ಎರಡು ದಶಕಗಳಿಂದ ಡಾಮರು ಕಾಣದ ನಿಟ್ಟೆ-ಪರಪ್ಪಾಡಿ ಸಂಪರ್ಕ ರಸ್ತೆ
Team Udayavani, Jun 7, 2019, 6:10 AM IST
ಕಾರ್ಕಳ: ನಿಟ್ಟೆ ಗ್ರಾ.ಪಂ. ವ್ಯಾಪ್ತಿಯ ನಿಟ್ಟೆ- ಪರಪ್ಪಾಡಿ ಸಂಪರ್ಕ ರಸ್ತೆಯು ತೀರಾ ಹದಗೆಟ್ಟಿದ್ದು, ಸಂಚಾರಕ್ಕೆ ದುಸ್ತರವಾಗಿ ಪರಿಣಮಿಸಿದೆ.
ಸುಮಾರು 4.5 ಕಿ.ಮೀ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಜಲ್ಲಿ ಕಲ್ಲು, ಹೊಂಡ ಗುಂಡಿಗಳಿಂದ ಆವೃತವಾಗಿ ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ. 20 ವರ್ಷಗಳ ಹಿಂದೆ ಡಾಮರೀಕರಣಗೊಂಡ ಈ ರಸ್ತೆ ಬಳಿಕ ಡಾಮರು ಕಂಡಿಲ್ಲ. ಬಾರಾಡಿ, ಬೆಳುವಾಯಿಯನ್ನು ಸಂಪರ್ಕಿಸಲು ಈ ರಸ್ತೆ ಹತ್ತಿರದ ಮಾರ್ಗವಾಗಿದ್ದು, ಅಭಿವೃದ್ಧಿಗೊಂಡಲ್ಲಿ ಸಾಕಷ್ಟು ಪ್ರಯೋಜನವಾಗಲಿದೆ. ನಿಟ್ಟೆ ಹಾಳೆಕಟ್ಟೆಯ ನೂರಾರು ನಿವಾಸಿಗಳು ಈ ರಸ್ತೆಯನ್ನೇ ಅವಲಂಬಿಸಿದ್ದು, ದುರಸ್ತಿಗಾಗಿ ಸಂಬಂಧಪಟ್ಟವರಿಗೆ ಹಲವಾರು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಸ್ಪಂದನೆ ದೊರೆತಿಲ್ಲ.
ನಿಟ್ಟೆ ಪರಪ್ಪಾಡಿ ಭಾಗದಲ್ಲಿ ಸುಮಾರು 200ಕ್ಕೂ ಅಧಿಕ ಮನೆಗಳಿವೆ. ಶಾಲಾ ಮಕ್ಕಳು ರಸ್ತೆ ಬದಿ ನಡೆದುಕೊಂಡು ಹೋಗುವಾಗ ವಾಹನಗಳು ಸಂಚರಿಸಿದರೆ ಜಲ್ಲಿಕಲ್ಲುಗಳು ಮಕ್ಕಳ ಮೇಲೆ ಬೀಳುತ್ತವೆ. ಬೇಸಗೆಯಲ್ಲಿ ಧೂಳಿನ ಗೋಳಾದರೆ, ಮಳೆಗಾಲದಲ್ಲಿ ಕೆಸರಿನ ಗೋಳು ಎನ್ನುತ್ತಾರೆ ಗ್ರಾಮಸ್ಥರು.
ಬಸ್ ಇಲ್ಲ
ಈ ಭಾಗಕ್ಕೆ ಬಸ್ ಸೌಲಭ್ಯವಿಲ್ಲ. ರಸ್ತೆ ದುಃಸ್ಥಿತಿ ಕಂಡು ಆಟೋದವರೂ ಬರಲು ಹಿಂದೇಟು ಹಾಕುತ್ತಾರೆ. ಒಂದು ವೇಳೆ ರಿಕ್ಷಾದವರು ಬರಲು ಒಪ್ಪಿದರೂ ದುಪ್ಪಟ್ಟು ಬಾಡಿಗೆ ತೆರಬೇಕಾಗುತ್ತದೆ. ದುಪ್ಪಟ್ಟು ಹಣ ನೀಡಲು ಮುಂದಾದರೂ ಕೆಲವೊಮ್ಮೆ ಬರಲು ನಿರಾಕರಿಸುವ ಸಂದರ್ಭವೂ ಇದೆ ಎನ್ನುವುದು ಸ್ಥಳೀಯರ ಅಳಲು.
ಚರಂಡಿಯೂ ಇಲ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
MUST WATCH
ಹೊಸ ಸೇರ್ಪಡೆ

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.