ನಿನ್ನೆ ಸಾವಿಗೀಡಾಗಿದ್ದ ಮಹಿಳೆಯಲ್ಲಿ ಕೋವಿಡ್ ವೈರಸ್ ಪಾಸಿಟಿವ್ ದೃಢ; ರಾಜ್ಯದಲ್ಲಿ ಎರಡನೇ ಬಲಿ
Team Udayavani, Mar 26, 2020, 4:08 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಬೆಂಗಳೂರು: ಬುಧವಾರ ಸಾವಿಗೀಡಾದ ಚಿಕ್ಕಬಳ್ಳಾಪುರ ಕೋವಿಡ್ 19 ವೈರಸ್ ಶಂಕಿತ ಮಹಿಳೆಯ ದ್ವಿತೀಯ ಸೋಂಕು ಪರೀಕ್ಷಾ ವರದಿ ಬಂದಿದ್ದು, ಆ ಮಹಿಳೆಗೆ ಕೋವಿಡ್ 19 ಸೋಂಕು ತಗುಲಿರುದು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಈ ಸೋಂಕಿಗೆ ಇದುವರೆಗೆ ಇಬ್ಬರು ಬಲಿಯಾದಂತಾಗಿದೆ. ಬುಧವಾರ ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ 70 ವರ್ಷದ ಈ ಮಹಿಳೆ ಸೌದಿಅರೇಬಿಯಾ ಮೆಕ್ಕಾ ಯಾತ್ರೆ ಮುಗಿಸಿಕೊಂಡು ಮಾರ್ಚ್ 14 ರಂದು ಗೌರಿಬಿದನೂರಿಗೆ ಹಿಂದಿರುಗಿದ್ದರು.
ಸೋಂಕು ತಗಲಿರಬಹುದು ಎಂಬ ಶಂಕೆ ಹಿನ್ನೆಲೆಯಲ್ಲಿ ಈ ಮಹಿಳೆ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದು, ಬುಧವಾರ ತೀವ್ರ ಅನಾರೋಗ್ಯದಿಂದ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಆರೋಗ್ಯ ಇಲಾಖೆ ನೇತೃತ್ವದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡು ಅಂತ್ಯಕ್ರಿಯೆ ಮಾಡಲಾಗಿತ್ತು. ಸದ್ಯ ಆ ಮಹಿಳೆಯ ದ್ವಿತೀಯ ಸೋಂಕು ಪರೀಕ್ಷಾ ವರದಿ ಬಂದಿದ್ದು, ಕೋವಿಡ್ 19 ವೈರಸ್ ಸೋಂಕು ತಗುಲಿತ್ತು ಎಂಬುದು ದೃಢಪಟ್ಟಿದೆ.
ಈ ಹಿಂದೆ ಮೆಕ್ಕಾಯಾತ್ರೆ ಮುಗಿಸಿಕೊಂಡು ಬಂದಿದ್ದ ಕಲಬುರಗಿ 72 ವರ್ಷದ ವ್ಯಕ್ತಿ ಸಾವಿಗೀಡಾಗಿದ್ದರು. ಬಳಿಕ ಇದೀಗ ಈ ಮಹಿಳೆ ಸಾವಿಗೀಡಾಗಿದ್ದು, ಇಬ್ಬರಿಗೂ ಸೋಂಕು ತಗುಲಿತ್ತು, ಅದಲ್ಲದೆ ಸೋಂಕು ಪರೀಕ್ಷಾ ವರದಿಗಳು ಆ ವ್ಯಕ್ತಿಗಳು ಸಾವಿಗೀಡಾದ ಬಳಿಕವೇ ಬಂದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.