Mangaluru: ಕಷ್ಟದ ಸಮಯದಲ್ಲಿ ದಾರಿ ತೋರುವ ದೇವರು: ಡಾ| ಎಲಿಯಾಸ್ ಫ್ರ್ಯಾಂಕ್
Team Udayavani, Jan 15, 2025, 11:19 PM IST
ಮಂಗಳೂರು: ದೇವರು ನಮ್ಮ ಕಷ್ಟದ ಸಮಯದಲ್ಲಿ ಕೈಹಿಡಿದು ಸೂಕ್ತ ದಾರಿ ತೋರುತ್ತಾರೆ. ಕಷ್ಟಗಳು ನಮ್ಮನ್ನು ಬಲಿಷ್ಠಗೊಳಿಸುವ ಜತೆಗೆ ನಮ್ಮ ಭರವಸೆಗಳು ಮತ್ತಷ್ಟು ದೃಢಗೊಳ್ಳುತ್ತದೆ ಎಂದು ಪಶ್ಚಿಮ ಬಂಗಾಲದ ಅಸನ್‌ಸೋಲ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅ| ವಂ| ಡಾ| ಎಲಿಯಾಸ್ ಫ್ರ್ಯಾಂಕ್ ಸಂದೇಶ ನೀಡಿದರು.
ಮಂಗಳೂರಿನ ಬಿಕರ್ನಕಟ್ಟೆ ಬಾಲಯೇಸು ಪುಣ್ಯಕ್ಷೇತ್ರದಲ್ಲಿ ಬುಧವಾರ ಜರಗಿದ ವಾರ್ಷಿಕ ಮಹೋತ್ಸವದ ಬೆಳಗ್ಗಿನ ಮುಖ್ಯ ಬಲಿಪೂಜೆಯ ನೇತೃತ್ವ ವಹಿಸಿ ಸಂದೇಶ ನೀಡಿದರು.
ಕ್ರಿಸ್ತರು ನಮ್ಮನ್ನು ಪ್ರೀತಿಸಿದಂತೆ ನಾವೆಲ್ಲರೂ ಇತರರನ್ನು ಪ್ರೀತಿಸಬೇಕು. ಯೇಸು ನೀಡಿದ ಪ್ರೀತಿಯ ಸಂದೇಶವನ್ನು ಸಮುದಾಯಕ್ಕೆ ಸಾರಬೇಕು ಎಂದರು.
ಬಲಿಪೂಜೆಯಲ್ಲಿ ಅನಾರೋಗ್ಯ ಪೀಡಿತರಿಗಾಗಿ ವಿಶೇಷ ಪ್ರಾರ್ಥನೆ ನಡೆಯಿತು. ಬಳಿಕ ಬಾಲಯೇಸು ಮೂಲಕ ಲಭಿಸಿದ ಆಶೀರ್ವಾದಗಳನ್ನು ಸ್ಮರಿಸಿ ಪರಮ ಪ್ರಸಾದದ ಆರಾಧನೆ ನಡೆಸಲಾಯಿತು. ದಿನದ ಮುಖ್ಯ ಬಲಿಪೂಜೆಯಲ್ಲಿ ಸಾವಿರಾರು ಮಂದಿ ಭಕ್ತರು ಭಾಗವಹಿಸಿದ್ದರು. ಕಾರ್ಮೆಲ್ ಸಭೆ ಹಾಗೂ ಮಂಗಳೂರು ಧರ್ಮಪ್ರಾಂತ್ಯದ ಹಲವಾರು ಧರ್ಮಗುರುಗಳು ಬಲಿಪೂಜೆಯಲ್ಲಿ ಭಾಗಿಗಳಾಗಿದ್ದರು.
ಸಂಜೆ ನಡೆದ ಸಮಾರೋಪ ಬಲಿಪೂಜೆಯನ್ನು ಕಾರ್ಮೆಲ್ ಸಭೆಯ ವಂ| ರುಡಾಲ್ಫ್ ಡಿ’ಸೋಜಾ ನೆರವೇರಿಸಿ ಪ್ರವಚನ ನೀಡಿ, ಇಂದಿನ ಸಮಾಜದಲ್ಲಿ ಮೊಬೈಲ್ ಬಳಕೆ ಅಗತ್ಯವಾಗಿದೆ. ಅದೇ ಮಾದರಿಯಲ್ಲಿ ದೇವರನ್ನು ಸ್ಮರಿಸುವ ಅಗತ್ಯವೂ ಅತಿಯಾಗಿದೆ. ಸಣ್ಣ ಕೆಲಸ ಗಳನ್ನು ದೇವರಿಗಾಗಿ ಮಾಡಬೇಕು. ಎಲ್ಲ ಕೆಲಸಗಳನ್ನು ಮಾಡುವ ವೇಳೆ ದೇವರ ಹೆಸರಲ್ಲಿ ಮಾಡಿದಾಗ ಸಾರ್ಥಕತೆ ಪಡೆದುಕೊಳ್ಳಲು ಸಾಧ್ಯ ಎಂದರು.
ಪುಣ್ಯಕ್ಷೇತ್ರದ ನಿರ್ದೇಶಕ ವಂ| ಸ್ಟೀಫನ್ ಪಿರೇರಾ, ಸಂತ ಜೋಸೆಫರ ಗುರುಮಠದ ಮಠಾಧಿಪತಿ ವಂ| ಮೆಲ್ವಿನ್ ಡಿ’ಕುನ್ಹಾ ಮತ್ತಿತರ ಧರ್ಮಗುರುಗಳು ಬಲಿಪೂಜೆಯಲ್ಲಿ ಭಾಗಿಗಳಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UPCL Kasaragod Power line: ಕಂಪೆನಿಯಿಂದ ತಪ್ಪು ಮಾಹಿತಿ: ಹೋರಾಟ ಸಮಿತಿ ಒಕ್ಕೂಟ
Mangaluru: ಆಟವಾಡುತ್ತಿದ್ದಾಗಲೇ ಯುವಕ ಸಾವು
Mulki: ಮಾದಕ ವಸ್ತು ತಡೆ-88 ಪ್ರಕರಣ: 6.80 ಕೋಟಿ ರೂ. ಮೌಲ್ಯದ ವಸ್ತು ನಾಶ: ಕಮಿಷನರ್
Mangaluru: ನಾಳೆ(ಜ.17) ಸಿಎಂ ಮಂಗಳೂರಿಗೆ… ಬಹು ಸಂಸ್ಕೃತಿ ಉತ್ಸವದಲ್ಲಿ ಭಾಗಿ
Mangaluru: ಕರ್ನಾಟಕ ಕ್ರೀಡಾಕೂಟಕ್ಕೆ 5 ಕೋ.ರೂ.: ಮುಲ್ಲೈ ಮುಗಿಲನ್
MUST WATCH
ಹೊಸ ಸೇರ್ಪಡೆ
ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ಚಿರತೆ ಸೆರೆ ಕಾರ್ಯಾಚರಣೆ ಸ್ಥಗಿತ
Hubballi: ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ವಿಧ್ಯುಕ್ತ ಚಾಲನೆ
Chikkaballapura: “ಈಶ’ದಲ್ಲಿ 54 ಅಡಿ ಎತ್ತರದ ತ್ರಿಶೂಲ ಲೋಕಾರ್ಪಣೆ
Chamarajpete: ಕೆಚ್ಚಲು ಕೊಯ್ದ ಕೇಸ್; 3 ಲಕ್ಷ ರೂ.ಮೌಲ್ಯದ 3 ಹಸು ಕೊಡಿಸಿದ ಸಚಿವ ಜಮೀರ್
Udupi: ಗೀತಾರ್ಥ ಚಿಂತನೆ-157: ಸೂಕ್ಷ್ಮ ಜಗತ್ತೂ, ಸ್ಥೂಲ ಜಗತ್ತೂ ಅನಂತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.