![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Dec 28, 2020, 10:45 PM IST
ನವದೆಹಲಿ: ದೇಶದ ಮೊಟ್ಟ ಮೊದಲ ಚಾಲಕರಹಿತ ಮೆಟ್ರೋ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚಾಲನೆ ನೀಡಿದರು.
ಈ ವೇಳೆ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಪ್ರಧಾನಿ, “2025ರ ವೇಳೆಗೆ ದೇಶದ 25 ನಗರಗಳಲ್ಲಿ ಮೆಟ್ರೋ ಯೋಜನೆ ವಿಸ್ತರಿಸುವ ಗುರಿ ಹೊಂದಲಾಗಿದೆ’ ಎಂದರು. “2014ರಲ್ಲಿ ದೇಶಾದ್ಯಂತ ಕೇವಲ 248 ಕಿ.ಮೀ. ಮೆಟ್ರೋ ಮಾರ್ಗಗಳಿದ್ದವು. ಈಗ ಇದು 3 ಪಟ್ಟು ಹೆಚ್ಚಿ , 700 ಕಿ.ಮೀ. ವಿಸ್ತರಣೆಯಾಗಿದೆ. 2025ರ ವೇಳೆಗೆ 1,700 ಕಿ.ಮೀ.ವರೆಗೆ ಮೆಟ್ರೋ ಲೈನ್ ವಿಸ್ತರಿಸುವ ಯೋಜನೆ ಪ್ರಗತಿಯಲ್ಲಿದೆ’ ಎಂದು ತಿಳಿಸಿದರು.
ಮಂಗಳವಾರ ಚಾಲನೆ: ಉತ್ತರ ಪ್ರದೇಶದ “ನ್ಯೂ ಭೌಪುರ್-ನ್ಯೂ ಖುರ್ಜಾ’ ನಡುವಿನ ಸರಕು ಕಾರಿಡಾರ್ ಯೋಜನೆಯನ್ನು ಪ್ರಧಾನಿ ಮೋದಿ ಮಂಗಳವಾರ ಲೋಕಾರ್ಪಣೆ ಮಾಡಲಿದ್ದಾರೆ. 5,750 ಕೋಟಿ ರೂ. ವೆಚ್ಚದ, 351 ಕಿ.ಮೀ. ದೂರದ ಈ ಕಾರಿಡಾರ್ ಪೂರ್ವ ರೈಲ್ವೆ ವಿಭಾಗದ ಮಹತ್ವಾಕಾಂಕ್ಷಿ ಯೋಜನೆ.
ಇದನ್ನೂ ಓದಿ:ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕೆ 1,100 ಕೋಟಿ ವೆಚ್ಚ
You seem to have an Ad Blocker on.
To continue reading, please turn it off or whitelist Udayavani.