Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ
Team Udayavani, Nov 24, 2024, 3:47 PM IST
ಯಾವುದೇ ನಗರ ಎಷ್ಟೇ ಅಭಿವೃದ್ಧಿ ಹೊಂದಿದರೂ, ಸೌಕರ್ಯ ಗಳನ್ನು ಒಳ ಗೊಂಡಿದ್ದರೂ ಅದು ಬದುಕಲು ಯೋಗ್ಯ ಎನಿಸುವುದು ಕಸದ ಸೂಕ್ತ ವಿಲೇವಾರಿ ಆದಾಗ ಮಾತ್ರ. ಆದರೆ ಅಂಥಹ ಪ್ರದೇಶಗಳು ಇಂದು ಮರೀಚಿಕೆಯಾಗಿವೆ.
ಇಂದು ಕಸದ ವಿಲೇವಾರಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಬೆಳೆಯುತ್ತಿದ್ದು ಇದರಿಂದ ಗೃಹ ಬಳಕೆ ತ್ಯಾಜ್ಯಗಳ ಪ್ರಮಾಣವು ಹೆಚ್ಚಾಗುತ್ತಿದ್ದು ವಿಲೇವಾರಿ ಸಮಸ್ಯೆ ದ್ವಿಗುಣಗೊಳ್ಳುತ್ತಿದೆ.
ನಗರದ ಪ್ರಮುಖ ರಸ್ತೆ, ವಿವಿಧ ವೃತ್ತ ಮಾರುಕಟ್ಟೆ, ಖಾಲಿ ನಿವೇಶನ, ಕೊಳಗೇರಿ ಪ್ರದೇಶಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿಯಮಿತವಾಗಿ ತ್ಯಾಜ್ಯ ವಿಲೇವಾರಿಯಾಗದ ಕಾರಣ ಅವು ರೋಗ ಹರಡುವ ತಾಣಗಳಾಗಿ ಮಾರ್ಪಡುಗೊಂಡಿವೆ.
ಕಸವನ್ನು ಎಲ್ಲೆಂದರಲ್ಲಿ ಸುರಿಯುವುದೇ ನಮ್ಮವರ, ನಮ್ಮ ಸುತ್ತ-ಮುತ್ತಲಿನ ಜನರ ಕೆಲಸವಾಗಿದೆ. ಇದು ನಮ್ಮ ನಗರ ಅಥವಾ ಇದು ನಮ್ಮ ಪ್ರದೇಶ ಎನ್ನುವ ಅಭಿಮಾನ ಮತ್ತು ಸಾಮಾಜಿಕ ಕಾಳಜಿ ಇಲ್ಲದಾಗಿದೆ. ಈ ಬಗ್ಗೆ ಯಾವುದೇ ಸ್ಥಳೀಯ ಸಂಸ್ಥೆಗಳು ಜನ ಜಾಗ್ರತಿ ಮೂಡಿಸುವುದಾಗಲಿ, ಜನ ಎಚ್ಚೆತ್ತುಕೊಳ್ಳುವಂತೆ ದಂಡ ವಿಧಿಸುವ ಕೆಲಸವನ್ನು ಕರಾರುವಕ್ಕಾಗಿ ಮಾಡುತ್ತಿಲ್ಲ. ಇದರಿಂದ ಹೇಗೆ ಮಾಡಿದರೂ ಸರಿ “ನಮ್ಮಪ್ಪನ ಗಂಟೇನು ಹೋಯ್ತು” ಎಂಬ ಮನೋಭಾವ ಬೆಳೆಸಿಕೊಂಡಿದ್ದಾರೆ.
ಕೆಲವು ಪ್ರದೇಶಗಳಲ್ಲಿ ಕೊಳಚೆ ತಿಂದು ಪ್ರದೇಶವನ್ನು ಸ್ವಲ್ಪ ಮಟ್ಟಿಗೆ ಸುಧಾರಿಸಲಿ ಎಂದು ತಂದು ಬಿಟ್ಟ ಹಂದಿಗಳು ಕಸಗಳನ್ನು ಚೆಲ್ಲಾಪಿಲ್ಲಿ ಮಾಡಿ ಗಬ್ಬು ನಾರುವಂತೆ ಮಾಡಿವೆ. ಇದರಲ್ಲಿ ಈ ಮೂಖ ಪ್ರಾಣಿಯದ್ದೇನೂ ತಪ್ಪಿಲ್ಲ. ವಿವೇಚನಶೀಲನಾದ ಮಾನವನಲ್ಲಿಯೇ ತನ್ನ ಸುತ್ತ-ಮುತ್ತಲಿನ ಪರಿಸರ ಸ್ವತ್ಛವಾಗಿಡಬೇಕೆಂಬ ಮನೋಭಾವ ಇಲ್ಲದಿರುವಾಗ ಪ್ರಾಣಿಗಳಿಂದ ಇದನ್ನು ಬಯಸುವುದು ತಪ್ಪು.
ತ್ಯಾಜ್ಯಗಳ ಸರಿಯಾದ ವಿಲೇವಾರಿ ಮಾಡದ ಕಾರಣ ಕೇವಲ ಅಲ್ಲಿಯ ಪ್ರದೇಶ ಮಾತ್ರವಲ್ಲದೇ ಸುತ್ತ-ಮುತ್ತಲಿನ ಪ್ರದೇಶವು ಇದರ ದುರ್ವಾಸನೆಯಿಂದ ಬದುಕಲು ಯೋಗ್ಯವಾಗಿಲ್ಲವಾಗಿದೆ. ಇದೇ ಮಾತ್ರವಲ್ಲದೆ ಪ್ಲಾಸ್ಟಿಕ್‌ನಂತಹ ಕರಗಿ ಹೋಗದ ಕಸಗಳಲ್ಲಿ ನಿಂತ ನೀರಿನಿಂದ ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯಾ ಸೇರಿ ಹಲವು ಸಾಂಕ್ರಾಮಿಕ ರೋಗಗಳನ್ನು ಹರಡುವ ಕ್ರಿಮಿ-ಕೀಟಾಣುಗಳು ಉತ್ಪತ್ತಿಯಾಗುತ್ತಿವೆ.
ಈ ಸಮಸ್ಯೆಗಳ್ಳನ್ನು ಜನರೆಲ್ಲ ಒಟ್ಟಾದರೆ ಸುಧಾರಣೆ ಮಾಡಬಹುದು. ಸಾರ್ವಜನಿಕ ಪ್ರದೇಶಗಳಲ್ಲಿ ಹಸಿ ಮತ್ತು ಒಣ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಹಾಕಲು ದೊಡ್ಡ ಕಸದ ಬುಟ್ಟಿಗಳನ್ನು ಅಳವಡಿಸಬೇಕು. ಪ್ರಮುಖ ಪ್ರದೇಶಗಳಲ್ಲಿ ಹಾಗೂ ಖಾಲಿ ನಿವೇಶನಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಎಲ್ಲೆಂದರಲ್ಲಿ ಕಸ ಎಸೆಯುವ ಜನರಿಗೆ ಕಡ್ಡಾಯವಾಗಿ ದಂಡ ವಿಧಿಸಿ ಜಾಗೃತಿ ಮೂಡಿಸಬೇಕು. ಜನ ಹಸಿ ಹಾಗೂ ಒಣಕಸ ಮನೆಯಲ್ಲಿಯೇ ವಿಂಗಡಿಸುವಂತೆ ಸೂಚಿಸಬೇಕು.
ಸ್ಥಳೀಯ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪಟ್ಟಣದ ಸ್ವತ್ಛತೆಯನ್ನು ಕಾಪಾಡಲು ತಿಂಗಳಿಗೊಮ್ಮೆ ಊರಿನಲ್ಲಿ ಸ್ವಚ್ಚತ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು. ಈ ಮೂಲಕ ಜನರನ್ನು ಸ್ವಚ್ಚ ಪರಿಸರದೆಡೆಗೆ ಪ್ರೋತ್ಸಾಹಿಸಬೇಕು. ಮಲೇರಿಯಾ, ಚಿಕನ್ ಗುನ್ಯಾದಂತದ ಸಾಂಕ್ರಾಮಿಕ ರೋಗಗಳ ಬಗ್ಗೆ ಬೀದಿ ನಾಟಕಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು. ಸಣ್ಣ ವಿಷಯಗಳನ್ನು ನಿರ್ಲಕ್ಷಿಸದೆ ಗ್ರಾಮಸ್ಥರು ಒಂದು ಗೂಡಿ ಕೆಲಸ ಮಾಡಬೇಕು.
ಇದಲ್ಲದೇ ಜನರನ್ನು ಎಚ್ಚರಿಸುವ ಹಾಗೂ ಸಮರ್ಪಕ ಕಸದ ವಿಲೇವಾರಿ ಮಾಡುವ ಕೆಲಸವನ್ನು ಸ್ಥಳೀಯ ಆಡಳಿತ ತ್ವರಿತಗತಿಯಲ್ಲಿ ಮಾಡಬೇಕು. ನಗರ ಪ್ರದೇಶಗಳಲ್ಲಿ ಕಸದ ವಿಲೇವಾರಿ ವಾಹನಗಳ ಸಂಖ್ಯೆ ಹೆಚ್ಚಿಸಬೇಕು. ಮನೆ ಮನೆಗೆ ಒಣಕಸ ಮತ್ತು ಹಸಿಕಸ ವಿಂಗಡಿಸುವ ಬುಟ್ಟಿ ನೀಡಿ ಜನರನ್ನು ಪ್ರೋತ್ಸಾಹಿಸಬೇಕು.ಈ ಹಲವು ಕಾರ್ಯಗಳ ಮೂಲಕ ಜನರಲ್ಲಿ ಕಸದ ಸೂಕ್ತ ವಿಲೇವಾರಿಯ ಮಹತ್ವವನ್ನು ತಿಳಿಸುವುದು. ಮುಂಬರುವ ಪೀಳಿಗೆಗಳಿಗಾಗಿ ಸ್ವಚ್ಚಂದವಾದ ಪರಿಸರ ನಿರ್ಮಾಣಕ್ಕೆ ಜನರನ್ನು ಸಜ್ಜುಗೊಳಿಸುವುದು. ಆಗ ಮಾತ್ರ ನಾವೆಲ್ಲ ಒಳ್ಳೆಯ, ಆರೋಗ್ಯಕರ ಜೀವನವನ್ನು ನಡೆಸಲು ಸಾಧ್ಯ.
-ವಾಣಿ ದಾಸ್
ಎಂ.ಎಂ., ಮಹಾವಿದ್ಯಾಲಯ ಶಿರಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.