ಕಾಡಲ್ಲಿ ಮಾತ್ರವಲ್ಲ ನಾಡಲ್ಲೂ ಗಿಡ-ಮರಗಳಿರಲಿ
Team Udayavani, Jul 11, 2019, 5:00 AM IST
ಬಡಗನ್ನೂರು: ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಾವು ನನ್ಯ ತುಡರ್ ಯುವಕ ಮಂಡಲ ಇದರ ದಶ ಸಂಭ್ರಮದ ಪೂರ್ವಭಾವಿಯಾಗಿ ಮಂಗಳೂರು ನೆಹರೂ ಯುವಕೇಂದ್ರ, ಅರಣ್ಯ ಇಲಾಖೆ ಪುತ್ತೂರು ಇವರ ಸಹಕಾರದೊಂದಿಗೆ ಯುವ ಆದರ್ಶ ಗ್ರಾಮವಿಕಾಸ ಯೋಜನೆ ಮತ್ತು ಸ್ವಚ್ಛ ಭಾರತ್ ಇಂಟರ್ನ್ಶಿಪ್ ಅಭಿಯಾನದ ಅಂಗವಾಗಿ ನಡೆಯುತ್ತಿರುವ ತುಡರ್ ವೃಕ್ಷಾಭಿಯಾನದ 3ನೇ ಹಂತ ಕಾವು ಬುಶ್ರಾ ವಿದ್ಯಾಸಂಸ್ಥೆಯಲ್ಲಿ ನಡೆಯಿತು.
ವೃಕ್ಷಾಭಿಯಾನದ 3ನೇ ಹಂತವಾಗಿ ಕಾವು ಬುಶ್ರಾ ವಿದ್ಯಾಸಂಸ್ಥೆಯ ಆವರಣದಲ್ಲಿ ಬಾದಾಮಿ, ಸಾಗುವಾನಿ ಗಿಡಗಳನ್ನು ನೆಡಲಾಯಿತು. ಜತೆಗೆ ಸಂಸ್ಥೆಯ 500ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಗಿಡ ವಿತರಿಸಲಾಯಿತು.
ಹೆಮ್ಮೆಯ ವಿಷಯ
3ನೇ ಹಂತದ ಅಭಿಯಾನಕ್ಕೆ ಚಾಲನೆ ನೀಡಿದ ಪಾಣಾಜೆ ಉಪವಲಯದ ಅರಣ್ಯಾಧಿಕಾರಿ ಲೋಕೇಶ್ ಮಾತನಾಡಿ, ಪರಿಸರ ನಿರ್ಮಾಣವಾಗಬೇಕಾದರೆ ಕಾಡಿನಲ್ಲಿ ಗಿಡ ನೆಟ್ಟರೆ, ಸಂರಕ್ಷಿಸಿದರೆ ಸಾಲದು. ಊರಿನಲ್ಲೂ ಗಿಡ ನೆಟ್ಟು ಬೆಳೆಸಬೇಕು. ಆಗ ಮಾತ್ರ ಪ್ರಾಕೃತಿಕ ಸಮತೋಲನ ಕಾಣಲು ಸಾಧ್ಯ. ತುಡರ್ ಸಂಘದ ಯುವಕರು ಮಾಡುತ್ತಿರುವ ವೃಕ್ಷಾಭಿಯಾನವು ಅರಣ್ಯ ಇಲಾಖೆಗೆ ಹೆಮ್ಮೆಯ ವಿಷಯ. ಯುವಕರ ಪರಿಸರ ಕಾಳಜಿಗೆ ಅರಣ್ಯ ಇಲಾಖೆ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು.
ಕಾವು ಬುಶ್ರಾ ವಿದ್ಯಾಸಂಸ್ಥೆಯ ಅಧ್ಯಕ್ಷ ಅಬ್ದುಲ್ ಅಜೀಜ್ ಅಧ್ಯಕ್ಷತೆ ವಹಿಸಿದ್ದರು. ತುಡರ್ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುಬ್ರಾಯ ಬಲ್ಯಾಯ, ಬುಶ್ರಾ ವಿದ್ಯಾಸಂಸ್ಥೆಯ ಆಡಳಿತ ನಿರ್ದೇಶಕ ನೂರುದ್ದೀನ್ ಬುಶ್ರಾ, ಆಡಳಿತಾಧಿಕಾರಿ ಹರೀಶ್, ಶಿಕ್ಷಕ ವೃಂದದವರು, ತುಡರ್ ಯುವಕ ಮಂಡಲದ ಗೌರವಾಧ್ಯಕ್ಷ ಶೇಷಪ್ಪ ಗೌಡ ಪರನೀರು, ಮಾಜಿ ಅಧ್ಯಕ್ಷ ಭಾಸ್ಕರ ಬಲ್ಯಾಯ, ಚಂದ್ರಶೇಖರ ಬಲ್ಯಾಯ, ಪ್ರಧಾನ ಕಾರ್ಯದರ್ಶಿ ಸತೀಶ ಎಂ., ಭಜನ ಸಂಘದ ಅಧ್ಯಕ್ಷ ರಾಮಣ್ಣ ನಾಯ್ಕ ಆಚಾರಿಮೂಲೆ, ಕಾರ್ಯದರ್ಶಿ ಸಂಕಪ್ಪ ಪೂಜಾರಿ ಚಾಕೋಟೆ, ಸದಸ್ಯರಾದ ಧನಂಜಯ ನಾಯ್ಕ ಕುಂಞಿಕುಮೇರು, ಪುರುಷೋತ್ತಮ ಆಚಾರ್ಯ ನನ್ಯ, ರಮೇಶ್ ಗೌಡ ಆಚಾರಿಮೂಲೆ, ರಾಜೇಶ್ ಬಿ., ನಿರಂಜನ, ಲಿಂಗಪ್ಪ ನನ್ಯ, ಬಾಲಕೃಷ್ಣ ಪಾಟಾಳಿ, ದಿವ್ಯಪ್ರಸಾದ್ ಎ.ಎಂ., ಸಂದೇಶ್ ಚಾಕೋಟೆ ಪಾಲ್ಗೊಂಡಿದ್ದರು.
ಬುಶ್ರಾ ಶಾಲೆ ಮುಖ್ಯ ಗುರು ವಿಮಲಾ ಶೆಟ್ಟಿ ಸ್ವಾಗತಿಸಿ, ತುಡರ್ ಯುವಕ ಮಂಡಲದ ಸದಸ್ಯ ನವೀನ ನನ್ಯಪಟ್ಟಾಜೆ ವಂದಿಸಿದರು. ಶಿಕ್ಷಕಿ ಹೇಮಲತಾ ಕಜೆಗದ್ದೆ ಕಾರ್ಯಕ್ರಮ ನಿರ್ವಹಿಸಿದರು.
ಅಭಿಯಾನದ 3ನೇ ಹಂತವಾಗಿ ಬುಶ್ರಾ ಶಾಲೆಯಲ್ಲಿ ಗ್ರೀನ್ ಡೇ ಆಚರಿಸಿ ಸಂಸ್ಥೆಯ ಎಲ್ಕೆಜಿ, ಯುಕೆಜಿ ಪುಟಾಣಿಗಳು, ಪ್ರಾಥಮಿಕ ವಿದ್ಯಾರ್ಥಿಗಳು, ಶಿಕ್ಷಕರು, ಬೋಧಕೇತರ ಸಿಬಂದಿ ಹಸುರು ಬಣ್ಣದ ಉಡುಪು ಧರಿಸಿದ್ದರು. ಸಂಸ್ಥೆಯ ಸ್ಕೌಟ್ ಗೈv್ಸ್ ವಿದ್ಯಾರ್ಥಿಗಳು, ಯುವಕ ಮಂಡಲದ ಸದಸ್ಯರು ಕೂಡ ಸಮವಸ್ತ್ರದ ಮೂಲಕ ಜತೆಗೂಡಿ ಗಿಡ ನಾಟಿ ಕಾರ್ಯಕ್ರಮ ಯಶಸ್ಸುಗೊಳಿಸಿದರು.
ಪ್ರಸ್ತಾವನೆಗೈದ ತುಡರ್ ಯುವಕ ಮಂಡಲದ ಅಧ್ಯಕ್ಷ ಸುನೀಲ್ ನಿಧಿಮುಂಡ ಮಾತನಾಡಿ, ನಾವು 10 ಸಾವಿರ ಗಿಡ ನೆಡುವ ಗುರಿಯನ್ನು ಮುಟ್ಟಲಿದ್ದೇವೆ ಎಂದು ಹೇಳಿದರು.
10 ಸಾವಿರ ಗಿಡ ನೆಡುವ ಗುರಿ
ಪ್ರಸ್ತಾವನೆಗೈದ ತುಡರ್ ಯುವಕ ಮಂಡಲದ ಅಧ್ಯಕ್ಷ ಸುನೀಲ್ ನಿಧಿಮುಂಡ ಮಾತನಾಡಿ, ನಾವು 10 ಸಾವಿರ ಗಿಡ ನೆಡುವ ಗುರಿಯನ್ನು ಮುಟ್ಟಲಿದ್ದೇವೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ
Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ
Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.