ಡಾನ್ಸ್ ಮೂಲಕ ಕೋವಿಡ್ ಜಾಗೃತಿ: ಕೇರಳ ಪೊಲೀಸರ ವಿನೂತನ ಪ್ರಯತ್ನ
Team Udayavani, Apr 28, 2021, 7:45 PM IST
ಕೇರಳ: ರಾಜ್ಯದಲ್ಲಿ ಉಲ್ಬಣಿಸುತ್ತಿರುವ ಕೋವಿಡ್ ವಿರುದ್ಧ ಕೇರಳ ಪೊಲೀಸರು ವಿನೂತನವಾಗಿ ಜಾಗೃತಿ ಮೂಡಿಸಿದ್ದಾರೆ. ತಮಿಳು ಚಿತ್ರದ ಫೇಮಸ್ ಗೀತೆಯೊಂದಕ್ಕೆ ಹೆಜ್ಜೆ ಹಾಕಿ ಜನರಲ್ಲಿ ಕೋವಿಡ್ ವಿರುದ್ಧದ ಹೋರಾಟಕ್ಕೆ ಜಾಗೃತಿಯನ್ನುಂಟು ಮಾಡಿದ್ದಾರೆ.
ದೇವರನಾಡು ಕೇರಳದಲ್ಲಿಯೂ ಕೋವಿಡ್ ಕೈಮೀರಿ ಹಬ್ಬುತ್ತಿದೆ. ಕಳೆದ ಬಾರಿಯಂತೆ ಈ ವರ್ಷವೂ ಕೋವಿಡ್ ಎರಡನೇ ಅಲೆ ರಣಕೇಕೆ ಹಾಕುತ್ತಿದೆ. ಕೋವಿಡ್ ಸೋಂಕಿಗೆ ಅಂಕುಶ ಹಾಕುವ ನಿಟ್ಟಿನಲ್ಲಿ ಅಲ್ಲಿಯ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇತ್ತ ಪೊಲೀಸ್ ಇಲಾಖೆ ಕೂಡ ಸಾರ್ವಜನಿಕರಲ್ಲಿ ಕೋವಿಡ್ ವಿರುದ್ಧ ಜಾಗೃತಿ,ತಿಳುವಳಿಕೆ ನೀಡುವ ಕೆಲಸ ಮಾಡುತ್ತಿದೆ.
9 ಜನ ಪೊಲೀಸರು ತಮಿಳಿನ ಪರೊಡಿ ಚಿತ್ರದ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಒಂದೂವರೆ ನಿಮಿಷದ ಈ ನೃತ್ಯದ ವಿಡಿಯೋದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಹ್ಯಾಂಡ್ ಸಾನಿಟೈಸ್ ಹಾಗೂ ಎಲ್ಲರೂ ತಪ್ಪದೆ ಕೋವಿಡ್ ಲಸಿಕೆ ತೆಗೆದುಕೊಳ್ಳುವಂತೆ ತಿಳಿ ಹೇಳಲಾಗಿದೆ. ಈ ವಿಡಿಯೋವನ್ನು ಕೇರಳ ಪೊಲೀಸ್ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಇದುವರೆಗೆ 3 ಲಕ್ಷ ಜನರ ವೀಕ್ಷಣೆಯಾಗಿದೆ, 9 ಸಾವಿರ ಬಾರಿ ಶೇರ್ ಹಾಕಿದೆ ಹಾಗೂ 15 ಸಾವಿರ ಲೈಕ್ ಪಡೆದುಕೊಂಡಿದೆ.
ಇನ್ನು ಕೇರಳದ ಪೊಲೀಸರು ಕೋವಿಡ್ ವಿರುದ್ಧ ಜಾಗೃತಿ ಮೂಡಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷವೂ ಕೂಡ ಹ್ಯಾಂಡ್ ಸಾನಿಟೈಸ್ ಕುರಿತು ಡಾನ್ಸ್ ಮಾಡಿ ಜಾಗೃತಿ ಮೂಡಿಸಿದ್ದರು.
35,013 ಪ್ರಕರಣ :
ಇಂದು ( ಏಪ್ರಿಲ್ 28) ಕೇರಳ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸ್ಫೋಟವಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 35,013 ಹೊಸ ಪ್ರಕರಣಗಳು ದಾಖಲಾಗಿವೆ. ಹಾಗೂ ಇದೇ ಅವಧಿಯಲ್ಲಿ 41 ಜನರು ಕೋವಿಡ್‍ಗೆ ಬಲಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahayuti Claim: ಮಹಾರಾಷ್ಟ್ರಕ್ಕಾಗಿ ನಾವು ಮೂವರು ಒಟ್ಟಾಗಿ ಕೆಲಸ ಮಾಡುತ್ತೇವೆ: ಫಡ್ನವೀಸ್
Panaji: ಸಂತ ಫ್ರಾನ್ಸಿಸ್ ಜೇವಿಯರ್ ಹಬ್ಬ ಆಚರಣೆ
Tragedy: ವಾಕಿಂಗ್ ಮುಗಿಸಿ ಬರುವಷ್ಟರಲ್ಲಿ ತಂದೆ, ತಾಯಿ, ಸಹೋದರಿಯ ಬರ್ಬರ ಹತ್ಯೆ
Bengal; 104 ವರ್ಷದ ವೃದ್ಧನಿಗೆ ಕೊನೆಗೂ ಜೈಲು ವಾಸದಿಂದ ಮುಕ್ತಿ!!
Mahayuti; ಮತ್ತೊಮ್ಮೆ ಮಹಾ ಸಿಎಂ ಆಗಿ ದೇವೇಂದ್ರ ಫಡ್ನವಿಸ್ ಆಯ್ಕೆ
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.