China: ಚೀನಾ ಜತೆಗೆ ಸಂವಹನಕ್ಕೆ ಮ್ಯಾಂಡ್ರಿಯನ್ ಭಾಷಾ ತಜ್ಞರ ನೇಮಕ
ಭಾರತದ ಪ್ರಾದೇಶಿಕ ಸೇನೆಗೆ ಪರಿಣತರ ಸೇರ್ಪಡೆ - ಮುಂಚೂಣಿ ನೆಲೆಗಳಲ್ಲಿ ನಿಯೋಜನೆ
Team Udayavani, Oct 8, 2023, 10:42 PM IST
ನವದೆಹಲಿ: ಚೀನಾ ನಡೆಸುವ ಕಿಡಿಗೇಡಿತನದ ಸೂತ್ರಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಹಾಗೂ ಆ ದೇಶದೊಂದಿಗಿನ ಸಂವಹನವನ್ನು ಸುಲಭವಾಗಿಸಲು ದೇಶದ ಪ್ರಾದೇಶಿಕ ಸೇನೆ (ಟೆರಿಟೋರಿಯಲ್ ಆರ್ಮಿ) ಮ್ಯಾಂಡ್ರಿಯನ್ ಭಾಷಾ ಪರಿಣತರನ್ನು ತನ್ನ ಪಡೆಗೆ ಸೇರ್ಪಡೆಗೊಳಿಸಿದೆ.
ಐವರು ಸದಸ್ಯರ ಮ್ಯಾಂಡ್ರಿಯನ್ ಭಾಷಾ ತಜ್ಞರು ಭಾರತ ಮತ್ತು ಚೀನಾ ಸೇನಾಧಿಕಾರಿಗಳ ನಡುವೆ ನಡೆಯಲಿರುವ ಮಾತುಕತೆಗಳ ವೇಳೆ ಸಂಪರ್ಕ ಸೇತುವಾಗಿ ಕೆಲಸ ಮಾಡಲಿದ್ದಾರೆ. ಇವರನ್ನು ಮುಂಚೂಣಿ ನೆಲೆಗಳಲ್ಲಿ ನಿಯೋಜಿಸಲಾಗುತ್ತದೆ. ಅವರ ನೆರವಿನಿಂದ ಭಾರತ ಸೇನೆ ಹೊಂದಿರುವ ನಿಲುವುಗಳನ್ನು ಸುಲಭವಾಗಿ ಚೀನಾಗೆ ದಾಟಿಸಲು ಸಾಧ್ಯವಾಗಲಿದೆ. ಅಂತೆಯೇ ಚೀನಾದ ಅಭಿಪ್ರಾಯಗಳನ್ನು ಆಲಿಸಿ, ತಿಳಿದುಕೊಳ್ಳಲೂ ಅವರು ನೆರವಾಗಲಿದ್ದಾರೆ. ದೌಲತ್ ಬೇಗ್ ಓಲ್ಡಿ, ಕಿಬಿತು, ಚುಶುಲ್, ತವಾಂಗ್ ಮತ್ತು ನಾಥುಲಾ ಪಾಸ್ ಎಂಬ ಐದು ಸ್ಥಳಗಳಲ್ಲಿ 2 ದೇಶಗಳ ಸೇನಾಧಿಕಾರಿಗಳ ಸಭೆ ನಡೆಯುತ್ತದೆ.
ಇದಲ್ಲದೆ ಸೈಬರ್ ಭದ್ರತೆಗೆ ಸಂಬಂಧಿಸಿದ ವಿಶೇಷ ತಜ್ಞರನ್ನು ನೇಮಕ ಮಾಡುವ ನಿಟ್ಟಿನಲ್ಲಿ ಚರ್ಚೆಗಳನ್ನು ನಡೆಸಲಾಗುತ್ತಿದೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
MUST WATCH
ಹೊಸ ಸೇರ್ಪಡೆ

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.