ಉತ್ತರ ಕೊರಿಯಾ ಪ್ರಜೆಗಳಿಗೆ ಮಾತ್ರ ಚಳಿಯ ಶಿಕ್ಷೆ!
Team Udayavani, Feb 20, 2022, 6:45 AM IST
ಪ್ಯಾಂಗ್ಯಾಂಗ್: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತನ್ನ ತಂದೆ ಕಿಮ್ ಜಾಂಗ್
ಇಲ್ರ ಜನ್ಮ ದಿನದ ಹಿನ್ನೆಲೆ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ, ಪ್ರಜೆಗಳನ್ನು ಕೊರೆಯುವ ಚಳಿಯಲ್ಲಿ ನಿಲ್ಲಿಸಿದ್ದಾರೆ.
ಆದರೆ ವೇದಿಕೆ ಮೇಲೆ ಕುಳಿತಿದ್ದ ತಾನು ಮಾತ್ರ ರಹಸ್ಯ ಹೀಟರ್ ಬಳಸಿಕೊಂಡು ಆರಾಮವಾಗಿ ನಿಂತಿದ್ದರು ಎಂದು ಹೇಳಲಾಗಿದೆ.
ಸುಮಾರು -15 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಪ್ರಜೆಗಳು ಅರ್ಧ ಗಂಟೆ ಕಾಲ ನಡುಗುತ್ತಾ ನಿಂತಿದ್ದರು. ಅವರಿಗೆ ಗ್ಲೌಸ್ ಆಗಲೀ, ಟೋಪಿಯನ್ನಾಗಲೀ ಧರಿಸಲು ಅನುಮತಿ ಇರಲಿಲ್ಲ. ವೇದಿಕೆ ಮೇಲೆ ಕಿಮ್, ಆತನ ತಂಗಿ ಸೇರಿ ಏಳೆಂಟು ಮಂದಿ ಕುಳಿತಿದ್ದು, ಅವರಿಗೆ ಚಳಿಯಾಗದಿರಲಿ ಎನ್ನುವ ಕಾರಣಕ್ಕೆ ವೇದಿಕೆಯಲ್ಲೇ ಹೀಟರ್ಗಳನ್ನು ಯಾರಿಗೂ ಕಾಣದಂತೆ ಅಳವಡಿಸಲಾಗಿತ್ತು ಎನ್ನಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.