ಸ್ಮಾರ್ಟ್‌ಸಿಟಿಯಲ್ಲಿ ನಿಯಮಗಳಿಗೆ ಎಳ್ಳುನೀರು? ಎಲ್ಲೆಲ್ಲಿ ಉಲ್ಲಂಘನೆ
Team Udayavani, Apr 11, 2023, 4:16 PM IST
ಹುಬ್ಬಳ್ಳಿ: ನಿಸರ್ಗದತ್ತವಾಗಿರುವ ಸಂಪನ್ಮೂಲಗಳ ಸದ್ಬಳಕೆ ಸ್ಮಾರ್ಟ್‌ಸಿಟಿ ಯೋಜನೆ ಉದ್ದೇಶಗಳಲ್ಲಿ ಪ್ರಮುಖ ಅಂಶ. ಆದರೆ ಹು-ಧಾ ಸ್ಮಾರ್ಟ್‌ಸಿಟಿ ಯೋಜನೆ ಇದನ್ನೇ ಮರೆತಂತೆ ಕಾಣುತ್ತಿದೆ. ಯೋಜನೆಯಡಿ ನಿರ್ಮಾಣಗೊಂಡಿರುವ ಕಟ್ಟಡಗಳಿಗೆ ಅತ್ಯಾಧುನಿಕ ಸ್ಪರ್ಶ ನೀಡಿದ್ದರೂ ಪ್ರಮುಖವಾಗಿ ಮಳೆನೀರು ಕೊಯ್ಲು ಹಾಗೂ ಸೌರಶಕ್ತಿ ವ್ಯವಸ್ಥೆಗಳನ್ನೇ ಅಳವಡಿಸಿಲ್ಲ. ಈ ಮೂಲಕ ಸರಕಾರದ ಯೋಜನೆಗಳೇ ನಿಯಮಗಳನ್ನು ಮುರಿದಂತಾಗಿದೆ.
ಬೆಳಕಿಗೆ ಬಂದಿದ್ದು ಹೇಗೆ?: ಕೆಲ ಕಾಮಗಾರಿಗಳನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿ ಕೈಗೆತ್ತಿಕೊಳ್ಳಲು ಅವಕಾಶ ಇರದಿದ್ದರೂ ಸಭೆಯಲ್ಲಿ ಪಾಸ್ ಮಾಡಿರುವ ಬಗ್ಗೆ ಜಿಲ್ಲೆಯ ಕೆಲ ಜನಪ್ರತಿನಿಧಿಗಳು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಇದೀಗ ಡೀಮ್ಡ್ ಹಸ್ತಾಂತರದ ಪ್ರಕ್ರಿಯೆ ಮೂಲಕ ಸ್ಮಾರ್ಟ್‌ಸಿಟಿ ಕಂಪನಿ ಕೈ ತೊಳೆದುಕೊಂಡಿದೆ. ಈ ವಿಚಾರದಲ್ಲಿ ಅಧಿಕಾರಿಗಳದ್ದು ಒಂದು ನಡೆಯಾದರೆ, ಪಾಲಿಕೆ ಜನಪ್ರತಿನಿಧಿಗಳು ಇದಕ್ಕೆ ಪ್ರತಿಯಾಗಿ ಪರಿಶೀಲನೆಯಾಗದ ಹೊರತು ಹಸ್ತಾಂತರ ಅಸಾಧ್ಯ ಎನ್ನುವ ಪಟ್ಟು ಹಿಡಿದಿದ್ದಾರೆ. ಪಾಲಿಕೆಯಿಂದ ರಚಿಸಿದ್ದ ತಾಂತ್ರಿಕ ತಜ್ಞರ ಸಮಿತಿಯು ಯೋಜನೆಯಿಡಿ ನಿರ್ಮಾಣಗೊಂಡಿರುವ ಕಟ್ಟಡಗಳಲ್ಲಿ ಮಳೆನೀರು ಕೊಯ್ಲು ಹಾಗೂ ಸೌರಶಕ್ತಿ ಅಳವಡಿಸಿಲ್ಲ ಎಂಬುವುದನ್ನು ಗುರುತಿಸಿದೆ.
ಆರಂಭದಲ್ಲಿ ಒಂದಿಷ್ಟು ಕೊಯ್ಲು
ಸ್ಮಾರ್ಟ್‌ಸಿಟಿ ಯೋಜನೆಗಳನ್ನು ಕೈಗೆತ್ತಿಕೊಂಡ ಸಂದರ್ಭದಲ್ಲಿ ಇಲ್ಲಿನ ಚಿಟಗುಪ್ಪಿ ಪಾರ್ಕ್, ಚಿಟಗುಪ್ಪಿ ಆಸ್ಪತ್ರೆ ಬಳಿಯ ವಸತಿ ಗೃಹ ಸೇರಿದಂತೆ ಕೆಲವೆಡೆ ಮಳೆನೀರು ಕೊಯ್ಲಿಗೆ ಪೂರಕವಾಗಿ ಗಟಾರು ಮಾದರಿಯಲ್ಲಿ ಸಿಮೆಂಟ್, ಜಲ್ಲಿ, ಮರಳು ಹಾಕಿ ಸಿದ್ಧಪಡಿಸಿದರು. ಅಂದು ಸಿದ್ಧಪಡಿಸಿದ್ದನ್ನು ಬಿಟ್ಟರೆ ಇದುವರೆಗೂ ಮಾಡಿದ ಕಾಮಗಾರಿ ಯೋಗ್ಯವಾಗಿದೆಯೇ ಎಂದು ಕಾಲ ಕಾಲಕ್ಕೆ ಪರಿಶೀಲಿಸುವ ಕೆಲಸ ಆಗಿಲ್ಲ. ಹೀಗಾಗಿ ವ್ರಥಾ ಹಣ ಸುರಿದಂತಾಗಿದೆ. ಸ್ಮಾರ್ಟ್‌ಸಿಟಿಯಲ್ಲಿ ನೈಸರ್ಗಿಕ ಸಂಪನ್ಮೂಲ ಸದ್ಬಳಕೆಗೆ ಒತ್ತು ನೀಡಲಾಗಿದೆ ಎನ್ನುವ ದಾಖಲೆಗಾಗಿ ಮಾಡಿದ್ದಾರೆ ಎಂಬುದನ್ನು ಅಲ್ಲಿನ ಅವಸ್ಥೆ ಸ್ಪಷ್ಟಪಡಿಸುತ್ತಿದೆ.
ಎಲ್ಲೆಲ್ಲಿ ಉಲ್ಲಂಘನೆ?
ಹು-ಧಾ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ 1080 ಕೋಟಿ ರೂ. ವೆಚ್ಚದಲ್ಲಿ 63 ಯೋಜನೆಗಳನ್ನು ಕೈಗೊಳ್ಳಲಾಗಿದೆ. 51 ಕಾಮಗಾರಿಗಳು ಪೂರ್ಣಗೊಂಡಿದ್ದು, ಇನ್ನೂ 10 ಯೋಜನೆಗಳು ಪ್ರಗತಿಯಲ್ಲಿದ್ದು, 2 ಪಿಪಿಪಿ ಮಾದರಿಯಲ್ಲಿ ಸಿದ್ಧಪಡಿಸಲಾಗುತ್ತಿದೆ. ಆದರೆ ಕಟ್ಟಡದ ಯೋಜನೆಗಳಾದ ಜನತಾ ಬಜಾರ್, ಗಣೇಶ ನಗರ ಮೀನು ಮಾರುಕಟ್ಟೆ, ಮೇದಾರ ಓಣಿ ಆಸ್ಪತ್ರೆ, ಕಟ್ಟಡ ಗುಣಮಟ್ಟ ಪರೀಕ್ಷಾ ಕೇಂದ್ರ, ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್, ಚಿಟಗುಪ್ಪಿ ಆಸ್ಪತ್ರೆ ಆವರಣದಲ್ಲಿ ಎರಡು ಕಟ್ಟಡಗಳನ್ನು ನಿರ್ಮಿಸಿದ್ದು, ಮಳೆನೀರು ಕೊಯ್ಲುಗೆ ಆದ್ಯತೆ ನೀಡಿಲ್ಲ. ಇದೇರೀತಿ ಸೌರಶಕ್ತಿ ಬಳಕೆಗೂ ಆದ್ಯತೆ ನೀಡದೆ ಕೇವಲ ಕಟ್ಟಡ ನಿರ್ಮಿಸಿರುವ ಗುತ್ತಿಗೆ ಸಂಸ್ಥೆಯಂತಾಗಿದೆ ಎಂಬುದು ಮಹಾನಗರದ ಜನತೆಯ ಅಸಮಾಧಾನವಾಗಿದೆ.
ಅಂತರ್ಜಲ ಕುಸಿಯುತ್ತಿರುವ ಸಂದರ್ಭದಲ್ಲಿ ಮಳೆನೀರು ಕೊಯ್ಲುನಂತಹ ವಿಧಾನಗಳು ಅಗತ್ಯ ಎಂಬುವುದು ನೀತಿ ಆಯೋಗ ಬಲವಾಗಿ ಪ್ರತಿಪಾದಿಸಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಕಟ್ಟಡಕ್ಕೆ ಇದನ್ನು ಕಡ್ಡಾಯಗೊಳಿಸಲಾಗಿದೆ. ಅಲ್ಲದೆ ವಿದ್ಯುತ್ ಬಳಕೆ ಕಡಿಮೆ ಮಾಡುವ ನಿಟ್ಟಿನಲ್ಲಿ ಸೌರಶಕ್ತಿ ಬಳಕೆಯೂ ಇರಬೇಕು. ವಲಯ ನಿಯಮಗಳು (ಜೋನಲ್ ರೆಗ್ಯಲೇಶನ್ ಆ್ಯಕ್ಟ್)-2019 ಪ್ರಕಾರ ಈ ಎರಡು ವ್ಯವಸ್ಥೆಗಳಿರದಿದ್ದರೆ ಕಟ್ಟಡ ಪೂರ್ಣಗೊಳಿಸಿದ ಪ್ರಮಾಣಪತ್ರ ದೊರೆಯುವುದಿಲ್ಲ. ಹೀಗಿರುವಾಗ ಕೋಟ್ಯಂತರ ರೂ. ಖರ್ಚು ಮಾಡುವ ಯೋಜನೆಗಳು ಅದರಲ್ಲೂ ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆಗೆ ಮೊದಲ ಆದ್ಯತೆ ಇರುವಾಗ ಇದನ್ನು ಅಳವಡಿಸಿಕೊಳ್ಳದಿರುವುದು ವಿಪರ್ಯಾಸವಾಗಿದೆ. ಇದೀಗ ಪಾಲಿಕೆ ಇಂತಹ ಕಟ್ಟಡಗಳನ್ನು ಹಸ್ತಾಂತರ ಮಾಡಿಕೊಂಡರೂ ನಿಯಮಗಳ ಪ್ರಕಾರ ಇವುಗಳನ್ನು ಅಳವಡಿಸುವುದು ಕಡ್ಡಾಯ. ಆದರೆ ಇತರೆ ಯೋಜನೆಗಳಿಗೆ ಅನುದಾನ ಕಡಿತಗೊಳಿಸಿ ಇದಕ್ಕೆ ವ್ಯಯ ಮಾಡಬೇಕಾಗುತ್ತದೆ. ಅಷ್ಟಕ್ಕೂ ಸ್ಮಾರ್ಟ್‌ಸಿಟಿ ಯೋಜನೆ ಮೂಲ ಉದ್ದೇಶ ಏನು ಎಂಬುದು ಪಾಲಿಕೆ ಪ್ರಶ್ನೆಯಾಗಿದೆ.
ಸಾಮಾನ್ಯ ಜನರು ಕಟ್ಟಡ ಪೂರ್ಣಗೊಳಿಸಿ ಪ್ರಮಾಣಪತ್ರ ಪಡೆಯಬೇಕಾದರೆ
ಸೋಲಾರ್, ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಕಡ್ಡಾಯವಾಗಿ ಕೇಳುತ್ತೇವೆ. ಹೀಗಿರುವಾಗ ಸ್ಮಾರ್ಟ್‌ಸಿಟಿ ನಿರ್ಮಿಸಿರುವ ಯಾವ ಕಟ್ಟಡಗಳಿಗೂ ಈ ವ್ಯವಸ್ಥೆಯಿಲ್ಲದಿರುವಾಗ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಬಹುತೇಕ ಕಾಮಗಾರಿಗಳು ಅಪೂರ್ಣ ಸ್ಥಿತಿಯಲ್ಲಿದ್ದು, ಅವುಗಳನ್ನು ಪಾಲಿಕೆ ಪಡೆದುಕೊಂಡು ಇನ್ನೊಂದಿಷ್ಟು ಹಣ ಖರ್ಚು ಮಾಡಲು ಸಿದ್ಧವಿಲ್ಲ. ಹೀಗಾಗಿ ಡೀಮ್ಡ್ ಹಸ್ತಾಂತರ ಎನ್ನುತ್ತಿದ್ದಾರೆ. ಇದನ್ನು ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ.
ಸ್ಮಾರ್ಟ್‌ಸಿಟಿಯಲ್ಲಿ ನಿಯಮಗಳಿಗೆ ಎಳ್ಳುನೀರು? ಎಲ್ಲೆಲ್ಲಿ ಉಲ್ಲಂಘನೆಸ್ಮಾರ್ಟ್‌ಸಿಟಿಯಲ್ಲಿ ನಿಯಮಗಳಿಗೆ ಎಳ್ಳುನೀರು? ಎಲ್ಲೆಲ್ಲಿ ಉಲ್ಲಂಘನೆಸ್ಮಾರ್ಟ್‌ಸಿಟಿಯಲ್ಲಿ ನಿಯಮಗಳಿಗೆ ಎಳ್ಳುನೀರು? ಎಲ್ಲೆಲ್ಲಿ ಉಲ್ಲಂಘನೆಸ್ಮಾರ್ಟ್‌ಸಿಟಿಯಲ್ಲಿ ನಿಯಮಗಳಿಗೆ ಎಳ್ಳುನೀರು? ಎಲ್ಲೆಲ್ಲಿ ಉಲ್ಲಂಘನೆ
ವಲಯ ನಿಯಮಗಳು ಸರಕಾರಿ, ಖಾಸಗಿ ಕಟ್ಟಡಗಳಿಗೂ ಅನ್ವಯಿಸಲಿದೆ. ಹೀಗಿರುವಾಗ ಪ್ರತಿಯೊಂದು ಕಟ್ಟಡಗಳಿಗೆ ಸೌರಶಕ್ತಿ, ಮಳೆ ನೀರು ಕೋಯ್ಲು ಕಡ್ಡಾಯ. ಹೀಗಿರುವಾಗ ಸರಕಾರದ ಯೋಜನೆಗಳಲ್ಲಿ ಈ ನಿಮಯ ಉಲ್ಲಂಘನೆ ಎಷ್ಟು ಸರಿ. ಜನ ಸಾಮಾನ್ಯರಿಗೆ ಒಂದು ನ್ಯಾಯ, ಸರಕಾರದ ಯೋಜನೆಗೆ ಮತ್ತೂಂದು ನ್ಯಾಯ ಸರಿಯಲ್ಲ. ಇವುಗಳ ಬಗ್ಗೆ ಸಂಬಂಧಿಸಿದ ಇಲಾಖೆ ಹಾಗೂ ಅಧಿಕಾರಿಗಳು ಸೂಕ್ತ ಗಮನಿ ಹರಿಸಿ ಮಾದರಿ ಯೋಜನೆಯಾಗಿಸಬೇಕು.
ಸುರೇಶ ಕಿರೆಸೂರು, ಮಾಜಿ ಅಧ್ಯಕ್ಷ, ಎಂಜಿನಿಯರ್ ಅಸೋಸಿಯೇಶನ್
ಹೇಮರಡ್ಡಿ ಸೈದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.