜಿ ಸಾವಿಗೀಡಾದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಆದರೆ ಅಂದು ಸಾವಿನಲ್ಲಿ ಯಾವುದೇ ಅಸಹಜತೆ ಕಂಡು ಬಾರದ ಕಾರಣ ಅಂದು ಮಧ್ಯಾಹ ವೇಳೆ ಮೃತದೇಹದ ಅಂತ್ಯಕ್ರಿಯೆಯನ್ನು ಪೂಚಕ್ಕಾಡ್ ಜಮಾ ಮಸೀದಿ ಪರಿಸರದಲ್ಲಿ ನಡೆಸಲಾಗಿತ್ತು.
ಶಾರ್ಜಾ ಹಾಗು ದುಬೈಯಲ್ಲಿ ಗಫೂರ್ ಹಾಗು ಸಹೋದರರಿಗೆ ನಾಲ್ಕರಷ್ಟು ಸುಪರ್ ಮಾರ್ಕೆಟ್‌ಗಳಿವೆ. ಆದರೆ ಯಾವುದೇ ಆರ್ಥಿಕ ಸಮಸ್ಯೆಗಳಿರಲಿಲ್ಲವೆಂದು ಹೇಳಲಾಗಿದೆ. ಆದರೆ ಗಫೂರ್ ಹಾಜಿಯವರು ಮೃತಪಟ್ಟ ಬಳಿಕ ಮನೆಯಲ್ಲಿ ನಡೆಸಿದ ತನಿಖೆಯಲ್ಲಿ ಮನೆ ಮಂದಿಯ ಚಿನ್ನಾಭರಣಗಳಾದ 612 ಪವನ್ ಕಳವಾಗಿರುವುದು ಕಂಡು ಬಂದಿದೆ. ಇದೇ ಗಫೂರ್ ಮೃತಪಟ್ಟ ದಿನ ಮಂತ್ರವಾದಿನಿ ಇವರ ಮನೆಗೆ ಬಂದಿದ್ದು, ಇದು ಶಂಕೆಗೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.