ಪರಿಸರ ಉಳಿಸಿ ಬೆಳೆಸಲು ನಿಜಗುಣಪ್ರಭು ಶ್ರೀ ಸಲಹೆ
ಅಗತ್ಯ ಇರುವ ಸೌಲಭ್ಯಗಳನ್ನು ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ
Team Udayavani, Aug 1, 2022, 6:23 PM IST
ಬಸವನಬಾಗೇವಾಡಿ: ಜಗತ್ತಿನಲ್ಲಿ ಪ್ರಕೃತಿ, ಗಾಳಿ, ನೀರಿನ ಮುಂದೆ ಯಾವುದೂ ದೊಡ್ಡದಲ್ಲ, ಎಲ್ಲವೂ ಶೂನ್ಯ ಎಂದು ತೋಂಟದಾರ್ಯ ಹಾಗೂ ನಿಷ್ಕಲ ಮಂಟಪ ಬೈಲೂರು ಮಠದ ನಿಜಗುಣಪ್ರಭು ಶ್ರೀಗಳು ಹೇಳಿದರು.
ಶ್ರಾವಣ ಮಾಸದ ನಿಮಿತ್ತ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದ ಬಸವೇಶ್ವರ ದೇವಸ್ಥಾನದ ಅಂತಾರಾಷ್ಟ್ರೀಯ ಆಂಗ್ಲಮಾಧ್ಯಮ ಶಾಲೆ ಆವರಣದಲ್ಲಿ ತಿಂಗಳವರೆಗೆ ನಡೆಯಲಿರುವ ಅನುಭಾವ ದರ್ಶನ ಪ್ರವಚನ ಆರಂಭೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಜಗತ್ತಿನಲ್ಲಿ ಕೆಲವರು ಆಸ್ತಿ, ಅಂತಸ್ತು, ಸಂಪತ್ತು, ಐಶ್ವರ್ಯವೇ ದೊಡ್ಡದೆಂದು ತಿಳಿದುಕೊಂಡು ರಾಜ್ಯ ವೈಭವ ಮಾಡುತ್ತಿದ್ದರು. ಆದರೆ ಕಳೆದೆರೆಡು ವರ್ಷದ ಹಿಂದೆ ಜಗತ್ತಿಗೆ ಅಪ್ಪಳಿಸಿದ ಕೊರೊನಾ ರೋಗ ಮಾನವ ಕುಲಕ್ಕೆ ಆಸ್ತಿ, ಅಂತಸ್ತು, ಸಂಪತ್ತು, ಐಶ್ವರ್ಯವೇ ದೊಡ್ಡದಲ್ಲ ಎಂದು ತೋರಿಸಿಕೊಟ್ಟಿದೆ ಎಂದು ಹೇಳಿದರು.
ನಾವು ಮತ್ತು ನಮ್ಮ ಕುಟುಂಬ ಸುಂದರ ಬದುಕು ಸಾಗಿಸಬೇಕಾದರೆ ಪರಿಸರವನ್ನು ಕಾಪಾಡಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಪ್ರಕೃತಿಯನ್ನು ಪೂಜಿಸಿ ಪರಿಸರ ಸಂರಕ್ಷಿಸಿ ಉಳಿಸಿ ಬೆಳೆಸಬೇಕಿದೆ ಎಂದರು. ಪ್ರವಚನಕ್ಕೆ ಚಾಲನೆ ನೀಡಿದ ಮಾಜಿ ಸಚಿವ, ಶಾಸಕ ಶಿವಾನಂದ ಪಾಟೀಲ ಮಾತನಾಡಿ, ಬಸವಣ್ಣನವರ ಜನ್ಮಸ್ಥಳವಾದ ಬಸವನಬಾಗೇವಾಡಿ ಪಟ್ಟಣಕ್ಕೆ ಆಗಮಿಸುವ ರಾಜ್ಯ ಮತ್ತು ಹೊರ ರಾಜ್ಯದ ಭಕ್ತರಿಗೆ ಅಗತ್ಯ ಇರುವ ಮೂಲ ಸೌಲಭ್ಯ ದೊರಕಿಸಿ ಕೊಡಲಾಗಿದೆ. ಇನ್ನೂ ಅಗತ್ಯ ಇರುವ ಸೌಲಭ್ಯಗಳನ್ನು ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಈ ನಾಡಿನ ಅನೇಕ ಹರಗುರು ಚಿರಮೂರ್ತಿಗಳ ಮತ್ತು ಪಟ್ಟಣದ ಹಿರಿಯರ ಆಸೆಯಂತೆ ಮೂಲ ನಂದೀಶ್ವರನ ಮೂರ್ತಿಗೆ ಬೆಳ್ಳಿ ಲೇಪನ ಮಾಡುವುದು ಮತ್ತು ನಂದಿ ಮೂರ್ತಿ ಕೊಂಬಿಗೆ ಬಂಗಾರದ ಕೊಮ್ಮನ್ಸು ಮಾಡಿಸುವ ವಿಚಾರ ಪದೆ ಪದೆ ಕೇಳಿ ಬರುತ್ತಿದೆ. ಹೀಗಾಗಿ ಈ ವರ್ಷದಿಂದಲೇ ತಮ್ಮ ಆಸೆಯಂತೆ ಶೀಘ್ರದಲ್ಲೇ ನಾನು ಹಾಗೂ ಪಟ್ಟಣದ ಅಗರವಾಲ ಬಂಧುಗಳು ಸೇರಿ ನಂದಿ ಮೂರ್ತಿಯ ಕೊಂಬಿಗೆ ಬಂಗಾರದ ಕೊಮ್ಮನ್ಸು ಮಾಡಿಸುತ್ತೇವೆ ಎಂಬ ಭರವಸೆ ನೀಡಿದರು.
ಈ ಬಾರಿ ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸಬೇಕು. ರಾಜ್ಯ ಮತ್ತು ಹೊರ ರಾಜ್ಯಗಳಿಂದ ಬಂದ ಭಕ್ತರಿಗೆ ಯಾವುದೇ ರೀತಿ ತೊಂದರೆಯಾಗದಂತೆ ವಸತಿ ಮತ್ತು ಇನ್ನಿತರ ಸೌಲಭ್ಯ ಒದಗಿಸಿಕೊಡುವಲ್ಲಿ ಜಾತ್ರಾ ಕಮಿಟಿ ಪದಾಧಿಕಾರಿಗಳು ಅಚ್ಚು ಕಟ್ಟಾಗಿ ನಿಭಾಯಿಸುತ್ತಾರೆ ಎಂಬ ಆತ್ಮವಿಶ್ವಾಸವಿದ್ದು. ಅದ್ದೂರಿಯಾಗಿ ಜಾತ್ರೆ ಆಚರಿಸಲು ಪಟ್ಟಣದ ಜನತೆಯ ಸಹಕಾರ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿರಕ್ತಮಠದ ಸಿದ್ದಲಿಂಗ ಶ್ರೀಗಳು, ಜಾತ್ರಾ ಕಮಿಟಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಮುಖಂಡರಾದ ಶಿವನಗೌಡ ಬಿರಾದಾರ, ಬಸವರಾಜ ಹಾರಿವಾಳ, ಭರತ್‌ಕುಮಾರ ಅಗರವಾಲ, ಸಂಗಮೇಶ ಓಲೇಕಾರ, ಬಸವರಾಜ ಗೊಳಸಂಗಿ, ಶೇಖರಗೌಡ ಪಾಟೀಲ, ಪರಶುರಾಮ ಜಮಖಂಡಿ, ಮೇರಾಸಾಬ ಕೊರಬು, ಸಂಗಮೇಶ ವಾಡೇದ, ಸುರೇಶಗೌಡ ಪಾಟೀಲ, ಸುರೇಶ ಹಾರಿವಾಳ, ಸುಭಾಷ್ ಚಿಕ್ಕೊಂಡ, ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ ಆಯುಕ್ತ
ಬಸವರಾಜ ಪೂಜಾರಿ, ಪುರಸಭೆ ಅಧ್ಯಕ್ಷ ರೇಖಾ ಬೆಕಿನಾಳ ಸೇರಿದಂತೆ ಅನೇಕರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.