ಐದು ದಶಕಗಳಿಂದ ಪಂಪಾಸರೋವರದ ಅರ್ಚಕರಾಗಿದ್ದ ರಾಮಾದಾಸ ಬಾಬಾ ವಿಧಿವಶ
ಬಾಬಾ ವಿಧಿವಶ ಸಾಧು ಸಂತರ ಪರಂಪರೆಯಂತೆ ಬುಧವಾರ ಪಂಪಾ ಸರೋವರದಲ್ಲಿ ಸಮಾಧಿ
Team Udayavani, Aug 16, 2022, 5:19 PM IST
ಗಂಗಾವತಿ: ಇತಿಹಾಸ ಪ್ರಸಿದ್ಧ ಪಂಪಾಸರೋವರದ ಅರ್ಚಕ ರಾಮಾದಾಸ ಬಾಬಾ (95) ಇವರು ಮಂಗಳವಾರ ಮಧ್ಯಾಹ್ನ 3.53ಕ್ಕೆ ವಿಧಿವಶರಾಗಿದ್ದಾರೆ .
5 ದಶಕಗಳ ಕಾಲ ಪಂಪಾಸರೋವರದ ವಿಜಯಲಕ್ಷ್ಮಿ ದೇವಸ್ಥಾನದಲ್ಲಿ ಮುಖ್ಯ ಅರ್ಚಕರಾಗಿ ರಾಮದಾಸ ಬಾಬಾ ಅವರು ಧಾರ್ಮಿಕ ಕಾರ್ಯಗಳನ್ನು ನಿತ್ಯವೂ ಕೈಗೊಳ್ಳುತ್ತಿದ್ದರು. ಬೆಳಿಗ್ಗೆ ಮಧ್ಯಾಹ್ನ ಮತ್ತು ರಾತ್ರಿ ತ್ರಿಕಾಲ ಪೂಜೆ ಮೂಲಕ ವಿಜಯಲಕ್ಷ್ಮಿಯ ಆರಾಧನೆ ಮಾಡುತ್ತಿದ್ದರು.
ಉತ್ತರ ಭಾರತದ ರಾಮದಾಸ ಬಾಬಾ ಅವರು ಯವ್ವನಾವಸ್ಥೆಯಲ್ಲಿ ಪಂಪಾಸರೋವರಕ್ಕೆ ಆಗಮಿಸಿ ಹಿಂದಿನ ಅರ್ಚಕ ಭುಜಂಗ ದಾಸ ಅವರ ಮೂಲಕ ದೀಕ್ಷೆ ಪಡೆದರು ಆನೆಗುಂದಿಯ ರಾಜ ಮನೆತನದ ಹಿರಿಯರು ಮತ್ತು ಪಂಪಾಸರೋವರ ವಿಜಯಲಕ್ಷ್ಮಿ ದೇವಸ್ಥಾನದ ಅಧ್ಯಕ್ಷರಾಗಿದ್ದ ಮಾಜಿ ಶಾಸಕ ತಿರುಮಲದೇವರಾಯ ಅವರ ಅಧ್ಯಕ್ಷತೆಯಲ್ಲಿ ಐವತ್ತು ವರ್ಷಗಳ ಹಿಂದೆ ರಾಮದಾಸ ಬಾಬಾ ಅವರಿಗೆ ಪಂಪಾಸರೋವರದ ಅರ್ಚಕ ಸಾನದ ದೀಕ್ಷೆ ನೀಡಲಾಗಿತ್ತು .ಪ್ರತಿ ವರ್ಷ ದಸರಾ ಸೇರಿದಂತೆ ವಿವಿಧ ವಿಶೇಷ ಸಂದರ್ಭಗಳಲ್ಲಿ ರಾಮದಾಸ ಬಾಬಾ ಅವರು ಪಂಪಾಸರೋವರ ವಿಜಯಲಕ್ಷ್ಮಿ ದೇವಾಲಯದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಉತ್ತರ ಭಾರತದ ಸಾಧು ಸಂತರನ್ನು ಆಹ್ವಾನಿಸಿ ಹೋಮ ಹವನಗಳನ್ನು ನಡೆಸುತ್ತಿದ್ದರು.
ರಾಮದಾಸ ಬಾಬಾ ಅವರ ಅವಧಿಯಲ್ಲಿ ಪಂಪಾಸರೋವರದ ಸರ್ವಾಂಗೀಣ ಅಭಿವೃದ್ಧಿಯಾಗಲಿದೆ.ಮೊದಲಿನಿಂದಲೂ ಆನೆಗೊಂದಿ ರಾಜಮನೆತನದವರು ಪಂಪಾ ಸರೋವರ ಅಂಜನಾದ್ರಿ ಬೆಟ್ಟ ಸೇರಿದಂತೆ ಈ ಭಾಗದ ಹಲವು ಧಾರ್ಮಿಕ ಸಂಸ್ಥೆಗಳಿಗೆ ದೇಣಿಗೆ ದಾಸೋಹ ಇತ್ಯಾದಿ ಕಾರ್ಯಗಳಿಗಾಗಿ ನೆರವು ನೀಡುತ್ತಿದ್ದರು ಜೊತೆಗೆ ಪ್ರತಿನಿತ್ಯವೂ ದೇವರ ಅರ್ಚನೆ ಪೂಜೆ ಗಾಗಿಯೇ ವಿಶೇಷವಾಗಿ ಹಣ ಸಹಾಯ ಮಾಡುತ್ತಿದ್ದರು .ಇದೀಗ ಪಂಪಾಸರೋವರ ಸರ್ಕಾರದ ವಶದಲ್ಲಿದ್ದು ರಾಮದಾಸ ಬಾಬಾ ಅವರು ನಿತ್ಯವೂ ತ್ರಿವಿಧಪೂಜೆ ಮಾಡುತ್ತಿದ್ದರು. ನಿಧನರಾದ ರಾಮದಾಸ ಬಾಬಾ ಅವರ ಅಂತಿಮ ವಿಧಿ ವಿಧಾನಗಳನ್ನು ಸಾಧುಸಂತರ ಪದ್ದತಿಯಂತೆ ಬುಧುವಾರ ಪಂಪಾಸರೋವರದ ನೆರವೇರಿಸಲಾಗುತ್ತದೆ.
ಈಗಾಗಲೇ ದೇವಸ್ಥಾನದ ಮುಖ್ಯಾಧಿಕಾರಿಯಾಗಿರುವ ತಹಸಿಲ್ದಾರ್ ಅವರಿಗೆ ಮಾಹಿತಿ ನೀಡಲಾಗಿದೆ ಸುತ್ತಮುತ್ತಲಿನ ಭಕ್ತರು ರಾಮದಾಸ ಬಾಬಾ ಅವರ ಅಂತಿಮ ದರ್ಶನ ಪಡೆಯಲು ವ್ಯವಸ್ಥೆ ಕೈಗೊಳ್ಳಲಾಗುವುದು ಎಂದು ಆನೆಗುಂದಿ ರಾಜಮನೆತನದ ಶ್ರೀಮತಿ ಲಲಿತಾರಾಣಿ ಶ್ರೀರಂಗದೇವರಾಯಲು ಉದಯವಾಣಿಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ
Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bengaluru: ಪ್ರೀತಿಸಿದವಳು ದೂರಾಗಿದ್ದಕ್ಕೆ ಯುವಕ ಆತ್ಮಹತ್ಯೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Bengaluru: ಟ್ಯೂಷನ್‌ಗೆ ಬರುತ್ತಿದ್ದ ಅಪ್ರಾಪ್ತ ಬಾಲಕಿ ಜೊತೆ ಶಿಕ್ಷಕ ಪರಾರಿ
Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್ ವಿರುದ್ಧ ವರ್ಮಾ
Divorce Rumours: ಚಹಾಲ್ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.