ಮೂಡಲಗಿ: ಜನರಿಂದ ಮೋದಿ ನಾಯಕತ್ವಕ್ಕೆ ಆಶೀರ್ವಾದ- ಶೆಟ್ಟರ

ಕಾರ್ಯಕರ್ತರು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Team Udayavani, Jun 22, 2024, 3:17 PM IST

ಮೂಡಲಗಿ: ಜನರಿಂದ ಮೋದಿ ನಾಯಕತ್ವಕ್ಕೆ ಆಶೀರ್ವಾದ- ಶೆಟ್ಟರ

ಉದಯವಾಣಿ ಸಮಾಚಾರ
ಮೂಡಲಗಿ: ಮತದಾರರ ಮುಂದೆ ಕಾಂಗ್ರೆಸ್‌ ನವರ ಹಣಬಲ, ತೋಳ್ಬಲ, ಆಸೆ-ಆಮಿಷಗಳ ಆಟ ನಡೆಯಲಿಲ್ಲ. ಜೊತೆಗೆ ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳು ಫಲ ನೀಡಲಿಲ್ಲ. ಅವರು ಗೆಲುವಿಗೆ ಶತ ಪ್ರಯತ್ನ ಮಾಡಿದರೂ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವಕ್ಕೆ ಮತದಾರ ಪ್ರಭುಗಳು ಬಿಜೆಪಿಗೆ ಆಶೀರ್ವಾದ ಮಾಡಿ ನನ್ನ ಸೇವೆಗೆ ಅವಕಾಶ ಕೊಟ್ಟಿದ್ದಾರೆಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್‌ ಹೇಳಿದರು.

ಗುರುವಾರ ಸಂಜೆ ತಾಲೂಕಿನ ನಾಗನೂರ ಪಟ್ಟಣದ ಭಗೀರಥ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಅರಭಾವಿ ಬಿಜೆಪಿ ಮಂಡಲ
ಹಮ್ಮಿಕೊಂಡಿದ್ದ ನೂತನ ಸಂಸದರ ಅಭಿನಂದನೆ ಹಾಗೂ ಕಾರ್ಯಕರ್ತರ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಅವರು,
ತಮ್ಮನ್ನು 1.79 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಲು ಆಶೀರ್ವದಿಸಿದ ಮತದಾರರನ್ನು ಅಭಿನಂದಿಸಿದರು.

ನಮ್ಮ ವಿರೋಧಿ  ಅಭ್ಯರ್ಥಿಗಳ ಪರವಾಗಿ ಜಿಲ್ಲೆಯ ಮತದಾರರಿಗೆ ಇನ್ನಿಲ್ಲದ ಆಮಿಷ ಒಡ್ಡಿದರು. ನಮ್ಮ ವಿರುದ್ಧ ಸಾಕಷ್ಟು ಅಪಪ್ರಚಾರ ಮಾಡಿದರು. ನಮಗೆ ಬೇಕಾಗಿರುವುದು ದೇಶದ ಸುರಕ್ಷತೆ. ಈ ನಿಟ್ಟಿನಲ್ಲಿ ನಾವು ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ ಸಂಕಲ್ಪದಿಂದ ಮತಯಾಚಿಸಿದ್ದೇವೆ. ಆದರೆ ವಿರೋಧಿಗಳು ಕೇವಲ ನನ್ನನ್ನೇ ಕೇಂದ್ರೀಕರಿಸಿ ವೈಯಕ್ತಿಕ
ಟೀಕೆ-ಟಿಪ್ಪಣಿ ಮಾಡಿದರು. ಅವರ ದುಡ್ಡಿನ ದರ್ಪಕ್ಕೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ.

ಸ್ವತ: ಅವರ ಕ್ಷೇತ್ರದಲ್ಲಿಯೇ ನನಗೆ 50 ಸಾವಿರ ಮತಗಳ ಮುನ್ನಡೆ ನೀಡಿದ್ದಾರೆ. ಇದರಿಂದಲೇ ಅವರ ಆಡಳಿತ ವೈಖರಿಗೆ ಜನ ಬೇಸತ್ತಿರುವುದು ಗೊತ್ತಾಗುತ್ತದೆ ಎಂದು ಟೀಕಿಸಿದರು. ಈ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳು ತಮ್ಮ ಕೈ ಹಿಡಿಯಲಿವೆ ಎಂದು ಕಾಂಗ್ರೆಸ್‌ ಮುಖಂಡರು ನಂಬಿದ್ದರು. ಪ್ರಬುದ್ಧ ಮತದಾರರು ಅದನ್ನು ತಿರಸ್ಕರಿಸಿದರು.

ಚುನಾವಣೆಯಲ್ಲಿ ಸೋತು ಸುಣ್ಣಾಗಿರುವ ಕಾಂಗ್ರೆಸ್‌ ಪಕ್ಷವು ಇನ್ನು ಮುಂದೆ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವದಿಲ್ಲ. ಗ್ಯಾರಂಟಿ ಕೈಕೊಟ್ಟಿದ್ದರಿಂದ ಈ ಯೋಜನೆಯನ್ನು ನಿಲ್ಲಿಸುವಂತೆ ಸ್ವತ: ಕಾಂಗ್ರೇಸ್‌ ಶಾಸಕರೇ ಹೇಳುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ನಿಲ್ಲಿಸುತ್ತದೆ ಎಂದು ಹೇಳಿದರು. ಜಿಲ್ಲೆಯ ಅಭಿವೃದ್ದಿಗೆ ಕೇಂದ್ರ ಸರ್ಕಾರದ ಯೋಜನೆಗಳನ್ನು ಜಾರಿ ಮಾಡುತ್ತೇನೆ.

ಈ ಮೂಲಕ ಬೆಳಗಾವಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದು ಜಗದೀಶ ಶೆಟ್ಟರ ತಿಳಿಸಿದರು. ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಕಳೆದ 32 ವರ್ಷಗಳಿಂದ ನಮ್ಮ ಸಂಘಟನೆಯ ಬಲವರ್ಧನೆ ಮಾಡಲಾಗಿದೆ. ಸಾಮಾಜಿಕ, ಶೆ„ಕ್ಷಣಿಕ, ಸಹಕಾರ, ಧಾರ್ಮಿಕ ಹಾಗೂ ರಾಜಕೀಯ ಸೇರಿದಂತೆ ಎಲ್ಲ ರಂಗಗಳಲ್ಲಿಯೂ ನಮ್ಮ ಸಂಘಟನೆಯ ಕಾರ್ಯಕರ್ತರು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕಾಗಿ ಸಾಕಷ್ಟು ಹಿರಿಯರು ದುಡಿದಿದ್ದಾರೆ.

ಮುಂದೆಯೂ ಕೂಡಾ ನಮ್ಮ ಸಂಘಟನೆಗೆ ಅನುಕೂಲ ವಾಗುವಂತೆ ಕಾರ್ಯಕರ್ತರು ನಮ್ಮೊಂದಿಗೆ ಕೈ ಜೋಡಿಸಬೇಕು. ಎಲ್ಲ ಸಮಾಜಗಳ ಬಾಂಧವರು ಅಣ್ಣ-ತಮ್ಮಂದಿರಂತೆ ಬಾಳಬೇಕು. ಸರ್ವ ಸಮಾಜಗಳ ಸವಾಂìಗೀಣ ಅಭಿವೃದ್ಧಿಗೆ ಹೆಚ್ಚಿನ ಅನುದಾನಕ್ಕೆ ಪ್ರಯತ್ನಿಸಲಾಗುವುದೆಂದು ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಸಹಕಾರದಿಂದ ಅರಭಾವಿಮಠದಿಂದ ಲೋಕಾಪೂರ ವರೆಗೆ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿಗೆ ನೂತನ ಸಂಸದರು ಕೇಂದ್ರ ಸರ್ಕಾರದಿಂದ ಅನುದಾನಕ್ಕೆ ಪ್ರಯತ್ನಿಸಬೇಕು. ಅರಭಾವಿ ಕ್ಷೇತ್ರದಲ್ಲಿ ಕೇಂದ್ರೀಯ ವಿದ್ಯಾಲಯವನ್ನು ಆರಂಭಿಸಲು ಜಗದೀಶ ಶೆಟ್ಟರ ಅವರು ಕೇಂದ್ರ ಮಟ್ಟದಲ್ಲಿ ಒತ್ತಾಯ ಮಾಡುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಕೋರಿದರು.

ಸಂಸದ ಜಗದೀಶ ಶೆಟ್ಟರ್‌ ಹಾಗೂ ಗೆಲುವಿಗೆ ಕಾರಣೀಕರ್ತರಾಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಅರಭಾವಿ ಬಿಜೆಪಿ ಮಂಡಲದಿಂದ ಸತ್ಕರಿಸಿ ಗೌರವಿಸಲಾಯಿತು. ಹಿರಿಯ ಸಹಕಾರಿ ಬಿ.ಆರ್‌.ಪಾಟೀಲ (ನಾಗನೂರ), ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ, ಜಿ.ಪಂ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಶ ಪಾಟೀಲ, ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಭಗೀರಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಂದ್ರು ಬೆಳಗಲಿ, ಜೆಡಿಎಸ್‌ ಬ್ಲಾಕ್‌ ಅಧ್ಯಕ್ಷ ಪ್ರಕಾಶ
ಕಾಳಶೆಟ್ಟಿ ಉಪಸ್ಥಿತರಿದ್ದರು. ಪರಸಪ್ಪ ಬಬಲಿ ಸ್ವಾಗತಿಸಿದರು. ಬಸವರಾಜ ಮಾಳೇದವರ ನಿರೂಪಿಸಿದರು.ಮಹಾಂತೇಶ ಕುಡಚಿ
ವಂದಿಸಿದರು.

ಟಾಪ್ ನ್ಯೂಸ್

10-honanvar

ಗುಡ್ಡ ಕುಸಿತ: ಹೊನ್ನಾವರದಿಂದ ಗೇರುಸೊಪ್ಪ, ಸಾಗರ, ಶಿವಮೊಗ್ಗ ಮಾರ್ಗದ ಸಂಚಾರ ಸ್ಥಗಿತ

9-Bantwala

Bantwala: ರಾಮಲಕಟ್ಟೆ: ಡಿವೈಡರ್ ಗೆ ಢಿಕ್ಕಿಯಾದ ಖಾಸಗಿ ಬಸ್

Sandalwood: Sandalwood: ʼಭೈರವನ ಕೊನೆ ಪಾಠʼ ಕೇಳೋಕೆ ರೆಡಿಯಾಗಿ ಎಂದ ಹೇಮಂತ್‌ – ಶಿವಣ್ಣ

Sandalwood: ʼಭೈರವನ ಕೊನೆ ಪಾಠʼ ಕೇಳೋಕೆ ರೆಡಿಯಾಗಿ ಎಂದ ಹೇಮಂತ್‌ – ಶಿವಣ್ಣ

Team India; ತಾಯ್ನಾಡಿಗೆ ಕಾಲಿಟ್ಟ ಖುಷಿಯಲ್ಲಿ ಕುಣಿದಾಡಿದ ನಾಯಕ ರೋಹಿತ್ ಶರ್ಮಾ

Team India; ತಾಯ್ನಾಡಿಗೆ ಕಾಲಿಟ್ಟ ಖುಷಿಯಲ್ಲಿ ಕುಣಿದಾಡಿದ ನಾಯಕ ರೋಹಿತ್ ಶರ್ಮಾ

8-udupi

Udupi ಜಿಲ್ಲೆಯಲ್ಲಿ ಗಾಳಿ-ಮಳೆ ಹಾನಿ:ಮಾಹಿತಿ ಪಡೆದು,ಕ್ರಮಕ್ಕೆ ಸೂಚಿಸಿದ ಸಚಿವೆ ಹೆಬ್ಬಾಳ್ಕರ್

Naxal chandru- Naxal Chandru arrested after 19 years; What is the case?

Naxal chandru-19 ವರ್ಷದ ಬಳಿಕ ನಕ್ಸಲ್‌ ಚಂದ್ರು ಸೆರೆ; ಏನಿದು ಪ್ರಕರಣ?

7-sirsi

ತುಂಬಿ‌ ಹರಿಯುತ್ತಿರುವ ಚಂಡಿಕಾ‌ನದಿ‌;ಶಿರಸಿಯಿಂದ ತೆರಳುವ ವಾಹನಗಳಿಗೆ ಬದಲಿ ‌ಮಾರ್ಗ ವ್ಯವಸ್ಥೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-honanvar

ಗುಡ್ಡ ಕುಸಿತ: ಹೊನ್ನಾವರದಿಂದ ಗೇರುಸೊಪ್ಪ, ಸಾಗರ, ಶಿವಮೊಗ್ಗ ಮಾರ್ಗದ ಸಂಚಾರ ಸ್ಥಗಿತ

9-Bantwala

Bantwala: ರಾಮಲಕಟ್ಟೆ: ಡಿವೈಡರ್ ಗೆ ಢಿಕ್ಕಿಯಾದ ಖಾಸಗಿ ಬಸ್

Sandalwood: Sandalwood: ʼಭೈರವನ ಕೊನೆ ಪಾಠʼ ಕೇಳೋಕೆ ರೆಡಿಯಾಗಿ ಎಂದ ಹೇಮಂತ್‌ – ಶಿವಣ್ಣ

Sandalwood: ʼಭೈರವನ ಕೊನೆ ಪಾಠʼ ಕೇಳೋಕೆ ರೆಡಿಯಾಗಿ ಎಂದ ಹೇಮಂತ್‌ – ಶಿವಣ್ಣ

Team India; ತಾಯ್ನಾಡಿಗೆ ಕಾಲಿಟ್ಟ ಖುಷಿಯಲ್ಲಿ ಕುಣಿದಾಡಿದ ನಾಯಕ ರೋಹಿತ್ ಶರ್ಮಾ

Team India; ತಾಯ್ನಾಡಿಗೆ ಕಾಲಿಟ್ಟ ಖುಷಿಯಲ್ಲಿ ಕುಣಿದಾಡಿದ ನಾಯಕ ರೋಹಿತ್ ಶರ್ಮಾ

8-udupi

Udupi ಜಿಲ್ಲೆಯಲ್ಲಿ ಗಾಳಿ-ಮಳೆ ಹಾನಿ:ಮಾಹಿತಿ ಪಡೆದು,ಕ್ರಮಕ್ಕೆ ಸೂಚಿಸಿದ ಸಚಿವೆ ಹೆಬ್ಬಾಳ್ಕರ್

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

10-honanvar

ಗುಡ್ಡ ಕುಸಿತ: ಹೊನ್ನಾವರದಿಂದ ಗೇರುಸೊಪ್ಪ, ಸಾಗರ, ಶಿವಮೊಗ್ಗ ಮಾರ್ಗದ ಸಂಚಾರ ಸ್ಥಗಿತ

9-Bantwala

Bantwala: ರಾಮಲಕಟ್ಟೆ: ಡಿವೈಡರ್ ಗೆ ಢಿಕ್ಕಿಯಾದ ಖಾಸಗಿ ಬಸ್

Sandalwood: Sandalwood: ʼಭೈರವನ ಕೊನೆ ಪಾಠʼ ಕೇಳೋಕೆ ರೆಡಿಯಾಗಿ ಎಂದ ಹೇಮಂತ್‌ – ಶಿವಣ್ಣ

Sandalwood: ʼಭೈರವನ ಕೊನೆ ಪಾಠʼ ಕೇಳೋಕೆ ರೆಡಿಯಾಗಿ ಎಂದ ಹೇಮಂತ್‌ – ಶಿವಣ್ಣ

Team India; ತಾಯ್ನಾಡಿಗೆ ಕಾಲಿಟ್ಟ ಖುಷಿಯಲ್ಲಿ ಕುಣಿದಾಡಿದ ನಾಯಕ ರೋಹಿತ್ ಶರ್ಮಾ

Team India; ತಾಯ್ನಾಡಿಗೆ ಕಾಲಿಟ್ಟ ಖುಷಿಯಲ್ಲಿ ಕುಣಿದಾಡಿದ ನಾಯಕ ರೋಹಿತ್ ಶರ್ಮಾ

8-udupi

Udupi ಜಿಲ್ಲೆಯಲ್ಲಿ ಗಾಳಿ-ಮಳೆ ಹಾನಿ:ಮಾಹಿತಿ ಪಡೆದು,ಕ್ರಮಕ್ಕೆ ಸೂಚಿಸಿದ ಸಚಿವೆ ಹೆಬ್ಬಾಳ್ಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.