Sagara: ಅಸ್ವಸ್ಥ ಸ್ಥಿತಿಯಲ್ಲಿ ಅಪರೂಪದ ಚಿರತೆ ಬೆಕ್ಕು ಪತ್ತೆ
ಅಳಿವಿನಂಚಿನಲ್ಲಿರುವ ಪ್ರಾಣಿಗಳ ಮೊದಲ ಪಟ್ಟಿಯಲ್ಲಿದೆ
Team Udayavani, Oct 30, 2023, 8:47 PM IST
ಸಾಗರ: ತಾಲೂಕಿನ ಹೆಗ್ಗೋಡು ಸಮೀಪದ ಗಡಿಕಟ್ಟೆಯ ಬಳಿ ರಸ್ತೆ ಪಕ್ಕದಲ್ಲಿ ಸೋಮವಾರ ಅಸ್ವಸ್ಥ ಸ್ಥಿತಿಯಲ್ಲಿದ್ದ ಅಪರೂಪದ ಚಿರತೆ ಬೆಕ್ಕು ಪತ್ತೆಯಾಗಿದೆ. ಲೆಪರ್ಡ್ ಕ್ಯಾಟ್ ಎಂದು ಕರೆಸಿಕೊಳ್ಳುವ ಈ ಚಿರತೆ ಬೆಕ್ಕನ್ನು ಗಮನಿಸಿ ನಾಯಿಗಳು ದಾಳಿ ಮಾಡಲು ಪ್ರಯತ್ನಿಸಿವೆ. ಈ ವೇಳೆ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತೀರಾ ಗಂಭೀರ ಸ್ಥಿತಿಯಲ್ಲಿದ್ದ ಸುಮಾರು ಆರು ವರ್ಷದ ವಯಸ್ಸಿನದೆಂದು ಅಂದಾಜಿಸಲಾಗಿರುವ ಚಿರತೆ ಬೆಕ್ಕನ್ನು ತತ್ ಕ್ಷಣ ಅರಣ್ಯ ಇಲಾಖೆ ಶಿವಮೊಗ್ಗದ ತಾವರೆಕೊಪ್ಪದಲ್ಲಿ ಚಿಕಿತ್ಸೆ ಕೊಡಿಸುವಲ್ಲಿ ಯಶಸ್ವಿಯಾಗಿದೆ.
ಈ ಕುರಿತಂತೆ ಚಿಕಿತ್ಸೆಯ ಮೇಲ್ವಿಚಾರಣೆ ನಡೆಸಿರುವ ತಾವರೆಕೊಪ್ಪದ ಪಶು ವೈದ್ಯ ಡಾ. ಮುರುಳಿ ಮೋಹನ್ ಪತ್ರಿಕೆಯೊಂದಿಗೆ ಮಾತನಾಡಿ, ಸುಮಾರು ಮಧ್ಯಾಹ್ನ ಮೂರೂವರೆ ಸಮಯದಲ್ಲಿ ನಮ್ಮಲ್ಲಿಗೆ ಕರೆತರಲಾದ ತುಂಬಾ ನಿಶ್ಯಕ್ತ ಸ್ಥಿತಿಯಲ್ಲಿದ್ದ ಚಿರತೆ ಬೆಕ್ಕು ಆಹಾರ ಸ್ವೀಕರಿಸಿಲ್ಲ. ಆದರೆ ಅದಕ್ಕೆ ಡ್ರಿಪ್ ನೀಡಿದ ನಂತರದಲ್ಲಿ ಒಮ್ಮೆ ಚೇತರಿಸಿಕೊಂಡು ಓಡಾಡಿದೆ. ಸ್ವಭಾವ ಸಹಜವಾಗಿ ಕಚ್ಚುವ ಪ್ರಯತ್ನ ನಡೆಸಿತ್ತು. ಆದರೆ ಅದರ ಪರಿಸ್ಥಿತಿ ಗಂಭೀರವಾಗಿಯೇ ಇದೆ. ನಾವು ಅದನ್ನು ಉಳಿಸುವ ಪೂರ್ಣ ಪ್ರಯತ್ನದಲ್ಲಿದ್ದೇವೆ. ಆದರೆ ಮಂಗಳವಾರ ಬೆಳಗಿನವರೆಗೆ ಏನನ್ನೂ ಹೇಳಲಾಗುವುದಿಲ್ಲ ಎಂದರು.
ಮೇಲ್ನೋಟದ ಪರಿಶೀಲನೆಯಂತೆ ಯಾವುದೇ ಅಪಘಾತದಿಂದ ಗಾಯಗೊಂಡಿಲ್ಲ ಅಥವಾ ಯಾರೋ ಹೊಡೆದು ಹಾಕಿದಂತಿಲ್ಲ. ಈ ಕುರಿತಂತೆ ಎಕ್ಸರೇ ತೆಗೆಯಲಾಗಿದೆ. ವಿಷಪ್ರಾಶನದ ಕುರಿತಾಗಿಯೂ ಮೊದಲ ವೀಕ್ಷಣೆಯಲ್ಲಿ ಅನುಮಾನ ವ್ಯಕ್ತವಾಗುತ್ತಿಲ್ಲ. ಈ ಸಂಬಂಧ ರಕ್ತವನ್ನು ಸಂಗ್ರಹಿಸಿ ಪ್ರಯೊಗಾಲಯಕ್ಕೆ ಕಳುಹಿಸಿಕೊಡಲಾಗಿದ್ದು, ಆ ವರದಿ ಸ್ಪಷ್ಟ ಚಿತ್ರಣ ಕೊಡಲಿದೆ ಎಂದರು.
ಲೆಪರ್ಡ್ ಕ್ಯಾಟ್‌ನ ಕುರಿತಾಗಿ ಮಾಹಿತಿ ನೀಡಿದ ಅವರು, ಇದು ಅಳಿವಿನಂಚಿನಲ್ಲಿರುವ ಪ್ರಾಣಿಗಳ ಮೊದಲ ಪಟ್ಟಿಯಲ್ಲಿಯೇ ಇದೆ. ಮಲೆನಾಡು ಭಾಗದಲ್ಲಿ ಇವುಗಳ ವಸತಿ ಕಾಣಿಸುತ್ತದೆಯಾದರೂ ರಾತ್ರಿ ವೇಳೆಯೇ ಸಂಚರಿಸುವುದರಿಂದ ಅವುಗಳು ಜನರ ಗಮನಕ್ಕೆ ಬರುವುದಿಲ್ಲ. ಇಂತಹ ಅಪರೂಪದ ಪ್ರಾಣಿಯನ್ನು ಉಳಿಸುವ ಪ್ರಯತ್ನ ನಮ್ಮ ತಂಡದ್ದು. ಇದನ್ನು 24 ಘಂಟೆಗಳ ಪರಿವೀಕ್ಷಣೆಯಲ್ಲಿ ಇಡಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.