Murdeshwar:ಅಶುಭ- ಪ್ರವಾಸಿಗರಿಲ್ಲದೆ ಮುರ್ಡೇಶ್ವರ ಕಿನಾರೆ ಭಣ ಭಣ!
ವಾಸಿಗರ ತಪ್ಪಿಲ್ಲದಿದ್ದರೂ ಕೂಡಾ ಪ್ರವಾಸಿಗರು ಭಯ ಬಿದ್ದಿದ್ದಂತೂ ಸತ್ಯ.
Team Udayavani, Jan 1, 2025, 4:15 PM IST
ಉದಯವಾಣಿ ಸಮಾಚಾರ
ಭಟ್ಕಳ: ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣ ಮುರ್ಡೇಶ್ವರ ವರ್ಷದ ಕೊನೆಯ ದಿನ ಬಣ ಬಣ ಎನ್ನುತ್ತಿದೆ. ಪ್ರತಿ ವರ್ಷ ಡಿಸೆಂಬರ್ ಎರಡನೇ ವಾರದಿಂದಲೇ ಪ್ರವಾಸಿಗರ ದಂಡು ಬರಲು ಆರಂಭವಾದರೆ ಮಕರ ಸಂಕ್ರಾಂತಿ ತನಕವೂ ಭಾರೀ ಜನಜಂಗುಳಿಯೇ ಇರುತ್ತಿತ್ತು. ಅಯ್ಯಪ್ಪ ಯಾತ್ರಾರ್ಥಿಗಳು, ಶಾಲಾ ವಿದ್ಯಾರ್ಥಿಗಳು, ಪ್ರವಾಸಿಗರು ಸೇರಿದಂತೆ ರಸ್ತೆಯಂಚಿನಲ್ಲಿ ನಡೆದುಕೊಂಡು ಹೋಗುವುದೇ ಕಷ್ಟವಾಗುತ್ತಿತ್ತು. ವಾಹನ ಸವಾರರಿಗಂತೂ ಪಾರ್ಕಿಂಗ್ ದೊಡ್ಡ ಸಮಸ್ಯೆಯಾಗುತ್ತಿತ್ತು.
2024ರ ಡಿಸೆಂಬರ್ ಮುರ್ಡೇಶ್ವರಕ್ಕೆ ಅಶುಭ ತಂದು ಕೊಟ್ಟಿದ್ದು ಜನರು ಮುರ್ಡೇಶ್ವರಕ್ಕೆ ಬರುವುದಕ್ಕೇ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಕೆಲ ದಿನಗಳ ಹಿಂದಷ್ಟೇ ಮುರ್ಡೇಶ್ವರ ಕಡಲ ಕಿನಾರೆಯಲ್ಲಿ ಕೊಲಾರ ಶಾಲಾ ವಿದ್ಯಾರ್ಥಿನಿಯರು ಮೃತ ಪಟ್ಟ ಹಿನ್ನೆಲೆಯಲ್ಲಿ ರಾಜ್ಯದ ಜನತೆ ಮುರ್ಡೇಶ್ವರ ಎಂದರೆ ಭಯಪಡುವ ವಾತಾವರಣ ನಿರ್ಮಾಣವಾದಂತಾಗಿದೆ. ಇಲ್ಲಿ ಪ್ರವಾಸಿಗರ ತಪ್ಪಿಲ್ಲದಿದ್ದರೂ ಕೂಡಾ ಪ್ರವಾಸಿಗರು ಭಯ ಬಿದ್ದಿದ್ದಂತೂ ಸತ್ಯ.
ಮುರ್ಡೇಶ್ವರ ಸಮುದ್ರ ಕಿನಾರೆ ಅತ್ಯಂತ ಸುಂದರ ಸಮುದ್ರ ಕಿನಾರೆಗಳಲ್ಲಿ ಒಂದು ಎನ್ನುವುದಕ್ಕೆ ಎರಡುಮಾತಿಲ್ಲ. ಆದರೆ ಸಮುದ್ರ ಕಿನಾರೆಯಲ್ಲಿ ಸ್ವಚ್ಛಂದವಾಗಿ ವಿಹರಿಸಲಿಕ್ಕೆ ಜಾಗ ಇಲ್ಲದಾಗ ಪ್ರವಾಸಿಗರು ಏನು ಮಾಡಬೇಕು? ನೇರವಾಗಿ ನೀರಿಗಿಳಿಯುತ್ತಾರೆ. ಆಗಲೂ ಗುಂಪು ಕಟ್ಟಿಕೊಂಡು ಮುಂದೆ ಮುಂದೆ ಹೋಗುತ್ತಾರಾದ್ದರಿಂದ ಅಪಾಯಕ್ಕೆ ಸಿಲುಕುತ್ತಾರೆ.
ಸಮುದ್ರ ಕಿನಾರೆಯಲ್ಲಿ ವಿಶಾಲ ಜಾಗ ಇದ್ದರೆ ಗುಂಪು ಮುಂದೆ ಹೋಗುವುದನ್ನು ಮೀನುಗಾರರು, ಲೈಫ್ ಗಾರ್ಡ್‌ಗಳು ಗಮನಿಸುತ್ತಾರೆ. ಆದರೆ ಸಮುದ್ರ ಕಿನಾರೆ ತಾತ್ಕಾಲಿಕ ಅಂಗಡಿಗಳಿಂದ ತುಂಬಿ ಹೋದಾಗ ಯಾರು ಎಲ್ಲಿ ಲಕ್ಷ ಕೊಡಬೇಕು ಎನ್ನುವುದೇ ತಿಳಿಯದಾಗಿ ನೀರಿನಲ್ಲಿ ಅವಘಡಗಳು ಸಂಭವಿಸುತ್ತಲೇ ಇದೆ.
ಇತ್ತೀಚೆಗೆ ಎಚ್ಚೆತ್ತ ಆಡಳಿತ ಸಮುದ್ರ ಕಿನಾರೆಯಲ್ಲಿನ ಸುಮಾರು 70ಕ್ಕೂ ಹೆಚ್ಚು ತಾತ್ಕಾಲಿಕ ಅಂಗಡಿಗಳನ್ನು ತೆರವುಗೊಳಿಸಿದೆ. ಆದರೆ ಇನ್ನೂ ಅನೇಕ ಅಂಗಡಿಗಳಿದ್ದು ಅವು ಸಮುದ್ರ ಕಿನಾರೆಯನ್ನೇ ಕಬಳಿಸಿ ಪ್ರವಾಸಿಗರ ವಿಹಾರಕ್ಕೆ ತೊಂದರೆ ಮಾಡುವುದರಿಂದ ಆಗಾಗ ಸಮುದ್ರದ ಅಲೆಗಳಿಗೆ ಜನತೆ ಸಿಲುಕುತ್ತಿದ್ದಾರೆ.ಮುರ್ಡೇಶ್ವರ ಸಮುದ್ರ ಕಿನಾರೆಯನ್ನು ಮುಕ್ತವಾಗಿ ಇಟ್ಟರೆ ಯಾವುದೇ ಅಪಾಯ ಸಂಭವಿಸದು.
ಡಿ.31 ರಂದು ಜನರು ಹೆಚ್ಚು ಹೆಚ್ಚು ಸಮುದ್ರ ಕಿನಾರೆಯಲ್ಲಿ ವಿಹರಿಸುತ್ತಾ ಹೊಸ ವರ್ಷದ ಸ್ವಾಗತಕ್ಕೆ ಕಾಯುವುದು ವಾಡಿಕೆ. ಆದರೆ ಕಳೆದ ಕೆಲ ದಿನಗಳಿಂದ ಮುರ್ಡೇಶ್ವರದ ಸಮುದ್ರ ಕಿನಾರೆಯನ್ನೇ ಮುಚ್ಚಿ ಜನರು ತಿರುಗಾಡದಂತೆ ಮಾಡಿರುವುದರಿಂದ ಸಮುದ್ರ ಕಿನಾರೆ ಬಿಕೋ ಎನ್ನುತ್ತಿದೆ. ಮುರ್ಡೇಶ್ವರ ದಲ್ಲಿಯೇ ಪ್ರವಾಸಿಗರ ಸಂಖ್ಯೆ ಶೇ.50ರಷ್ಟಾದರೆ ಸಮುದ್ರಲ್ಲಿ ಮಾತ್ರ ಜನರೇ ಇಲ್ಲದೇ ಬಿಕೋ ಎನ್ನುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಒಂದೆಡೆ ಸಮುದ್ರದಲ್ಲಿ ನಾಲ್ವರು ಬಾಲಕಿಯರು ಮೃತಪಟ್ಟ ಘಟನೆಯಾದರೆ, ಇನ್ನೊಂದೆಡೆ ಮುರ್ಡೇಶ್ವರಕ್ಕೆ ಬರುವುದೇ ಸಮುದ್ರದಲ್ಲಿ ವಿಹರಿಸಲಿಕ್ಕಾಗಿ ಎನ್ನುವ ಮನಸ್ಥಿತಿಯವರು ಸಮುದ್ರಕ್ಕೆ ಹೋಗಲು ಬಿಡುವುದಿಲ್ಲ ಎನ್ನುವ ಸುದ್ದಿಯಿಂದ ಮುರ್ಡೇಶ್ವರ ದಿಂದ ದೂರವೇ ಉಳಿದಿದ್ದಾರೆ ಎನ್ನಲಾಗಿದೆ.
ಒಟ್ಟಾರೆ ಮುರ್ಡೇಶ್ವರದಲ್ಲಿ ವ್ಯಾಪಾರ ವ್ಯವಹಾರ, ಹೋಟೆಲ್, ಲಾಡ್ಜಿಂಗ್ ಉದ್ದಿಮೆ ನಂಬಿಕೊಂಡಿರುವವರಿಗೆ ಈ ವರ್ಷದ ಕೊನೆಯ ದಿನ ನಿರಾಸೆಯಾಗಿದೆ. ಜಿಲ್ಲಾಡಳಿತ ಕನಿಷ್ಟ ಡಿಸೆಂಬರ್ ಕೊನೆಯ ದಿನವಾದರೂ ಸಮುದ್ರ ಕಿನಾರೆಯಲ್ಲಿ ಪ್ರವಾಸಿಗರಿಗೆ ಮುಕ್ತವಾಗಿ ಬಿಡಬಹುದು ಎನ್ನುವ ಜನರ ಆಶಯ ಹುಸಿಯಾಗಿದೆ. ಕಳೆದ 3-4 ದಿನಗಳಿಂದ ಸಮುದ್ರ ಕಿನಾರೆಗೆ ಪ್ರವಾಸಿಗರನ್ನು ಬಿಡುತ್ತಾರೆ ಎನ್ನುವ ಗುಮಾನಿ ಇದ್ದರೂ ಕೂಡಾ ಅದೆಲ್ಲವೂ ಸುಳ್ಳಾಗಿದ್ದು ಪ್ರವಾಸಿಗರ ಮುಕ್ತ ಸಮುದ್ರ ಕಿನಾರೆಯಾಗಿಯೇ ಉಳಿಯಿತು.
ಎಸ್ಪಿ ಭೇಟಿ: ಎಸ್ಪಿ ಎಂ. ನಾರಾಯಣ ಮಂಗಳವಾರ ಸಂಜೆ ಮುರ್ಡೇಶ್ವರಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಸಮುದ್ರ ಕಿನಾರೆಗೂ ಕೂಡಾ ಭೇಟಿ ನೀಡಿ ಈಗಿರುವ ಪರಿಸ್ಥಿತಿಯ ಅವಲೋಕನ ಮಾಡಿದ್ದಾರೆ. ಬುಧವಾರ ಜ.1 ರಿಂದಲಾದರೂ ಸಮುದ್ರ ಕಿನಾರೆ ಪ್ರವಾಸಿಗರಿಗೆ ಮುಕ್ತವಾಗಿ ತೆರೆದುಕೊಳ್ಳುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chhattisgarh: ಗುತ್ತಿಗೆದಾರನ ಭ್ರಷ್ಟಾಚಾರ ಬಯಲಿಗೆಳೆದ ಯೂಟ್ಯೂಬರ್ ಶವವಾಗಿ ಪತ್ತೆ!
Unique Achiever: ಗಡಿನಾಡಿನ ಅನನ್ಯ ಸಾಧಕ ಪ್ರೊ| ಪಿ. ಶ್ರೀಕೃಷ ಭಟ್
Sydney: ಮೈದಾನ ತೊರೆದು ಆಸ್ಪತ್ರೆಗೆ ಹೊರಟ ಬುಮ್ರಾ; ಟೀಂ ಇಂಡಿಯಾ ಪಾಳಯದಲ್ಲಿ ಆತಂಕ| Video
Groundwater Quality: ಅಂತರ್ಜಲ ಗುಣಮಟ್ಟ ವೃದ್ಧಿಗೆ ವೈಜ್ಞಾನಿಕ ಮಾರ್ಗೋಪಾಯ ಅಗತ್ಯ
Guns and Roses Review: ನೆತ್ತರ ಹಾದಿ ಪ್ರೇಮ್ ಕಹಾನಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chhattisgarh: ಗುತ್ತಿಗೆದಾರನ ಭ್ರಷ್ಟಾಚಾರ ಬಯಲಿಗೆಳೆದ ಯೂಟ್ಯೂಬರ್ ಶವವಾಗಿ ಪತ್ತೆ!
Unique Achiever: ಗಡಿನಾಡಿನ ಅನನ್ಯ ಸಾಧಕ ಪ್ರೊ| ಪಿ. ಶ್ರೀಕೃಷ ಭಟ್
Sydney: ಮೈದಾನ ತೊರೆದು ಆಸ್ಪತ್ರೆಗೆ ಹೊರಟ ಬುಮ್ರಾ; ಟೀಂ ಇಂಡಿಯಾ ಪಾಳಯದಲ್ಲಿ ಆತಂಕ| Video
Groundwater Quality: ಅಂತರ್ಜಲ ಗುಣಮಟ್ಟ ವೃದ್ಧಿಗೆ ವೈಜ್ಞಾನಿಕ ಮಾರ್ಗೋಪಾಯ ಅಗತ್ಯ
Guns and Roses Review: ನೆತ್ತರ ಹಾದಿ ಪ್ರೇಮ್ ಕಹಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.