ಸಹಕಾರಿ ಸಂಘದ ಸದಸ್ಯ ಆತ್ಮಹತ್ಯೆಗೆ ಯತ್ನ, ಇಬ್ಬರ ವಿರುದ್ಧ ಪ್ರಕರಣ ದಾಖಲು
ಸಹಕಾರಿ ಸಂಘದ ಸಿಬಂದಿ ಸಾಲ ತೆಗೆದು ಮೋಸ
Team Udayavani, Jul 19, 2023, 6:30 AM IST
ಪುಂಜಾಲಕಟ್ಟೆ: ತನ್ನ ಹೆಸರಿನಲ್ಲಿ ಸಹಕಾರಿ ಸಂಘದ ಸಿಬಂದಿ ಸಾಲ ಪಡೆದು ಮರುಪಾವತಿಸದ ಹಿನ್ನೆಲೆಯಲ್ಲಿ ಆಘಾತಗೊಂಡು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾವಳಮೂಡೂರು ಗ್ರಾಮದ ಪಂಜಾಡಿ ನಿವಾಸಿ ಗುರುಪ್ರಸಾದ್ ಅವರ ದೂರಿನ ಮೇಲೆ ಪುಂಜಾಲಕಟ್ಟೆ ಪೊಲೀಸರು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಬಂಟ್ವಾಳ ತಾ| ಕಾವಳಮೂಡೂರು ವ್ಯವಸಾಯ ಸೇವಾ ಸಹಕಾರಿ ಸಂಘದಿಂದ ಸದಸ್ಯ ಗುರುಪ್ರಸಾದ್ ಅವರು ಈ ಹಿಂದೆ ಪಡೆದಿದ್ದ 3 ಲಕ್ಷ ರೂ. ಸಾಲವನ್ನು ಮರು ಪಾವತಿಸಿದ್ದರು. 2 ವರ್ಷಗಳ ಹಿಂದೆ ಅವರು ಸಾಲ ಮರು ಪಾವತಿಗೆಂದು ಹೋದ ಸಂದರ್ಭ ಸಂಘದ ಕ್ಯಾಶಿಯರ್ ರವೀಂದ್ರ ಎಂಬವರು ಗುರುಪ್ರಸಾದ್ ಅವರ ಹೆಸರಿನಲ್ಲಿ 3 ಲ.ರೂ.ಸಾಲ ಪಡೆದಿದ್ದರೆ, ಮ್ಯಾನೇಜರ್ ಕೇಶವ ಎಂಬವರು 8 ಲ.ರೂ. ನ್ನು ಸಾಲ ಪಡೆದಿರುವುದು ಬೆಳಕಿಗೆ ಬಂದಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇವರಿಬ್ಬರು ಸಂಘಕ್ಕೆ ಸಾಲ ಮರು ಪಾವತಿಸದಿದ್ದು, ಈ ಸಾಲಕ್ಕೆ ಜಾಮೀನುದಾರ ಜನಾರ್ದನ ಭಂಡಾರಿಯವರಿಗೆ ಸಾಲದ ಕಂತನ್ನು ಪಾವತಿಸುವಂತೆ ನೋಟಿಸ್ ಬಂದ ಬಳಿಕ ಇದನ್ನು ಆರೋಪಿಗಳ ಗಮನಕ್ಕೆ ತಂದಾಗ ನೀವು ಗಡಿಬಿಡಿ ಮಾಡಬೇಡಿ ಕಂತು ಕಟ್ಟುವ ಎಂದು ತಿಳಿಸಿದ್ದರೂ ಬಳಿಕ ತನಗೂ ನೀಡದೇ, ಸಂಘಕ್ಕೂ ಕಟ್ಟದೇ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಇದರಿಂದ ಮನನೊಂದ ಗುರುಪ್ರಸಾದ್ ಮನೆ ಬಳಿ ಇರುವ ತೋಟದ ಶೆಡ್ಡಿನಲ್ಲಿ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅಸ್ವಸ್ಥರಾದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.