![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Jun 23, 2019, 6:08 AM IST
ಕಾಪು: ರಾಜ್ಯ ಸರಕಾರದ ನೌಕರರಿಗೆ ನಾಲ್ಕನೇ ಶನಿವಾರ ರಜೆ ಘೋಷಣೆಯಾಗಿದೆ. ಜೂ.22ರಂದು ಮೊದಲ ಬಾರಿಗೆ ನಾಲ್ಕನೇ ಶನಿವಾರದ ರಜೆ ಸಿಕ್ಕಿದ್ದರೂ, ಕಾಪು ತಾಲೂಕಿನ ಸರಕಾರಿ ನೌಕರರು ರೈತರಿಗಾಗಿ ತಮ್ಮ ಕೆಲಸವನ್ನು ಮೀಸಲಿಟ್ಟಿದ್ದರು.
ತಾಲೂಕಿನ ಕಂದಾಯ, ಪಂಚಾಯತ್ ರಾಜ್, ಕೃಷಿ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬಂದಿ ಕೆಲಸಕ್ಕೆ ಹಾಜರಾದರು.
ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ- ಕಿಸಾನ್) ಯೋಜನೆಯಡಿಯಲ್ಲಿ ರೈತರ ಹೆಸರು ನೋಂದಣಿ ಕಾರ್ಯ ನಡೆಯುತ್ತಿದ್ದು, ಶನಿವಾರದ ಕೆಲಸ ಇದಕ್ಕೇ ಮೀಸಲಿಟ್ಟರು.
ತಹಶೀಲ್ದಾರ್ ನೇತೃತ್ವ
ಕಾಪು ತಹಶೀಲ್ದಾರ್, ಕಂದಾಯ ನಿರೀಕ್ಷಕರೂ ಸೇರಿದಂತೆ ತಾಲೂಕು ಕಚೇರಿ ಸಿಬಂದಿ, 10 ಮಂದಿ ಗ್ರಾಮ ಕರಣಿಕರು, 9ಕ್ಕೂ ಅಧಿಕ ಮಂದಿ ಪಿಡಿಒಗಳು, ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿಗಳು ಕಿಸಾನ್ ಸಮ್ಮಾನ್ ನಿಧಿಗೆ ನೋಂದಣಿ ಮತ್ತು ಯೋಜನೆ ವಿವರಗಳನ್ನು ಜನರಿಗೆ ನೀಡಿದರು.
2058 ಮಂದಿ ನೋಂದಣಿ
ಕಿಸಾನ್ ಸಮ್ಮಾನ್ ನಿಧಿಗೆ ಕಾಪು ತಾಲೂಕಿನಲ್ಲಿ ಈಗಾಗಲೇ 2058 ಮಂದಿ ರೈತರು ನೋಂದಣಿ ಮಾಡಿಕೊಂಡಿ ದ್ದಾರೆ. ಶುಕ್ರವಾರ ಸಂಜೆಯವರೆಗೆ 931 ನೋಂದಣಿಯಾಗಿದ್ದು, ಶನಿವಾರ ಮಧ್ಯಾಹ್ನದವರೆಗೆ 2058ನ್ನು ದಾಟಿದೆ.
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು

You seem to have an Ad Blocker on.
To continue reading, please turn it off or whitelist Udayavani.