ಬದಲಾವಣೆ: ಸಾಮಾಜಿಕ ಸಶಕ್ತೀಕರಣಕ್ಕೆ ‘ಕೃತಕ ಬುದ್ಧಿಮತ್ತೆ’
Team Udayavani, Oct 5, 2020, 6:53 AM IST
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ನೀತಿ ಆಯೋಗವು ಅಕ್ಟೋಬರ್ 5ರಿಂದ 9ರ ವರೆಗೆ ಜಾಗತಿಕ ಕೃತಕ ಬುದ್ಧಿಮತ್ತೆ ಶೃಂಗಸಭೆ RAISE 2020 ಆಯೋಜಿಸಿದ್ದು. ಪ್ರಧಾನ ಮಂತ್ರಿ ಮೋದಿ ಅವರು ಈ ವೈಶ್ವಿಕ ವರ್ಚುವಲ್ ಶೃಂಗಸಭೆಯನ್ನು ಉದ್ಘಾಟಿಸಲಿದ್ದಾರೆ. ತನ್ನಿಮಿತ್ತ ಲೇಖನ…
ಡಿಜಿಟಲ್ ತಂತ್ರಜ್ಞಾನ ಈಗ ಜನಸಾಮಾನ್ಯರಿಗೂ ಸುಲಭವಾಗಿ ಲಭ್ಯವಾಗುತ್ತಿದೆ. ಡಿಜಿಟಲ್ ಇಂಡಿಯಾದ ಯಶಸ್ಸಿನಿಂದಾಗಿ ಎಲ್ಲರನ್ನೂ ಒಳ ಗೊಂಡಂಥ ಪ್ರಗತಿ, ಉತ್ತಮ ಆಡಳಿತ ಮತ್ತು ಡಿಜಿಟಲ್ ತಂತ್ರಜ್ಞಾನಗಳಲ್ಲಿ ಹೊಸ ಜಾಗತಿಕ ಮಾನ ದಂಡಗಳು ನಿಗದಿಯಾಗಿವೆ.
ತ್ವರಿತವಾಗಿ ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ನಿರಂತರ ವಿಕಸನ, ಸಮರ್ಪಕ ನಿಯಂತ್ರಕ ಕ್ರಮಗಳು ಮತ್ತು ಉದ್ಭವಿಸಬಹುದಾದ ಸವಾಲುಗಳನ್ನು ಎದುರಿಸುವ ವ್ಯವಸ್ಥೆಯ ಅಗತ್ಯವಿದೆ. ಕೃತಕ ಬುದ್ಧಿಮತ್ತೆಯ ಉದಯವು ಕೇವಲ ಬದಲಾವಣೆ ಮಾತ್ರವಲ್ಲ, ತಂತ್ರಜ್ಞಾನದ ಕ್ಷೇತ್ರದಲ್ಲಿ ಅದೊಂದು ಮಾದರಿಯಾದ ಪ್ರಮುಖ ಪರಿವರ್ತನೆಯಾಗಿದೆ. ಇದನ್ನು ಸಮಗ್ರವಾಗಿ ನೋಡಬೇಕು ಮತ್ತು ಮನುಕುಲದ ಒಳಿತಿಗಾಗಿ ಬಳಸಿಕೊಳ್ಳಬೇಕು.
ಯಾವುದೇ ಕೃತಕ ಬುದ್ಧಿಮತ್ತೆ ವ್ಯವಸ್ಥೆಗೆ ದತ್ತಾಂಶವೇ ಮೂಲಧಾರವಾಗಿದೆ. 700 ದಶಲಕ್ಷಕ್ಕೂ ಹೆಚ್ಚು ಇಂಟರ್ನೆಟ್ ಬಳಕೆದಾರರನ್ನು ಹೊಂದಿರುವ ಭಾರತ ದಲ್ಲಿ 1.21 ಶತಕೋಟಿ ಫೋನ್ ಬಳಕೆದಾರರು ಮತ್ತು 1.26 ಶತಕೋಟಿ ಆಧಾರ್ ಬಳಕೆದಾರರು ಪ್ರತೀದಿನ ಭಾರಿ ಪ್ರಮಾಣದ ದತ್ತಾಂಶವನ್ನು ಉತ್ಪಾದಿಸುತ್ತಿದ್ದಾರೆ.
ವಿಶ್ವದ ಕೆಲವು ಪ್ರಮುಖ ಇಂಟರ್ನೆಟ್ ಸಂಸ್ಥೆಗಳಿಗೆ ಭಾರತ ಅತೀದೊಡ್ಡ ಬಳಕೆದಾರರ ತಾಣವಾಗಿದೆ. ಭಾರತವು ಜಗತ್ತಿನ ಅತ್ಯಂತ ಉತ್ತಮ ಇಂಟರ್ನೆಟ್ ಸೇವೆಗಳನ್ನು ಸಹ ಒದಗಿಸುತ್ತಿದೆ. ಈಗಾಗಲೇ ಜಾಗತಿಕವಾಗಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರವು ಸಮರ್ಥ ಮಾನವ ಸಂಪನ್ಮೂಲಗಳ ಲಭ್ಯತೆಯನ್ನು ಖಚಿತ ಪಡಿಸಿದೆ. ಈ ಎಲ್ಲ ಅಂಶಗಳು ತಂತ್ರಜ್ಞಾನದ ಬಳಕೆ ಯನ್ನು ಸದಾ ಪ್ರೋತ್ಸಾಹಿಸುವ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಕೃತಕ ಬುದ್ಧಿಮತ್ತೆ ಕ್ರಾಂತಿಗೆ ಭಾರತವನ್ನು ಸಿದ್ಧಗೊಳಿಸುತ್ತಿವೆ.
ಹಲವಾರು ಕ್ರಮಗಳು
ಭಾರತ ಸರಕಾರವು 2018ರಲ್ಲಿ ರಾಷ್ಟ್ರೀಯ ಕೃತಕ ಬುದ್ಧಿಮತ್ತೆ ಕಾರ್ಯತಂತ್ರವನ್ನು ಪ್ರಕಟಿಸಿತು. ಅಂದಿ ನಿಂದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾ ಲಯವು ದೇಶದಲ್ಲಿ ಸದೃಢವಾದ ಕೃತಕ ಬುದ್ಧಿಮತ್ತೆ ವ್ಯವಸ್ಥೆಯ ಅಭಿವೃದ್ಧಿಗೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಸರಕಾರದ ಇಲಾಖೆಗಳಿಗೆ ತಜ್ಞರ ದತ್ತಾಂಶ ವಿಶ್ಲೇಷಣ ಸೇವೆಗಳನ್ನು ಒದಗಿಸಲು ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಡೇಟಾ ಅನಾಲಿಟಿಕ್ಸ್ (ಸಿಇಡಿಎ) ಸ್ಥಾಪಿಸಲಾಗಿದೆ. ಐಟಿ ಉದ್ಯಮದ ಸಹಯೋಗ ದೊಂದಿಗೆ ಬೆಂಗಳೂರು, ಗಾಂಧಿನಗರ, ಗುರುಗ್ರಾಮ ಮತ್ತು ವಿಶಾಖಪಟ್ಟಣದಲ್ಲಿ ಉತ್ಕೃಷ್ಟತ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಇವುಗಳು ಈವರೆಗೆ 113 ಸ್ಟಾರ್ಟ್ ಅಪ್ ಗಳ ಆರಂಭಕ್ಕೆ ಕಾರಣವಾಗಿವೆ.
29 ಬೌದ್ಧಿಕ ಆಸ್ತಿಗಳನ್ನು ಉತ್ಪಾದಿಸಲಾಗಿದೆ ಮತ್ತು 56 ಕ್ಷೇತ್ರೀಯ ಪರಿಹಾರಗಳನ್ನು ಅಭಿವೃದ್ಧಿಪಡಿಸಲಾಗಿದೆ. ನಾಲ್ಕು ಲಕ್ಷ ವೃತ್ತಿಪರರಿಗೆ ಪ್ರಯೋಜನ ಕಲ್ಪಿಸುವ ಗುರಿಯೊಂದಿಗೆ ನೂತನ ತಂತ್ರಜ್ಞಾನಗಳಲ್ಲಿ ಮತ್ತು ಹೊಸ ಉದ್ಯೋಗ ಗಳಲ್ಲಿ ವೃತ್ತಿಪರರನ್ನು ಕುಶಲಗೊಳಿಸಲು ಮತ್ತು ಮರು ಕೌಶಲಗೊಳಿಸಲು ಫ್ಯೂಚರ್ ಸ್ಕಿಲ್ಸ್ ಪ್ರೈಮ್ ಆನ್ಲ çನ್ ಸಾಮರ್ಥ್ಯ ವೃದ್ಧಿ ವೇದಿಕೆಯನ್ನು ಪ್ರಾರಂಭಿಸಲಾಗಿದೆ.
ಕೃತಕ ಬುದ್ಧಿಮತ್ತೆಯಲ್ಲಿ ಸಹಯೋಗ ಮತ್ತು ಜ್ಞಾನ ಹಂಚಿಕೆಗಾಗಿ ರಾಷ್ಟ್ರೀಯ ಕೃತಕ ಬುದ್ಧಿಮತ್ತೆ ಪೋರ್ಟಲ್ ಅನ್ನು ಒನ್ ಸ್ಟಾಪ್ ಡಿಜಿಟಲ್ ವೇದಿಕೆಯಾಗಿ ಪ್ರಾರಂಭಿಸಲಾಗಿದೆ. ಕೇಂದ್ರ ಸಂಪುಟದ ಅನುಮೋದನೆ ಪಡೆದ ಅನಂತರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಕೃತಕ ಬುದ್ಧಿಮತ್ತೆ ಕುರಿತ ರಾಷ್ಟ್ರೀಯ ಕಾರ್ಯಕ್ರಮವನ್ನು ಶೀಘ್ರದಲ್ಲೇ ಪ್ರಾರಂಭಿಸಲಿದೆ.
ಡಿಜಿಟಲ್ ವೇದಿಕೆಗಳ ಸ್ಥಾಪನೆಗಾಗಿ…
ಸಾರ್ವಜನಿಕ ಡಿಜಿಟಲ್ ವೇದಿಕೆಗಳಾದ ಆಧಾರ್, ಯುಪಿಐ, ಜಿಎಸ್ಟಿಎನ್ ಮತ್ತು ಜಿಇಎಂಗಳ ಪ್ರಯೋಜ ನಗಳನ್ನು ಮನಗಂಡಿರುವ ಸರಕಾರ , ಆರೋಗ್ಯ, ಕೃಷಿ, ಶಿಕ್ಷಣ, ಲಾಜಿಸ್ಟಿಕÕ…, ಭಾಷಾ ಅನುವಾದ ಮತ್ತಿತರ ಕ್ಷೇತ್ರಗಳಲ್ಲಿ ಹಲವಾರು ಸಾರ್ವಜನಿಕ ಡಿಜಿಟಲ್ ವೇದಿಕೆಗಳ ಸ್ಥಾಪನೆಯನ್ನು ಪ್ರೋತ್ಸಾಹಿಸಲು ನಿರ್ಧರಿಸಿದೆ. 2020ರ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಮಂತ್ರಿಯವರು ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಕಾರ್ಯಕ್ರಮವನ್ನು ಘೋಷಿಸಿದ ಅನಂತರ ಆರೋಗ್ಯಕ್ಕಾಗಿ ಸಾರ್ವಜನಿಕ ಡಿಜಿಟಲ್ ವೇದಿಕೆಯ ಕೆಲಸ ಪ್ರಾರಂಭವಾಗಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಶೈಕ್ಷಣಿಕ ಸಂಸ್ಥೆಗಳು, ಸಂಶೋಧನ ಸಂಸ್ಥೆಗಳು, ಉದ್ಯಮ ಮತ್ತು ಸ್ಟಾರ್ಟ್ ಅಪ್‌ಗ್ಳ ಸಹಯೋಗದೊಂದಿಗೆ ಕೃತಕ ಬುದ್ಧಿಮತ್ತೆ ಆಧಾರಿತ ಸಹಜ ಭಾಷಾ ಅನುವಾದ ಮಿಷನ್ ಅನ್ನು ಅಭಿವೃದ್ಧಿಪಡಿಸುತ್ತಿದೆ, ಇದು ಭಾರತೀಯ ಭಾಷೆಗಳಲ್ಲಿ ಧ್ವನಿಯ ಮೂಲಕ ಇಂಟರ್ನೆಟ್‌ಗೆ ದಾರಿ ಮಾಡಿ ಕೊಡುತ್ತದೆ. ಇದೇ ರೀತಿಯಾಗಿ, ಉದ್ಯಮ, ಶೈಕ್ಷಣಿಕ ಕ್ಷೇತ್ರ ಮತ್ತು ಸ್ಟಾರ್ಟ್‌ಅಪ್ ಗಳ ಸಹಯೋಗದೊಂದಿಗೆ ಭಾರತ ಸರಕಾರದ ವಿವಿಧ ಸಚಿವಾಲಯಗಳು ಕ್ಷೇತ್ರೀಯ ಸಾರ್ವಜನಿಕ ಡಿಜಿಟಲ್ ವೇದಿಕೆಗಳನ್ನು ಅಂತಿಮಗೊಳಿಸುತ್ತಿವೆ.
ಈ ವೇದಿಕೆಗಳು ಬಳಕೆದಾರರ ಡೇಟಾ ಸುರಕ್ಷತೆ ಮತ್ತು ಗೌಪ್ಯತೆಯನ್ನು ಕಾಪಾಡಲು ಕೃತಕ ಬುದ್ಧಿಮತ್ತೆ ಆಧಾರಿತ ಸೇವೆಗಳನ್ನು ನೀಡುತ್ತವೆ. ಅಲ್ಲದೇ, ಭಾರತೀಯ ಸ್ಟಾರ್ಟ್ ಅಪ್ ಗಳಿಗೆ ಅಪಾರ ಅವಕಾಶಗಳನ್ನು ಸಹ ಸೃಷ್ಟಿಸುತ್ತವೆ.
ಹೊಸ ಉದ್ಯೋಗಗಳ ಸೃಷ್ಟಿಗೆ ಕೃತಕ ಬುದ್ಧಿಮತ್ತೆಯು ಅಸ್ತಿತ್ವದಲ್ಲಿರುವ ಕೆಲವು ಉದ್ಯೋಗಗಳ ಪಾತ್ರಗಳನ್ನು ಬದಲಾಯಿಸಬಹುದು. ಆದರೆ ಇದು ಹಲವಾರು ಹೊಸ ಉದ್ಯೋಗಗಳನ್ನೂ ಸಹ ಸೃಷ್ಟಿಸುತ್ತದೆ. ಸಾಮಾಜಿಕ ಅಸಮಾನತೆ ಉಲ್ಬಣವಾಗದಂತೆ ಜಗತ್ತು ಈ ಸ್ಥಿತ್ಯಂತರವನ್ನು ಪರಿಣಾಮ ಕಾರಿಯಾಗಿ ನಿರ್ವಹಿಸುವ ಅಗತ್ಯವಿದೆ. ಫ್ಯೂಚರ್ ಸ್ಕಿಲ್ಸ್ ಪ್ರೈಮ್‌ನಂತಹ ಉಪಕ್ರಮಗಳ ಮೂಲಕ, ಐಟಿ ಕ್ಷೇತ್ರದಲ್ಲಿ ಭವಿಷ್ಯದ ಉದ್ಯೋಗಗಳಿಗಾಗಿ ಭಾರತವು ತನ್ನ ಉದ್ಯೋಗಿಗಳನ್ನು ಮರು ಕೌಶಲಗೊಳಿಸುವ ಕೆಲಸವನ್ನು ಈಗಾಗಲೇ ಪ್ರಾರಂಭಿಸಿದೆ.
ಸಾಮಾಜಿಕ ಸಶಕ್ತೀಕರಣಕ್ಕಾಗಿ ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆಯ ಭಾರತದ ಮಾದರಿಯು, ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳಿಂದಾಗಿ ಉದ್ಯೋಗದಿಂದ ಹೊರಗುಳಿಯುವ ಮತ್ತು ಅನಾವಶ್ಯಕ ಹೊರೆಯಂತಹ ಕಾಳಜಿಯನ್ನು ಬಗೆಹರಿಸುವ ಮೂಲಕ ಜನ ಸಾಮಾನ್ಯರ ಒಟ್ಟಾರೆ ಬೆಳವಣಿಗೆ ಮತ್ತು ಸಶಕ್ತೀಕರಣಕ್ಕಾಗಿ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತದೆ.
ಕೃತಕ ಬುದ್ಧಿಮತ್ತೆಯು ಸಾಮಾಜಿಕ ಸಶಕ್ತೀಕರಣಕ್ಕೆ, ವಿಶೇಷವಾಗಿ ಸಮಾಜದ ಬಡ ಮತ್ತು ದುರ್ಬಲ ವರ್ಗಗಳನ್ನು ಸಶಕ್ತಗೊಳಿಸಲು ಕಾರಣವಾಗಬೇಕು. ಜನಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸುವ ರೀತಿಯಲ್ಲಿ ಅದನ್ನು ಅಭಿವೃದ್ಧಿಪಡಿಸಬೇಕು. ಆರೋಗ್ಯ, ಕೃಷಿ, ಶಿಕ್ಷಣ, ಲಾಜಿಸ್ಟಿಕ್ಸ್ ಮತ್ತು ಭಾಷೆಗಳಂತಹ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ವ್ಯಾಪಕವಾಗಿ ಬಳಸುವ ಭಾರತದ ದೃಷ್ಟಿಕೋನವು ಸಾಮಾಜಿಕ ಸಶಕ್ತೀಕರಣಕ್ಕಾಗಿ ಕೃತಕ ಬುದ್ಧಿಮತ್ತೆ ಬಳಸುವ ಬದ್ಧತೆಗನುಗುಣವಾಗಿದೆ.
ಕೃತಕ ಬುದ್ಧಿಮತ್ತೆಯ ಅಭಿವೃದ್ಧಿಯಲ್ಲಿ ದತ್ತಾಂಶ ಸಂಪನ್ಮೂಲಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದಾಗ್ಯೂ, ದತ್ತಾಂಶದ ದುರುಪಯೋಗ ಮತ್ತು ಬಳಕೆದಾರರ ಗೌಪ್ಯತೆಯ ಉಲ್ಲಂಘನೆಯ ಕಳವಳ ಗಳನ್ನು ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳು ಸಮರ್ಪಕವಾಗಿ ಪರಿಹರಿಸಬೇಕು. ಭಾರತ ಸರಕಾರವು ಈಗಾಗಲೇ ಸಂಸತ್ತಿನಲ್ಲಿ ವೈಯಕ್ತಿಕ ದತ್ತಾಂಶ ಸುರಕ್ಷತ ಮಸೂದೆಯನ್ನು ಮಂಡಿಸಿದೆ.
ಇದು ಡಿಜಿಟಲ್ ಯುಗದಲ್ಲಿ ಬಳಕೆದಾರರ ಗೌಪ್ಯತೆಯನ್ನು ರಕ್ಷಿಸುತ್ತದೆ ಮತ್ತು ದತ್ತಾಂಶ ಆರ್ಥಿಕತೆಯ ಅಭಿವೃದ್ಧಿಗೂ ಸಹಕಾರಿ ಯಾಗಿದೆ. ಭಾರತದ ನಾಗರಿಕರ ದತ್ತಾಂಶವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಡಿಜಿಟಲ್ ಏಕಸ್ವಾಮ್ಯವನ್ನು ಸೃಷ್ಟಿಸುವ ಯಾವುದೇ ಪ್ರಯತ್ನಕ್ಕೆ ಭಾರತ ಸರಕಾರವು ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದು.
ಕೆಲವು ಮೊಬೈಲ್ ಆ್ಯಪ್ಲಿಕೇಶನ್‌ಗಳ ವಿರುದ್ಧ ಕೈಗೊಂಡ ಕ್ರಮವು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು ದೇಶದ ನಾಗರಿಕರ ದತ್ತಾಂಶ ಗೌಪ್ಯತೆ ಮತ್ತು ಭಾರತದ ದತ್ತಾಂಶ ಸಾರ್ವಭೌಮತ್ವವನ್ನು ರಕ್ಷಿಸಲು ಬದ್ಧವಾಗಿದೆ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತದೆ.
ಭಾರತದ ಅತಿದೊಡ್ಡ ಕೃತಕ ಬುದ್ಧಿಮತ್ತೆ ಶೃಂಗಸಭೆ RAISE 2020, ಮನುಕುಲಕ್ಕೆ ಜವಾಬ್ದಾರಿಯಾಗಿರುವ ಮತ್ತು ಸಾಮಾಜಿಕ ಸಶಕ್ತೀಕರಣಕ್ಕೆ ಬದ್ಧವಾಗಿರುವ ಕೃತಕ ಬುದ್ಧಿಮತ್ತೆ ವ್ಯವಸ್ಥೆಯ ಅಭಿವೃದ್ಧಿಗೆ ಜಾಗತಿಕ ಸಹಯೋಗವನ್ನು ಬಯಸುತ್ತದೆ. RAISE 2020ರಲ್ಲಿ ನಿಮ್ಮನ್ನು ಎದುರುಗೊಳ್ಳಲು ಕಾತುರನಾಗಿದ್ದೇನೆ.
– ರವಿಶಂಕರ್ ಪ್ರಸಾದ್, ಕೇಂದ್ರ ಎಲೆಕ್ಟ್ರಾನಿಕ್ಸ್ -ಮಾಹಿತಿ ತಂತ್ರಜ್ಞಾನ ಸಚಿವರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.