ಕಾಪು: ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ ರಾವ್ ಭೇಟಿ ; ಅಭಿವೃದ್ಧಿ ಕಾಮಗಾರಿ ಪರಿಶೀಲನೆ
Team Udayavani, Jun 27, 2020, 7:25 AM IST
ಮಹೇಶ್ವರ ರಾವ್ ವಿವಿಧ ಕಾಮಗಾರಿಗಳ ಸ್ಥಳ ಪರಿಶೀಲಿಸಿದರು.
ಕಾಪು: ಕಾಪು ವಿಧಾನ ಸಭಾ ಕ್ಷೇತ್ರದಲ್ಲಿ ರಾಜ್ಯ ಸರಕಾರದಿಂದಮಂಜೂರಾಗಿ, ಅನುಷ್ಠಾನ ಹಂತದಲ್ಲಿರುವ ವಿವಿಧ ಕಾಮಗಾರಿಗಳು ನಡೆಯಬೇಕಿರುವ ಹೆಜಮಾಡಿ ಮತ್ತು ಕಾಪುವಿನ ವಿವಿಧ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ ರಾವ್ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೆಜಮಾಡಿ ಮೀನುಗಾರಿಕಾ ಬಂದರು, ತಾಲೂಕು ಕಚೇರಿ ಸಂಕೀರ್ಣ/ ಮಿನಿ ವಿಧಾನ ಸೌಧ ಹಾಗೂ ಬೀಚ್ ಅಭಿವೃದ್ಧಿ ಕಾಮಗಾರಿಗೆ ಸರಕಾರ ಮಂಜೂರಾತಿ ನೀಡಿದೆ. ಈ ಕಾಮಗಾರಿಗಳ ಪ್ರಾರಂಭಕ್ಕೆ ಪೂರ್ವಭಾವಿಯಾಗಿ ಸ್ಥಳ ಸಮೀಕ್ಷೆ ಮತ್ತು ಯೋಜನ ಗಾತ್ರವನ್ನು ಪುನರ್ ಪರಿಶೀಲಿಸಲು ಸರಕಾರ ಸೂಚಿಸಿದೆ. ಸರಕಾರದ ಸೂಚನೆಯಂತೆ ಭೇಟಿ ನೀಡಲಾಗಿದೆ ಎಂದರು.
ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಕಾಪು ಕ್ಷೇತ್ರದಲ್ಲಿ ಹಲವು ಬೃಹತ್ ಯೋಜನೆಗಳು ಅನುಷ್ಠಾನಹಂತದಲ್ಲಿವೆ. ಜತೆಗೆ ಹೊಸ ಯೋಜನೆ ಗಳ ಅನುಷ್ಠಾನಕ್ಕೆ ರಾಜ್ಯ ಹಣಕಾಸು ಇಲಾಖೆಯ ಮಂಜೂರಾತಿ ಅಗತ್ಯವಿದ್ದು, ಸರಕಾರದ ಸೂಚನೆಯಂತೆ ಉಸ್ತುವಾರಿ ಕಾರ್ಯದರ್ಶಿ ಭೇಟಿ ನೀಡಿದ್ದಾರೆ. ಹೆಜಮಾಡಿ ಬಂದರು, ಮಿನಿ ವಿಧಾನ ಸೌಧ ನಿರ್ಮಾಣ, ಕುರ್ಕಾಲು ಕುಡಿ ಯುವ ನೀರಿನ ಯೋಜನೆ, ಬೀಚ್ ಅಭಿವೃದ್ಧಿ ಕುರಿತು ಚರ್ಚಿಸಲಾಗಿದೆ ಎಂದವರು ತಿಳಿಸಿದರು.
ಮನವಿ ಸಲ್ಲಿಕೆ
ಪಾದೂರು ಐಎಸ್‌ಪಿಆರ್‌ಎಲ್ ಯೋಜನೆಯ ಪ್ರಥಮ ಹಂತದ ಯೋಜನೆಯ ಅನುಷ್ಠಾನ ಸಂದರ್ಭ ನಡೆಸಿರುವ ಬಂಡೆ ಸ್ಫೋಟದಿಂದ ತೊಂದರೆಗೊಳಗಾದ ಸಂತ್ರಸ್ತರಿಗೆ ಈವರೆಗೂ ಪೂರ್ಣ ನಷ್ಟ ಪರಿಹಾರ ನೀಡಿಲ್ಲ. ಈಗ ಸರಕಾರ ಎರಡನೇ ಹಂತದ
ಯೋಜನೆಯ ವಿಸ್ತರಣೆಗೆ ಮುಂದಾಗಿರುವುದು ಸರಿಯಲ್ಲ. ಅದರೊಂದಿಗೆ ಜಮೀನು ಕಳೆದುಕೊಳ್ಳುವ ರೈತರಿಗೆ ನೀಡುವ ಭೂ ಮೌಲ್ಯವನ್ನೂ ಹೆಚ್ಚಿಸಬೇಕು ಎಂದು ಉಡುಪಿ ಜಿ.ಪಂ.ಸದಸ್ಯೆ ಶಿಲ್ಪಾ ಜಿ. ಸುವರ್ಣ ಅವರು ಉಸ್ತುವಾರಿ ಕಾರ್ಯದರ್ಶಿಯವರಲ್ಲಿ ಮನವಿ ಮಾಡಿದರು.
ಜಿಲ್ಲಾಧಿಕಾರಿ ಜಿ. ಜಗದೀಶ್, ತಹಶೀಲ್ದಾರ್ ಮಹಮ್ಮದ್ ಇಸಾಕ್, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ್ ನಾವಡ, ಕಂದಾಯ ಪರಿವೀಕ್ಷಕ ಕೆ. ರವಿಶಂಕರ್, ಉಪ ತಹಶೀಲ್ದಾರ್ ಚಂದ್ರಹಾಸ ಬಂಗೇರ, ಪ್ರವಾಸೋ ದ್ಯಮ ಇಲಾಖೆಯ ಸಹಾಯಕ ನಿರ್ದೇಶಕ
ಚಂದ್ರಶೇಖರ ನಾಯಕ್, ಮೆಸ್ಕಾಂ ಅಧಿಕಾರಿ ಹರೀಶ್ ಕುಮಾರ್, ಪುರಸಭೆ ಸದಸ್ಯರಾದ ಅನಿಲ್ ಕುಮಾರ್, ಮಮತಾ ಸಾಲ್ಯಾನ್, ವಿವಿಧ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಕಾಪು, ಪಡುಬಿದ್ರಿ ಬೀಚ್ ಅಭಿವೃದ್ಧಿಗೆ 9 ಕೋ. ರೂ.
ಕಾಪು ತಾಲೂಕಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ 3 ಕೋ. ರೂ. ಅನುದಾನ ಮಂಜೂರಾಗಿದೆ. 6 ಕೋ. ರೂ.ವೆಚ್ಚದ ಹೊಸ ಯೋಜನೆಯೂ ಸಿದ್ಧಗೊಳ್ಳು ತ್ತಿದೆ. ಈ ಯೋಜನೆಗಳಡಿ ಪಡುಬಿದ್ರಿ ಮತ್ತು ಕಾಪು ಬೀಚ್‌ಗಳನ್ನು ಸಮಗ್ರ ಅಭಿವೃದ್ಧಿಗೆ
ಯೋಜನೆ ರೂಪಿಸಲಾಗಿದ್ದು, ಬ್ಲೂ ಫ್ಲಾ ಗ್ ಯೋಜನೆಯಡಿ ಪಡುಬಿದ್ರಿ ಬೀಚ್‌ನ್ನು ರಾಜ್ಯದಲ್ಲೇ ಮಾದರಿಯಾಗಿ ಅಭಿವೃದ್ಧಿಗೊಳಿಸಲಾಗುವುದು. ಮಿನಿ ವಿಧಾನಸೌಧ ನಿರ್ಮಾಣ ಯೋಜನೆಯ ಯೋಜನ ಪಟ್ಟಿ ಅಂತಿಮ
ಹಂತದಲ್ಲಿದ್ದು, ಕಾಮಗಾರಿಗೆ ಶೀಘ್ರ ಚಾಲನೆ ದೊರಕಲಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ ರಾವ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.