ಕಲ್ಪತರು ನಾಡಿನ ಟಾಕೀಸ್ ಗಳ ಸ್ಥಿತಿಗತಿ


Team Udayavani, Feb 13, 2021, 4:53 PM IST

ಕಲ್ಪತರು ನಾಡಿನ ಟಾಕೀಸ್ ಗಳ ಸ್ಥಿತಿಗತಿ

ಕೋವಿಡ್ ಆರ್ಭಟ ರಾಜ್ಯದಲ್ಲಿ ಕಡಿಮೆಯಾಗುತ್ತಿರುವಂತೆ ಎಲ್ಲವೂ ಎಂದಿನಂತೆ ಪ್ರಾರಂಭವಾಗಿದೆ. ಕಳೆದ ಹತ್ತು ತಿಂಗಳಿನಿಂದ ಸ್ಥಗಿತವಾಗಿದ್ದ ಚಿತ್ರಮಂದಿರಗಳು ಆರಂಭವಾಗಿವೆ. ನೂರರಷ್ಟು ಪ್ರೇಕ್ಷಕರಿಗೆ ಸರ್ಕಾರ ಅವಕಾಶ ನೀಡಿದೆ, ಎಲ್ಲಾ ಕಡೆ ಚಿತ್ರಮಂದಿರಗಳು ಆರಂಭವಾಗಿರುವಂತೆ ಕಲ್ಪತರು ನಾಡಿನಲ್ಲಿ ಇರುವ 28 ಸಿನಿಮಾ ಮಂದಿರಗಳಲ್ಲಿಯೂ ಪ್ರದರ್ಶನಗಳು ಆರಂಭ ಗೊಂಡಿವೆ. ಚಿತ್ರ ಪ್ರೇಕ್ಷಕ ಮಾತ್ರ ಇನ್ನೂ ಪೂರ್ಣ ಪ್ರಮಾಣದಲ್ಲಿ ಚಿತ್ರ ಮಂದಿರಗಳತ್ತ ಸುಳಿಯುತ್ತಿಲ್ಲ. ಸೂಪರ್‌ ಸ್ಟಾರ್‌ಗಳ ಚಿತ್ರಗಳು ಬಿಡುಗಡೆಯಾದರೆ ಚಿತ್ರ ಪ್ರೇಮಿಗಳು ಥಿಯೇಟರ್‌ಗೆ ಬರುತ್ತಾರೆ ಎಂದು ಕಾಯುತ್ತಿದ್ದಾರೆ ಚಿತ್ರ ಮಂದಿರ ಮಾಲೀಕರು.

ತುಮಕೂರು: ಕೋವಿಡ್‌ -19ನಿಂದಾಗಿ ಸ್ಥಗಿತಗೊಂಡಿದ್ದ ಸಿನಿಮಾ ಮಂದಿರಗಳಲ್ಲಿ ಶೋ ಆರಂಭವಾಗಿವೆ. ಸರ್ಕಾರದ ಮಾರ್ಗಸೂಚಿಅನ್ವಯ ಜಿಲ್ಲಾದ್ಯಂತ ಕಳೆದ ಹತ್ತು ತಿಂಗಳಿನಿಂದ ಚಟುವಟಿಕೆ ಇಲ್ಲದೇ ಧೂಳಿಡಿದಿದ್ದಚಿತ್ರಮಂದಿರಗಳು ಸ್ವತ್ಛವಾಗಿ ಸಿದ್ಧಗೊಂಡು ಚಿತ್ರ ಪ್ರೇಕ್ಷಕರಿಗೆ ಮನರಂಜನೆ ನೀಡಲು ಚಿತ್ರ ಪ್ರದರ್ಶನಗಳು ಆರಂಭಗೊಂಡಿವೆ.

ಚಿತ್ರಮಂದಿರಗಳಿಗೆ ನೂರರಷ್ಟು ಚಿತ್ರಪ್ರೇಮಿಗಳು ಕುಳಿತು ಚಿತ್ರ ನೋಡಲು ಸರ್ಕಾರಅವಕಾಶ ಕಲ್ಪಿಸಿದೆ. ಎಲ್ಲಾ ಕಡೆ ಚಿತ್ರಮಂದಿರಗಳುಆರಂಭವಾದಂತೆ ಜಿಲ್ಲೆಯಲ್ಲಿ ಇರುವ 28ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನಗಳು ನಡೆಯುತ್ತಿವೆ.

ಆದರೆ ಚಿತ್ರಪ್ರೇಮಿಗಳು ಚಿತ್ರಮಂದಿರಗಳತ್ತ ಬರುತ್ತಿಲ್ಲ. ಕೋವಿಡ್  ಮಹಾಮಾರಿಯ ಆರ್ಭಟದ ಹಿನ್ನೆಲೆಯಲ್ಲಿ ಬಂದ್‌ ಮಾಡಿದ್ದ ಚಿತ್ರಮಂದಿರಗಳನ್ನು ಕಳೆದ ಅಕ್ಟೋಬರ್‌ ತಿಂಗಳಲ್ಲಿಯೇ ಆರಂಭಿಸಲು ಚಿತ್ರಮಂದಿರದ ಮಾಲೀಕರು ಸರ್ಕಾರದ ಮಾರ್ಗಸೂಚಿ ಅನ್ವಯ ಸಿದ್ಧ ಮಾಡಿ ಕೊಂಡಿದ್ದರು, ಆದರೆ ಆಗ ಚಿತ್ರಗಳ ಬಿಡುಗಡೆ ಕುರಿತುಉಂಟಾಗಿದ್ದ ಗೊಂದಲಗಳಾಗಿ ಸಿನಿ ಮಂದಿರಗಳು ಆರಂಭವಾಗಲಿಲ್ಲ.ಈಗ ಮತ್ತೆ ಚಿತ್ರಮಂದಿರಗಳನ್ನು ಸ್ವತ್ಛಗೊಳಿಸಿ ಸರ್ಕಾರದ ಎಲ್ಲಾ ನಿಯಮಗಳನ್ನು ಪಾಲಿಸಿ ಚಿತ್ರಪ್ರದರ್ಶನ ಆರಂಭಿಸಿದರೂ ಚಿತ್ರಮಂದಿರಗಳಿಗೆಶೇ.50 ರಷ್ಟು ಪ್ರೇಕ್ಷಕರು ಬರುತ್ತಿಲ್ಲ.

ಕೆಲವು ಕಾಲೇಜು ವಿದ್ಯಾರ್ಥಿಗಳನ್ನು ಬಿಟ್ಟರೆ ಬೇರೆ ಪ್ರೇಕ್ಷಕ ಚಿತ್ರಮಂದಿರಗಳಿಗೆ ಬರುವಂತೆ ಮಾಡಬೇಕು ಎಂದು ಚಿತ್ರಮಂದಿರ ಮಾಲೀಕರೂ ಭರ್ಜರಿ ಸಿದ್ಧತೆ ಮಾಡಿ ಕೊಂಡಿದ್ದಾರೆ. ಕನ್ನಡದ ದೊಡ್ಡ ನಟರ ಹೊಸಚಿತ್ರಗಳು ಬಿಡುಗಡೆ ಯಾಗುತ್ತದೆ. ಆಗ ಹೆಚ್ಚು ಚಿತ್ರ ಪ್ರೇಮಿಗಳು ಚಿತ್ರಮಂದಿರದ ಕಡೆ ಬರುತ್ತಾರೆ ಎಂದು ನಿರೀಕ್ಷೆ ಇಟ್ಟು ಕೊಂಡಿದ್ದಾರೆ.ಕಲ್ಪತರು ನಾಡಿನಲ್ಲಿ ಕೊರೊನಾ ಸೋಂಕು ದಿನೇ ದಿನೆ ಕಡಿಮೆಯಾಗುತ್ತಿದೆ. ಜಾತ್ರೆ, ಉತ್ಸವ, ಸಂತೆ ಸಮಾರಂಭಗಳು ಎಲ್ಲವೂ ಎಂದಿನಂತೆ ನಡೆಯುತ್ತಲೇ ಇವೆ ಯಾವುದಕ್ಕೂ ಕಟ್ಟಿಲ್ಲ ಅದರಂತೆ ಚಿತ್ರಮಂದಿರಕ್ಕೂ ಕಟ್ಟಿಲ್ಲದಂತೆ ಆರಂಭ ಗೊಂಡಿದ್ದು ಕೆಲವು ಪ್ರೇಕ್ಷಕರು ತಮ್ಮ ಗೆಳೆಯರು, ಸಂಬಂಧಿಕರೊಂದಿಗೆ ಚಿತ್ರಮಂದಿರಗಳತ್ತ ಬರುತ್ತಿದ್ದಾರೆ, ಆದರೆ ನಿರೀಕ್ಷೆಯಷ್ಟು ಚಿತ್ರ ಪ್ರೇಮಿಗಳು ಇನ್ನೂ ಚಿತ್ರಮಂದಿರಕ್ಕೆ ಬಂದಿಲ್ಲ

ಪ್ರೇಕ್ಷಕರ ಸಂಖ್ಯೆಯಲ್ಲಿ ಇಳಿಕೆ : ಇತ್ತೀಚಿನ ದಿನಗಳಲ್ಲಿ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆಯಲ್ಲಿಗಣನೀಯವಾಗಿ ಇಳಿಕೆ ಕಂಡು ಬಂದಿದೆ. ಚಿತ್ರಮಂದಿರಗಳಲ್ಲಿ ಚಿತ್ರ ನೋಡಲು ಬರುವವರಿಗೆ ಟಿಕೆಟ್‌ ದರ ಹೆಚ್ಚಳವಾಗಿದೆ ಎನ್ನುವ ಕಾರಣಕ್ಕೆ ಜನ ಚಿತ್ರಮಂದಿರಕ್ಕೆ ಕುಟುಂಬ ಸಮೇತ ಬರುವವರ ಸಂಖ್ಯೆ ಕ್ಷೀಣಿಸಿದೆ.

ಜಿಲ್ಲೆಯಲ್ಲಿವೆ 28 ಚಿತ್ರಮಂದಿರಗಳು :

ಜಿಲ್ಲೆಯಲ್ಲಿ 28 ಚಿತ್ರಮಂದಿರಗಳೀದ್ದು ನಗರದಲ್ಲಿರುವ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ನಡೆಯುತ್ತಿದೆ. ಕೋವಿಡ್ ಭೀತಿ ಹಿನ್ನೆಲೆ ಚಿತ್ರ ಪ್ರೇಮಿಗಳಿಗೆತೊಂದರೆ ಯಾಗಬಾರದು ಎಂದು ಚಿತ್ರಮಂದಿರ ಸ್ವಚ್ಛತೆಗೆ ಆದ್ಯತೆ ನೀಡಿದ್ದಾರೆ.ಚಿತ್ರ ಮಂದಿರವನ್ನು ಸ್ಯಾನಿಟೈಸ್‌ ಮಾಡಲಾಗುತ್ತಿದೆ. ಮಾಲೀಕರು ಚಿತ್ರಮಂದಿರಗಳಿಗೆ ಬರುವ ಪ್ರೇಕ್ಷಕರಿಗೆ ತೊಂದರೆ ಆಗದಂತೆ ಗಮನ ನೀಡಿದ್ದಾರೆ.

ಜಿಲ್ಲಾ ಕೇಂದ್ರಕ್ಕೆ ಬರುತ್ತಿದ್ದ ಪ್ರೇಕ್ಷಕರು :

ಚಿತ್ರಮಂದಿರಗಳಲ್ಲಿ ಹೊಸ ಚಿತ್ರ ಬಿಡುಗಡೆಯಾಗಿತು ಎಂದರೆ ಸುತ್ತ ಮುತ್ತಲ ಹಳ್ಳಿಗಳಿಂದ ಜನ ಜಿಲ್ಲಾ ಕೇಂದ್ರಕ್ಕೆ ಬಂದುಸಿನಿಮಾ ನೋಡಿಕೊಂಡು ಹೋಗುತ್ತಿದ್ದರು, ಅಂದು ಹೊಸ ಚಿತ್ರವನ್ನು ಮೊದಲು ಜಿಲ್ಲಾ ಕೇಂದ್ರದಲ್ಲಿ, ನಂತರ ತಾಲೂಕು ಆ ಮೇಲೆ ಹೋಬಳಿಕೇಂದ್ರಗಳಲ್ಲಿ ಬಿಡುಗಡೆ ಮಾಡಲಾಗುತಿತ್ತು. ಆಗ ಚಿತ್ರ ಚೆನ್ನಾಗಿದೆ ಎಂದರೆ ಜಿಲ್ಲಾಕೇಂದ್ರಕ್ಕೆ ಬಂದು ನೋಡಿಕೊಂಡು ಹೋಗುತ್ತಿದ್ದರು, ಇನ್ನು ತಾಲೂಕಿಗೆ ಬಂದಾಗಲೂ ಸಿನಿಮಾ ನೋಡುವ ಮಂದಿ ಇದ್ದರು. ಆದರೆ ಈಗ ಸ್ಯಾಟಲೈಟ್‌ ಮೂಲಕ ಏಕಕಾಲದಲ್ಲಿ ಎಲ್ಲಾ ಕಡೆ ಚಿತ್ರಗಳು ಪ್ರದರ್ಶನ ಗೊಳ್ಳುವುದರಿಂದ ಚಿತ್ರಮಂದಿರಗಳಿಗೆ ಬರುತ್ತಿದ್ದ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿದೆ.

ಪ್ರೇಕ್ಷಕರ ಅಚ್ಚುಮೆಚ್ಚಿನ ಚಿತ್ರಮಂದಿರಗಳು :

ತುಮಕೂರು: ಗಾಯತ್ರಿ, ಕೃಷ್ಣ, ಮಾರುತಿ, ಪ್ರಮುಖ ಚಿತ್ರಮಂದಿರಗಳು ಕನ್ನಡ ಚಿತ್ರಗಳಿಗೆ ಮೊದಲ ಆದ್ಯತೆ ನೀಡುವ ಚಿತ್ರಮಂದಿರಗಳು ಇದರಲ್ಲಿ ಗಾಯತ್ರಿ ಚಿತ್ರ ಮಂದಿರದಲ್ಲಿ ಡಾ.ರಾಜ್‌ ಕುಟುಂಬದ ಚಿತ್ರಗಳು ಹಚ್ಚು ಬಿಡುಗಡೆ ಯಾಗುತ್ತಿದ್ದವು ಇಂದಿಗೂ ಚಿತ್ರಪ್ರೇಮಿಗಳಿಗೆ ಈ ಮೂರು ಚಿತ್ರಮಂದಿರಗಳು ಚಿತ್ರ ಪ್ರದರ್ಶನ ನೀಡುತ್ತಿವೆ ಆದರೆ ಪ್ರೇಕ್ಷಕರು ಬರುತ್ತಿಲ್ಲ. ಗಡಿನಾಡು ಪಾವಗಡದಲ್ಲಿ ಮಾರುತಿ, ಶ್ರೀನಿವಾಸ ಅಲಂಕಾರ ವೈ.ಎನ್‌. ಹೊಸಕೋಟೆಯಲ್ಲಿ ಲಕ್ಷ್ಮೀ ವೆಂಕಟೇಶ್ವರ ಚಿತ್ರಮಂದಿರಗಳು ಪ್ರದರ್ಶನ ನೀಡುತ್ತಿವೆ. ಶಿರಾ ನಗರದಲ್ಲಿ ರಂಗನಾಥ, ಸಪ್ತಗಿರಿ, ಭಾಗ್ಯ ಲಕ್ಷ್ಮೀ ತುರುವೇಕೆರೆ ಪೂರ್ಣಿಮಾ, ಕೃಷ್ಣ,

ತಿಪಟೂರು: ಗಣೇಶ, ಲಕ್ಷ್ಮೀ, ತ್ರಿಮೂರ್ತಿ, ಕೊರಟಗೆರೆ ಶಿವಗಂಗಾ, ಮಧುಗಿರಿ ಶಾಂತಲಾ,

ರಾಜ ರಾಜೇಶ್ವರಿ, ಚಿಕ್ಕನಾಕನಹಳ್ಳಿ ಲಕ್ಷ್ಮೀನರಸಿಂಹ, ಶ್ರೀನಿವಾಸ ಗುಬ್ಬಿ ಚನ್ನಬಸವೇಶ್ವರ ಚಿತ್ರಮಂದಿರಗಳು ಸೇರಿದಂತೆ 28 ಚಿತ್ರ ಮಂದಿರಗಳಲ್ಲಿ ಚಿತ್ರ ಪ್ರದರ್ಶನ ನಡೆಯುತ್ತಿದೆ.

 ಇತಿಹಾಸ ಸೇರಿದ ತಿಪಟೂರಿನ ವಿನೋದ :

ಜಿಲ್ಲೆಯ ತಿಪಟೂರಿನ ವಿನೋದ ಚಿತ್ರ ಮಂದಿರ ಮತ್ತು ತುಮಕೂರಿನ ವಿನೋದ ಚಿತ್ರಮಂದಿರಗಳು ಈಗ ಇತಿಹಾಸ ಪುಟ ಸೇರಿವೆ. ಇಲ್ಲಿ ವಿನೋದ ಚಿತ್ರ ಮಂದಿರ ಇತ್ತು ಎಂದು ಹೇಳುವಂತ್ತಾಗಿದೆ. ತುಮಕೂರಿನ ಮಂಡಿಪೇಟೆಯಲ್ಲಿ ಇದ್ದ ವಿನೋದ ಚಿತ್ರಮಂದಿರ ಮೆಟ್ರೋ ಆಗಿದೆ. ತಿಪಟೂರು ವಿನೋದ ಚಿತ್ರಮಂದಿರ ಹೊಡೆದು ಹಾಕಲಾಗಿದೆ.

ಅದು ಒಂದು ಕಾಲ ಇತ್ತು ಸಿನಿಮಾಮಂದಿರಗಳಿಗೆ ಜನ ಗಾಡಿ ಕಟ್ಟಿಕೊಂಡು ಬರುತ್ತಿದ್ದರು. ನಮ್ಮ ಗಾಯತ್ರಿ ಚಿತ್ರಮಂದಿರದಲ್ಲಿ ಡಾ.ರಾಜ್‌ ಕುಮಾರ್‌ ಅವರ ಚಿತ್ರ ಹಾಕಿದರೆ ಪ್ರತಿದಿನವೂ ಹೌಸ್‌ ಪುಲ್‌ ಆಗುತ್ತಿತ್ತು, ಅಣ್ಣನವರ ಚಿತ್ರಗಳುನೂರುದಿನ ಪ್ರದರ್ಶನ ಕಂಡಿವೆ. ಕೊರೊನಾ ದಿಂದ ಹತ್ತು ತಿಂಗಳು ಪ್ರದರ್ಶನ ನಿಂತಿತ್ತು ಈಗ ಪ್ರದರ್ಶನಗಳು ಆರಂಭವಾಗಿವೆ. ಪ್ರೇಕ್ಷಕರ ಸಂಖ್ಯೆ ಕಡಿಮೆ ಇದೆ, ಮುಂದೆ ಪ್ರೇಕ್ಷಕರು ಬರುತ್ತಾರೆ ಎನ್ನುವ ನಿರೀಕ್ಷೆಯಲ್ಲಿ ಇದ್ದೇವೆ.-ರುದ್ರೇಶ್‌,ಮಾಲೀಕರು ಗಾಯತ್ರಿ ಚಿತ್ರಮಂದಿರ.

ಕಳೆದ ಹತ್ತು ತಿಂಗಳಿನಿಂದ ಚಿತ್ರಮಂದಿರಗಳನ್ನು ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತ ಮಾಡಲಾಗಿತ್ತು ಈಗ ಸರ್ಕಾರ ಕೊರೊನಾ ಮಾರ್ಗಸೂಚಿ ನೀಡಿ ನೂರರಷ್ಟು ಪ್ರೇಕ್ಷಕರೊಂದಿಗೆ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶಿಸಲು ಅನುವು ಮಾಡಿದ್ದೇವೆ. ಚಿತ್ರ ಪ್ರದರ್ಶನಗಳು ನಡೆಯುತ್ತಿವೆ ನಮ್ಮ ನಿರೀಕ್ಷೆಯಂತೆ ಚಿತ್ರ ಪ್ರೇಮಿಗಳು ಬರುತ್ತಿಲ್ಲ ಮುಂದೆ ಹೆಸರಾಂತ ನಟರ ಚಿತ್ರಗಳು ಬಿಡುಗಡೆಯಾದರೆ ಪ್ರೇಕ್ಷಕರು ಹೆಚ್ಚು ಬರಬಹುದು ಎಂದು ನಿರೀಕ್ಷೆ ಹೊಂದಿದ್ದೇವೆ. ಚಿತ್ರ ಮಂದಿರ ಮಾಲೀಕರು,

ನಾವು ಕಳೆದ ಹನ್ನೊಂದು ತಿಂಗಳಿನಿಂದ ಕೋವಿಡ್ ದಿಂದ ಸಂಕಷ್ಟ ಅನುಭವಿಸಿದ್ದೇವೆ. ಈಗ ಪ್ರದರ್ಶನ ಆರಂಭವಾಗಿದೆ ಆದರೆ ಇನ್ನೂ ಜನ ಬರುತ್ತಿಲ್ಲ ಒಳ್ಳೆಯ ಸಿನಿಮಾ ಬಿಡುಗಡೆಯಾದರೆಅನುಕೂಲವಾಗುತ್ತದೆ. ಹಳೆ ಸಿನಿಮಾ ಹಾಕಿ ದರೆ, ಬೇರೆ ಭಾಷೆ ಸಿನಿಮಾ ಹಾಕಿದರೆ ಅಷ್ಟು ಜನ ಬರುವುದಿಲ್ಲ, ಸಿನಿಮಾ ಬಿಡುಗಡೆಯಾದರೆ ಜನ ಚಿತ್ರಮಂದಿರಕ್ಕೆ ಬರುತ್ತಾರೆ ನಮಗೂ ಅನುಕೂಲವಾಗುತ್ತದೆ. – ಚಿತ್ರಮಂದಿರ ಕೆಲಸಗಾರ.

 

ಚಿ.ನಿ.ಪುರುಷೋತ್ತಮ್‌

ಟಾಪ್ ನ್ಯೂಸ್

First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್‌ ಡ್ರಾ

First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್‌ ಡ್ರಾ

1-deee

Misuse; ಐಶ್ವರ್ಯ ಗೌಡ ವಿರುದ್ಧ ಪೊಲೀಸ್ ದೂರು ದಾಖಲಿಸಿದ ಡಿ.ಕೆ.ಸುರೇಶ್

BY-Vijayendra

Contracter Case: ಸಚಿನ್‌ ಪಾಂಚಾಳ್‌ ಪ್ರಕರಣ ಜ.3ರೊಳಗೆ ಸಿಬಿಐಗೆ ಕೊಡಿ: ವಿಜಯೇಂದ್ರ ಆಗ್ರಹ

Malpe: ಎಳ್ಳಮಾವಾಸ್ಯೆ… ವಡಭಾಂಡೇಶ್ವರದಲ್ಲಿ ಸಾವಿರಾರು ಭಕ್ತಾದಿಗಳಿಂದ ಸಮುದ್ರಸ್ನಾನ

Malpe: ಎಳ್ಳಮಾವಾಸ್ಯೆ… ವಡಭಾಂಡೇಶ್ವರದಲ್ಲಿ ಸಾವಿರಾರು ಭಕ್ತಾದಿಗಳಿಂದ ಸಮುದ್ರಸ್ನಾನ

ud-sp

Udupi ಹೊಸ ವರ್ಷಾಚರಣೆ: ಹಾನಿಕಾರಕ ಸಂದೇಶ ಎಚ್ಚರ ವಹಿಸಲು ಎಸ್‌ಪಿ ಸೂಚನೆ

allu arjun

Theatre stampede case: ಅಲ್ಲು ಅರ್ಜುನ್ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ನ್ಯಾಯಾಲಯ

BJP-Gov

ಪೊಲೀಸ್‌ ಅಧಿಕಾರಿಗಳ ವರ್ತನೆ ಬಗ್ಗೆ ರಾಜ್ಯಪಾಲರಿಗೆ ದೂರು ಸಲ್ಲಿಸಿದ ಎಂಎಲ್‌ಸಿ ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-kunigal

Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ‌ ಸಾವು

2-kunigal

Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ

12-koratagere

Koratagere: ವಿದ್ಯೆಯ ಸಾಧನೆಗೆ ಸಾಧಿಸುವ ಗುರಿ ಒಂದೇ ಮುಖ್ಯ

11-koratagere

ಜಟ್ಟಿ ಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗಂಗಾದೇವಿ ಅಧ್ಯಕ್ಷೆ

10-

Koratagere: ಮದ್ಯಪಾನದಿಂದ ಕುಟುಂಬದಲ್ಲಿ ದಿನ ಅಶಾಂತಿ ಉಂಟಾಗಿ ನೆಮ್ಮದಿ ಇಲ್ಲದಂತಾಗಿದೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್‌ ಡ್ರಾ

First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್‌ ಡ್ರಾ

1-deee

Misuse; ಐಶ್ವರ್ಯ ಗೌಡ ವಿರುದ್ಧ ಪೊಲೀಸ್ ದೂರು ದಾಖಲಿಸಿದ ಡಿ.ಕೆ.ಸುರೇಶ್

BY-Vijayendra

Contracter Case: ಸಚಿನ್‌ ಪಾಂಚಾಳ್‌ ಪ್ರಕರಣ ಜ.3ರೊಳಗೆ ಸಿಬಿಐಗೆ ಕೊಡಿ: ವಿಜಯೇಂದ್ರ ಆಗ್ರಹ

1-up

Dandeli; ಕುಸಿದು ಬಿದ್ದು ಯುಪಿ ಮೂಲದ ಯುವಕ ಸಾ*ವು

1-vp

Vitla; ಅತಿಕಾರಬೈಲು: ವ್ಯಕ್ತಿ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.

News Hub