ಪುತ್ತೂರು ಬೆಡಿ; ಬ್ರಹ್ಮರಥೋತ್ಸವ ಸಂಪನ್ನ

Team Udayavani, Apr 18, 2019, 6:00 AM IST

10

ನಗರ: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಯ ಪ್ರಯುಕ್ತ ಎ. 17ರ ರಾತ್ರಿ ಬ್ರಹ್ಮರಥೋತ್ಸವವು ವಿಜ್ರಂಭಣೆಯಿಂದ ನಡೆಯಿತು. ಆಕರ್ಷಕ “ಪುತ್ತೂರು ಬೆಡಿ’ (ಸುಡುಮದ್ದು) ಪ್ರದರ್ಶನ ಮನಸೂರೆಗೊಂಡಿತು. ಸುಡುಮದ್ದು ಪ್ರದರ್ಶನಕ್ಕೆ ಸುಮಾರು 7 ಲಕ್ಷ ರೂ. ಖರ್ಚು ಮಾಡಲಾಗಿದೆ.

ಪುತ್ತೂರು ರಥೋತ್ಸವದಂದು ಪ್ರತೀ ಬಾರಿಯೂ ಸುಡುಮದ್ದು ಪ್ರದರ್ಶನ ನಡೆಸಲಾಗುತ್ತಿದೆ. ಇದು “ಪುತ್ತೂರು ಬೆಡಿ’ ಎಂದು ಪ್ರಸಿದ್ಧಿ ಪಡೆದಿದೆ. ಕುಂಬಳೆ, ಪಂಜ, ವಿಟ್ಲ, ಪುತ್ತೂರು ಸಹಿತ ಕರಾವಳಿಯ ಸೀಮೆ ದೇವಸ್ಥಾನಗಳ ಪೈಕಿ ಪುತ್ತೂರು ಸೀಮೆಯ ಅಧಿಪತಿಯ ಬೆಡಿಮದ್ದು ಪ್ರದರ್ಶನ ನೋಡಲೆಂದೇ ಲಕ್ಷಾಂತರ ಜನ ಸೇರಿದ್ದರು.

ಕುಂಬ್ಳೆ ಅಶ್ರಫ್ ಈ ಬಾರಿಯೂ ಪುತ್ತೂರು ಬೆಡಿಯ ಗುತ್ತಿಗೆ ವಹಿಸಿಕೊಂಡಿದ್ದು, 20 ಮಂದಿ ನುರಿತ ಸುಡುಮದ್ದು ಪ್ರದರ್ಶಕರು ಪುತ್ತೂರು ಬೆಡಿಯಲ್ಲಿ ಕೈಚಳಕ ಪ್ರದರ್ಶಿಸಿದ್ದಾರೆ. ದೇಗುಲದ ಎದುರಿನ 14 ಎಕ್ರೆ ವಿಸ್ತೀರ್ಣದ ಜಾತ್ರೆಯ ಗದ್ದೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಒಂದು ಎಕ್ರೆ ಪ್ರದೇಶವನ್ನು ಬಳಸಿಕೊಳ್ಳಲಾಗಿದೆ. ಒಂದೂವರೆ ಗಂಟೆಗೂ ಅಧಿಕ ಕಾಲ ಸುಡುಮದ್ದು ಪ್ರದರ್ಶನ ನಡೆದಿದ್ದು, ಸಾಕಷ್ಟು ದೂರಕ್ಕೆ ಇದರ ಶಬ್ದ ಅನುರಣಿಸಿದೆ.

ಕಡಿಮೆ ಶಬ್ದದೊಂದಿಗೆ ಬಾನೆತ್ತರಕ್ಕೆ ಚಿಮ್ಮಿ ವರ್ಣಮಯ ಚಿತ್ತಾರ ಬಿಡಿಸುವ ಆಕರ್ಷಕ ಕಲರ್‌ ಔಟ್ಸ್‌ ನೆರೆದಿದ್ದವರಿಗೆ ಮುದ ನೀಡಿತು. ಮಕ್ಕಳು, ವೃದ್ಧರೆನ್ನದೆ ಎಲ್ಲರೂ ಈ ಅಚ್ಚರಿಯನ್ನು ಕಂಡು ಸೋಜಿಗಪಟ್ಟರು. ಸಾಂಪ್ರದಾಯಿಕ ಆಕಾಶಬಾಣಗಳು ಗಮನ ಸೆಳೆದವು.

ನಿರ್ದಿಷ್ಟ ಅಂತರದಲ್ಲಿ ನೆಟ್ಟ ಕಂಬಗಳ ನಡುವೆ ಸರಿಗೆ ಸಂಪರ್ಕ ಏರ್ಪಡಿಸಿ, ಅದರಲ್ಲಿ ತಲಾ 1,000 ಓಲೆ ಪಟಾಕಿಗಳನ್ನು ಒಳಗೊಂಡ ಮಾಲೆಗಳನ್ನು ನೇತು ಹಾಕಿ, ಪ್ರತೀ ನೂರು ಓಲೆಗಳ ಮಧ್ಯೆ ಒಂದೊಂದು ತೂಗು ಗುಂಡು ನೇತಾಡಿಸಿಟ್ಟು ಸಿಡಿಸಲಾಯಿತು.ಹೊಂಡಗಳಲ್ಲಿ ಹೂತು ಸಿಡಿಸುವ ಫಿನಿಶಿಂಗ್‌ ಔಟ್ಸ್‌ ಅಬ್ಬರದ ಶಬ್ದ ಸೃಷ್ಟಿಸಿದವು. 250 ಬಾರಿ ಆಕಾಶಕ್ಕೆ ಚಿಮ್ಮುವ ಒಂದೊಂದು ಕಲರ್‌ ಔಟ್‌ ಗೊಂಚಲುಗಳೂ ನೋಡುಗರನ್ನು ರೋಮಾಂಚನಗೊಳಿಸಿದವು.

ಅಗ್ನಿಶಾಮಕ ದಳದ ವಾಹನ, ನಗರಭೆಯ ನೀರಿನ ಟ್ಯಾಂಕ್‌ ಸುರಕ್ಷತಾ ಕ್ರಮಗಳ ಅಂಗವಾಗಿ ಸಿದ್ಧವಾಗಿದ್ದವು. ಮರಳು ತುಂಬಿದ ಹತ್ತಾರು ಬಕೆಟ್‌ಗಳನ್ನೂ ಇಡಲಾಗಿತ್ತು. ಸುಡುಮದ್ದು ಪ್ರದರ್ಶನ ಅಂತ್ಯಗೊಂಡ ಬಳಿಕ ಪರಿಸರಕ್ಕೆ ಅಗ್ನಿಶಾಮಕ ದಳದ ವತಿಯಿಂದ ನೀರು ಹಾಯಿಸಲಾಯಿತು.

ಪುತ್ತೂರ ಉಳ್ಳಾಯನಿಗೆ ಬಟ್ಟಲು ಕಾಣಿಕೆ ಸಮರ್ಪಣೆ
ನಗರ: ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಬುಧವಾರ ಬ್ರಹ್ಮರಥೋತ್ಸವದ ಪೂರ್ವಭಾವಿಯಾಗಿ ಬೆಳಗ್ಗೆ ನಡೆದ ಶ್ರೀ ದೇವರ ದರ್ಶನ ಬಲಿ ಮತ್ತು ಬಟ್ಟಲು ಕಾಣಿಕೆ ಸಮರ್ಪಣೆ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತ ಜನಸ್ತೋಮ ಪಾಲ್ಗೊಂಡರು.

ಬಲ್ನಾಡಿನಿಂದ ಮಂಗಳವಾರ ರಾತ್ರಿ ಶ್ರೀ ದೇಗುಲಕ್ಕೆ ಆಗಮಿಸಿದ ಶ್ರೀ ದಂಡನಾಯಕ ಉಳ್ಳಾಳ್ತಿ ದೈವಗಳ ಜತೆ ಮೂರು ಸುತ್ತಿನ ದರ್ಶನ ಬಲಿಯು ಉತ್ಸವದ ಕೊನೆಯ ಭಾಗದಲ್ಲಿ ನಡೆಯಿತು.

ಒಂದೇ ಅವಕಾಶ
ಶ್ರೀ ಮಹಾಲಿಂಗೇಶ್ವರ ದೇವಾಲಯದ ಜಾತ್ರೆಯ ಸಂದರ್ಭ ಎ. 10ರಿಂದ 19ರ ತನಕ ಪೇಟೆ ಸವಾರಿ ಮತ್ತು ಶ್ರೀ ದೇವರ ಉತ್ಸವ ಬಲಿ ನಡೆಯುತ್ತದೆಯಾದರೂ ಸೀಮೆಯ ಭಕ್ತರಿಗೆ ಬಟ್ಟಲು ಕಾಣಿಕೆ ಸಮರ್ಪಿಸಲು ಎ. 17ರಂದು ನಡೆಯುವ ದರ್ಶನ ಬಲಿಯ ಸಂದರ್ಭ ಮಾತ್ರ ಅವಕಾಶವಿರುತ್ತದೆ.

ಮಹಾ ಅನ್ನದಾನ
ಬುಧವಾರ ಮಧ್ಯಾಹ್ನ ಬ್ರಹ್ಮರಥೋತ್ಸವದ ಅನ್ನಸಂತರ್ಪಣೆಯಲ್ಲಿ 25 ಸಾವಿರಕ್ಕೂ ಮಿಕ್ಕಿ ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು. ಬ್ರಹ್ಮರಥೋತ್ಸವದ ಪ್ರಯುಕ್ತ ಅಂಗಡಿ ಮುಂಗಟ್ಟುಗಳಿಗೆ ರಜೆಯ ಹಿನ್ನೆಲೆಯಲ್ಲಿ ಭಕ್ತರ ಸಂದಣಿ ಹೆಚ್ಚಿತ್ತು. ದರ್ಶನ ಬಲಿ ಉತ್ಸವದಲ್ಲಿ ಪಾಲ್ಗೊಂಡು ಬಟ್ಟಲು ಕಾಣಿಕೆ ಸಲ್ಲಿಸಿದ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ದೇವಾಲಯದ ಹೊರಾಂಗಣದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಭಕ್ತರ ಬಾಯಾರಿಕೆ ನೀಗಿಸುವ ನಿಟ್ಟಿನಲ್ಲಿ ಪಾನಕ, ಮಜ್ಜಿಗೆಯ ವ್ಯವಸ್ಥೆ ಮಾಡಲಾಗಿತ್ತು.

ಶೋಭಾ ಭೇಟಿ, ಬಾರದ ಡಿ.ವಿ.
ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರು ಪ್ರತಿ ವರ್ಷ ಪುತ್ತೂರು ಜಾತ್ರೆಯ ರಥೋತ್ಸವದ ದಿನ ದೇವಾಲಯಕ್ಕೆ ಭೇಟಿ ನೀಟಿ ಪ್ರಾರ್ಥನೆ ಸಲ್ಲಿಸುವ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದ್ದರು. ಆದರೆ ಈ ಬಾರಿ ಚುನಾವಣೆಯ ಹಿನ್ನೆಲೆಯಲ್ಲಿ ತಮ್ಮ ಕ್ಷೇತ್ರದ ಪ್ರಚಾರದ ಕಾರಣ ಭೇಟಿ ನೀಡಿಲ್ಲ. ಆದರೆ ಚಾರ್ವಾಕದವರಾದ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮಂಗಳವಾರ ರಾತ್ರಿ ದೇವಾಲಯಕ್ಕೆ ಭೇಟಿ ನೀಡಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ.

ಬಟ್ಟಲು ಕಾಣಿಕೆ ವಿಶೇಷ
ಶ್ರೀ ಉಳ್ಳಾಳ್ತಿ ದೈವವು ದೇವಾಲಯದ ಧ್ವಜಸ್ತಂಭದ ಬಲ ಭಾಗದಲ್ಲಿ ಶ್ರೀ ದೇವರ ಉತ್ಸವ ಮೂರ್ತಿಯ ಮುಂದೆ ಇರಿಸಲಾದ ಹರಿವಾಣಕ್ಕೆ ಕಡ್ತಲೆ ಸ್ಪರ್ಶಿಸುವ ಮೂಲಕ ಬಟ್ಟಲು ಕಾಣಿಕೆ ಸ್ವೀಕಾರಕ್ಕೆ ಅನುವು ಮಾಡಿಕೊಟ್ಟಿತು. ಬಟ್ಟಲು ಕಾಣಿಕೆ ಹಾಕಿದ ಭಕ್ತರಿಗೆ ಶ್ರೀ ದೇವರ ಉತ್ಸವ ಮೂರ್ತಿಯನ್ನು ಹೊತ್ತ ಬ್ರಹ್ಮವಾಹಕರು ಶ್ರೀಗಂಧ ಪ್ರಸಾದವನ್ನು ನೀಡಿದರು.

ಟಾಪ್ ನ್ಯೂಸ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

MUDA Case: ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ  ಪ್ರತಿಭಟನೆ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ

Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ

Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ

01236

Bantwal: ತುಂಬೆ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ

SALMAN-KHAN

Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

MUDA Case: ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ

1

Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ  ಪ್ರತಿಭಟನೆ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

MUDA Case: ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ

1

Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ  ಪ್ರತಿಭಟನೆ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.