ಮಂಗಳೂರು: 608 ಹಜ್ಜಾಜ್‌ಗಳಿಗೆ ಲಸಿಕೆ
Team Udayavani, Jun 30, 2019, 10:21 AM IST
ಮಂಗಳೂರು : ಸರಕಾರದ ಹಜ್ ಸಮಿತಿ ಮುಖಾಂತರ ಪವಿತ್ರ ಹಜ್ ಯಾತ್ರೆಗೆ ತೆರಳುವ ದಕ್ಷಿಣ ಕನ್ನಡ ಜಿಲ್ಲೆಯ 608 ಹಜ್ಜಾಜ್‌ಗಳಿಗೆ ಸರಕಾರದ ವತಿಯಿಂದ ನೀಡಲಾಗುವ ಚುಚ್ಚುಮದ್ದು ಹಾಗೂ ಲಸಿಕೆ ಕಾರ್ಯಕ್ರಮ ಶನಿವಾರ ನಗರದ ಕೊಡಿಯಾಲ್‌ಬೈಲ್‌ನ ಯೇನಪೊಯ ಆಸ್ಪತ್ರೆಯಲ್ಲಿ ನಡೆಯಿತು.
ಮಂಗಳೂರು ಹಜ್ ನಿರ್ವಹಣಾ ಸಮಿತಿ ಅಧ್ಯಕ್ಷ ಯೇನಪೊಯ ಮಹಮ್ಮದ್ ಕುಂಞಿ ಅಧ್ಯಕ್ಷತೆ ವಹಿಸಿದ್ದರು. ಬಂದರು ಕೇಂದ್ರ ಜುಮಾ ಮಸೀದಿಯ ಖತೀಬ್ ಸದಕತುಲ್ಲಾ ಫೈಝಿ ದುಆ ಪ್ರಾರ್ಥನೆ ನೆರವೇರಿ ಸಿದರು. ಹಜ್‌ಗೆ ತೆರಳುವ ಸದಕತುಲ್ಲಾ ಫೈಝಿ ಅವರಿಗೆ ಆರಂಭಿಕ ಚುಚ್ಚುಮದ್ದು ಮತ್ತು ಲಸಿಕೆ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಸಕ್ತ ಸಾಲಿನಲ್ಲಿ 305 ಮಹಿಳೆಯರು ಮತ್ತು 303 ಪುರುಷರು ಹಜ್ ಯಾತ್ರೆ ಕೈಗೊಳ್ಳಲಿದ್ದಾರೆ.
ಕರ್ನಾಟಕ ರಾಜ್ಯ ಹಜ್ ಸಮಿತಿಯ ಅಧಿಕಾರಿ ಮೆಹಬೂಬ್ ಪಾಷಾ, ಯೇನಪೊಯ ಆಸ್ಪತ್ರೆಯ ಆಡಳಿತ ಕಾರ್ಯ ನಿರ್ವಾಹಕ ಅಧಿಕಾರಿ ಡಾ| ತಾಹಿರ್, ಯೇನಪೊಯ ಮಸೀದಿ ಖತೀಬ್ ಜಿ.ಎಂ. ಉಸ್ತಾದ್, ಹಜ್ ಸಮಿತಿಯ ಉಪಾಧ್ಯಕ್ಷ ಸಿ. ಮಹಮೂದ್ ಹಾಜಿ, ಜತೆ ಕಾರ್ಯದರ್ಶಿಗಳಾದ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಮತ್ತು ರಫೀಕ್ ಹಾಜಿ ಕೊಡಾಜೆ, ಖಜಾಂಚಿ ಹನೀಫ್ ಹಾಜಿ ಬಂದರ್, ಮಾಧ್ಯಮ ಕಾರ್ಯದರ್ಶಿಗಳಾದ ರಶೀದ್ ವಿಟ್ಲ ಮತ್ತು ಅಹಮದ್ ಬಾವಾ ಪಡೀಲ್, ಸಿ.ಎಚ್. ಉಳ್ಳಾಲ, ಬಿ.ಎಸ್. ಬಶೀರ್ ಹಾಜಿ, ಎಂ.ಎ. ಮಹಮೂದ್ ಹಾಜಿ, ಐ. ಮೊಯ್ದಿನಬ್ಬ, ಶಫೀವುಲ್ಲಾ ಕಡಬ, ಇಬ್ರಾಹಿಂ ಕೊಣಾಜೆ, ನಾಸಿರ್ ಲಕ್ಕಿ ಸ್ಟಾರ್, ಫಝಲ್ ಹಾಜಿ, ರಿಯಾಝ್ ಬಂದರ್, ಹನೀಫ್ ಮಂಗಳೂರು, ಅಹಮದ್ ಬಾವಾ, ಸುಲೈಮಾನ್, ಅಮೀರ್ ಹುಸೈನ್ ಉಪಸ್ಥಿತರಿದ್ದರು.
ಹಜ್ ನಿರ್ವಹಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಮ್ತಾಝ್ ಅಲಿ ಕೃಷ್ಣಾಪುರ ಸ್ವಾಗತಿಸಿದರು. ಶಿಬಿರದ ಸಂಯೋಜಕ ಅಬ್ದುಲ್ ರಝಾಕ್ ಕುಪ್ಪೆಪದವು ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.