ಸಿಇಟಿ ಪರೀಕ್ಷೆಗೆ ಸಿದ್ಧತೆ ಅಗತ್ಯ

Team Udayavani, Apr 17, 2019, 6:00 AM IST

r-15

ಪಿಯುಸಿ ಫ‌ಲಿತಾಂಶ ಘೋಷಣೆಯಾಗಿದ್ದು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ವೃತ್ತಿ ಪರ ಕೋರ್ಸ್‌ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ಕಡ್ಡಾಯವಾಗಿದೆ. ಹಾಗಾಗಿ ಮತ್ತೂಂದು ಅಗ್ನಿ ಪರೀಕ್ಷೆಗೆ ವಿದ್ಯಾರ್ಥಿಗಳು ಸಿದ್ಧವಾಗಬೇಕಿದೆ. ಪರೀಕ್ಷೆ ತಯಾರಿಗಾಗಿ ವಿದ್ಯಾರ್ಥಿಗಳು ಗೊಂದಲಗೊಳ್ಳಬೇಕಿಲ್ಲ. ಕಠಿನ ಪರಿಶ್ರಮದ ಮೂಲಕ ಅನಾಯಾಸವಾಗಿ ಪರೀಕ್ಷೆ ಎದುರಿಸಬಹುದಾಗಿದೆ. ಕೆಲವೊಂದು ಮಾರ್ಗ ಸೂಚಿಗಳ ಮಾಹಿತಿ ನೀಡಲಾಗಿದೆ.

ಪಿಯುಸಿ ಫಲಿತಾಂಶ ಈಗಾಗಲೇ ಬಂದಿದ್ದು, ಮುಂದೇನು? ಎಂಬ ಚಿಂತೆಯಲ್ಲಿ ವಿದ್ಯಾರ್ಥಿಗಳಿರುವಾಗಲೇ ಇನ್ನೇನು ಕೆಲವು ದಿನದಲ್ಲಿಯೇ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಆರಂಭವಾಗುತ್ತಿದ್ದು, ಪಿಯುಸಿ ಫಲಿತಾಂಶದ ಖುಷಿಯಲ್ಲಿರುವಾಗಲೇ ವಿದ್ಯಾರ್ಥಿಗಳು ಮತ್ತೂಂದು ಪರೀಕ್ಷೆಗೆ ತಯಾರಾಗಬೇಕಿದೆ. ವೃತ್ತಿಪರ ಶಿಕ್ಷಣಕ್ಕಾಗಿ ನಡೆಯುವ ಸಿಇಟಿ ಪರೀಕ್ಷೆಯನ್ನು ವಿದ್ಯಾರ್ಥಿಗಳು ಹೆಚ್ಚಿನ ಮಹತ್ವ ನೀಡಬೇಕಿದೆ. ಎರಡೂ ವರ್ಷಗಳ ಅಧ್ಯಯನದಿಂದಗಳಿಸಿದ ಅಂಕಗಳಿಗೆ ಹೆಚ್ಚು ಮೌಲ್ಯ ಬರಬರಬೇಕಾದರೆ, ಸಿಇಟಿಯಲ್ಲಿ ಹೆಚ್ಚಿನ ಅಂಕಗಳಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕಲಿಕೆಯಲ್ಲಿಯೂ ವಿಶೇಷ ತಯಾರಿ ಮಾಡಬೇಕಾದ ಅನಿವಾರ್ಯತೆ ಇದೆ. ಪಿಯುಸಿ ಪರೀಕ್ಷೆಗೆ ಯಾವ ರೀತಿ ಕಷ್ಟ ಪಟ್ಟು ಕಲಿಯುತ್ತೀರೋ ಅಷ್ಟೇ ತಯಾರಿ ಸಿಇಟಿ ಪರೀಕ್ಷೆಗೂ ಬೇಕು. ಸಿಇಟಿ ಪರೀಕ್ಷೆಯಲ್ಲಿ ಅರ್ಥ ಮಾಡಿಕೊಂಡು ಓದಬೇಕಾದ ಅನಿವಾರ್ಯತೆ ಇದೆ. ಸಾಮಾನ್ಯ ಪರೀಕ್ಷೆಯಲ್ಲಿ ಕಂಠಪಾಠ ಮಾಡಿಯಾದರೂ ಉತ್ತಮ ಅಂಕಗಳಿಸಬಹುದು. ಆದರೆ, ಸಿಇಟಿಯಲ್ಲಿ ಆಳವಾದ ಅಧ್ಯಯನದ ಅಗತ್ಯವಿದೆ. ಪ್ರಶ್ನೆಗಳು ಕೂಡ ಅಷ್ಟೆ ಕ್ಲಿಷ್ಟವಾಗಿರುತ್ತವೆ ಹಾಗೂ ಯೋಚನೆ ಶಕ್ತಿಗೆ ಸವಾಲು ಒಡ್ಡುವುದರಿಂದಾಗಿ ವಿದ್ಯಾರ್ಥಿಗಳ ಪರೀಕ್ಷೆಗೆಗಾಗಿ ಹೆಚ್ಚು ಒತ್ತು ನೀಡಬೇಕಾಗಿದೆ.

ಸಿಇಟಿ ಪರೀಕ್ಷೆ ಬರೆಯಬೇಕಾದರೆ ಅದಕ್ಕೆಅನಿವಾರ್ಯತೆಯಿಲ್ಲ. ಮನೆಯಲ್ಲಿಯೇ ಪೂರಕ ಮಾಹಿತಿಗಳನ್ನು ಸಂಗ್ರಹಿಸಿ ನಿರಾಯಾಸವಾಗಿ ಪರೀಕ್ಷೆ ಎದುರಿಸಬಹುದು. ಪ್ರತೀ ದಿನ ಒಂದಿಷ್ಟು ಸಮಯವನ್ನು ಪರೀಕ್ಷೆಯ ಸಿದ್ಧತೆಗೆ ಮೀಸಲಿಡಿ. ಪರೀಕ್ಷೆಗೆ ಸಂಬಂಧಪಟ್ಟಂತಹ ಸಿಲೆಬಸ್‌, ಪ್ರಶ್ನೆ ಪತ್ರಿಕೆ ಹತ್ತಿರವಿರಲಿ. ಇತ್ತೀಚಿನ ದಿನಗಳಲ್ಲಿ ಅಂತರ್ಜಾಲ ಕ್ಷೇತ್ರ ಬೆಳೆದಿದ್ದು, ಯಾವುದೇ ಪ್ರಶ್ನೆಗಳಿಗೆ ಉತ್ತರ ಕ್ಷಣಾರ್ಧದಲ್ಲಿ ಸಿಗುತ್ತದೆ. ಪರೀಕ್ಷೆಯ ಪೂರಕವಾದ ಮಾಹಿತಿ ಪಡೆಯಲು ಅಂತರ್ಜಾಲವನ್ನು ಬಳಸಬಹುದು. ದಿನಂಪ್ರತಿ ಟೈಂ ಟೇಬಲ್‌ ಹಾಕಿ ಅದಕ್ಕೆ ತಕ್ಕಂತೆ ಸಿದ್ಧತೆ ನಡೆಸಬೇಕು. ಟೈಂ ಟೇಬಲ್‌ ಮುಖೇನ ಯಾವ ರೀತಿ, ಯಾವ ಸಿಲೆಬಸ್‌ ಓದಬೇಕು ಎಂಬುವುದರ ಬಗ್ಗೆ ಗಮನದಲ್ಲಿಡಿ. ದಿನನಿತ್ಯ ಸುಮಾರು 6-7 ಗಂಟೆಗಿಂತ ಹೆಚ್ಚು ಓದಬೇಡಿ. ನಿಯಮಿತವಾಗಿ ಸುಮಾರು 15-20 ನಿಮಿಷಗಳ ಕಾಲ ಬಿಡುವು ತೆಗೆದು ಕೊಳ್ಳಬೇಕು.

ಪರೀಕ್ಷೆ ಹತ್ತಿರ ಬಂದಂತೆ ಒತ್ತಡಗಳು ನಮ್ಮನ್ನು ಕಾಡಲು ಪ್ರಾರಂಭಿಸುತ್ತವೆ. ಒತ್ತಡಗಳಿಂದ ದೂರವಾಗಲು ಪ್ರಯತ್ನಿಸಬೇಕು. ಪರೀಕ್ಷೆಯ ಬಗ್ಗೆ ಮನಸ್ಸಿನಲ್ಲಿ ಭಯ ಹೊಂದಿರಬಾರದು. ಪರೀಕ್ಷೆ ಸಮೀಪಿಸುತ್ತಿದ್ದಂತೆ ಮನಸ್ಸು ಹಗುರವಾಗಿಟ್ಟು ಕೊಳ್ಳಬೇಕು. ಈ ವೇಳೆ ಧ್ಯಾನ ಮಾಡುವ ಗುಣ ಬೆಳೆಸಿಕೊಳ್ಳಬೇಕು.

ಎಂಜಿನಿಯರ್‌ ಪ್ರವೇಶ ಪರೀಕ್ಷೆ ಅಂದಮೇಲೆ ಅಲ್ಲಿ ಫಾರ್ಮುಲಾಗಳು ಪ್ರಾಮುಖ್ಯ ವಹಿಸುತ್ತವೆ. ಸುಮ್ಮನೇ ಓದುವುದಕ್ಕಿಂತ ಕೆಲವೊಂದು ಕ್ಲಿಷ್ಟಕರ ವಿಷಯಗಳನ್ನು ಸಣ್ಣ ಸಣ್ಣ ಚೀಟಿಯಲ್ಲಿ ಬರೆದು ಅಧ್ಯಯನ ನಡೆಸಬೇಕು. ಕೆಲವರು ಮನೆಯಲ್ಲೇ ಓದಿನ ವೇಳೆ ಕಪ್ಪು ಹಲಗೆಯ ಮೇಲೆ ಬರೆದು ಮನನ ಮಾಡಿಕೊಳ್ಳುತ್ತಾರೆ. ಇದು ಕೂಡ ಉತ್ತಮ ಓದುವ ವಿಧಾನಗಳಲ್ಲೊಂದು.

ಸಿಇಟಿ ಕೋಚಿಂಗ್‌ ಇದೆ
ಸಿಇಟಿ ಪರೀಕ್ಷೆಗೆ ವಿವಿಧ ಕಾಲೇಜುಗಳಲ್ಲಿ ಸಹಿತ ಕೆಲವೊಂದು ಖಾಸಗಿ ಸಂಸ್ಥೆಗಳು ಕೋಚಿಂಗ್‌ ನೀಡುತ್ತವೆ. ಕೋಚಿಂಗ್‌ ಪಡೆದುಕೊಂಡ ವಿದ್ಯಾರ್ಥಿಗಳು ಉತ್ತಮ ಅಂಕಗಳಿಸಿದ ಉದಾಹರಣೆಗಳು ಸಾಕಷ್ಟಿದೆ. ಇನ್ನು, ಆನ್‌ಲೈನ್‌ ಮುಖೇನವೂ ಸಿಇಟಿ ಕೋಚಿಂಗ್‌ ಪಡೆಯಲು ಸಾಧ್ಯ. ಸಿಇಟಿ ಪರೀಕ್ಷೆಯ ಬಗೆಗಿನ ಮಾಹಿತಿಯನ್ನು ಈಗಾಗಲೇ ಪರೀಕ್ಷೆ ಬರೆದು ಉತ್ತಮ ಅಂಕಗಳಿಸಿದ ಸ್ನೇಹಿತರಲ್ಲಿಯೂ ಪಡೆದು ಕೊಳ್ಳಬಹುದಾಗಿದೆ.

ಪರೀಕ್ಷೆ ಟಿಪ್ಸ್‌
· ಪರೀಕ್ಷೆಯಲ್ಲಿ ಬರೆಯುವಾಗ ಗೊಂದಲ ಬೇಡ
· ನಿರಂತರ ಓದಿನ ನಡು ವೆ ವಿಶ್ರಾಂತಿ ಇರಲಿ.
· ಓದಿದ ವಿಷಯಗಳನ್ನು ಬರೆದಿಟ್ಟುಕೊಳ್ಳಿ, ಫಾರ್ಮುಲಗಳನ್ನು ಬರೆದು ಅಭ್ಯಸಿಸಿ.
· ಎಲ್ಲ ವಿಷಯಗಳಿಗೂ ಸಮಾನ ಆದ್ಯತೆ ಕೊಡಿ
· ಓದಿದ ವಿಷಯಗಳನ್ನು ಪುನರ್‌ಮನನ ಮಾಡಿ
· ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆ ಅವಲೋಕಿಸಿ
· ಪರೀಕ್ಷೆಯ ಜತೆ ಆರೋಗ್ಯ ಮತ್ತು ಆಹಾರದ ಬಗ್ಗೆಯೂ ಗಮನ ನೀಡಿ.

ಗೊಂದಲ ಬೇಡ
ಸಿಇಟಿ ಸಹಿತ ಯಾವುದೇ ಪರೀಕ್ಷೆ ಸಮೀಪಿಸುತ್ತಿದೆ ಎಂದಾದಾಗ ಪರೀಕ್ಷೆಯ ಹಿಂದಿನ ದಿನ ನಿದ್ದೆಬಿಟ್ಟು ಓದಲು ಆರಂಭಿಸುತ್ತಾರೆ. ಪರೀಕ್ಷೆ ಹಿಂದಿನ ದಿನ ಚೆನ್ನಾಗಿ ನಿದ್ದೆ ಮಾಡಿ. ಇದರಿಂದ ಮೆದುಳು ಚುರುಕುಗೊಳ್ಳುತ್ತದೆ. ಅಲ್ಲದೆ, ಪರೀಕ್ಷೆಯನ್ನು ಉತ್ತಮವಾಗಿ ಎದುರಿಸಲು ಸಹಕಾರಿಯಾಗುತ್ತದೆ. ಗೊಂದಲವಿಲ್ಲದೆ ಉತ್ತರ ಬರೆಯಲು ಸಹಕಾರಿಯಾಗುತ್ತದೆ.

ಎ. 29, 30 ಸಿಇಟಿ ಪರೀಕ್ಷೆ
ಈ ಬಾರಿಯ ಸಿಇಟಿ ಪರೀಕ್ಷೆಯು ಎ. 29 ಮತ್ತು 30ರಂದು ನಡೆಯಲಿದೆ. ಸಿಇಟಿ ಪರೀಕ್ಷೆಗೆ ಈಗಾಗಲೇ 1.90 ಲಕ್ಷ ಮಂದಿ ಅಭ್ಯರ್ಥಿಗಳು ತಮ್ಮ ಹೆಸರುಗಳನ್ನು ನೋಂದಣಿ ಮಾಡಿಕೊಂಡಿದ್ದಾರೆ. 1 ಗಂಟೆ 20 ನಿಮಿಷಗಳ ಕಾಲ ಇರುತ್ತದೆ. ಗಣಿತ 60 ಪ್ರಶ್ನೆ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ 120 ಪ್ರಶ್ನೆ ಒಳಗೊಂಡಿರುತ್ತದೆ.

ಸಿಇಟಿ ತಯಾರಿಗೆ ಪೂರಕ ಕೆರಿಯರ್‌ ಲಿಫ್ಟ್ ಕೊಲಾಜ್‌
ಕೆರಿಯರ್‌ ಲಿಫ್ಟ್ ಕೊಲಾಜ್‌ ಆ್ಯಪ್‌ ವಿದ್ಯಾರ್ಥಿಗಳ ಕೆರಿಯರ್‌ಗೆ ಸಹಾಯಕಾರಿ ಆ್ಯಪ್‌. ನೀಟ್‌, ಐಐಟಿ-ಜೆಇಇ, ಗೇಟ್‌ ಮುಂತಾದ ಪರೀಕ್ಷೆಗಳ ತಯಾರಿಗೆ ಸಹಾಯಕವಾಗಿದೆ. ಇದು ಪ್ರಚಲಿತ ವಿಷಯಗಳ ಜತೆಗೆ ಎಲ್ಲ ಮಾಹಿತಿಯನ್ನು ನೀಡುತ್ತದೆ.

ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳ ಕುರಿತು ಮಾಹಿತಿಯಿಲ್ಲದವರಿಗೆ ಈ ಆ್ಯಪ್‌ ಆರಂಭದಿಂದ ಕೊನೆಯವರೆಗೂ ಮಾಹಿತಿ ನೀಡುತ್ತದೆ. ಕೆರಿಯರ್‌ಗೆ ಸಂಬಂಧಪಟ್ಟಂತೆ 150ಕ್ಕೂ ಹೆಚ್ಚು ಮಾಹಿತಿಯನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ನೀಡಿದೆ. ಅದರಲ್ಲಿ ಪರೀಕ್ಷೆಯ ಕುರಿತು, ಪರೀಕ್ಷಾ ಕೇಂದ್ರಗಳ ಕುರಿತು ಎಲ್ಲ ಮಾಹಿತಿ ನೀಡಿದೆ. ಪರೀಕ್ಷೆ ತಯಾರಿಗೆ ಸಹಾಯಕವಾಗುವ ಇದು, ಪ್ರಚಲಿತ ವಿಷಯ, ಜಿಕೆ, ಶಬ್ದಕೋಶ ಮೊದಲಾದ ವಿಷಯಗಳ ಕುರಿತು ಮಾಹಿತಿ ನೀಡುತ್ತದೆ. 10 ಎಂ.ಬಿ. ಇರುವ ಈ ಆ್ಯಪ್‌ ಅನ್ನು 5 ಸಾವಿರಕ್ಕೂ ಹೆಚ್ಚು ಜನರು ಬಳಕೆ ಮಾಡುತ್ತಿದ್ದಾರೆ.

ನವೀನ್‌ ಭಟ್‌, ಇಳಂತಿಲ

ಟಾಪ್ ನ್ಯೂಸ್

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.