ನನ್ನ ಹತ್ಯೆ ಮಾಡಿ, ಆದರೆ ಮಕ್ಕಳನ್ನ ಕೊಲ್ಲದಿರಿ : ಯೋಧರ ಎದುರು ಗೋಗರೆದ ಕ್ರೈಸ್ತ ಸನ್ಯಾಸಿನಿ
Team Udayavani, Mar 10, 2021, 5:10 PM IST
ಮ್ಯಾನ್ಮಾರ್ : ನನ್ನ ಪ್ರಾಣ ತೆಗೆಯಿರಿ, ಆದರೆ ಮಕ್ಕಳ ಮಾರಣ ಹೋಮ ಮಾಡದಿರಿ ಎಂದು ಕ್ರೈಸ್ತ ಸನ್ಯಾಸಿನಿಯೋರ್ವಳು ಯೋಧರ ಎದುರು ಮಂಡಿಯೂರಿ ಅಂಗಲಾಚಿರುವ ಘಟನೆ ಉತ್ತರ ಮ್ಯಾನ್ಮಾರ್ ದಲ್ಲಿ ನಡೆದಿದೆ.
ದೇಶದ ಆಡಳಿತ ತನ್ನ ಕೈಗೆ ತೆಗೆದುಕೊಂಡಿರುವ ಸೇನೆಯ ವಿರುದ್ಧ ಮ್ಯಾನ್ಮಾರ್ ದಲ್ಲಿ ಹಿಂಸಾಚಾರ ಮುಗಿಲು ಮುಟ್ಟಿದೆ. ಪ್ರಜಾಪ್ರಭುತ್ವ ಉಳಿಸಲು ಬೀದಿಗಿಳಿದ ನಾಗರಿಕರ ಹೋರಾಟ ಹತ್ತಿಕ್ಕಲು ಸೇನೆ ಕಸರತ್ತು ನಡೆಸಿದೆ. ಸೇನೆಯ ವಿರುದ್ಧ ಪ್ರತಿಭಟಿಸುತ್ತಿರುವವರ ವಿರುದ್ಧ ಗುಂಡಿನ ದಾಳಿ ಕೂಡ ನಡೆಸಲಾಗುತ್ತಿದೆ.
ಸೋಮವಾರ ಬೀದಿಯೊಂದರಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಯೋಧರು ದಾಳಿ ನಡೆಸಿದ್ದರು. ಪ್ರತಿಭಟನಾಕಾರರನ್ನು ತೆರವುಗೊಳಿಸಲು ಗುಂಡಿನ ಪ್ರಯೋಗ ನಡೆಸಿದ್ದರು. ಈ ವೇಳೆ ಸನ್ಯಾಸಿನಿ ಆನ್ ರೋಸ್ ತವಾಂಗ್ , ನನ್ನ ಮೇಲೆ ಬೇಕಾದರೆ ಗುಂಡು ಹಾರಿಸಿ, ಆದರೆ ಮಕ್ಕಳನ್ನು ಕೊಲ್ಲಬೇಡಿ ಎಂದು ಮಂಡಿಯೂರಿ ಮನವಿ ಮಾಡಿಕೊಂಡಿದ್ದಾರೆ.
ಘಟನೆ ಬಗ್ಗೆ ಮಾಧ್ಯಮವೊಂದಕ್ಕೆ ಮಾತಾಡಿರುವ ತವಾಂಗ್, ಕ್ಲಿನಿಕ್‍ನಿಂದ ಹೊರ ಬಂದ ನನಗೆ ಬೀದಿಯಲ್ಲಿ ರಕ್ತ ಚೆಲ್ಲಾಡಿದ್ದನ್ನು ನೋಡಿ ಆಘಾತವಾಯಿತು. ಕೈಯಲ್ಲಿ ಗನ್ ಹಿಡಿದು ಪ್ರತಿಭಟನಾಕಾರರತ್ತ ನುಗ್ಗುತ್ತಿದ್ದ ಸೇನೆ ಬಳಿ ಓಡಿ ಹೋಗಿ ಬೇಡಿಕೊಂಡೆ. ಬೇಕಾದರೆ ನನ್ನ ಹತ್ಯೆ ಮಾಡಿ, ಆದರೆ ಪುಟ್ಟ ಮಕ್ಕಳ ಪ್ರಾಣ ತೆಗೆಯಬೇಡಿ ಎಂದು ಅಂಗಲಾಚಿದೆ. ಸೇನೆಯ ಹಿರಿಯ ಅಧಿಕಾರಿಗಳು ಭರವಸೆ ನೀಡೋವರೆಗೆ ನಾ ಅಲ್ಲಿಯೇ ಮಂಡಿಯೂರಿ ಕುಳಿತುಕೊಂಡೆ ಎಂದರು.
ಸೋಮವಾರ ನಡೆದ ಹಿಂಸಾಚಾರದಲ್ಲಿ ಇಬ್ಬರು ಪ್ರತಿಭಟನಾಕಾರರು ಪ್ರಾಣ ಕಳೆದುಕೊಂಡಿದ್ದಾರೆ. ಯೋಧರ ಗುಂಡಿನ ಹೊಡೆತಕ್ಕೆ ಪುಟ್ಟ ಮಗುವಿನ ತಲೆ ಛಿದ್ರವಾಗಿ, ಪ್ರಾಣ ಪಕ್ಷಿ ಹಾರಿಹೋಯಿತು. ಗಾಯಗೊಂಡ ಕೆಲವರನ್ನು ತನ್ನ ಕ್ಲಿನಿಕ್‍ಗೆ ಕರೆತಂದು ಚಿಕಿತ್ಸೆ ನೀಡಿದ್ದಾಗಿ ತವಾಂಗ್ ಹೇಳಿದ್ದಾರೆ.
ಸನ್ಯಾಸಿನಿ ಯೋಧರನ್ನು ಬೇಡಿಕೊಳ್ಳುತ್ತಿರುವ ವಿಡಿಯೋ ಹಾಗೂ ಫೋಟೋ ಎಲ್ಲೆಡೆ ಹರಿದಾಡುತ್ತಿದ್ದು, ಅವರ ಕಳಕಳಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
A nun went down on her knees in front of policemen in a northern Myanmar town and pleaded with them to stop shooting protesters against last month’s coup https://t.co/k3TwNAB0DI 1/4 pic.twitter.com/9PASCUvTTo
— Reuters (@Reuters) March 9, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.