ಕೇದಾರದಲ್ಲಿ ಧ್ಯಾನ ಮಗ್ನರಾದ ಮೋದಿ
Team Udayavani, May 19, 2019, 8:21 AM IST
ಕೇದಾರನಾಥ: ಚುನಾವಣಾ ಪ್ರಚಾರದ ಭರಾಟೆ ಮುಗಿದ ಬಳಿಕ ಫಲಿ ತಾಂಶಕ್ಕೂ ಮುಂಚಿನ ಕುತೂಹಲದ ದಿನ ಗಳನ್ನು ಕಳೆಯಲು ರಾಜಕಾರಣಿಗಳು ಥರಹೇವಾರಿ ವಿಧಾನಗಳನ್ನು ಕಂಡು ಕೊಳ್ಳು ತ್ತಾರೆ. ಕೆಲವರು ರೆಸಾರ್ಟ್‌ಗಳಲ್ಲಿ ವಿಶ್ರಾಂತಿ ಪಡೆದರೆ, ದೈವಭಕ್ತ ಅಭ್ಯರ್ಥಿಗಳು ದೇಗು ಲಕ್ಕೆ ಎಡ ತಾಕುತ್ತಿದ್ದಾರೆ. ಆದರೆ ಪ್ರಧಾನಿ ಮೋದಿ ತಮ್ಮ ಚುನಾವಣಾ ಪ್ರಚಾರ ಮುಗಿಸಿ, ಮತದಾನ ದಿನಕ್ಕೂ ಮುನ್ನವೇ ಧ್ಯಾನಮಗ್ನರಾಗಿದ್ದಾರೆ. ಶನಿವಾರ ಮೋದಿ ಕೇದಾರನಾಥಕ್ಕೆ ಭೇಟಿ ನೀಡಿದ್ದು, ಅಲ್ಲಿನ ಧ್ಯಾನ ಕುಟೀರದಲ್ಲಿ ಕುಳಿತು ಧ್ಯಾನಮಗ್ನರಾಗಿದ್ದಾರೆ. ಕೇದಾರ ನಾಥದ ಧ್ಯಾನ ಕುಟೀರದಲ್ಲೇ ಶನಿವಾರ ವಿಡೀ ಕಳೆದ ಅವರು ರವಿವಾರ ಬದರಿನಾಥಕ್ಕೆ ತೆರಳಲಿದ್ದಾರೆ.
ಜಾಲಿಗ್ರಾಂಟ್ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 9.30 ಕ್ಕೆ ಬಂದಿಳಿದ ಮೋದಿ ಕೇದಾರನಾಥ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಸದ್ಯ 75 ಕೋಟಿ ರೂ. ವೆಚ್ಚದಲ್ಲಿ ಕೇದಾರನಾಥ ದೇಗುಲದ ಸೌಂದರ್ಯ ವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಅದರ ಪರಿವೀಕ್ಷಣೆ ಮಾಡಿದರು. ಇಲ್ಲಿ ನಡೆಯುತ್ತಿರುವ ಹಲವು ಪುನಶ್ಚೇತನ ಯೋಜನೆಗಳನ್ನು ಪ್ರಧಾನಿ ಖುದ್ದಾಗಿ ಮೇಲ್ವಿಚಾರಣೆ ನಡೆಸುತ್ತಿದ್ದು, ಪ್ರಧಾನಿಯಾದ ಅನಂತರ ಈಗಾ ಗಲೇ 4 ಬಾರಿ ಇಲ್ಲಿಗೆ ಭೇಟ ನೀಡಿ ದ್ದಾರೆ.
ಇಂದು ಬದರಿನಾಥಕ್ಕೆ: ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಅನಂತರ ಪ್ರಧಾನಿ ಮೋದಿ ಈವರೆಗೂ ಬದರಿನಾಥಕ್ಕೆ ಭೇಟಿ ನೀಡಿರಲಿಲ್ಲ. ಲೋಕಸಭೆ ಚುನಾವಣೆ ಫಲಿತಾಂಶ ಬಾಕಿ ಇರುವ ಇನ್ನೇನು ಕೆಲವೇ ದಿನಗಳಿಗೂ ಮೊದಲು ಮೋದಿ ಬದರಿನಾಥಕ್ಕೆ ರವಿವಾರ ಭೇಟಿ ನೀಡಲಿದ್ದಾರೆ.
2 ಕಿ.ಮೀ. ಚಾರಣ
ಕೇದಾರನಾಥ ಪುನಶ್ಚೇತನ ಕಾಮಗಾರಿ ವೇಳೆ ದೇಗುಲದಿಂದ ಸುಮಾರು 2 ಕಿ.ಮೀ. ದೂರದಲ್ಲಿ 2 ಧ್ಯಾನ ಕುಟೀರ ಗಳನ್ನು ಸ್ಥಾಪಿಸಲಾಗಿದೆ. ಇಲ್ಲಿಗೆ ತೆರ ಳುವ ಹಾದಿ ಕಡಿದಾಗಿದೆ. ಇಲ್ಲಿ ನಡೆದು ಕೊಂಡು ಹೋಗಲು ಮಾತ್ರವೇ ಅವಕಾಶವಿದೆ. ಕೇದಾರನಾಥ ದೇಗು ಲಕ್ಕೆ ಭೇಟಿ ನೀಡಿ, ಪೂಜೆ ಪುನಸ್ಕಾರ, ಅಭಿವೃದ್ಧಿ ಕಾರ್ಯ ಪರಿಶೀಲನೆ ನಡೆಸಿದ ಮೋದಿ ಅಅನಂತರ ಅಲ್ಲಿಂದ ಧ್ಯಾನ ಕುಟೀರಕ್ಕೆ ತೆರಳಿದ್ದಾರೆ. ಎರಡು ಕಿ.ಮೀ. ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿ ದ್ದಾರೆ. ಇಲ್ಲಿ ಇವರು ಧ್ಯಾನ ಆರಂಭಿ ಸಿದ್ದು, ರವಿವಾರ ಬೆಳಗ್ಗೆಯವರೆಗೂ ಧ್ಯಾನಮಗ್ನರಾಗಿರಲಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.