ಕೋವಿಡ್‌ಗೆ ಹೆದರಿ ಶ್ರೀಮಂತರ ವಲಸೆ
Team Udayavani, May 17, 2020, 5:08 PM IST
ನ್ಯೂಯಾರ್ಕ್ : ಕೋವಿಡ್ ಹಾವಳಿಯಿಂದ ಕಂಗೆಟ್ಟು ಬಡವರು ಗುಳೇ ಹೋಗುತ್ತಿರುವ ದೃಶ್ಯ ಜಗತ್ತಿನ ಎಲ್ಲೆಡೆ ಕಂಡು ಬರುತ್ತಿದೆ. ಆದರೆ ಶ್ರೀಮಂತರೂ ವಲಸೆ ಹೋಗಿರುವ ವಿಚಿತ್ರವೊಂದು ನ್ಯೂಯಾರ್ಕ್‌ನಲ್ಲಿ ಸಂಭವಿಸಿದೆ.
ನಗರದ ಶ್ರೀಮಂತ ಬಡಾವಣೆಯ ಸಾವಿರಾರು ಮಂದಿ ಕೋವಿಡ್ ಹಾವಳಿ ಶುರುವಾದ ಬಳಿಕ ಸದ್ದಿಲ್ಲದೆ ಜಾಗ ಖಾಲಿ ಮಾಡಿದ್ದಾರೆ. ಈ ವಿಚಾರ ತಿಳಿದು ಬಂದದ್ದು ಅವರ ಮೊಬೈಲ್ ಫೋನ್‌ಗಳ ಲೊಕೇಶನ್ ಮೂಲಕ.
ವಿವಿಧ ಮೊಬೈಲ್ ಸೇವಾದಾರ ಕಂಪೆನಿಗಳ ಡೇಟಾಗಳನ್ನು ವಿಶ್ಲೇಷಿಸಿದಾಗ ಸಾವಿರಾರು ಫೋನ್‌ಗಳು ನಗರಗಳ ಹೊರಗೆ ಸಕ್ರಿಯವಾಗಿರುವುದು ಪತ್ತೆಯಾಗಿದೆ.
ಒಂದು ಅಂದಾಜಿನ ಪ್ರಕಾರ ಮಾ.1ರಿಂದ ಮೇ 1ರ ನಡುವೆ 4,20,000 ಮಂದಿ ನ್ಯೂಯಾರ್ಕ್ ನಗರವನ್ನು ತೊರೆದಿದ್ದಾರೆ. ಈ ಪೈಕಿ ಅತಿ ಹೆಚ್ಚು ವಲಸೆ ಕಂಡು ಬಂದಿರುವುದು ನಗರದ ಅತಿ ಶ್ರೀಮಂತ ಬಡಾವಣೆಗಳಾದ ಅಪ್ಪರ್ ಈಸ್ಟ್ ಸೈಡ್, ವೆಸ್ಟ್ ವಿಲೇಜ್, ಸೊಹೊ ಆ್ಯಂಡ್ ಬ್ರೂಕ್ಲಿನ್ ಹೈಟ್ಸ್ ಮುಂತಾದೆಡೆಗಳಲ್ಲಿ. ಈ ಬಡಾವಣೆಗಳಲ್ಲಿ ಜನಸಂಖ್ಯೆ ಶೇ. 40 ಕಡಿಮೆಯಾಗಿದೆ. ನಗರದ ಇತರ ಭಾಗಗಳಲ್ಲೂ ಜನಸಂಖ್ಯೆಯಲ್ಲಿ ಸಾಕಷ್ಟು ಇಳಿಕೆಯಾಗಿದೆ.
ಕೆಲವು ಬಡಾವಣೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಕಾಲೇಜುಗಳು ಮುಚ್ಚಿರುವುದರಿಂದ ಅವರು ತಮ್ಮ ಮನೆಗಳಿಗೆ ತೆರಳಿರುವ ಸಾಧ್ಯತೆಯಿದೆ. ಉಳಿದವರು ದೇಶದ ಇತರ ಭಾಗಗಳಲ್ಲಿರುವ ತಮ್ಮ ಬಂಧುಗಳು ಅಥವಾ ಸ್ನೇಹಿತರ ಮನೆಗಳಿಗೆ ಹೋಗಿರಬಹುದು ಎಂದು ಊಹಿಸಲಾಗಿದೆ. ಲಾಕ್‌ಡೌನ್ ಪೂರ್ಣವಾಗಿ ಘೋಷಣೆಯಾದ ಬಳಿಕ ಹೋದವರೆಲ್ಲ ಅಲ್ಲಲ್ಲೇ ಬಾಕಿಯಾಗಿರುವ ಸಾಧ್ಯತೆಯೂ ಇದೆ.
ಆದರೆ ಆದಾಯದ ನೆಲೆಯಲ್ಲಿ ವಿಶ್ಲೇಷಿಸಿದಾಗ ಅತಿ ಹೆಚ್ಚಿನ ವರಮಾನವಿರುವವರು ನಗರವನ್ನು ತೊರೆದಿರುವುದು ಸ್ಪಷ್ಟವಾಗುತ್ತದೆ. ಮಾರ್ಚ್ ಮಧ್ಯ ಭಾಗಕ್ಕಾಗುವಾಗ ಶುರುವಾದ ಸಿರಿವಂತರ ವಲಸೆ ಎಪ್ರಿಲ್‌ನಲ್ಲಿ ಅತಿ ಹೆಚ್ಚಾಯಿತು. ಮೇಯರ್ ಬಿಲ್ ಡಿ ಬ್ಲಾಸಿಯೊ ಶಾಲೆಗಳನ್ನು ಮುಚ್ಚಿ ಲಾಕ್‌ಡೌನ್ ಘೋಷಣೆಯ ಸುಳಿವು ನೀಡಿದಾಗಲೇ ಸಿರಿವಂತರೆಲ್ಲ ಜಾಗ ಮಾಡ ತೊಡಗಿದ್ದರು.
ಬಿಕ್ಕಟ್ಟಿನ ಸಮಯದಲ್ಲಿ ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂಬುದು ಘೋಷಣೆ ಮಾತ್ರ. ವಾಸ್ತವದಲ್ಲಿ ಜನರ ಮನೋಭಾವ ಈ ರೀತಿ ಇಲ್ಲ. ಹಣವಿದ್ದವರು ಕೋವಿಡ್‌ಗೆ ಹೆದರಿ ಸಾಕಷ್ಟು ಮುಂಚಿತವಾಗಿಯೇ ಪಲಾಯನ ಮಾಡಿದ್ದಾರೆ. ಉಳಿದವರು ಮಧ್ಯಮ ವರ್ಗದವರು ಮತ್ತು ಬಡವರು ಮಾತ್ರ ಎನ್ನುತ್ತಾರೆ ಇತಿಹಾಸದ ಉಪನ್ಯಾಸಕ ಫಿಲಿಪ್ಸ್ ಫೆನ್.
ಡೆಸ್ಕಾರ್ಟ್ಸ್ ಲ್ಯಾಬ್ಸ್ ಸಂಸ್ಥೆ ನ್ಯೂಯಾರ್ಕ್ ನಗರಗಳ ನಿವಾಸಿಗಳ ಮೊಬೈಲ್ ಡೇಟಾವನ್ನು ವಿಶ್ಲೇಷಣೆಗೊಳಪಡಿಸಿತ್ತು. ಈ ಸಂದರ್ಭದಲ್ಲಿ ನಗರಕ್ಕೆ ಬಂದು ಹೋಗುವವರು ಮತ್ತು ಪ್ರವಾಸಿಗರನ್ನು ಬಿಟ್ಟು ನಗರದಲ್ಲಿ ವಾಸ್ತವ್ಯವಿರುವವರ ಡೇಟಾವನ್ನು ಮಾತ್ರ ವಿಶ್ಲೇಷಣೆಗೆ ಗುರಿಪಡಿಸಲಾಯಿತು. ಫೆಬ್ರವರಿಯಲ್ಲಿ ಮತ್ತು ಮಾರ್ಚ್‌ನಲ್ಲಿ ಅವರ ಓಡಾಟದ ಮಾಹಿತಿಯನ್ನು ಕಲೆ ಹಾಕಿದಾಗ ಶ್ರೀಮಂತರು ನಗರದಿಂದ ದೂರ ಹೋಗಿರುವ ಅಂಶ ಪತ್ತೆಯಾಗಿದೆ.
ನ್ಯೂಯಾರ್ಕ್‌ನ ಶ್ರೀಮಂತರು ಕೋವಿಡ್ ಕಾಟದ ವೇಳೆ ನಗರ ತೊರೆದಿದ್ದಾರೆ ಎನ್ನುವುದಕ್ಕೆ ಇನ್ನೂ ಕೆಲವು ಸಾಕ್ಷ್ಯಗಳಿವೆ.ತ್ಯಾಜ್ಯ ಸಂಘ್ರಹದ ಪ್ರಯಾಬದಲ್ಲಾಗಿರುವ ಇಳಿಕೆ, ನೀರಿನ ಬಳಕೆ ಕಡಿಮೆಯಾಗಿರುವುದು ಈ ಮುಂತಾದ ಮಾಹಿತಿಗಳನ್ನು ವಿಶ್ಲೇಷಿಸಿದಾಗಲೂ ನಗರದಲ್ಲಿ ಜನಸಂಖ್ಯೆ ಕಡಿಮೆಯಾಗಿರುವುದು ಕಂಡು ಬರುತ್ತದೆ. ಶ್ರೀಮಂತರೆಲ್ಲ ನಗರದ ಹೊರಭಾಗಗಳಲ್ಲಿ ಎರಡನೇ ಮನೆ ಅಥವಾ ತೋಟದ ಮನೆಯನ್ನು ಹೊಂದಿರುತ್ತಾರೆ. ಹೆಚ್ಚಿನವರು ಇಂಥ ಮನೆಗಳಿಗೆ ಹೋಗಿರುವ ಸಾಧ್ಯತೆಯೂ ಇದೆ. ಶಾಲೆಗೆ ರಜೆ ಸಿಕ್ಕಿದಾಗ ಮಕ್ಕಳ ಸಮೇತ ತೋಟದ ಮನೆಗಳಿಗೆ ಅಥವಾ ದೂರದ ಊರುಗಳಿಗೆ ಪ್ರವಾಸ ಹೋಗುವುದು ಅಮೆರಿಕದಲ್ಲಿ ಮಾಮೂಲು. ಆದರೆ ಕೋವಿಡ್ ಹಾವಳಿಯ ಸಂದರ್ಭದಲ್ಲಿ ಈ ವಲಸೆ ಗಮನಕ್ಕೆ ಬಂದಿದೆಯಷ್ಟೇ ಎಂದು ವಲಸೆ ಹಿಂದಿನ ಕಾರಣವನ್ನು ವಿವರಿಸಿದ್ದಾರೆ ಮೇಯರ್.
ಮಾ.2ರಿಂದ ಮಾ. 27ರ ತನಕ ಸುಮಾರು 3,73,000 ಮೊಬೈಲ್ ಫೋನ್‌ಗಳ ಲೊಕೇಶನ್ ಸರ್ಚ್ ಮಾಡಿದಾಗಲೇ ನಾರೀ ಪ್ರಮಾಣದಲ್ಲಿ ವಲಸೆ ಆಗಿರುವುದು ಸ್ಪಷ್ಟವಾಗಿತ್ತು. ವಲಸೆಯ ಪರಿಣಾಮವಾಗಿ ನಗರದ ಜನಸಂಖ್ಯೆ ಸುಮಾರು ಶೇ. 5 ಕಡಿಮೆಯಾಗಿದೆ. ಮ್ಯಾನ್‌ಹಟನ್‌ನಿಂದ ಅತಿ ಹೆಚ್ಚು ಸಿರಿವಂತರು ವಲಸೆ ಹೋಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಗುತ್ತಿಗೆದಾರ ಸಚಿನ್ ಪ್ರಕರಣ; ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಗುತ್ತಿಗೆದಾರ ಸಚಿನ್ ಪ್ರಕರಣ; ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.