ರಾಯಚೂರು: ಅಂತಾರಾಷ್ಟ್ರೀಯ ಕ್ರಿಕೆಟ್‌ ಮೈದಾನಕ್ಕೆ ಸ್ಥಳ ವ್ಯಾಜ್ಯ ಗ್ರಹಣ!

Team Udayavani, Aug 19, 2024, 6:07 PM IST

Udayavani Kannada Newspaper

ರಾಯಚೂರು: ಕಳೆದ ಎರಡು ದಶಕಗಳ ಹಿಂದೆಯೇ ಮಂತ್ರಾಲಯ ರಸ್ತೆಯಲ್ಲಿ ನಿರ್ಮಾಣ ವಾಗಬೇಕಿದ್ದ ಅಂತಾರಾಷ್ಟ್ರೀಯ
ಕ್ರಿಕೆಟ್‌ ಮೈದಾನಕ್ಕೆ ಸ್ಥಳ ವ್ಯಾಜ್ಯವೇ ಅಡ್ಡಿಯಾಗಿ ಪರಿಣಮಿಸಿದೆ. ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿತ್ತು. ಅಂದಾಜು 25 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಿತ್ತು. ಆದರೆ ಸ್ಥಳೀಯ ಮಟ್ಟದಲ್ಲಿ ಉಲ್ಬಣಿಸಿರುವ ಸ್ಥಳದ ಸಮಸ್ಯೆಯಿಂದ ಇಂದಿಗೂ ನನೆಗುದಿಗೆ ಬಿದ್ದಿದ್ದು, ಇನ್ನೆಷ್ಟು ವರ್ಷ ಕಾಯಬೇಕು ಎನ್ನುವಂತಾಗಿದೆ.

ಈ ಹಿಂದೆ ರಾಯಚೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸೌಹಾರ್ದ ಕ್ರಿಕೆಟ್‌ ಪಂದ್ಯಾವಳಿ ನಡೆಸುವ ಮೂಲಕ 25 ಲಕ್ಷ ರೂ. ಸಂಗ್ರಹಿಸಲಾಗಿತ್ತು. ಆ ಹಣ ಬ್ಯಾಂಕ್‌ನಲ್ಲಿ ಠೇವಣಿ ಮಾಡಿದ್ದು, ಅದೇ ಈಗ 1.80 ಕೋಟಿ ರೂ. ಆಗಿದೆ. ಅದರ ಜತೆಗೆ ಕೆಸಿಎ ಧಾರಾಳವಾಗಿ ಖರ್ಚು ಮಾಡಲು ಮುಂದಾಗಿದ್ದು, ಸೂಕ್ತ ಸ್ಥಳ ಗುರುತಿಸಿದರೆ ಇಂಟರ್‌ ನ್ಯಾಶನಲ್‌ ಮೈದಾನ ನಿರ್ಮಿಸುವುದಾಗಿ ತಿಳಿಸಿತ್ತು.

ಇದರಿಂದ ಮಂತ್ರಾಲಯ ರಸ್ತೆಯಲ್ಲಿ ಈ. ಆಂಜನೇಯ ಅವರು 12 ಎಕರೆ ಜಮೀನು ದೇಣಿಗೆ ನೀಡಿದ್ದರು. ಇದರಿಂದ ಈಗಾಗಲೇ
ಸುಮಾರು 2-3 ಕೋಟಿ ರೂ. ವೆಚ್ಚದಲ್ಲಿ ಮೈದಾನ, ಕಾಂಪೌಂಡ್‌, ಬೋರ್‌ವೆಲ್‌ ಸೇರಿ ಇನ್ನಿತರ ವ್ಯವಸ್ಥೆ ಮಾಡಲಾಗಿದೆ. ಮೈದಾನ ಅಭಿವೃದ್ಧಿ, ಕ್ಲಬ್‌ ಹೌಸ್‌, ಗ್ಯಾಲರಿ, ಈಜುಕೊಳ, ಪಾರ್ಕಿಂಗ್‌ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಿದೆ.

ಕಲ್ಯಾಣ ಭಾಗದಲ್ಲಿಯೇ ಇಲ್ಲ:

ಅಂತರಾಷ್ಟ್ರೀಯ ಕ್ರಿಕೆಟ್‌ ಮೈದಾನ ಕಲ್ಯಾಣ  ಕರ್ನಾಟಕದ ಯಾವ ಭಾಗದ ಜಿಲ್ಲೆಯಲ್ಲೂ ಇಲ್ಲ. ವಿಪರ್ಯಾಸ ಎಂದರೆ ರಾಯಚೂರು ಜಿಲ್ಲೆಯ ಬಳಿಕ ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಸೇರಿ ವಿವಿಧೆಡೆ ಕಾಮಗಾರಿ ಆರಂಭಿಸಿದ ಮೈದಾನಗಳು ಈಗಾಗಲೇ ಕಾರ್ಯ ನಿರ್ವಹಿಸುತ್ತಿವೆ. ಆದರೆ ರಾಯಚೂರು ಸ್ಟೇಡಿಯಂಗೆ ಹಿಡಿದ ಗ್ರಹಣ ಮಾತ್ರ ಇನ್ನೂ ಬಿಡುತ್ತಿಲ್ಲ. ಕಲಬುರಗಿಯಲ್ಲಿ ಸ್ಥಾಪಿಸಿದರೆ ಹತ್ತಲ್ಲ ಇಪ್ಪತ್ತು ಎಕರೆ ಜಮೀನು ನೀಡಲು ಕೆಲ ಸಂಸ್ಥೆಗಳು, ಜನಪ್ರತಿನಿ ಧಿಗಳು ಮುಂದಾಗುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ಒಂದಾದರೂ ಹೆಗ್ಗುರುತು ಇರಲಿ ಎಂಬ ಕಾರಣಕ್ಕೆ ಕರ್ನಾಟಕ ಕ್ರಿಕೆಟ್‌ ಸಂಸ್ಥೆ ಇಲ್ಲಿಯೇ ಸ್ಥಾಪಿಸುವ ಇಚ್ಚಾಶಕ್ತಿ ತೋರುತ್ತಿದ್ದು, ಜಿಲ್ಲೆಯ ಜನಪ್ರತಿ ನಿಧಿಗಳು ಈ ಬಗ್ಗೆ ಜವಾಬ್ದಾರಿ ತೋರಬೇಕಿದೆ.

ಬಗೆಹರಿಯದ ಸ್ಥಳದ ಗೊಂದಲ 
ದಾನಿಗಳು ನೀಡಿದ ಸ್ಥಳದಲ್ಲಿ ಎರಡು ಸರ್ವೇ ಸಂಖ್ಯೆಗಳಿದ್ದು, ಒಂದರಲ್ಲಿ 7.09 ಗುಂಟೆ, ಮತ್ತೂಂದರಲ್ಲಿ 1.29 ಗುಂಟೆ ತೋರಿಸುತ್ತಿದೆ. ಒಟ್ಟು 10.11 ಗುಂಟೆ ಮಾತ್ರ ತೋರಿಸುತ್ತಿದೆ. ಅದರಲ್ಲಿ 3 ಎಕರೆ ಖರಾಬ್‌ ಇದೆ ಎನ್ನಲಾಗುತ್ತಿದೆ. ಇನ್ನು ಇದರ ಜತೆಗೆ ಖಾಸಗಿ ಶಿಕ್ಷಣ ಸಂಸ್ಥೆಯವರ ಸ್ಥಳವೂ ಸೇರಿದೆ ಎಂಬ ಆಕ್ಷೇಪ ಕೇಳಿ ಬರುತ್ತಿದೆ. ಈ ಎಲ್ಲ ಕಾರಣಕ್ಕೆ ಭೂ ದಾಖಲೆಗಳು ಮತ್ತು ಸರ್ವೇ ಸೆಟ್ಲಮೆಂಟ್‌ ಅಧಿ ಕಾರಿಗಳಿಗೆ ಅರ್ಜಿ ಸಲ್ಲಿಸಿದ್ದು, ಉಂಟಾಗಿರುವ ಸ್ಥಳ ಗೊಂದಲಗಳನ್ನು ನಿವಾರಿಸುವಂತೆ ಕೋರಲಾಗಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಮಂತ್ರಾಲಯ ರಸ್ತೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಮೈದಾನ ನಿರ್ಮಾಣಕ್ಕೆ ಸಿದ್ಧವಾಗಿದೆ. ಆದರೆ ಇಲ್ಲಿ ನಮಗೆ ದೇಣಿಗೆ ಸಿಕ್ಕಿರುವ ಸ್ಥಳದಲ್ಲಿ ಕೆಲ ಸಮಸ್ಯೆಗಳಿದ್ದು, ನಿವಾರಿಸಿ ಕೊಡುವಂತೆ ಡಿಡಿಎಲ್‌ ಆರ್‌ಗೆ ಮನವಿ ಸಲ್ಲಿಸಲಾಗಿದೆ. ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ಅತ್ಯುನ್ನತ ಮೈದಾನ ನಿರ್ಮಿಸಲು ಕೆಸಿಎ ಸಿದ್ಧವಾಗಿದೆ. ಮುಂದಿನ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಈ ಕ್ರೀಡಾಂಗಣ ನಿರ್ಮಾಣ ಆಗಬೇಕಿದೆ. ಇದಕ್ಕೆ ಎಲ್ಲರ ಸಹಕಾರ ಅತ್ಯವಶ್ಯ.
ಶರಣರೆಡ್ಡಿ,
ಜಿಲ್ಲಾ ಸಂಚಾಲಕ, ಕರ್ನಾಟಕ ಕ್ರಿಕೆಟ್‌ ಸಂಸ್ಥೆ

*ಸಿದ್ಧಯ್ಯಸ್ವಾಮಿ ಕುಕನೂರು

ಟಾಪ್ ನ್ಯೂಸ್

“ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಕೆಎಂಎಫ್ ಅಧ್ಯಕ್ಷ

KMF; “ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಭೀಮಾ ನಾಯ್ಕ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಕೆಎಂಎಫ್ ಅಧ್ಯಕ್ಷ

KMF; “ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಭೀಮಾ ನಾಯ್ಕ

firee

Bihar;ಜಮೀನು ವಿವಾದ: 21 ದಲಿತರ ಮನೆಗಳಿಗೆ ಬೆಂಕಿ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

J-P-Nadda

PM ಮೋದಿಗೆ ಕಾಂಗ್ರೆಸಿಗರಿಂದ ಬೈಗುಳ: ಖರ್ಗೆ ಪತ್ರಕ್ಕೆ ನಡ್ಡಾ ತೀಕ್ಷ್ಣ ಪ್ರತ್ಯುತ್ತರ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

“ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಕೆಎಂಎಫ್ ಅಧ್ಯಕ್ಷ

KMF; “ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಭೀಮಾ ನಾಯ್ಕ

firee

Bihar;ಜಮೀನು ವಿವಾದ: 21 ದಲಿತರ ಮನೆಗಳಿಗೆ ಬೆಂಕಿ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

J-P-Nadda

PM ಮೋದಿಗೆ ಕಾಂಗ್ರೆಸಿಗರಿಂದ ಬೈಗುಳ: ಖರ್ಗೆ ಪತ್ರಕ್ಕೆ ನಡ್ಡಾ ತೀಕ್ಷ್ಣ ಪ್ರತ್ಯುತ್ತರ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.