ಅಪೂರ್ವ ಪ್ರಸಂಗ ಗ್ರಂಥ ಸಂಗ್ರಾಹಕ ಕೃಷ್ಣಪ್ಪ ಕರ್ಕೇರ
Team Udayavani, Jun 28, 2019, 5:00 AM IST
ಕುಮುಧ್ವತೀ ಕಲ್ಯಾಣ (1875), ಇಂದ್ರಜಿತು ಕಾಳಗ (1882), ರಾವಣವಧೆ (1884), ಶಕುಂತರಾಜ ಚರಿತೆ (1885), ನಳಚರಿತ್ರೆ (1889), ಪಾಶುಪತಾಸ್ತ್ರ (1893), ರುಕ್ಮಾವತೀ ಕಲ್ಯಾಣ (1898), ಪಾಂಡವ ವಿಜಯ (1925), ದ್ರೌಪದೀ ಸ್ವಯಂವರ (1926), ರಾಮಾಂಜನೇಯ ಕಾಳಗ (1927), ಹಿರಣ್ಯಾಕ್ಷನ ವಧೆ (1927), ನಳ ಚರಿತ್ರೆ (1928), ಪದ್ಮಾವತೀ ಕಲ್ಯಾಣ (1929), ಭಟ್ಟಿ ವಿಕ್ರಮಾರ್ಕ ಚರಿತ್ರೆ ಅಥವಾ ಧರಣೀ ಮೋಹಿನಿ ಕಲ್ಯಾಣ (1932), ನೀಲಧ್ವಜ ಕಾಳಗ (1932) ಮಾರೀಮುಖನ ಕಾಳಗ (1934), ಬೈದರ್ಕಳ ಪ್ರತಾಪ (1938), ಬಾಣಾಸುರನ ಕಾಳಗ ಅಥವಾ ಉಷಾ ಪರಿಣಯ (1942), ಗಿರಿಜಾ ಕಲ್ಯಾಣ (1943), ಕೀಚಕವಧೆ ಅಥವಾ ಉತ್ತರ ಗೋಗ್ರಹಣ (1943), ಲಕ್ಷ್ಮಣ ಸ್ವಯಂವರ (1946) ಹೀಗೆ ಹಲವಾರು ಅನನ್ಯ ಅಮೂಲ್ಯ ಯಕ್ಷ ಗ್ರಂಥಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಕೊಟ್ಟು ಅಮರರಾದವರು ಭಾಗವತ ಡಿ. ಕೃಷ್ಣಪ್ಪ ಕರ್ಕೆರರು. ತಮ್ಮ ಸುಶ್ರಾವ್ಯ ಕಂಠದ ಭಾಗವತಿಕೆಯಿಂದ ಯಕ್ಷ ರಂಗದಲ್ಲಿ ಅಚ್ಚಳಿಯದ ಸ್ಥಾನ ಪಡೆದವರು ಕೃಷ್ಣಪ್ಪ ಕರ್ಕೆರರು. ಕಪ್ಪು ಮೂರರ ವಿಶಿಷ್ಟ ಶ್ರುತಿಯಲ್ಲಿ ಹಾಡುತ್ತಿದ್ದ ಅವರ ಕಂಠದ ಮೋಡಿ ಯಕ್ಷ ರಂಗದ ದಿಗ್ಗಜರುಗಳನ್ನು ನೆನಪಿಸುವಂತಿತ್ತು.
ಕರ್ಕೆರರವರಿಗೆ ಎಳವೆಯಲ್ಲೇ ಯಕ್ಷ ಕಲೆಯತ್ತ ಆಸಕ್ತಿ ಮೂಡಿತು. ಬಂಧು ದಿ. ಡಿ. ಸೋಮಪ್ಪ ಸನಿಲರ ಮಾರ್ಗದರ್ಶನದಲ್ಲಿ ವೇಷಧಾರಿಯಾಗಿ ರಂಗ ಪ್ರವೇಶಿಸಿದ ಕರ್ಕೆರರು ಭಾಗವತಿಕೆಯತ್ತ ತಮ್ಮ ಆಸಕ್ತಿಯನ್ನು ಕೇಂದ್ರೀಕರಿಸಿದರು. ಮದ್ದಳೆ, ಚೆಂಡೆವಾದನ ಸೇರಿದಂತೆ ಯಕ್ಷರಂಗದ ಹಿಮ್ಮೇಳವನ್ನು ಕರಗತ ಮಾಡಿಕೊಂಡರು. ಯಕ್ಷಗಾನ ಪಾತ್ರ ವೈವಿಧ್ಯತೆಗಳ ಕುರಿತು ಅಪಾರ ಪಾಂಡಿತ್ಯ, ಪುರಾಣಗಳ ಬಗ್ಗೆ ಅಪಾರ ಜ್ಞಾನ ಹೊಂದಿದ ಕರ್ಕೆರರವರಿಗೆ ಭಾಗವತಿಕೆಯಲ್ಲಿ ಖಚಿತತೆ ಸಿದ್ಧಿಸಿತ್ತು. ಹವ್ಯಾಸಿ, ವೃತ್ತಿ ಮೇಳಗಳಲ್ಲಿ ಭಾಗವತಿಕೆ ಮಾಡುತ್ತಿದ್ದ ಕರ್ಕೆರರು ಕ್ರಮೇಣ ತಾಳಮದ್ದಳೆಯತ್ತ ಹೆಚ್ಚಿನ ಒಲವು ತೋರಿದರು.ಉರ್ವಸ್ಟೋರ್ ಶ್ರೀ ಶಾರದಾಂಬಾ ಕೃಪಾಪೋಷಿತ ಯಕ್ಷಗಾನ ಮಂಡಳಿಯನ್ನು ಅರ್ಧ ಶತಮಾನದಷ್ಟು ಕಾಲ ಕರ್ಕೆರರು ಸಂಚಾಲಕರಾಗಿ ಮುನ್ನಡೆಸಿದರು. ಹಲವಾರು ಯುವ ಕಲಾವಿದರನ್ನು ಯಕ್ಷರಂಗಕ್ಕೆ ನೀಡಿದವರು ಕರ್ಕೆರರು. ಇಳಿವಯಸ್ಸಿನಲ್ಲೂ ಕರ್ಕೆರರು ತಾಳಮದ್ದಲೆ ಕೂಟಗಳನ್ನು ಸಂಘಟಿಸುತ್ತಾ ಕಲಾಸೇವೆಗೈದರು. 2004ರ ಜೂ. 30 ರಂದು ಡಿ. ಕೃಷ್ಣಪ್ಪ ಕರ್ಕೆರರು ಧೈವಾಧೀನರಾದರು. ಅವರು ಅಮರರಾಗಿ ಹದಿನೈದು ವರುಷ ಸಂದು ಹೋಗಿವೆ.
– ಪಶುಪತಿ ಉಳ್ಳಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
MUST WATCH
ಹೊಸ ಸೇರ್ಪಡೆ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.