Arrested: ಲೈಜಾಲ್, ಹಾರ್ಪಿಕ್ ನಕಲಿ ಉತ್ಪನ್ನ ತಯಾರು: ಇಬ್ಬರ ಬಂಧನ
Team Udayavani, Nov 10, 2024, 11:19 AM IST
ಬೆಂಗಳೂರು: ಶೌಚಾಲಯಗಳ ಸ್ವಚ್ಛತೆಗೆ ಬಳಸುವ ಪ್ರತಿಷ್ಠಿತ ಲೈಜಾಲ್ ಹಾಗೂ ಹಾರ್ಪಿಕ್‌ಗಳ ನಕಲಿ ಉತ್ಪನ್ನ ತಯಾರಿಕಾ ಗೋಡೌನ್ ಮೇಲೆ ಸಿಸಿಬಿ ಮತ್ತು ಜೀವನ್ ಭೀಮಾನಗರ ಠಾಣೆ ಪೊಲೀಸರ ಜಂಟಿ ಕಾರ್ಯಾಚರಣೆ ಯಲ್ಲಿ ದಾಳಿ ನಡೆ ಸಲಾಗಿದೆ.
ಈ ಸಂಬಂಧ ಗೋಡೌನ್ ಮಾಲಿಕ ರಾದ ಅನಿಲ್ ಪಟೇಲ್ ಮತ್ತು ಅನಂತ್ ಪಟೇಲ್ ಎಂಬವರನ್ನು ಬಂಧಿಸಲಾಗಿದೆ. ಆರೋಪಿಗಳು ನಗರದ ಹೊರವಲ ಯದ ಅವಲಹಳ್ಳಿಯಲ್ಲಿ ಪ್ರತಿಷ್ಠಿತ ಕಂಪನಿಗಳ ಸ್ವಚ್ಛತಾ ಉತ್ಪನ್ನಗಳನ್ನು ನಕಲಿಯಾಗಿ ತಯಾರಿಸಿ, ಅವುಗಳಿಗೆ ಅಸಲಿ ಕಂಪನಿಯ ಸ್ಟಿಕರ್‌ಗಳನ್ನು ಅಂಟಿಸುತ್ತಿದ್ದರು. ಈ ಮಾಹಿತಿ ಮೇರೆಗೆ ಸಿಸಿಬಿ ಮತ್ತು ಜೆಬಿ ನಗರ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಕೋಟ್ಯಂತರ ರೂ. ಮೌಲ್ಯದ ನಕಲಿ ಲೈಜಾಲ್, ಹಾರ್ಪಿಕ್, ವಿಮ್ ಲಿಕ್ವೀಡ್‌ಗಳು, 2 ಗೂಡ್ಸ್ ವಾಹನಗಳು, ತಯಾರಿಕಾ ಉಪಕರಣಗಳು ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಜೀವನ್ ಭೀಮಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಲ್ಲಮಪ್ರಭು ಸ್ವಾಮಿ ದೇಗುಲಕ್ಕೆ ಪುರಾತನ ಸ್ಮಾರಕ ಪಟ್ಟ: ತಜ್ಞರ ಸಮಿತಿ ರಚನೆಗೆ ಆದೇಶ
Bengaluru: ನ.17ಕ್ಕೆ ನವದುರ್ಗಾ ಲೇಖನ ಯಜ್ಞ, ವಾಗೀಶ್ವರೀ ಪೂಜೆ; ಪೂರ್ವಭಾವಿ ಸಭೆ
Bengaluru: ನಗರದ ಐಬಿಸ್ ಹೋಟೆಲ್‌ಗೆ ಬಾಂಬ್ ಬೆದರಿಕೆ; ಗ್ರಾಹಕರ ಆತಂಕ
Bengaluru: ಕುಡಿದು ಸ್ಕೂಲ್ ಬಸ್ ಓಡಿಸಿದ ಚಾಲಕರ ಲೈಸೆನ್ಸ್ ಅಮಾನತು
Bengaluru: ಬಸ್ ಚೇಸ್ ಮಾಡಿ ಡ್ರೈವರ್‌ಗೆ ಥಳಿಸಿದ್ದ ಆರೋಪಿ ಬಂಧನ
MUST WATCH
ಹೊಸ ಸೇರ್ಪಡೆ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
Sivakasi: 60 ರೂ. ಕದ್ದು ಓಡಿ ಹೋಗಿದ್ದ ಆರೋಪಿ 27 ವರ್ಷ ಬಳಿಕ ಸೆರೆ!
Big Bend: ವಿಶ್ವದ ಅತಿ ಉದ್ದದ ಕಟ್ಟಡ “ದಿ ಬಿಗ್ ಬೆಂಡ್’ ನಿರ್ಮಾಣಕ್ಕೆ ಅಮೆರಿಕ ಸಿದ್ಧತೆ
ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ
Dharmasthala: ಸರಕಾರಿ ಶಾಲೆಗಳ ಶಿಕ್ಷಕರ ಹುದ್ದೆ ಭರ್ತಿ ಮಾಡಿ: ಡಾ.ವೀರೇಂದ್ರ ಹೆಗ್ಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.