ಒಮಿಕ್ರಾನ್ ಪ್ರಭಾವ: ಲಸಿಕೆ ಬೇಡಿಕೆ ಶೇ. 94.41ಕ್ಕೆ
ರಾಜ್ಯದಲ್ಲಿ ಒಂದೇ ದಿನ 5.83 ಲಕ್ಷ ಮಂದಿಗೆ ಲಸಿಕೆ
Team Udayavani, Dec 1, 2021, 7:00 AM IST
ಬೆಂಗಳೂರು: ಒಮಿಕ್ರಾನ್ ಆತಂಕ ಹೆಚ್ಚಿರುವಂತೆ ಇದುವರೆಗೆ ಲಸಿಕೆ ಪಡೆಯಲು ನಿರಾಸಕ್ತಿ ತೋರುತ್ತಿದ್ದವರೆಲ್ಲ ಲಸಿಕೆ ಕೇಂದ್ರಗಳತ್ತ ಧಾವಿಸುತ್ತಿದ್ದಾರೆ!
ಇದಕ್ಕೆ ಸಾಕ್ಷಿ ಎಂಬಂತೆ ಮಂಗಳವಾರ ಒಂದೇ ದಿನ ರಾಜ್ಯಾದ್ಯಂತ ಒಟ್ಟು 5.83 ಲಕ್ಷ ಜನರು ಲಸಿಕೆ ಪಡೆದಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 10 ದಿನಗಳಿಂದ ಕೋವಿಡ್ ಲಸಿಕೆ ಪಡೆಯುತ್ತಿರುವವರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಾಣಿಸಿದೆ.
ಪ್ರಸ್ತುತ 7.43 ಕೋಟಿ ಮಂದಿ ಲಸಿಕೆ ಪಡೆದಿದ್ದಾರೆ. 2.95 ಕೋಟಿ ಮಂದಿ ಎರಡನೇ ಡೋಸ್ ಮತ್ತು 4.47 ಕೋಟಿ ಮಂದಿ ಒಂದನೇ ಡೋಸ್ ಪೂರ್ಣಗೊಳಿಸಿದ್ದಾರೆ. ನ. 30, ಮಂಗಳವಾರ ಪ್ರಥಮ ಮತ್ತು ದ್ವಿತೀಯ ಡೋಸ್‌ಗಳನ್ನು ಕ್ರಮವಾಗಿ 1.82 ಲಕ್ಷ, 4.1 ಲಕ್ಷ ಮಂದಿ ಪಡೆದಿದ್ದು, ಒಂದೇ ದಿನ 5.83 ಲಕ್ಷ ಡೋಸ್ ನೀಡಲಾಗಿದೆ. 10 ದಿನಗಳ ಹಿಂದೆ ಪ್ರತೀ ದಿನ ಒಟ್ಟು ಸುಮಾರು 2.61 ಲಕ್ಷ ಜನರು ಲಸಿಕೆ ಪಡೆಯುತ್ತಿದ್ದರು. ಮಂಗಳವಾರ ಒಂದೇ ದಿನ 5.83 ಲಕ್ಷ ಪಡೆಯುವ ಮೂಲಕ ಲಸಿಕೆ ಪಡೆಯುವವರ ಸಂಖ್ಯೆ ಇಮ್ಮಡಿಯಾಗಿದೆ.
ಎರಡನೇ ಡೋಸ್‌ಗೆ ಒಲವು
ವಾರದ ಹಿಂದೆ ಎರಡನೇ ಡೋಸ್ ಪಡೆಯಲು ಹಿಂದೇಟು ಹಾಕುತ್ತಿದ್ದವರು ಈಗ ಧಾವಿಸುತ್ತಿದ್ದಾರೆ. 3ನೇ ಅಲೆ ಭೀತಿಯಲ್ಲಿ ಕಳೆದ 10 ದಿನದಲ್ಲಿ ಒಟ್ಟು ಲಸಿಕೆ ಪಡೆಯುವ ಸಂಖ್ಯೆಯಲ್ಲಿ ಶೇ. 94.41ರಷ್ಟು ಏರಿಕೆಯಾಗಿದೆ. ಎರಡನೇ ಡೋಸ್ ಲಸಿಕೆ ಪಡೆಯವವರ ಸಂಖ್ಯೆಯಲ್ಲಿ ಶೇ. 89 ಮತ್ತು ಒಂದನೇ ಡೋಸ್ ಪಡೆಯುವವರಲ್ಲಿ ಶೇ. 97ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ:ಲಾಕ್‌ಡೌನ್ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ನಿರಾಣಿ
ವಾರದಲ್ಲಿ 30 ಲಕ್ಷ ಡೋಸ್ ವಿತರಣೆ
ನ. 20ರಿಂದ ನ. 30ರ ವರೆಗೆ 11 ಲಕ್ಷ ಪ್ರಥಮ, 30 ಲಕ್ಷ ದ್ವಿತೀಯ ಡೋಸ್ ಸೇರಿದಂತೆ ಒಟ್ಟು 41.50 ಲಕ್ಷ ಮಂದಿ ಲಸಿಕೆ ಪಡೆದಿರುವುದನ್ನು ಅಂಕಿ ಅಂಶಗಳು ದೃಢಪಡಿಸಿವೆ.
ಲಸಿಕೆ ವಿತರಣೆ ಪ್ರಗತಿ
- ನ. 10ರಿಂದ ನ. 19 ವರೆಗೆ 24.01 ಲಕ್ಷ ಡೋಸ್
- ನ. 20ರಿಂದ ನ. 30 ವರೆಗೆ 41.50 ಲಕ್ಷ ಡೋಸ್
- ಪ್ರಥಮ ಡೋಸ್ ವಿತರಣೆಯಲ್ಲಿ ಶೇ. 97 ಏರಿಕೆ
- ದ್ವಿತೀಯ ಡೋಸ್ ವಿತರಣೆಯಲ್ಲಿ ಶೇ. 89 ಏರಿಕೆ
- ಒಟ್ಟು ಲಸಿಕೆ ವಿತರಣೆಯಲ್ಲಿ ಶೇ. 94.41 ಏರಿಕೆ
- ಒಂದೇ ದಿನ 5.83 ಲಕ್ಷ ಡೋಸ್ ವಿತರಣೆ
- ಎರಡನೇ ಡೋಸ್ ಬಾಕಿ ಇರುವವರು 41 ಲಕ್ಷ
ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚುತ್ತಿರುವುದು ಒಳ್ಳೆಯ ಬೆಳವಣಿಗೆ. ಎರಡನೇ ಡೋಸ್ ಹೆಚ್ಚು ಜನರು ಪಡೆದಷ್ಟು ರೋಗ ನಿಯಂತ್ರಣಕ್ಕೆ ಅನುಕೂಲ. ಲಸಿಕೆ ಹಾಕಿಸಿಕೊಳ್ಳದವರು ಕಡ್ಡಾಯವಾಗಿ ಹಾಕಿಸಿಕೊಳ್ಳುವಂತೆ ಮನವಿ ಮಾಡುತ್ತೇನೆ.
– ಟಿ.ಕೆ. ಅನಿಲ್ ಕುಮಾರ್, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.