ಪಾದಯಾತ್ರಿಗಳು, ಪಾದಚಾರಿಗಳ ಸುರಕ್ಷೆಗಾಗಿ…
Team Udayavani, Apr 20, 2022, 6:15 AM IST
ಪ್ರತೀ ವರ್ಷ ಶಿವರಾತ್ರಿಯ ಶುಭ ಸಂದರ್ಭದಲ್ಲಿ ಧರ್ಮಸ್ಥಳಕ್ಕೆ ಭಕ್ತರ ದಂಡೇ ಹರಿದುಬರುವುದು ಸಾಮಾನ್ಯ. ಇತ್ತೀಚಿನ ಕೆಲವು ವರ್ಷಗಳಿಂದ ದೂರ ದೂರುಗಳಿಂದ ಭಕ್ತರು ಪಾದ ಯಾತ್ರೆಯಲ್ಲಿ ಬಂದು ಶ್ರೀ ಮಂಜುನಾಥನ ದರ್ಶನ ಪಡೆಯುತ್ತಿರುವುದು ಹೆಚ್ಚಾಗುತ್ತಿದೆ. ಅದರಂತೆ ಈ ವರ್ಷವೂ ಶಿವರಾತ್ರಿಯ ಸಂದರ್ಭದಲ್ಲಿ ಹಾಸನ ದಿಂದ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಕೊಟ್ಟಿಗೆ ಹಾರದಿಂದ ಉಜಿರೆ- ಧರ್ಮಸ್ಥಳದ ವರೆಗೆ ಸಾವಿರೋಪಾದಿಯಲ್ಲಿ ಭಕ್ತ ಸಾಗರ ಹರಿದುಬಂದಿತ್ತು. ನೂರಾರು ಕಿ.ಮೀ. ಕಾಲ್ನಡಿಗೆಯಲ್ಲಿ ಸಾಗಿ ಬಂದು ಅಂತಿಮವಾಗಿ ಭಗವಂತನ ದರ್ಶನ ಪಡೆದಾಗ ಭಕ್ತರಿಗೆ ಸಿಗುವ ಆನಂದ, ಸಂತೃಪ್ತಿಯನ್ನು ಅವರ ಮೊಗವನ್ನು ಒಮ್ಮೆ ಕಂಡಾಗ ನಮಗೆ ಗೋಚರಿಸದೇ ಇರಲಾರದು.
ಆದರೆ ಭಗವಂತನ ದರ್ಶನಕ್ಕಾಗಿ ಬಂದವರಲ್ಲಿ ಕೆಲವರು ರಸ್ತೆ ಮಧ್ಯೆಯೇ ಅಪಘಾತಕ್ಕೀಡಾಗಿ ಆಸ್ಪತ್ರೆ ಸೇರಿದ್ದೂ ಇದೆ. ಧರ್ಮಸ್ಥಳಕ್ಕೆ ಬರುತ್ತಿದ್ದ ಸಾವಿರಾರು ಭಕ್ತರು ರಸ್ತೆಯ ಎಡಬದಿಯಲ್ಲೇ ನಡೆಯುವುದು ಸಾಮಾನ್ಯ ದೃಶ್ಯ. ಇದು ಕೇವಲ ಭಕ್ತರ ಪಾದಯಾತ್ರೆಯ ಸಂದರ್ಭದಲ್ಲಿ ಮಾತ್ರವೇ ಕಾಣಸಿಗುವ ದೃಶ್ಯವಲ್ಲ. ಪ್ರತಿನಿತ್ಯ ಜನರು ರಸ್ತೆಯ ಎಡ ಬದಿ ಯಲ್ಲಿಯೇ ನಡೆದುಕೊಂಡು ಹೋಗುತ್ತಿರುತ್ತಾರೆ ಮಾತ್ರವಲ್ಲದೆ ಒಂದಿಲ್ಲೊಂದು ಅಪಘಾತಕ್ಕೆ ತುತ್ತಾಗುತ್ತಿರುತ್ತಾರೆ. ವಾಹನಗಳು ರಸ್ತೆಯ ಎಡಬದಿಯಲ್ಲಿ ಸಂಚರಿಸಿದರೆ ಪಾದಚಾರಿಗಳು ರಸ್ತೆಯ ಬಲ ಬದಿಯಲ್ಲೇ ನಡೆಯಬೇಕು ಎಂಬುದು ದೇಶದಲ್ಲಿ ಜಾರಿಯಲ್ಲಿರುವ ನಿಯಮ. ಆದರೆ ಇದು ಕೇವಲ ವಾಹನಗಳ ಸಂಚಾರಕ್ಕೆ ಮಾತ್ರ ಸೀಮಿತವಾಗಿದ್ದರು ಪಾದಚಾರಿಗಳು ಇಂದಿಗೂ ರಸ್ತೆಯ ಎಡಬದಿಯಲ್ಲಿಯೇ ನಡೆಯುತ್ತಿದ್ದಾರೆ. ಇದು ಸರಿಯೇ ತಪ್ಪೇ ಎಂದು ತಿಳಿಯುವ ಗೋಜಿಗೆ ಯಾರೂ ಹೋಗುತ್ತಿಲ್ಲ.
ಶಿಕ್ಷಣ ಇಲಾಖೆಯ ವತಿಯಿಂದ ಕಳೆದ ಬಾರಿ ಶಾಲಾ ಹಂತದಲ್ಲಿ ಎಸ್. ಡಿ.ಎಂ.ಸಿ. ಸದಸ್ಯರಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ಹಮ್ಮಿ ಕೊಳ್ಳಲಾಗಿತ್ತು. ಅದರಲ್ಲಿ ರಸ್ತೆ ಸುರಕ್ಷತೆ ಬಗ್ಗೆಯೂ ಜಾಗೃತಿ ಮೂಡಿಸುವಂತೆ ಇಲಾಖೆಯಿಂದ ನಿರ್ದೇಶ ನವಿತ್ತು. ಅಂತೆಯೇ ಬೇರೆ ಬೇರೆ ಶಾಲೆಯಲ್ಲಿ ಮಕ್ಕಳು ಮತ್ತು ಅವರ ಹೆತ್ತವರೊಂದಿಗೆ ನಡೆಸಿದ ಸಂವಾದದಲ್ಲಿ ತಿಳಿದದ್ದೇ ನೆಂದರೆ ಬಹುತೇಕರು ರಸ್ತೆಯ ಎಡ ಬದಿಯಲ್ಲೇ ನಡೆಯುತ್ತಿರುವುದು. ನಾವು ರಸ್ತೆಯ ಎಡಬದಿಯಲ್ಲಿ ನಡೆದು ಕೊಂಡು ಹೋದರೆ ವಾಹನಗಳೂ ರಸ್ತೆಯ ಎಡಬದಿಯಲ್ಲೇ ಸಂಚರಿಸುವುದರಿಂದ ನಮ್ಮ ಬೆನ್ನ ಹಿಂದೆ ವಾಹನಗಳು ಬಂದರೆ ನಮಗೆ ಕಾಣುವುದಿಲ್ಲ. ಹಿಂದಿನಿಂದ ಬಂದ ವಾಹನಗಳು ನಮಗೆ ಢಿಕ್ಕಿ ಹೊಡೆದು ನಮ್ಮ ಕೈಕಾಲು ಮುರಿದು ಕೊಂಡು ಅಥವಾ ಪ್ರಾಣ ವನ್ನೇ ಕಸಿದು ಕೊಂಡು ಹೋಗ ಬಹುದು. ಅಲ್ಲದೆ ನಾವು ಒಂದು ಕಡೆಯಿಂದ ಮತ್ತೂಂದು ಕಡೆಗೆ ರಸ್ತೆ ದಾಟುವಾಗ ಎರಡೂ ಬದಿ ಗಳಲ್ಲಿ ಗಮನಿಸಿ ದಾಟಬೇಕು. ಅಂತೆಯೇ ಪಾದಚಾರಿ ಪಥದಲ್ಲಿ ಸಂಚಾರಿ ಸೂಚನೆಗಳನ್ನು ಗಮನಿಸಿ ಸಾಗಬೇಕು.
2014 ರಿಂದ 2018 ರ ಅವಧಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಬರೋಬ್ಬರಿ 85 ಸಾವಿರ ಪಾದಚಾರಿಗಳು ಸಾವನ್ನಪ್ಪಿದ್ದಾರೆ ಎನ್ನುವ ಆಘಾತಕಾರಿ ಮಾಹಿತಿಯನ್ನು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ಅಂಕಿ ಅಂಶ ಗಳೇ ಹೇಳಿವೆ. 2018ರಲ್ಲಿ ಸುಮಾರು 20,457 ಪಾದಚಾರಿಗಳು ಸಾವನ್ನ ಪ್ಪಿದ್ದು, 2017ಕ್ಕೆ ಹೋಲಿಕೆ ಮಾಡಿದರೆ ಇದು ಶೇ.10.11ರಷ್ಟು ಹೆಚ್ಚು. ಅಂದರೆ ಇಲ್ಲಿ ಪಾದಚಾರಿಗಳಾದ ನಮಗೆ ತಿಳಿವಳಿಕೆ ಇರಬೇಕಾದ್ದು ಬಹಳ ಮುಖ್ಯ. ನಾವು ಮಹಾನಗರ ಗಳಲ್ಲಿ ರಸ್ತೆಯ ಯಾವ ಬದಿಯಲ್ಲಿ ಪಾದಚಾರಿ ಪಥವಿರುವುದೋ ಅಲ್ಲೇ ಸಾಗಬೇಕು. ಉಳಿದಂತೆ ಪಾದಚಾರಿ ಗಳು ರಸ್ತೆಯ ಬಲಬದಿಯಲ್ಲೇ ನಡೆಯಬೇಕು. ಆಗ ನಮಗೆ ಮುಂದೆ ಬರುವ ವಾಹನಗಳು ಕಾಣುವು ದರಿಂದ ರಸ್ತೆಯ ಬದಿಗೆ ಸರಿದು ಕೊಳ್ಳಬಹುದು. ಅದರಲ್ಲಿಯೂ ಮುಂಜಾನೆ ವಾಕಿಂಗ್ ಹೋಗುವ ವರು ರಸ್ತೆಯ ಬದಿಯಲ್ಲಿ ವಾಕಿಂಗ್ ಮಾಡು ವುದು ತುಂಬಾ ಅಪಾಯ ಕಾರಿ. ಸಾಧ್ಯವಿರುವೆಡೆ ಉದ್ಯಾನವನಗ ಳಲ್ಲಿ ವಾಕಿಂಗ್ ಮಾಡಿದರೆ ಒಳಿತು. ಆದಾಗ್ಯೂ ರಸ್ತೆ ಬದಿಯಲ್ಲಿ ನಡೆದು ಕೊಂಡು (ಪಾದಚಾರಿಗಳು) ಹೋಗು ವವರು ರಸ್ತೆಯ ಬಲಬದಿಯಲ್ಲೇ ಸಾಗಿ ಮನೆ ಸೇರಿಕೊಳ್ಳೋಣ. ಹಾಗೆಯೇ ವಾಹನ ಚಲಾಯಿಸುವಾಗ ರಸ್ತೆ ಸುರಕ್ಷತ ನಿಯಮಗಳನ್ನು ಪಾಲಿ ಸುತ್ತಾ ಸುರಕ್ಷಿತ ಸಂಚಾರದ ಮೂಲಕ ಸುರಕ್ಷಿತ ಸಮಾಜ ಕಟ್ಟೋಣ.
-ಯೋಗೇಶ ಎಚ್. ಆರ್., ಬೆಳ್ತಂಗಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gundlupete: ವಿದ್ಯುತ್ ತಂತಿಗೆ ಸಿಲುಕಿ ಮರಿಯಾನೆ ಸಾವು
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Gundlupete: ವಿದ್ಯುತ್ ತಂತಿಗೆ ಸಿಲುಕಿ ಮರಿಯಾನೆ ಸಾವು
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.