One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
ಪ್ರಜಾಪ್ರಭುತ್ವ ವ್ಯವಸ್ಥೆ ಯಾವಾಗಲೂ ಶಾಶ್ವತ; ವ್ಯಕ್ತಿಗಳು ನಶ್ವರ
Team Udayavani, Dec 18, 2024, 6:27 PM IST
ಭಾರತ ಭೌಗೋಳಿಕವಾಗಿ ಸಾಂಸ್ಕೃತಿಕವಾಗಿ ವೈವಿಧ್ಯ ಪೂರ್ಣವಾದ ದೇಶ. ಮಾತ್ರವಲ್ಲ ಸಂವಿಧಾನಾತ್ಮಕವಾಗಿ ಸಂಸದೀಯ ವ್ಯವಸ್ಥೆಯನ್ನು ಕೇಂದ್ರ ಮತ್ತು ರಾಜ್ಯಗಳಲ್ಲಿ ಒಪ್ಪಿಕೊಂಡು ಸಸೂತ್ರವಾಗಿ ಎಪ್ಪತ್ತೈದು ಸಂವತ್ಸರಗಳಿಂದ ನಡೆಸಿಕೊಂಡು ಬರುತ್ತಿದ್ದೇವೆ. ಈಗ ಇದಕ್ಕಿದ್ದ ಹಾಗೇ ಈ ಎಲ್ಲವನ್ನೂ ಏಕತೆಯ ಹೆಸರಿನಲ್ಲಿ ಕಟ್ಟಿ ಹಾಕಲು ಮುಂದಾಗುತ್ತಿದ್ದೇವೆ. ಇದರಲ್ಲಿ ಬಹುಮುಖ್ಯವಾಗಿ ಚಚೆ೯ಗೆ ಗ್ರಾಸವಾಗಿರುವುದು “ಏಕ ರಾಷ್ಟ್ರ ಏಕ ಚುನಾವಣೆ.”ಇದು ಸಾಧುವೆ ಅಥವಾ ಸಾಧ್ಯವೇ?ಈ ಕುರಿತಾಗಿ ಇದರ ಸಾಧಕ ಬಾಧಕಗಳನ್ನು ಪಕ್ಷ ಮೀರಿ ಚರ್ಚಿಸ ಬೇಕಾದ ಅನಿವಾರ್ಯತೆ ಇದೆ.
1952 ರಿಂದ ಮೊದಲ್ಗೊಂಡು ಸರಿ ಸುಮಾರು 70ರ ದಶಕದ ತನಕವೂ ಕೇಂದ್ರ ಮತ್ತು ರಾಜ್ಯಗಳ ಚುನಾವಣೆಗಳು ಏಕ ಕಾಲದಲ್ಲಿ ಸ್ವಾಭಾವಿಕವಾಗಿ ನಡೆದುಕೊಂಡು ಬಂದಿದೆ. ಅಂದರೆ ನಮ್ಮ ಸಂವಿಧಾನದಲ್ಲಿ ಎಲ್ಲಿಯೂ ಕೂಡ ಕೇಂದ್ರ ಮತ್ತು ರಾಜ್ಯಗಳ ಚುನಾವಣೆಗಳನ್ನು ಏಕ ಕಾಲದಲ್ಲಿ ನಡೆಸಿಕೊಂಡು ಬರಬೇಕು ಅನ್ನುವ ಕುರಿತಾಗಿ ಉಲ್ಲೇಖ ಮಾಡಿಲ್ಲ. ಆದರೆ ಕಾಲದ ಪರಿಸ್ಥಿತಿಗೆ ಅನುಗುಣವಾಗಿ ನಡೆದುಕೊಂಡು ಬಂತು. ಆದರೆ ಅನಂತರದ ಕಾಲ ಘಟ್ಟದಲ್ಲಿ ತಾಳ ಮೇಳ ತಪ್ಪಿದ ಕಾರಣದಿಂದಾಗಿ ಕೇಂದ್ರ ರಾಜ್ಯಗಳ ಚುನಾವಣಾ ಟ್ರ್ಯಾಕ್ ತಪ್ಪಿತು. ಆದರೆ ಇಂದು ಅದನ್ನು ಸರಿಯಾದ ಟ್ರ್ಯಾಕ್ ತರುವ ನಿಟ್ಟಿನಲ್ಲಿ ಸಂವಿಧಾನಕ್ಕೆ ಮೂಲಭೂತವಾದ ತಿದ್ದುಪಡಿ ತರುತ್ತೇವೆ ಅನ್ನುವ ನಿಟ್ಟಿನಲ್ಲಿ ಆಡಳಿತ ರೂಢ ಬಿಜೆಪಿ ಪಕ್ಷ ಒಂದು ಹೆಜ್ಜೆ ಮುಂದಿಟ್ಟಿದೆ.
ಇದು ಖಂಡಿತವಾಗಿಯೂ ಸುಲಭದ ಹೆಜ್ಜೆ ಅಲ್ಲ. ಈ ಹಿಂದೆ ನಾವು ಯಾಕೆ ಹಲವು ಸಂದರ್ಭದಲ್ಲಿ ಟ್ರ್ಯಾಕ್ ತಪ್ಪಿದ್ದೇವೆ ಅನ್ನುವುದನ್ನು ಆಡಳಿತ ರೂಢ ಪಕ್ಷ ಆತ್ಮ ವಿಮರ್ಶೆ ಮಾಡಿಕೊಂಡು ಹೆಜ್ಜೆ ಮುಂದಿಡ ಬೇಕಾಗಿದೆ. ಏಕ ಕಾಲದ ಚುನಾವಣೆಯಲ್ಲಿ ಕೆಲವೊಂದು ಸಾಧಕಗಳು ಇರಬಹುದು. ಉದಾ.ಸಮಯದ ಉಳಿತಾಯ; ಹಣದ ವೆಚ್ಚ ಕಡಿಮೆ ಮಾಡಬಹುದು; ಮತದಾರರಿಗೆ ಚುನಾವಣೆ ಅಂದರೆ ಆಲರ್ಜಿಯಾಗುವ ಪರಿಸ್ಥಿತಿ ಬಂದಿದೆ..ಇದನ್ನೆಲ್ಲಾ ಸುಧಾರಣೆ ಮಾಡುವ ದೃಷ್ಟಿಯಿಂದ ಏಕ ಕಾಲದ ಚುನಾವಣೆ ಪರಿಹಾರ ಕೊಡಬಹುದು.
ಆದರೆ ಈ ಕಾಲದ ಚುನಾವಣೆಯಲ್ಲಿ ಮುಂದೆ ಬರುವ ಸಮಸ್ಯೆಗಳಿಗೆ ಪರಿಹಾರ ಹುಡುಕುವಲ್ಲಿ ಸಂಪೂರ್ಣವಾಗಿ ಸೇೂತಿದೆ ಅನ್ನುವುದು ಇನ್ನೊಂದು ಪ್ರಮುಖವಾದ ಅಂಶ..ಇದನ್ನು ಒಂದೊಂದಾಗಿ ಪಟ್ಟಿ ಮಾಡುತ್ತಾ ಹೇೂಗೇೂಣ.
1.ಈ ಹಿಂದೆ ಏಕ ಕಾಲದಲ್ಲಿ ನಡೆಯುತ್ತಿದ್ದ ಚುನಾವಣೆ ಹಳಿ ತಪ್ಪಲ್ಲು ಕಾರಣ ಯಾರು? ಆಡಳಿತ ರೂಢ ಪಕ್ಷಗಳನ್ನು ಅವಧಿ ಮುಗಿಯುವ ಮೊದಲೇ ಸಂವಿಧಾನದ 356ನೇ ಅನುಚ್ಛೇದ ಬಳಸಿ ರಾಷ್ಟ್ರಪತಿಗಳ ಆಡಳಿತ ಹೇರಿದ ಕಾರಣ ಮತ್ತೆ ಮಧ್ಯಾವಧಿ ಚುನಾವಣೆಗೆ ಹೇೂಗ ಬೇಕಾದ ಸಂದರ್ಭ ಬಂತು. ಹಾಗಾದರೆ ಇನ್ನೂ ಮುಂದೆ 356 ವಿಧಿ ಬಳಸ ಬಾರದು ಅನ್ನುವುದಕ್ಕೆ ನಿಮ್ಮ ಸಹ ಮತವಿದೆಯಾ?
2.ಹಳಿ ತಪ್ಪಿ ಹೇೂಗಲು ಇನ್ನೊಂದು ಬಹು ಪ್ರಧಾನ ಕಾರಣ ನಮ್ಮಲ್ಲಿನ ಸಮಿಶ್ರ ಸರ್ಕಾರ ವ್ಯವಸ್ಥೆ.ಈ ಸಮಿಶ್ರ ಸರ್ಕಾರ ಯಾವಾಗಲೂ ಅತಂತ್ರ ಸರ್ಕಾರಗಳೇ ಆಗಿರುತ್ತದೆ. ಒಂದು ವೇಳೆ ಈ ಸಮಿಶ್ರ ಸರ್ಕಾರ ಮಧ್ಯದಲ್ಲಿ ಬಿದ್ದು ಹೇೂದರೆ ಉಳಿದ ಸಮಯವನ್ನು ರಾಷ್ಟ್ರ ಪತಿಗಳ ಆಡಳಿತಕ್ಕೆ ಒಪ್ಪಿಸಲು ನೀವು ಸಿದ್ದರಿದ್ದೀರಾ?
3.ಆಡಳಿತ ರೂಢ ಪಕ್ಷಗಳನ್ನು ಕುದುರೆ ವ್ಯಾಪಾರದ ಮೂಲಕ ಅಭದ್ರಗೊಳಿಸುವ ರಾಜಕೀಯ ಮೇಲಾಟಕ್ಕೆ ಏಕ ರಾಷ್ಟ್ರ ಏಕ ಚುನಾವಣೆಯಲ್ಲಿ ಏನಾದರೂ ಪರಿಹಾರ ಸೂಚಿಸಿದ್ದೀರಾ?
4.ಏಕ ರಾಷ್ಟ್ರ ಏಕ ಚುನಾವಣೆಯಿಂದಾಗಿ ನಿಮಗೆ ಸಮಯ ಹಣ ಉಳಿಯಬಹುದು ಆದರೆ ಮತದಾರರ ಮತಹಾಕುವ ಸಂದರ್ಭದಲ್ಲಿ ಕೇಂದ್ರ, ರಾಜ್ಯ ಸ್ಥಳೀಯ ಚುನಾವಣಾ ಮತ ಪೆಟ್ಟಿಗೆಯ ಅರ್ಥಾತ್ ಮತ ಯಂತ್ರದ ಏದುರಿನಲ್ಲಿ ನಿಂತಾಗ ಮೇಲೆ ನೇೂಡಿ ಮತ ಹಾಕ ಬಹುದು ಅನ್ನುವ ನಿರ್ಧಾರಕ್ಕೆ ನೀವು ಬಂದಿರ ಬಹುದು..ಆದರೆ ಕಾಲ ವ್ಯಕ್ತಿ ಸಂದರ್ಭಗಳು ನಿಂತ ನೀರಲ್ಲ..ಬದಲಾಗುವ ಸಂದರ್ಭವೂ ಬರ ಬಹುದು ಅನ್ನುವುದನ್ನು ನಾವು ಮರೆಯ ಬಾರದು.
5.ಏಕ ರಾಷ್ಟ್ರ ಏಕ ಚುನಾವಣೆಗೆ ಹೆಜ್ಜೆ ಇಡುವಾಗ ಗಂಭೀರವಾಗಿ ಪರಿಗಣಿಸ ಬೇಕಾದ ಸಂಗತಿಗಳೆಂದರೆ ಒಬ್ಬ ಅಭ್ಯರ್ಥಿ ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ನಿರ್ಬಂಧ ಹೇರ ಬೇಕು. ಒಮ್ಮೆ ಶಾಸಕರಾಗಿ ಆಯ್ಕೆಯಾದರೆ ಮತ್ತೆ ಅದೇ ವ್ಯಕ್ತಿಗಳು ಲೇೂಕ ಸಭೆಯ ಚುನಾವಣೆಗೂ ಸ್ಪರ್ಧಿಸುವುದು ಇದಕ್ಕೆಲ್ಲ ಕಡಿವಾಣ ಹಾಕುವ ಅಂಶಗಳು ನಿಮ್ಮಈ ಮಸೂದೆಯಲ್ಲಿ ಇದೆಯಾ.. ಖಂಡಿತವಾಗಿಯೂ ಇಲ್ಲ..ಇದನ್ನು ಯಾವುದೇ ಪಕ್ಷ ಒಪ್ಪಿಕೊಳ್ಳಲು ಸಿದ್ಧರಿಲ್ಲ.
ಭಾರತದ ಸಂವಿಧಾನ ರೂಪಿಸಿದ ನಮ್ಮ ಹಿರಿಯರು ತುಂಬಾ ದೂರದರ್ಶಿತ್ವದಿಂದ ಸಂವಿಧಾನದ ವ್ಯವಸ್ಥೆ ರೂಪಿಸಿದ್ದಾರೆ ಹೊರತು ಯಾವುದೇ ವ್ಯಕ್ತಿ ಪಕ್ಷ ಕಾಲ ಸಂದರ್ಭಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸಂವಿಧಾನ ರಚನೆ ಮಾಡಿಲ್ಲ. ಹಾಗಾಗಿಯೇ ನಮ್ಮ ಸಂವಿಧಾನ ಸಾರ್ವಕಾಲಿಕವಾಗಿ ಸ್ಥಿರವಾಗಿ ನಿಂತಿದೆ.ಇಂದು ನಮಗೆ ಪ್ರಯೇೂಜನ ನೀಡ ಬಹುದು ಅನ್ನುವ ಕಾರಣಕ್ಕೆ ಬದಲಾವಣೆಗೆ ಕೈ ಹಾಕಿದರೆ ನಾಳೆ ಇನ್ನೊಬ್ಬ ಅಧಿಕಾರಕ್ಕೆ ಬಂದರೆ ಅದನ್ನು ಆತ ದುರುಪಯೋಗ ಪಡಿಸಿಕೊಳ್ಳ ಬಹುದು ಅನ್ನುವ ಎಚ್ಚರಿಕೆ ನಮಗೆ ಬೇಕು. ವ್ಯವಸ್ಥೆ ಯಾವಾಗಲೂ ಶಾಶ್ವತ; ವ್ಯಕ್ತಿಗಳು ನಶ್ವರ ಹಾಗಾಗಿ ಸಂವಿಧಾನಕ್ಕೆ ತಿದ್ದುಪಡಿ ತರುವಾಗ ತುಂಬಾ ಜಾಗೃತಿ ವಹಿಸ ಬೇಕಾದ ಅನಿವಾರ್ಯತೆ ಇದೆ.ಈ ನಿಟ್ಟಿನಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ಚಚೆ೯ಗೆ ಗ್ರಾಸವಾಗ ಬೇಕು ಅನ್ನುವುದು ನಮ್ಮೆಲ್ಲರ ಆಶಯ.
ಪ್ರೊ.ಕೊಕ್ಕರ್ಣೆ ಸುರೇಂದ್ರ ನಾಥ ಶೆಟ್ಟಿ ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು
SM Krishna: ಪ್ರೊಫೆಸರ್ ಟು ಸಿಎಂ, ಗವರ್ನರ್, ವಿದೇಶಾಂಗ ಸಚಿವ…SMK ರಾಜಕೀಯ ಯಶೋಗಾಥೆ…
Exclusive: ಭಾರತ-ಮ್ಯಾನ್ಮಾರ್ ಗಡಿ; ಮೋದಿ ಸರ್ಕಾರದ Fence ನಿರ್ಮಾಣ ಯೋಜನೆಗೆ ವಿರೋಧವೇಕೆ!
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
MUST WATCH
ಹೊಸ ಸೇರ್ಪಡೆ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.