ಮಂಜೇಶ್ವರ ವಿಧಾನಸಭಾ ಕ್ಷೇತ್ರ: ನಕಲಿ ಮತ ಚಲಾವಣೆ ಭಯ !

Team Udayavani, Apr 17, 2019, 6:30 AM IST

Udayavani Kannada Newspaper

ಕುಂಬಳೆ: ಕೇರಳ ಕರ್ನಾಟಕ ಗಡಿ ಪ್ರದೇಶವಾದ ಕಾಸರಗೋಡು ಲೋಕಸಭಾ ಕ್ಷೇತ್ರದ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ನಕಲಿ ಮತ ಚಲಾವಣೆಯ ಭಯ ಕೆಲವು ರಾಜಕೀಯ ಪಕ್ಷಗಳ ನಾಯಕರಲ್ಲಿ ಕಾಡುತ್ತಿದೆ.ಇಲ್ಲಿ ಪ್ರತಿಬಾರಿಯ ಎಲ್ಲ ಚುನಾವಣೆಯಲ್ಲೂ ಕೆಲವಷ್ಟು ನಕಲಿ ಮತಗಳು ಚಲಾವಣೆ ಆಗಿಯೇ ಆಗುವುದೆಂಬ ನಿಲುವು ರಾಜಕೀಯ ನಾಯಕರದು.

ಇದಕ್ಕೆ ಪೂರಕವೆಂಬಂತೆ ಕಳೆದ 2016ರ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 200ಕ್ಕೂ ಮಿಕ್ಕಿ ನಕಲಿ ಮತ ಚಲಾವಣೆ ಯಾಗಿರುವುದಾಗಿ ಪರಾಜಿತ ಬಿ.ಜೆ.ಪಿ. ಅಭ್ಯರ್ಥಿ ಕೆ. ಸುರೇಂದ್ರನ್‌ ರಾಜ್ಯ ಉತ್ಛ ನ್ಯಾಯಾಲಯದಲ್ಲಿ ದಾವೆ ದಾಖಲಿಸಿದ್ದಾರೆ. ಇದರಲ್ಲಿ ಕೆಲವು ನಿಧನ ಹೊಂದಿದ ಮತ್ತು ವಿದೇಶದಲ್ಲಿ ನೆಲೆಸಿರುವವರ ಮತ ಚಲಾವಣೆಯಾಗಿರುವುದಾಗಿ ದೃಢಪಟ್ಟಿದೆ. ಅಂದಿನ ಐಕ್ಯರಂಗದ ಮುಸ್ಲಿಂಲೀಗ್‌ ಅಭ್ಯರ್ಥಿಯಾಗಿದ್ದ ಅಬ್ದುಲ್‌ ರಝಾಕ್‌ ಅವರು ಕೇವಲ 87 ಮತಗಳ ಅಂತರದಿಂದ ಅಂದು ಗೆದ್ದಿದ್ದರು. ದುರದೃಷ್ಟವಶಾತ್‌ ಗೆದ್ದ ಶಾಸಕರು ನಿಧನ ಹೊಂದಿರುವರು. ಆ ಬಳಿಕ ಪರಾಜಿತ ಕೆ. ಸುರೇಂದ್ರನ್‌ ಅವರು ನ್ಯಾಯಾಲಯದ ದಾವೆಯನ್ನು ಹಿಂಪಡೆಯಲು ಅರ್ಜಿ ಸಲ್ಲಿಸಲಿರುವರು. ಆದುದರಿಂದ ಲೋಕಸಭಾ ಚುನಾವಣೆ ಕಳೆದ ಕೆಲವೇ ತಿಂಗಳಲ್ಲಿ ಮತ್ತೆ ಮಂಜೇಶ್ವರ ವಿಧಾನಸಭೆಗೆ ಚುನಾವಣೆ ನಡೆಯಲಿದೆ.

ಚುನಾವಣಾಧಿಕಾರಿಗಳ ನಿಬಂಧನೆಯ ಸಡಿಲ ನಿಲುವು ನಕಲಿ ಮತದಾನಕ್ಕೆ ವರದಾನವಾಗಿದೆ. ಗುರುತು ಚೀಟಿ ಸಹಿತ 10 ಕ್ಕೂ ಮಿಕ್ಕ ಭಾವಚಿತ್ರವಿರುವ ದಾಖಲೆಗಳನ್ನು ಮತದಾನ ಸಂದರ್ಭದಲ್ಲಿ ಹಾಜರಿಪಡಿಸಬೇಕೆಂದಿದೆ. ಆದರೆ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಬಿ.ಎಲ್‌.ಒ. ನೀಡಿದ ಸ್ಲಿಪ್‌ ಸಾಕೆಂಬ ಮೃದು ನಿಲುವು ತಾಳಿದ ಕಾರಣ ನಕಲಿ ಮತದಾನ ಚಲಾವಣೆಗೆ ಅವಕಾಶಯಿತೆಂಬ ಆರೋಪ ಪರಾಜಿತ ಪಕ್ಷಗಳದು. ಕೆಲವು ಪಕ್ಷಗಳ ಕಚೇರಿಯಲ್ಲಿ ಮತದಾನಗೈಯ್ಯಲಿರುವ ಸ್ಲಿಪ್‌ಗ್ಳನ್ನು ಬಿ.ಎಲ್‌.ಒ. ಗಳಿಂದ ಶೇಖರಿಸಿ ಯಾರದೋ ಮತವನ್ನು ಯರೋ ಚಲಾಯಿಸಿರುವರೆಂಬ ಆರೋಪ ಬಲವಾಗಿದೆ. ಆದರೆ ಈ ಬಾರಿ ಕಡ್ಡಾಯವಾಗಿ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಮತದಾನದ ವೇಳೆ ತರಬೇಕು. ಮುಖದ ಪರದೆಯನ್ನು ಸರಿಸಬೇಕೆಂಬ ಆದೇಶದಿಂದ ನಕಲಿ ಮತದಾನಕ್ಕೆ ಕಡಿವಾಣವಿರುವ ವಿಶ್ವಾಸ ಈ ಬಾರಿ ಕೇಳಿಬರುತ್ತಿದೆ.ಆದರೆ ಚುನಾವಣಾ ಧಿಕಾರಿಗಳ ಆಜ್ಞೆ ಎಷ್ಟು ಪಾಲನೆಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ನಕಲಿ ಮತದಾರರ ಆತಂಕ
ಮರಣ ಹೊಂದಿದವರ ಮತ್ತು ವಿದೇಶದಲ್ಲಿ ನೆಲೆಸಿರುವವರ ಮತ ಚಲಾವಣೆಯಾಗುವ ಆತಂಕದ ಮಧ್ಯೆ ಈ ಬಾರಿ ನೆರೆಯ ಕರ್ನಾಟಕದಿಂದ ಕೆಲವರು ಆಗಮಿಸಿ ನಕಲಿ ಮತದಾನಗೈಯುವ ಭಯ ಕೆಲವು ಪಕ್ಷಗಳಿವೆ.

ಕರ್ನಾಟಕದ ಪ್ರಥಮ ಹಂತದ ಚುನಾವಣೆ ಪಕ್ಕದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆ ಎ. 18ರಂದು ನಡೆಯಲಿದೆ. ಇದರ ಬಳಿಕ ಕೇರಳದಲ್ಲಿ ಏಕದಿನದಲ್ಲಿ ಚುನಾವಣೆ ನಡೆಯಲಿದ್ದು ಕಾಸರಗೋಡು ಕ್ಷೇತ್ರದಲ್ಲಿ ಎ. 23ರಂದು ನಡೆಯಲಿದೆ.ಈ ಚುನಾವಣೆ ಯಲ್ಲಿ ಅನ್ಯಕ್ಷೇತ್ರದ ಕೆಲವರು ಕಳ್ಳ ಮತದಾನ ಮಾಡಲಿರುವ ಭಯ ಪ್ರಧಾನ ಪಕ್ಷವೊಂದರ ನಾಯಕರದು. ಈ ತನಕ ಕೈ ಬೆರಳ ಶಾಯಿ ಅಳಿಸಲು ಅದ್ಯಾವುದೋ ದ್ರಾವಣ ಬಳಸುತ್ತಿದ್ದು ಈ ಬಾರಿ ಕೈ ಬೆರಳಿಗೆ ತಾಗದಂತೆ ಕವರ್‌ ಸಿದ್ಧವಾಗಿರುವ ಸುದ್ದಿ ಜಾಲತಾಣದಲ್ಲಿ ಹರಿದಾಡಿದೆ.

ಟಾಪ್ ನ್ಯೂಸ್

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.