ಕಲೆ ಉಳಿಸಿ-ಬೆಳೆಸಿ: ಸತೀಶ
ಅರಶಿನಗೋಡಿ-ಹೊಸಮನಿ ರಂಗ ಸ್ಮರಣೋತ್ಸವ-ಪ್ರಶಸ್ತಿ ಪ್ರದಾನ
Team Udayavani, Jul 18, 2021, 10:23 PM IST
ಗೋಕಾಕ: ಕಲೆ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಯಮಕನಮರಡಿ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ನಗರದ ಜ್ಞಾನ ಮಂದಿರದಲ್ಲಿ ಇಲ್ಲಿನ ಆಶಾ ಕಿರಣ ಕಲಾ ಟ್ರಸ್ಟ್ ವತಿಯಿಂದ ಗೋಕಾವಿ ನಾಡಿನ ವೃತ್ತಿ ರಂಗಭೂಮಿ ಹಿರಿಯ ಕಲಾವಿದರಾಗಿದ್ದ ದಿ.ಬಿ.ಆರ್. ಅರಶಿನಗೋಡಿ ಹಾಗೂ ದಿ.ಬಸವಣ್ಣೆಪ್ಪ ಹೊಸಮನಿ ಇವರ ರಂಗ ಸ್ಮರಣೋತ್ಸವ ನಿಮಿತ್ತ ಉಪನ್ಯಾಸ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಗೋಕಾಕ ನಾಡು ಮುಂಚೆಯಿಂದಲು ಕಲಾವಿದರಿಗೆ ವರದಾನವಾಗಿದೆ. ಕಳೆದ 20 ವರ್ಷಗಳಿಂದ ಇಲ್ಲಿನ ಸಾಹಿತಿ, ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಿಲಾಗಿದ್ದು, ಮುಂದೆಯೂ ಸಹ ಗೋಕಾಕ ನಾಡಿನ ಕಲಾವಿದರನ್ನು ಬೆಳೆಸಲು ಕ್ರಮ ಕೈಗೊಳ್ಳಲಾಗುವುದು. ಜಾನಪದ , ರಂಗ ಕಲೆಗಳು ನಶಿಸಿಹೊಗುತ್ತಿವೆ. ಅದನ್ನು ಉಳಿಸಿ ಬೆಳೆಸಬೇಕಾಗಿದೆ. ಇಲ್ಲಿನ ಸಾಹಿತಿ, ಕಲಾವಿದರು ಕಲೆಯ ಸೇವೆ ಮಾಡುತಾ ಗೋಕಾವಿ ನಾಡಿನ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸಿದ್ದಾರೆ ಎಂದರು.
ಗೋಕಾಕ ನಾಡಿನಲ್ಲಿ ರಂಗ ಮಂದಿರ ನಿರ್ಮಾಣವಾಗಬೇಕು ಎಂಬುದು ಬಹು ದಿನಗಳ ಬೇಡಿಕೆಯಾಗಿದೆ. ಆದರೆ ಅದನ್ನು ನಿರ್ಮಾಣ ಮಾಡಲು ನನಗೆ ಅ ಧಿಕಾರ ಇಲ್ಲ. ಮೊನ್ನೆ ನನಗೆ ಅ ಧಿಕಾರ ನೀಡಲು ನಿಮಗೆ ಅವಕಾಶ ದೊರೆತರು ತಾವು ನನಗೆ ಅ ಧಿಕಾರ ನೀಡಲಿಲ್ಲ ಎಂದು ಸಭೆಯನ್ನು ನಗೆಗಡಲಲ್ಲಿ ತೇಲಿಸಿದ ಸತೀಶ ಅವರು, ಮುಂದಿನ ದಿನಗಳಲ್ಲಿ ತಾವು ನನಗೆ ಅ ಧಿಕಾರ ನೀಡಿದರೆ ಖಂಡಿತವಾಗಿ ನಿಮ್ಮ ಬೇಡಿಕೆಗಳನ್ನು ಈಡೇರಿಸುತ್ತೇನೆ ಎಂದರು. ಕಿರುತೆರೆ ನಟಿ ವೀಣಾ ಕಟ್ಟಿ ಮಾತನಾಡಿ, ಇಂದಿನ ಯಾಂತ್ರಿಕ ಯುಗದಲ್ಲಿ ನಮ್ಮ ಸಂಸ್ಕೃತಿಯ ಪ್ರತಿಕವಾದ ರಂಗಭೂಮಿಯನ್ನು ಉಳಿಸಿ ಬೆಳೆಸಲು ಕಲಾಪೋಷಕರು ಹಾಗೂ ಕಲಾವಿದರು ಮುಂದೆ ಬರುವಂತೆ ಕೋರಿದರು. ಪ್ರಶಸ್ತಿ ವಿತರಿಸಿ ಮಾತನಾಡಿದ ಚಲನಚಿತ್ರ ನಟ ಹಾಗೂ ಜಾನಪದ ಗಾಯಕ ಗುರುರಾಜ ಹೊಸಕೋಟಿ, ಮಹಾನ್ ಕಲಾವಿದರ ತ್ಯಾಗದಿಂದ ಹುಟ್ಟುಹಾಕಿದ ರಂಗಭೂಮಿ ಹಾಗೂ ಜನಪದ ಕಲೆ ಉಳಿಸಿ ಬೆಳೆಸಬೇಕಾಗಿದೆ. ಕಲಾವಿದರನ್ನು ಬೆಳೆಸಿದರೆ ಅವರು ಕಲೆಯನ್ನು ಉಳಿಸುತ್ತಾರೆ. ಕಲಾಪೋಷಕರು ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಈ ಕಲೆಯನ್ನು ಹೆಮ್ಮರವಾಗಿ ಬೆಳೆಸುವಂತೆ ವಿನಂತಿಸಿದರು.
ಇದೇ ಸಂದರ್ಭದಲ್ಲಿ ಗುಬ್ಬಿ ವೀರಣ್ಣ ಪ್ರಶಸ್ತಿ ವಿಜೇತ ರಂಗಭೂಮಿ ದ್ರೋಣ ದಿ.ಬಿ.ಆರ್. ಅರಶಿಣಗೋಡಿ ರಂಗ ಪ್ರಶಸ್ತಿಯನ್ನು ಗಂಗಾವತಿಯ ಹಗಲುವೇಷ ಕಲಾವಿದ ವಿಭೂತಿ ದುಂಡಪ್ಪ ಹಾಗೂ ರಂಗಭೂಮಿ ಭೀಷ್ಮ ದಿ.ಬಸವಣ್ಣೆಪ್ಪಾ ಹೊಸಮನಿ ರಂಗ ಪ್ರಶಸ್ತಿಯನ್ನು ಅರಬಾಂವಿಯ ಸಣ್ಣಾಟ ಕಲಾವಿದೆ ಲಕ್ಷ್ಮೀ ಹರಿಜನ ಇವರಿಗೆ ನೀಡಿ ಗೌರವಿಸಲಾಯಿತು.
ಕಲಾವಿದರ ಕುರಿತು ಸಾಹಿತಿ ಭಾರತಿ ಮದಬಾಂವಿ ಹಾಗೂ ಪ್ರಾಚಾರ್ಯ ಜಯಾನಂದ ಮಾದರ ಉಪನ್ಯಾಸ ನೀಡಿದರು. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶೂನ್ಯ ಸಂಪಾದನ ಮಠದ ಪೀಠಾಧಿ ಪತಿ ಮುರುಘರಾಜೇಂದ್ರ ಸ್ವಾಮೀಜಿ ವಹಿಸಿದ್ದರು. ಅಶೋಕ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಆಶಾ ಕಿರಣ ಕಲಾ ಟ್ರಸ್ಟ್‌ನ ಅಧ್ಯಕ್ಷೆ ಮಾಲತಿಶ್ರೀ ಮೈಸೂರು, ಕಸಾಪ ತಾಲೂಕು ಅಧ್ಯಕ್ಷ ಮಹಾಂತೇಶ ತಾಂವಶಿ, ಸಾಹಿತಿ ಪ್ರೊ.ಚಂದ್ರಶೇಖರ್ ಅಕ್ಕಿ, ಮಾಜಿ ನಗರಾಧ್ಯಕ್ಷ ಸಿದ್ದಲಿಂಗಪ್ಪ ದಳವಾಯಿ, ಶಾಮಾನಂದ ಪೂಜೇರಿ, ರಜನಿ ಜಿರಗ್ಯಾಳ, ಶಂಕರಗೌಡ ಪಾಟೀಲ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.