ರೋಹಿತ್ ತಿವಾರಿ ಪತ್ನಿ ಬಂಧನ
Team Udayavani, Apr 25, 2019, 6:00 AM IST
ಹೊಸದಿಲ್ಲಿ: ಉತ್ತರಾಖಂಡ ಮಾಜಿ ಸಿಎಂ ಎನ್.ಡಿ. ತಿವಾರಿ ಪುತ್ರ ರೋಹಿತ್ ತಿವಾರಿ ಸಾವಿನ ಪ್ರಕರಣದಲ್ಲಿ ರೋಹಿತ್ ಪತ್ನಿ ಅಪೂರ್ವಾರನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ವೈವಾಹಿಕ ಮನಸ್ತಾಪದಿಂದಾಗಿ ಪತಿಯನ್ನು ಅಪೂರ್ವಾ ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಪ್ರಿಲ್ 16 ರಾತ್ರಿ ರೋಹಿತ್ ಹತ್ಯೆಯಾಗಿದ್ದರು. ಸಂಬಂಧಿಯೊಬ್ಬರ ವಿಚಾರವಾಗಿ ದಂಪತಿ ಜಗಳ ಮಾಡಿ ಕೊಂಡಿದ್ದರು. ಉತ್ತರಾಖಂಡಕ್ಕೆ ಮತಹಾಕಲು ತೆರಳಿದ್ದ ರೋಹಿತ್ ವಾಪಸ್ ದಿಲ್ಲಿಗೆ ಬರುವಾಗ ಕುಡಿಯುತ್ತಿದ್ದರು. ಆಗ ಗಲಾಟೆ ನಡೆದಿದೆ ಎಂದು ಪೊಲೀಸರು ವಿವರಿಸಿದ್ದಾರೆ. ಕೊಲೆ ಮಾಡಿದ್ದ ಬಗ್ಗೆ ಅಪೂರ್ವಾ ತಪ್ಪೊಪ್ಪಿಕೊಂಡಿದ್ದಾರೆ. ಆದರೆ ಉದ್ದೇಶಪೂರ್ವಕವಾಗಿ ನಡೆದ ಕೊಲೆ ಇದಲ್ಲ. ರೋಹಿತ್ರನ್ನು ವಿವಾಹ ವಾದ ಅನಂತರ ನನ್ನ ಕನಸುಗಳೆಲ್ಲ ನುಚ್ಚುನೂರಾಗಿದ್ದವು ಎಂದು ಅಪೂರ್ವಾ ಹೇಳಿಕೊಂಡಿದ್ದಾರೆ. ಅಪೂರ್ವಾರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಮುಂದುವರಿಸಲಾಗಿದೆ. ಈ ಮಧ್ಯೆ ರೋಹಿತ್ ತಾಯಿ ಉಜ್ವಲಾ ಮಾತನಾಡಿ ಅಪೂರ್ವಾ ಹಾಗೂ ಆಕೆಯ ಪಾಲಕರಿಗೆ ನಮ್ಮ ಆಸ್ತಿಯ ಮೇಲೆ ಕಣ್ಣಿದೆ ಎಂದು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.