ಮೈಷುಗರ್ ಕಾರ್ಖಾನೆ ಸರ್ಕಾರವೇ ನಡೆಸಲಿ
ರಾಜ್ಯದ ನೀರು ಬಳಕೆಗೆ ಮೇಕೆದಾಟುಯೋಜನೆ ಶೀಘ್ರ ಆರಂಭಿಸಬೇಕು: ಪರಿಷತ್ ಸದಸ್ಯಕೆ.ಟಿ.ಶ್ರೀಕಂಠೇಗೌಡ
Team Udayavani, Aug 15, 2021, 5:43 PM IST
ಮಂಡ್ಯ: ಮೈಷುಗರ್ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ನಡೆಸಬೇಕು ಎಂದು ಕಳೆದ ಒಂದೂವರೆ ವರ್ಷದಿಂದ ನಿರಂತರವಾಗಿ ಹೋರಾಟ ನಡೆಯುತ್ತಿದೆ. ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೂ ಸದನದ ಒಳಗೂ ಹೊರಗೂ ಹೋರಾಟ ನಡೆದಿದ್ದು, ಈಗಲೂ ಅದು ಮುಂದುವರಿದಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ವತಿಯಿಂದ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು ಸೇರಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದಾಗ, ಖಾಸಗೀಕರಣ ಪ್ರಸ್ತಾಪ ಬಿಟ್ಟು, ಸರ್ಕಾರವೇ ನಡೆಸುವ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪಷ್ಟವಾಗಿ ತಿಳಿಸಿದ್ದರು. ನಂತರ ಬದಲಾದ ರಾಜಕೀಯದ ಸಮಯದಲ್ಲೂ ನಾವು ಸುಮ್ಮನೆಕುಳಿತಿಲ್ಲ ಎಂದರು.
ಇದನ್ನೂ ಓದಿ:ದೇವೇಗೌಡರು-ಸಿಎಂ ಬೊಮ್ಮಾಯಿ ಭೇಟಿಗೆ ರಾಜಕೀಯ ಬಣ್ಣ ಬೇಡ
ತುರ್ತಾಗಿ ಆರಂಭಿಸುವಂತೆ ಲಿಖಿತ ಮನವಿ:
ಇತ್ತೀಚೆಗೆ ನಾನು ಸೇರಿದಂತೆ ಶಾಸಕರಾದ ಸಿ.ಎಸ್.ಪುಟ್ಟರಾಜು, ಎಂ.ಶ್ರೀನಿವಾಸ್, ಡಿ.ಸಿ.ತಮ್ಮಣ್ಣ, ಕೆ.ಸುರೇಶ್‌ಗೌಡ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಲಿಖಿತವಾಗಿ ಮನವಿ ಮಾಡಲಾಗಿದೆ. ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಅವರ ಸರ್ಕಾರದಲ್ಲಿ ನಡೆದಿದ್ದ ಎಲ್ಲ ವಿಚಾರವನ್ನು ಅವರ ಗಮನಕ್ಕೆ ತಂದಿದ್ದು, ತುರ್ತಾಗಿ ಕಾರ್ಖಾನೆ ಆರಂಭಿಸಬೇಕು.
ಎರಡು ಮಿಲ್‌ಗಳಿದ್ದು, ಒಂದು ಮಿಲ್ ಕಬ್ಬು ಅರೆಯಲು ಸಾಧ್ಯವಿದೆ. ಮತ್ತೂಂದು ಹೊಸಮಿಲ್ ಅಳವಡಿಸಲು ಎಲ್ಲ ರೀತಿಯ ಕ್ರಮ
ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ ಎಂದು ತಿಳಿಸಿದರು.
ಖಾಸಗಿ ಕಾರ್ಖಾನೆಗಳ ಲಾಬಿ ನಿಯಂತ್ರಿಸಬೇಕು:ಹಿಂದೆಏಷ್ಯಾದಲ್ಲಿಯೇ ಮೈಷುಗರ್ ಕಾರ್ಖಾನೆ ಒಂದೇ ಇತ್ತು. ಆದರೆ ಈಗ ಇಡೀ
ರಾಜ್ಯಾದ್ಯಂತ ಸಾಕಷ್ಟು ಖಾಸಗಿ ಕಾರ್ಖಾನೆಗಳಿವೆ.ಉತ್ತರಕರ್ನಾಟಕದ ಭಾಗಕ್ಕೆ ಹೋದರೆ ನಮ್ಮನ್ನು ಮೀರಿ ಕಾರ್ಖಾನೆಗಳಿವೆ.ಆಖಾಸಗಿ ಕಾರ್ಖಾನೆಗಳ ಲಾಬಿ ಜೋರಾಗಿದ್ದು, ಖಾಸಗಿ ಕಾರ್ಖಾನೆಗಳ ಲಾಬಿ ನಿಯಂತ್ರಿಸಬೇಕಾದರೆ ಸರ್ಕಾರಿ ಕಾರ್ಖಾನೆ ಆರಂಭಿಸುವುದು ಅನಿ ವಾರ್ಯ ಹಾಗೂ ಅಗತ್ಯವಾಗಿದೆ ಎಂದರು. ಇಲ್ಲಿ ನಿಗದಿಯಾ ಗುವ ದರ ಹಾಗೂ ಕಾರ್ಖಾನೆಯ ಆಸ್ತಿಯನ್ನು ಉಳಿಸುವ ಜವಾಬ್ದಾರಿಯೂ
ಇದೆ. ಇದರ ಬಗ್ಗೆ ತಿಳಿದವರು ಖಾಸಗಿ ಬೇಡ ಎನ್ನುತ್ತಾರೆ. ರೈತರ ಹಿತದೃಷ್ಟಿಗೊತ್ತಿಲ್ಲದವರು ಯಾರಾದರೂ ಅರೆಯಲಿ ಎನ್ನುತ್ತಿದ್ದಾರೆ. ಅದು ಮುಂದಿನ ದಿನಗಳಲ್ಲಿ ತೊಂದರೆಯಾಗಲಿದೆ ಎಂದರು.
ಸಭೆಯಲ್ಲಿ ರೈತ ನಾಯಕಿ ಸುನಂದ ಜಯರಾಂ, ಮುಖಂಡರಾದ ಇಂಡುವಾಳು ಚಂದ್ರಶೇಖರ್, ಕೆ.ಎಸ್.ಸುಧೀರ್‌ಕುಮಾರ್, ಶಂಭೂನಹಳ್ಳಿ ಕೃಷ್ಣ, ಎಂ.ಬಿ.ಶ್ರೀನಿವಾಸ್, ವಿನಯ್, ಮುದ್ದೇಗೌಡ, ಬೋರಾಪುರ ಶಂಕರೇಗೌಡ ಸೇರಿದಂತೆ ಮತ್ತಿತರರಿದ್ದರು.
ಖಾಸಗೀಕರಣ ಮಾಡಲು ಬಿಡಲ್ಲ
ಮೈಷುಗರ್ ಕಾರ್ಖಾನೆಯನ್ನು ಖಾಸಗೀಕರಣ ಮಾಡಲು ಜಿಲ್ಲೆಯ ಜನ, ಹೋರಾಟಗಾರರು ಬಿಡುವುದಿಲ್ಲ ಎಂಬುದು ಮುಖ್ಯಮಂತ್ರಿಗೂ
ಮನವರಿಕೆಯಾಗಿದೆ. ಕಬ್ಬು ಸಾಗಾಣೆ ಹಾಗೂ ಕಬ್ಬು ಕಟಾವು ವಿಚಾರದ ಬಗ್ಗೆ ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಬೇಕಾಗಿದೆ. ಇದರ ಬಗ್ಗೆ
ಮಾತುಕತೆ ನಡೆಸಲಾಗುವುದು. ಕಾರ್ಖಾನೆಗಳ ಅಧಿಕಾರಿಗಳನ್ನು ಕರೆದು ಸಾಗಾಣೆ ಹಾಗೂ ಕಟಾವು ಬಗ್ಗೆ ಚರ್ಚಿಸಿ ರೈತರಿಗೆ ಅನುಕೂಲ
ಮಾಡಿಕೊಡಬೇಕು ಎಂದು ಒತ್ತಾಯಿಸಲಾಗುವುದು ಎಂದು ಪರಿಷತ್ ಸದಸ್ಯಕೆ.ಟಿ.ಶ್ರೀಕಂಠೇಗೌಡ ಹೇಳಿದರು.
ಸಭೆ ಕರೆಯುವಂತೆ ಮನವಿ
ಮೇಕೆದಾಟು ಯೋಜನೆ ಸೇರಿದಂತೆ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ತುರ್ತಾಗಿ ಸಭೆ ಕರೆಯಬೇಕು.ಅಲ್ಲದೆ, ಕೆಆರ್‌ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸುವ ಮೊದಲೇ ಸಭೆ ಕರೆಯುವಂತೆ ಮನವಿ ಮಾಡಲಾಗಿದೆ. ಅದಕ್ಕೆ ಒಪ್ಪಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು,ಸಭೆಯಲ್ಲಿಚರ್ಚೆನಡೆಸಿನಿಮ್ಮೆಲ್ಲರತೀರ್ಮಾನದಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ ಎಂದು
ಪರಿಷತ್ ಸದಸ್ಯಕೆ.ಟಿ.ಶ್ರೀಕಂಠೇಗೌಡ ವಿವರಿಸಿದರು.
ರಾಜಕೀಯ ಬೆರೆಸುವುದು ಬೇಡ
ಮೈಷುಗರ್ ಕಾರ್ಖಾನೆ ಆರಂಭಿಸುವ ವಿಚಾರದಲ್ಲಿ ರಾಜಕೀಯ ಬೆರೆಸುವುದು ಬೇಡ. ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಪಕ್ಷಗಳ
ಮುಖಂಡರು ಒಗ್ಗಟ್ಟಾಗಿ ಹೋಗುವುದು ಒಳ್ಳೆಯದು. ಸಂಸದೆ ಸುಮಲತಾ ಅವರು ಏನೋ ಮಾತನಾಡಿದರು ಎಂದು ನಾವು ಹೇಳಿಕೆ ನೀಡುತ್ತಾ ಹೋದರೆ ರಾಜಕೀಯವಾಗಿ ಬದಲಾಗಲಿದೆ. ಸುಮಲತಾ ಅವರಿಗೂ ಸರ್ಕಾರಿ ಸ್ವಾಮ್ಯದಲ್ಲಿ ನಡೆಸಿದರೆ ರೈತರಿಗೆ ಅನುಕೂಲವಾಗಲಿದೆ ಎಂಬುದು ಮನವರಿಕೆಯಾಗಬೇಕು ಎಂದು ಮುಖಂಡ ಪೊ›.ಜಿ.ಟಿ.ವೀರಪ್ಪ ಹೇಳಿದರು
ಜಿಲ್ಲೆಯ ಪ್ರಮುಖ ವಿಚಾರವಾಗಿರುವ ಮೇಕೆದಾಟು ಯೋಜನೆಯನ್ನು ಸರ್ಕಾರ ಶೀಘ್ರ ಜಾರಿಗೊಳಿಸಬೇಕು. ಇದರಬಗ್ಗೆ ಸದನದಲ್ಲೂ ಚರ್ಚೆ
ನಡೆಸಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಅವರು ಇದ್ದರು. ಸುಪ್ರೀಂಕೋರ್ಟ್ ನೀಡಿರುವ ಆದೇಶದಂತೆ ಕರ್ನಾಟಕಕ್ಕೆ ಸಿಗುವ ನೀರನ್ನು ಸಮಗ್ರವಾಗಿ ಬಳಸಿಕೊಳ್ಳಲು ಮೇಕೆದಾಟು ಯೋಜನೆ ಅಗತ್ಯವಾಗಿದೆ.
-ಕೆ.ಟಿ.ಶ್ರೀಕಂಠೇಗೌಡ, ವಿಧಾನ ಪರಿಷತ್ ಸದಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.