ಮಾರ್ಗೋಳಿ: ಪ್ರಯಾಣಿಕರಿಂದ ದೂರವಾದ ತಂಗುದಾಣ
Team Udayavani, Jun 9, 2019, 6:10 AM IST
ಬಸ್ರೂರು: ಸಿದ್ದಾಪುರ – ಕುಂದಾಪುರ ರಾಜ್ಯ ಹೆದ್ದಾರಿಯಲ್ಲಿ ಬಸ್ರೂರು ಬಸ್ ನಿಲ್ದಾಣದ ಅನಂತರ ಸಿಗುವ ಮಾರ್ಗೋಳಿಯಲ್ಲಿ ವ್ಯವಸ್ಥಿತವಾದ ತಂಗುದಾಣವಿಲ್ಲದೆ ಜನ ತೊಂದರೆ ಅನುಭವಿಸುವಂತಾಗಿದೆ.
ಕುಂದಾಪುರ ಕಡೆಗೆ ಹೋಗುವ ಬಸ್ಗಳು ಈ ತಂಗುದಾಣದಿಂದ ತುಸು ಮುಂದೆ ನಿಲ್ಲುತ್ತವೆಯಾದ್ದರಿಂದ ತಂಗುದಾಣದಲ್ಲಿ ಯಾವ ಪ್ರಯಾಣಿಕರೂ ಇಲ್ಲಿ ನಿಲ್ಲುವುದಿಲ್ಲ. ಆದ್ದರಿಂದ ಮಾರ್ಗೋಳಿ ಶ್ಮಶಾನ ಬಳಿಯ ತಂಗುದಾಣ ಬಿಕೋ ಎನ್ನುತ್ತಿದೆ. ನಾನು ನಿತ್ಯವೂ ಕೆಲಸಕ್ಕೆ ಕುಂದಾಪುರಕ್ಕೆ ಹೋಗುವವನು. ಆ ಕಾರಣದಿಂದ ಬಸ್ಗಾಗಿ ಬಸ್ ನಿಲ್ಲುವ ಸ್ಥಳದಲ್ಲೆ ನಿಂತಿರುತ್ತೇನೆ. ಯಾಕೆಂದರೆ ತಂಗುದಾಣದ ಬಳಿ ಬಸ್ ನಿಲ್ಲುವುದಿಲ್ಲ ಎನ್ನುತ್ತಾರೆ ಮಾರ್ಗೋಳಿಯ ನಿವಾಸಿ ನಾರಾಯಣ.
ಬಸ್ಗಳು ಅಲ್ಲಿಯೇ ನಿಂತರೆ ಅನುಕೂಲ
ಖಾಸಗಿ ಮತ್ತು ಸರಕಾರಿ ಬಸ್ಗಳು ಹಿಂದೆ ಈಗಿರುವ ತಂಗುದಾಣದ ಎದುರೇ ನಿಲ್ಲುತ್ತಿತ್ತು. ಆದರೆ ಈಗ ಇಗರ್ಜಿ ಎದುರು ನಿಲ್ಲುತ್ತಿರುವುದರಿಂದ ಪ್ರಯಾಣಿಕರೂ ಅಲ್ಲಿಯೇ ನಿಲ್ಲುತ್ತಾರೆ. ಹಾಗಾಗಿ ಈಗ ತಂಗುದಾಣ ಅಲ್ಲಿ ಅಗತ್ಯವಿಲ್ಲವಾಗಿದೆ. ಕುಂದಾಪುರದ ಕಡೆಗೆ ಸಾಗುವ ಬಸ್ಗಳು ಮಾರ್ಗೋಳಿಯಲ್ಲಿರುವ ತಂಗುದಾಣದ ಸಮೀಪ ನಿಂತರೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. -ನಾಗರಾಜ ಗಾಣಿಗ ಸಂತೆಕಟ್ಟೆ, ಅಧ್ಯಕ್ಷರು, ಗ್ರಾ.ಪಂ. ಬಸ್ರೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.