Mangaluru: ಶಾರದೆಯ ಮುಡಿಗೆ 72 ಸಾವಿರ ಮಲ್ಲಿಗೆ ಮೊಗ್ಗು!
ರಥಬೀದಿಯ ವೆಂಕಟರಮಣ ದೇಗುಲದ ಶಾರದಾ ಮಹೋತ್ಸವಕ್ಕೆ 102ನೇ ವರ್ಷದ ಸಂಭ್ರಮ; ಅಲಂಕಾರದಲ್ಲಿ ದೈವಿಕ ರೂಪ ತಳೆವ ಶಾರದೆ
Team Udayavani, Oct 13, 2024, 3:16 PM IST
ಮಹಾನಗರ: ಮಂಗಳೂರಿನ ರಥ ಬೀದಿಯ ವೆಂಕಟರಮಣ ದೇವಸ್ಥಾನದ ಆಚಾರ್ಯ ಮಠದ ವಠಾರದಲ್ಲಿ ಶ್ರೀ ಶಾರದಾ ಮಹೋತ್ಸವ ಸಮಿತಿ ವತಿಯಿಂದ ಪೂಜಿ ಸಲಾಗುವ ಮಂಗಳೂರು ಶ್ರೀ ಶಾರದಾ ಮಹೋ ತ್ಸವಕ್ಕೆ ಈ ಬಾರಿ 102 ವರ್ಷ. ಶತಮಾನಗಳ ಹಿನ್ನೆಲೆ ಇರುವ ಈ ಶಾರದೋತ್ಸವ ಈ ಬಾರಿ ಅ. 8ರಂದು ಆರಂಭಗೊಂಡಿದ್ದು, ಅ. 14ರಂದು ವೈಭವದ ಶೋಭಾಯಾತ್ರೆಯೊಂದಿಗೆ ಪರಿಸಮಾಪ್ತಿಗೊಳ್ಳಲಿದೆ. ನಾಡಿನಾದ್ಯಂತ ಜನಪ್ರಿ ಯತೆ ಹೊಂದಿರುವ ಶಾರದೋ ತ್ಸವದ ಶಾರದಾ ಮಾತೆಯ ದೈವಿಕ ರೂಪ ಮತ್ತು ವ್ಯವಸ್ಥೆಯ ಅಚ್ಚು ಕಟ್ಟುತನ ಗಮನ ಸೆಳೆಯುತ್ತದೆ. ಇಲ್ಲಿನ ಶಾರದೆಗೆ ಶೋಭಾಯಾತ್ರೆಯಂದು 72 ಸಾವಿರ ಮಲ್ಲಿಗೆ ಮೊಗ್ಗುಗಳಿಂದ ಅಲಂಕಾರ ಮಾಡಲಾಗುತ್ತದೆ.
ಅನಂತ ಚತುದರ್ಶಿಯ ಸಂದರ್ಭದಲ್ಲೇ ಶಾರದಾ ಮಹೋತ್ಸವಕ್ಕೆ ಸಿದ್ಧತೆ ಗಳು ಆರಂಭ ವಾಗುತ್ತವೆ. ಆ ದಿನ ಮಂಗಳೂರು ವೆಂಕಟರಮಣ ದೇವರ ಸನ್ನಿಧಿಯಲ್ಲಿ ಹಾಗೂ ಆಚಾರ್ಯ ಮಠದ ಭದ್ರನರಸಿಂಹ ಮುಖ್ಯಪ್ರಾಣ ದೇವರ, ಮಹಾಮಾಯಾ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಿ ಅಲ್ಲಿಂದ ಶಾರದಾ ಮೂರ್ತಿಯ ಬಿಂಬ ನಿರ್ಮಾಣದ ಪ್ರಕ್ರಿಯೆ ಪ್ರಾರಂಭವಾಗುತ್ತದೆ.
ಮಂಗಳೂರಿನ ಪ್ರಾಚೀನ ವೈದಿಕ ಮನೆತನವಾದ ಜೋಡು ಮಠದ ವೈದಿಕ ಮನೆತನದ ಭಾಸ್ಕರ ಭಟ್ – ಶ್ರೀನಾಥ ಭಟ್ ಅವರು ಪೂಜಾ ಕೈಂಕರ್ಯದ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ದೇವತಾ ಪ್ರಾರ್ಥನೆ, ಮಹಾಗಣಪತಿ ಅರ್ಚನೆ, ಮೃತ್ತಿಕಾನಯನ ಮಾಡಿ, ಮೃತ್ತಿಕೆಯಲ್ಲಿ ವರಾಹ ಸ್ವಾಮಿ, ಮಹಾ ಲಕ್ಷ್ಮೀಯ ಆವಾಹನೆ- ಪೂಜನೆಗಳನ್ನು ಮಾಡಿ ವಿಶ್ವಕರ್ಮನ ಧ್ಯಾನ ಮಾಡಿ ಸುಂದರ ವಾದ ತಾಯಿಯ ವಿಗ್ರಹ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪ್ರಾರ್ಥನೆ ಮಾಡಲಾಗುತ್ತದೆ.
ಆಚಾರ್ಯ ಮಠದ ವಸಂತ ಮಂಟಪ ದಲ್ಲಿ ವಿರಾಜಮಾನಗಳಾಗುವ ಶಾರದೆಗೆ ತ್ರಿಕಾಲ ಪೂಜೆ, ವಿಶೇಷ ಸೇವೆಗಳು, ಪ್ರತಿ ದಿನ ರಂಗಪೂಜೆ, ಅಲಂಕಾರ ಪೂಜೆಗಳು ನಡೆಯುತ್ತದೆ. ಮೂಲ ನಕ್ಷತ್ರದ ಮೊದಲನೇ ಪಾದದಲ್ಲಿ ಪ್ರತಿಷ್ಠೆ, ಶ್ರವಣಾ ನಕ್ಷತ್ರದ ಕೊನೆಯ ಚರಣದಲ್ಲಿ ವಿಸರ್ಜನೆ ನಡೆಯುತ್ತದೆ.
100ನೇ ವರ್ಷಕ್ಕೆ 8 ಲಕ್ಷದ ಸ್ವರ್ಣ ಸೀರೆ!
ಲಲಿತೋಪಾಖ್ಯಾನ, ದುರ್ಗಾಸಪ್ತಶತಿ, ದೇವಿ ಮಹಾತ್ಮೆ ಮೊದಲಾದ ಗ್ರಂಥಗಳಲ್ಲಿ ಉಲ್ಲೇಖ ಮಾಡಿದಂತೆ ಶಾರದೆಯ ನಿತ್ಯದ ಅಲಂಕಾರ ನಡೆಯುತ್ತದೆ. ಕೊನೆಯ ದಿನದ ಅಲಂಕಾರಕ್ಕೆ ಕುಲ್ಯಾಡಿ ಮಾಧವ ಪೈ ಅವರ ಪತ್ನಿಯ ಹೆಸರಿನಲ್ಲಿ ಪುತ್ರ ಸೀರೆಯನ್ನು ಅರ್ಪಿಸುತ್ತಾರೆ. ಈ ಸೀರೆಯನ್ನು ಶೋಭಾಯಾತ್ರೆಯ ಸಂದರ್ಭ, ಮುಂದಿನ ವರ್ಷ ಪ್ರತಿಷ್ಠಾಪನೆಯ ವೇಳೆ ಮಾತ್ರ ಉಡಿಸಲಾಗುತ್ತದೆ. ಅಂದರೆ, ಕೊನೆಯ ದಿನದ ಸೀರೆಯಲ್ಲಿ ಮಲ್ಲಿಗೆ ಮುಡಿದ ಶಾರದೆ ದರ್ಶನ ನೀಡಿದರೆ ಮುಂದಿನ ವರ್ಷ ಮೊದಲ ದಿನ ಕಿರೀಟ ಧಾರಿಣಿಯಾಗಿ ಅದೇ ಸೀರೆಯಲ್ಲಿ ನೋಡಬಹುದು. ಅದನ್ನು ಬಿಟ್ಟು ಯಾವುದೇ ಸೀರೆಯನ್ನು 2ನೇ ಬಾರಿ ಉಡಿಸುವ ಕ್ರಮವಿಲ್ಲ. 100ನೇ ವರ್ಷಾಚರಣೆಗೆ ಸುಮಾರು 8 ಲಕ್ಷ ರೂ. ಮೌಲ್ಯದ ಸ್ವರ್ಣ ಹೂವಿನಿಂದ ತಯಾರಿಸಲಾದ ಸೀರೆಯನ್ನು ಕುಟುಂಬ ಕೊಟ್ಟಿತ್ತು.
ವಿಶೇಷ ನೈವೇದ್ಯ ಅರ್ಪಣೆ
ಒಬ್ಬಟ್ಟು, ಬಾಳೆ ಹಣ್ಣಿನ ರಸಾಯನ, ಎಳ್ಳುಂಡೆ, ಸೌತೆಕಾಯಿ ದೋಸೆ, ಕಡುಬು, ಹಲಸಿನ ಗಟ್ಟಿ ಮೊದಲಾದವುಗಳು ವಿವಿಧ ದಿನದ ಪ್ರಕಾರ ವಿಶೇಷ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಪೂರಣಪೋಳಿ ನೈವೇದ್ಯಗಳು ಪ್ರಧಾನವಾಗಿರುತ್ತವೆ.
ಮೂರ್ತಿ ತಯಾರಕರ ಪರಂಪರೆಪ್ರಾಚೀನ ಕಾಲದಲ್ಲಿ ಶರ್ಮಾ ಎನ್ನುವವರು ಮೂರ್ತಿ ಮಾಡುತ್ತಿದ್ದರು. ಅನಂತರ ಸುಮಿತ್ರಾಚಾರ್ಯರು, ಬಳಿಕ ಅವರ ತಮ್ಮ ರಾಮದಾಸ ಆಚಾರ್ಯರು, ಪ್ರಸ್ತುತ ಅವರ ಮಗ ನವೀನ ಆಚಾರ್ಯರು ಮೂರ್ತಿಯನ್ನು ರೂಪಿಸುತ್ತಾರೆ. ನವರಾತ್ರಿಯ ಎರಡು ಮೂರು ದಿನದೊಳಗೆ ಮೂರ್ತಿ ನಿರ್ಮಾಣವಾಗುತ್ತದೆ.
ಮೂರ್ತಿಯನ್ನು ತರುವ ಬಗೆ
ಪ್ರತಿಷ್ಠೆಯ ಹಿಂದಿನ ದಿನ ಸರ್ವ ದೇವರ ಪ್ರಾರ್ಥನೆಯ ಬಳಿಕ ವಿಗ್ರಹವನ್ನು ಮೆರವಣಿಗೆ ಮೂಲಕ ವಸಂತ ಮಂಟಪಕ್ಕೆ ತರಲಾಗುತ್ತದೆ. ಅದಕ್ಕೂ ಮುನ್ನ ಮಾಂಗಲ್ಯಸೂತ್ರ, ಸೀರೆ, ಆಭರಣಗಳ ಸಹಿತ ಭಂಡಾರದೊಂದಿಗೆ ಬಿಂಬ ನಿರ್ಮಾಣ ಸ್ಥಳಕ್ಕೆ ಸಮಿತಿ ಪದಾಧಿಕಾರಿಗಳು ತೆರಳುತ್ತಾರೆ. ಅಲ್ಲಿ ಸಮಿತಿಯ ಅಧ್ಯಕ್ಷ ಡಾ| ಉಮಾನಂದ ಮಲ್ಯ ಅವರು ಮೂರ್ತಿಯನ್ನು ಪಡೆಯುತ್ತಾರೆ. ಕಸ್ತೂರಿಕಾರ್ ಕುಟುಂಬದ ಹಿರಿಯ ಮುತ್ತೈದೆಯರು ಸೇರಿ ದೇವಿಗೆ ಸೀರೆ ಉಡಿಸಿ, ಸಿಂಗರಿಸಿ, ಹೂವು, ಕುಂಕುಮ – ಅರಶಿನ ಹಚ್ಚಿ ಆಕೆಯನ್ನು ಅಲ್ಲಿಂದ ಬೀಳ್ಕೊಡುತ್ತಾರೆ.
ಮಂಟಪದ ಮುಂದೆ ಮಲ್ಲಿಗೆ ಚಪ್ಪರ!
ಶಾರದೆಯನ್ನು ಮೊದಲ ದಿನ ವೀಣಾಪಾಣಿಯ ಸ್ವರೂಪದಲ್ಲಿ ಪೂಜಿಸಲಾಗುತ್ತದೆ. ಕೊನೆಯ ದಿನವೂ ಅದೇ ಅಲಂಕಾರ. ಆದರೆ, ಮೊದಲ ದಿನ ಕಿರೀಟಧಾರಿಣಿಯಾಗಿದ್ದರೆ ಕೊನೆಯ ದಿನ 72 ಸಾವಿರ ಮಲ್ಲಿಗೆ ಮೊಗ್ಗುಗಳಿಂದ ಆಕೆಯ ಕೇಶವನ್ನು ಅಲಂಕರಿಸಲಾಗುತ್ತದೆ. ಭಕ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಮಲ್ಲಿಗೆ ಅರ್ಪಿಸುತ್ತಾರೆ. ಭಕ್ತರೊಬ್ಬರು ಶಾರದಾ ಮಂಟಪದ ಮುಂದೆ ಮಲ್ಲಿಗೆ ಹೂವಿನ ಚಪ್ಪರವವನ್ನೇ ರಚಿಸಿಕೊಡುತ್ತಾರೆ ಎನ್ನುತ್ತಾರೆ ಆಚಾರ್ಯ ಮಠದ ಪಂಡಿತ್ ನರಸಿಂಹ ಆಚಾರ್ಯ.
-ಭರತ್ ಶೆಟ್ಟಿಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.