ಮಂಡ್ಯ ನುಡಿ ಜಾತ್ರೆ; ಪುಸ್ತಕ ವ್ಯಾಪಾರಕ್ಕೆ ಆನ್‌ಲೈನ್ ಪಾವತಿ ಅಡ್ಡಿ
Team Udayavani, Dec 22, 2024, 1:19 AM IST
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ನುಡಿ ಜಾತ್ರೆಯ ಸಂಭ್ರಮ ಮನೆ ಮಾಡಿದ್ದು, ಪುಸ್ತಕ ಮಳಿಗೆಗಳಲ್ಲಿ ಕುವೆಂಪು, ಕಾರಂತ, ಭೈರಪ್ಪ, ತೇಜಸ್ವಿ ಅವರ ಪುಸ್ತಕಗಳು ಬಹು ಬೇಡಿಕೆಯಿಂದ ಮಾರಾಟವಾಗುತ್ತಿದ್ದವು. ಶುಕ್ರವಾರಕ್ಕಿಂತ ಶನಿವಾರ ಹೆಚ್ಚಿನ ಜನ ಪುಸ್ತಕ ಮಳಿಗೆಗೆ ಆಗಮಿಸಿದ್ದರಿಂದ ವ್ಯಾಪಾರದಲ್ಲಿ ತುಸು ಚೇತರಿಕೆ ಕಾಣಿಸಿದೆ. ಆದರೆ, ಆನ್‌ಲೈನ್ ಪೇಮೆಂಟ್ ಸಮಸ್ಯೆಯಿಂದಾಗಿ ಶೇ.30 ವ್ಯಾಪಾರ ಕುಸಿತ ಕಂಡಿದೆ.
ಕಥೆ, ಕಾದಂಬರಿ ಹೊರತಾಗಿ ವಿಮಶಾì ಕೃತಿಗಳು, ಭಗವದ್ಗೀತೆ, ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕಗಳನ್ನು ಜನ ಖರೀದಿಸುತ್ತಿದ್ದರು. ಯುವಜನತೆ ಸಾಹಿತ್ಯ ಪುಸ್ತಕಗಳಿಗಿಂತ ಹೆಚ್ಚಾಗಿ ಸ್ಪರ್ಧಾತ್ಮಕ ಪುಸ್ತಕ ಮಳಿಗೆಗೆ ಮುಗಿಬಿದ್ದಿದ್ದರು. ಪಿಸಿ, ಪಿಎಸ್‌ಐ, ಎಸ್‌ಡಿಎ, ಎಫ್‌ಡಿಎ, ನಕಾಶೆ ಮುಂತಾದ ಪುಸ್ತಕಗಳನ್ನು ಯುವಜನತೆ ಕೊಳ್ಳುವಲ್ಲಿ ನಿರತರಾಗಿದ್ದರು.
ಆದರೆ, ನೆಟ್‌ವರ್ಕ್ ಸಮಸ್ಯೆಯಿಂದಾಗಿ ಫೋನ್ ಪೇ, ಗೂಗಲ್ ಪೇ ಸಮರ್ಪಕವಾಗಿರಲಿಲ್ಲ. ಪುಸ್ತಕ ಖರೀದಿ ಮಾಡಿದವರು ಆನ್‌ಲೈನ್‌ನಲ್ಲಿ ಹಣ ಪಾವತಿಗೆ ಪರದಾಡಿದರು. ನಗದು ಇರದ ಪುಸ್ತಕಾಭಿಮಾನಿಗಳು ನಿರಾಸೆಯಿಂದಲೇ ಮರಳಿದರು. ಆನ್‌ಲೈನ್ ಪೇಮೆಂಟ್ ಸಮಸ್ಯೆ ಆದ ಕಾರಣ ಶೇ.30ರಷ್ಟು ವ್ಯಾಪಾರ ನಷ್ಟವಾಗಿದೆ ಎಂಬುದು ಬಹುತೇಕ ಪುಸ್ತಕ ಪ್ರಕಾಶಕರ ಅಳಲಾಗಿತ್ತು.
ಲೇಖಕರೊಂದಿಗೆ ಸೆಲ್ಫಿ: ಕರ್ತವ್ಯದಲ್ಲಿದ್ದ ಕೆಲ ಪೊಲೀಸರು, ಚೀಲಗಟ್ಟಲೇ ಪುಸ್ತಕಗಳನ್ನು ಖರೀದಿಸಿ, ತಮ್ಮ ಸಾಹಿತ್ಯಾಭಿರುಚಿ ವ್ಯಕ್ತಪಡಿಸಿದರು. ಮಳಿಗೆಗಳಲ್ಲಿ ತಮ್ಮ ನೆಚ್ಚಿನ ಸಾಹಿತಿ, ಲೇಖಕರನ್ನು ಕಂಡ ಓದುಗರು ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಆತ್ಮೀಯವಾಗಿ ಮಾತನಾಡಿಸಿದರು. ಜತೆಗೆ ಕೊಂಡ ಪುಸ್ತಕಗಳ ಮೇಲೆ ಅವರ ಹಸ್ತಾಕ್ಷರ ತೆಗೆದುಕೊಳ್ಳುವುದು ಸಾಮಾನ್ಯವಾಗಿತ್ತು. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇಂಗ್ಲಿಷ್ ಪುಸ್ತಕಗಳು ಮಾರಾಟವಾಗುತ್ತಿರುವುದು ಅಲ್ಲಲ್ಲಿ ಕಂಡುಬಂದಿತು.
ಮಂಡ್ಯದ ಚಿತ್ರಕಲಾವಿದ ನರಸಿಂಹಾಚಾರ್ ಅವರು ನಟ ಡಾ| ರಾಜಕುಮಾರ್ ಅಭಿನಯಿಸಿದ ಎಲ್ಲ 200ಕ್ಕೂ ಅಧಿಕ ಸಿನೆಮಾಗಳ ವರ್ಣಚಿತ್ರ ಬಿಡಿಸಿ, ಪ್ರದರ್ಶನಕ್ಕೆ ಇಟ್ಟಿದ್ದರು. ನೆಚ್ಚಿನ ನಟನ ವರ್ಣಚಿತ್ರ ನೋಡುವಲ್ಲಿ ಜನತೆ ಮಗ್ನರಾಗಿದ್ದರು. ದೊಡ್ಡರಸಿನಕೆರೆಯ ಚಿತ್ರ ಕಲಾವಿದ ಶಿವಕುಮಾರ ಅವರ “ನೆಲದ ನೆನಪು’ ಗ್ರಾಮೀಣ ಸೊಗಡಿನ ವರ್ಣಚಿತ್ರಗಳನ್ನು ಜನತೆ ಮೆಚ್ಚಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.