ಫಾಸ್ಟ್ ಚಾರ್ಜಿಂಗ್ ಇರುವ ಸ್ಮಾರ್ಟ್‌ವಾಚ್ ನಾಯ್ಸ್ ಕಲರ್ ಫಿಟ್ ಪಲ್ಸ್ ಗ್ರ್ಯಾಂಡ್
Team Udayavani, Feb 14, 2022, 4:45 PM IST
![noise colorfit pulse grand](https://www.udayavani.com/wp-content/uploads/2022/02/noise-620x342.jpg)
![noise colorfit pulse grand](https://www.udayavani.com/wp-content/uploads/2022/02/noise-620x342.jpg)
ನಾಯ್ಸ್ ಕಲರ್ ಫಿಟ್ ಸಂಸ್ಥೆಯು ಪಲ್ಸ್ ಗ್ರ್ಯಾಂಡ್ ಸ್ಮಾರ್ಟ್ ವಾಚ್‌ನ್ನು ಬಿಡುಗಡೆ ಮಾಡಿದೆ. 1.69 ಇಂಚಿನ ಎಲ್‌ಸಿಡಿ ಡಿಸ್ಪ್ಲೇ ಹೊಂದಿರುವ ಈ ವಾಚ್‌ನಲ್ಲಿ 150 ವಾಚ್‌ಫೇಸ್‌ಗಳಿವೆ. 60 ಫಿಟ್‌ನೆಸ್ ಮೋಡ್ ಗಳಿವೆ.
ಹಾರ್ಟ್ ರೇಟ್, ಬಿಪಿ ಸೇರಿ ಅನೇಕ ರೀತಿಯ ಆರೋಗ್ಯ ದಾಖಲೆಯನ್ನು ವಾಚ್ ತೋರಿಸಬಲ್ಲದು. ಗ್ರೇ, ನೀಲಿ, ಕಪ್ಪು ಮತ್ತು ಹಸಿರು ಬಣ್ಣಗಳಲ್ಲಿ ವಾಚ್ ಲಭ್ಯ. ಈ ಸ್ಮಾರ್ಟ್ ವಾಚ್‌ನ ಬೆಲೆ 3,999 ರೂ. ಫೆ.18ರಿಂದ ವಾಚ್ ಅಮೇಜಾನ್‌ನಲ್ಲಿ ಮಾರಾಟವಾಗಲಿದ್ದು, ಆರಂಭಿಕ ಆಫರ್ ಆಗಿ 1,999 ರೂ.ಗೆ ಮಾರಾಟ ಮಾಡಲಾಗುತ್ತಿದೆ.
ಇದನ್ನೂ ಓದಿ:ಪ್ರೇಮಿಗಳ ದಿನ: ಗುಲಾಬಿಗೆ ಬಹುಬೇಡಿಕೆ : ಗುಲಾಬಿ ಬಂಚ್‌ಗೆ 180-200 ರೂ.ಖರೀದಿ
ಫಾಸ್ಟ್ ಚಾರ್ಜಿಂಗ್ ಇರುವ ಈ ವಾಚ್‌ನ್ನು 15 ನಿಮಿಷ ಚಾರ್ಜ್ ಮಾಡಿದರೆ, 1500 ನಿಮಿಷ ಬಳಸಬಹುದು ಎಂದು ಸಂಸ್ಥೆ ಹೇಳಿಕೊಂಡಿದೆ.