Putin: ಉಕ್ರೈನ್ ವಿಚಾರದಲ್ಲಿ ಪ್ರಧಾನಿ ಮೋದಿ ನಿಲುವು ಹೊಗಳಿದ ರಷ್ಯಾ ಅಧ್ಯಕ್ಷ ಪುಟಿನ್
ಬ್ರಿಕ್ಸ್ ಮೈತ್ರಿ ಜತೆ ಸೇರಿಕೊಳ್ಳಲು ಹೊಸ ದೇಶಗಳಿಗೆ ಬಾಗಿಲು ತೆರೆದಿದೆ
Team Udayavani, Oct 19, 2024, 4:00 PM IST
ಮಾಸ್ಕೋ(ರಷ್ಯಾ): ಬ್ರಿಕ್ಸ್ ಶೃಂಗದ ಮೈತ್ರಿ ದೇಶಗಳ ಕುರಿತು ಮಾತನಾಡಿದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಹೊಗಳಿರುವುದಾಗಿ ವರದಿ ತಿಳಿಸಿದೆ.
ವಿದೇಶಿ ಪತ್ರಕರ್ತರ ಜತೆ ನಡೆಸಿದ ಸಂವಹನದಲ್ಲಿ ಬ್ರಿಕ್ಸ್ ಪಾತ್ರ ಮತ್ತು ಉಕ್ರೈನ್ ಯುದ್ಧ ಸೇರಿದಂತೆ ಭೌಗೋಳಿಕ ವಿಚಾರಗಳ ಬಗ್ಗೆ ವ್ಲಾದಿಮಿರ್ ಪುಟಿನ್ ಮಾತನಾಡಿರುವುದಾಗಿ ವರದಿ ವಿವರಿಸಿದೆ.
ಬ್ರಿಕ್ಸ್ ಶೃಂಗ ಪಾಶ್ಚಾತ್ಯ ವಿರೋಧಿ ಸಂಘವಲ್ಲ, ಆದರೆ ಅದರ ಹೊರತಾಗಿಯೂ ಭಾರತದ ನಿಲುವಿನ ಬಗ್ಗೆ ಉಲ್ಲೇಖಿಸಿದ ಪುಟಿನ್, ಉಕ್ರೈನ್ ಯುದ್ಧದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಮತೋಲನದ ನಿರ್ಧಾರದ ಬಗ್ಗೆ ಶ್ಲಾಘಿಸಿದ್ದರು.
ಬ್ರಿಕ್ಸ್ ಮೈತ್ರಿ ಜತೆ ಸೇರಿಕೊಳ್ಳಲು ಹೊಸ ದೇಶಗಳಿಗೆ ಬಾಗಿಲು ತೆರೆದಿದೆ ಎಂದು ಪುಟಿನ್ ಈ ಸಂದರ್ಭದಲ್ಲಿ ಹೇಳಿದರು. ಅಷ್ಟೇ ಅಲ್ಲ ಬ್ರಿಕ್ಸ್ ಮೈತ್ರಿ ಹೊಂದಿರದ ರಾಷ್ಟ್ರಗಳು ಕೂಡಾ ಆರ್ಥಿಕವಾಗಿ ಲಾಭ ಪಡೆಯಲಿವೆ ಎಂದು ತಿಳಿಸಿದ್ದಾರೆ.
ರಷ್ಯಾ ಮತ್ತು ಉಕ್ರೈನ್ ನಡುವಿನ ಯುದ್ಧ ಮುಂದುವರಿದಿರುವ ಕುರಿತು ಕೇಳಿದ ಪ್ರಶ್ನೆಗೆ, ಅಮೆರಿಕ ಹಾಗೂ ಪಾಶ್ಚಾತ್ಯ ದೇಶಗಳ ವಿರುದ್ಧ ಕಟುವಾಗಿ ಟೀಕಿಸಿದ್ದು, ಭಾರತದ ಸಮತೋಲನದ ನಿಲುವಿಗೆ ಪುಟಿನ್ ಶ್ಲಾಘನೆ ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.