Manipal: ಸವಾಲು ಮೆಟ್ಟಿ ನಿಂತಾಗ ಸುಸ್ಥಿರ ಜೀವನ: ಡಾ| ಜಗದೀಶ್‌

ಕೆಎಂಸಿ ಗ್ರೀನ್ಸ್‌ನಲ್ಲಿ ನಡೆದ ಮಾಹೆ ವಿಶ್ವವಿದ್ಯಾನಿಲಯ 32ನೇ ಘಟಿಕೋತ್ಸವ; ಪದವೀಧರರಿಗೆ ಪದವಿ ಪ್ರದಾನ

Team Udayavani, Nov 9, 2024, 12:08 AM IST

Manipal: ಸವಾಲು ಮೆಟ್ಟಿ ನಿಂತಾಗ ಸುಸ್ಥಿರ ಜೀವನ: ಡಾ| ಜಗದೀಶ್‌

ಮಣಿಪಾಲ: ಶೈಕ್ಷಣಿಕ ಪದವಿಯ ಅನಂತರವೇ ನಿಜವಾದ ಜಗತ್ತು ತೆರೆದುಕೊಳ್ಳುತ್ತದೆ. ಆಗ ಎದುರಾಗುವ ಸವಾಲುಗಳನ್ನು ಸಮ
ರ್ಥವಾಗಿ ಎದುರಿಸಿದಾಗ ಸುಸ್ಥಿರ, ಆರೋಗ್ಯಕರ, ಶಾಂತಿಯುತ ಮತ್ತು ಸುರಕ್ಷಿತ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಯುಜಿಸಿ ಮುಖ್ಯಸ್ಥ ಡಾ| ಮಾಮಿದಾಲ ಜಗದೀಶ್‌ ಕುಮಾರ್‌ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕೆಎಂಸಿ ಗ್ರೀನ್ಸ್‌ನಲ್ಲಿ ನಡೆಯುತ್ತಿರುವ ಮಾಹೆ ವಿ.ವಿ.ಯ 32ನೇ ಘಟಿಕೋತ್ಸವದ ಮೊದಲದ ದಿನ ಶುಕ್ರವಾರ ಪದವೀಧರರಿಗೆ ಪದವಿ ಪ್ರದಾನಿಸಿ ಘಟಿಕೋತ್ಸವ ಭಾಷಣ ಮಾಡಿದರು.

ಯುವ ಸಂಪತ್ತು ಭಾರತದ ಸಂಪತ್ತು. ಯುವ ಜನರಿಂದಲೇ ಭಾರತವು ಇಷ್ಟು ಸದೃಢವಾಗಿ ನಿಂತಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ದೇಶದ ಉದ್ದಗಲಕ್ಕೂ ಹಲವು ಸಂಸ್ಥೆಗಳು ತನ್ನದೇ ಕೊಡುಗೆ ನೀಡುತ್ತಿವೆ. ಅದರಲ್ಲಿ ಮಾಹೆ ವಿ.ವಿ.ಯು ಮೇಲ್ಪಂಕ್ತಿಯಾಗಿದೆ. ಇಲ್ಲಿ ವಿಶ್ವದರ್ಜೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಭಾರತವೂ ಜಗತ್ತಿನ ಎರಡನೇ ಅತಿದೊಡ್ಡ ಸ್ಟಾರ್ಟ್‌ಅಪ್‌ ಇಕೋ ಸಿಸ್ಟಮ್‌ ಹೊಂದಿದ್ದು ಅದಕ್ಕೂ ಮಾಹೆಯಂತಹ ವಿಶ್ವವಿದ್ಯಾನಿಲಯದ ಕೊಡುಗೆ ಅನನ್ಯ ಎಂದು ಶ್ಲಾಘಿಸಿದರು.

2050ರ ವೇಳೆಗೆ ವಿಶ್ವದ ಜನಸಂಖ್ಯೆ 10ಬಿಲಿಯನ್‌ ಆಗಲಿದೆ. ಆ ದಿನಗಳನ್ನು ಗುರಿಯಾಗಿಟ್ಟುಕೊಂಡು ಈಗಿಂದಲೇ ಉತ್ತಮ ಆರೋಗ್ಯ, ಆಹಾರ ಮತ್ತು ಶುದ್ಧ ವಾತಾವರಣ ಸೃಷ್ಟಿಸುವ ಅಗತ್ಯತೆ ಹೆಚ್ಚಿದೆ. ಪದವೀಧರರು ಈ ನಿಟ್ಟಿನಲ್ಲಿ ಎದುರಾಗುವ ಸವಾಲುಗಳನ್ನು ಸರಿಯಾಗಿ ಎದುರಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ನೀರಿನ ಮಿತ ಬಳಕೆಯ ಮೂಲಕ ಉತ್ತಮ ಇಳುವರಿಯ ಕೃಷಿ ಪದ್ಧತಿ ಅಳವಡಿಕೆ ಸಹಿತ ಹಲವು ವಿನೂತನ ಕ್ರಮಗಳನ್ನು ಅನುಷ್ಠಾನಕ್ಕೆ ತರುವ ಅಗತ್ಯವೂ ಇದೆ ಎಂದರು.

ತಂತ್ರಜ್ಞಾನ ಹಾಗೂ ಜೀವನ ಕ್ರಮದಲ್ಲಿನ ಬದಲಾವಣೆಯಿಂದಲೂ ಹಲವು ಸವಾಲುಗಳು ಎದುರಾಗುತ್ತವೆ. ಇದೆಲ್ಲದಕ್ಕೂ ಉತ್ತರ ಕಂಡುಕೊಳ್ಳಬೇಕು. ಯುವ ಸಂಪತ್ತಿನ ಸದ್ಬಳಕೆಯೂ ಆಗಬೇಕು. ಈ ನಿಟ್ಟಿನಲ್ಲಿ ವೈಯಕ್ತಿಕ ಅಭಿವೃದ್ಧಿ ಎಂದರೆ ಪ್ರತಿ ವಿಷಯದಲ್ಲೂ ಕುತೂಹಲ, ಪ್ರಶ್ನೆ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಎಲ್ಲ ವಿಷಯಗಳಲ್ಲೂ ಮುಕ್ತ ಮನಸ್ಸಿನಿಂದ ತಿಳಿದುಕೊಳ್ಳವ ಪ್ರಯತ್ನ ನಮ್ಮದಾಗಬೇಕು. ದೈಹಿಕ ಮತ್ತು ಮಾನಸಿಕ ಸದೃಢತೆ ಕಾಪಾಡಿಕೊಳ್ಳಬೇಕು. ಇದರ ಜತೆಗೆ ದೇಶದ ಅಭಿವೃದ್ಧಿ, ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆ, ಏಕತೆಯ ಬಗ್ಗೆ ಸದಾ ಗೌರವ ಹೊಂದಿರಬೇಕು ಎಂದರು.

ಸಹ ಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಘಟಿಕೋತ್ಸವ ಪ್ರಕ್ರಿಯೆ ಮುನ್ನೆಡೆಸಿದರು.ಮಾಹೆ ಟ್ರಸ್ಟ್ ಟ್ರಸ್ಟಿ ವಸಂತಿ ಆರ್‌. ಪೈ ಅವರು ಡಾ| ಜಗದೀಶ್‌ ಕುಮಾರ್‌ ಜತೆ ಸೇರಿ ಮಾಹೆಯ ಎಂಕಾನ್‌ ಬಿ.ಎಸ್ಸಿ ನಸ್ಸಿಂಗ್‌ ಪದವೀಧರೆ ಮೆಲಿನ್‌ ಮ್ಯಾಥ್ಯೂ, ಮಾಸ್ಟರ್‌ ಆಫ್ ಎಂಜಿನಿಯರಿಂಗ್‌ ಪದವೀಧರೆ ಮನಸ್ವಿ ಪಿ.ಎಸ್‌. ಅವರಿಗೆ 2024ನೇ ಸಾಲಿನ ಡಾ| ಟಿಎಂಎ ಪೈ ಚಿನ್ನದ ಪದಕ ಸಹಿತ ಪದವಿ ಪ್ರದಾನ ಮಾಡಿದರು.

ಸಹ ಕುಲಪತಿಗಳಾದ ಡಾ| ಶರತ್‌ ಕೆ. ರಾವ್‌, ಡಾ| ನಾರಾಯಣ ಸಭಾಹಿತ್‌ ಸಹಿತ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಕುಲಪತಿ ಲೆ| ಜ| ಡಾ| ಎಂ.ಡಿ.ವೆಂಕಟೇಶ್‌ ಪ್ರಸ್ತಾವನೆಗೈದು ಮಾಹೆಯ ಸಾಧನೆಯ ವರದಿ ಮಂಡಿಸಿದರು. ಮೌಲ್ಯಮಾಪನ ಕುಲಸಚಿವ ಡಾ| ವಿನೋದ್‌ ಥೋಮಸ್‌ ಪದವಿ ಪಡೆಯುವ ವಿದ್ಯಾರ್ಥಿಗಳ ಮಾಹಿತಿ ನೀಡಿ ಪ್ರತಿಜ್ಞಾವಿಧಿ ಬೋಧಿಸಿದರು. ಸಹ ಕುಲಪತಿ ಡಾ| ದಿಲೀಪ್‌ ಜಿ. ನಾಯ್ಕ ಸ್ವಾಗತಿಸಿದರು. ಕುಲಸಚಿವ ಡಾ| ಪಿ.ಗಿರಿಧರ್‌ ಕಿಣಿ ವಂದಿಸಿದರು. ಸಿಒಎಲ್‌ಡಿ ನಿರ್ದೇಶಕ ಡಾ| ಮನೋಜ್‌ ನಾಗಸಂಪಿಕೆ ಅತಿಥಿ ಪರಿಚಯ ಮಾಡಿದರು. ಸ್ಟೂಡೆಂಟ್‌ ಅಫೈರ್ ನಿರ್ದೇಶಕಿ ಡಾ| ಗೀತಾ ಮಯ್ಯ ಚಿನ್ನದ ಪದಕ ವಿಜೇತರ ಪಟ್ಟಿ, ಸೆಂಟರ್‌ ಫಾರ್‌ ಡಾಕ್ಟೊರಲ್‌ ಸ್ಟಡೀಸ್‌ನ ಡೆಪ್ಯೂಟಿ ಡೈರೆಕ್ಟರ್‌ ಡಾ| ವಸುಧಾ ದೇವಿ ಪಿ.ಎಚ್‌ಡಿ ಪದವೀಧರರ ಪಟ್ಟಿ ವಾಚಿಸಿದರು. ಎಂಐಟಿ ಸಹಾಯಕ ಪ್ರಾಧ್ಯಾಪಕ ಡಾ| ಸುಹಾಸ್‌ ಕೌಶಿಕ್‌ ಸಿ.ಎಸ್‌. ನಿರೂಪಿಸಿದರು.

ಟಾಪ್ ನ್ಯೂಸ್

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.