ನೀತಿ ಆಯೋಗದಲ್ಲಿಯೂ ಶಾ ಪದನಿಮಿತ್ತ ಸದಸ್ಯ
Team Udayavani, Jun 7, 2019, 6:10 AM IST
ನವದೆಹಲಿ: ಪ್ರಧಾನಿ ರಚಿಸಿರುವ ಎಂಟು ಕೇಂದ್ರ ಸಂಪುಟ ಸಮಿತಿಗಳಲ್ಲಿ ಗೃಹ ಸಚಿವ ಅಮಿತ್ ಶಾ ಮುಖ್ಯಸ್ಥಾನ ಪಡೆದಿದ್ದಾರೆ. ಅದಕ್ಕೆ ಪೂರಕವಾಗಿ ಗುರುವಾರ ಪುನಾರಚನೆಗೊಂಡಿರುವ ನೀತಿ ಆಯೋಗದಲ್ಲಿ ಶಾ ಅವರನ್ನು ಪದನಿಮಿತ್ತ ಸದಸ್ಯ (ಎಕ್ಸ್-ಒಫಿಶಿಯೋ ಮೆಂಬರ್) ಎಂದು ಸೇರಿಸಿಕೊಳ್ಳಲಾಗಿದೆ. ಉಳಿದಂತೆ ರಾಜೀವ್ ಕುಮಾರ್ ಅವರನ್ನು ನೀತಿ ಆಯೋಗದ ಉಪಾಧ್ಯಕ್ಷರನ್ನಾಗಿ ಮುಂದು ವರಿಸಲಾಗಿದೆ. ಉಳಿದಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಇತರ ಪದನಿಮಿತ್ತ ಸದಸ್ಯರು.
ಸಾರಿಗೆ ಸಚಿವ ನಿತಿನ್ ಗಡ್ಕರಿ, ವಾಣಿಜ್ಯ ಮತ್ತು ರೈಲ್ವೇ ಸಚಿವ ಪಿಯೂಷ್ ಗೋಯಲ್, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಥಾವರ್ ಚಂದ್ ಗೆಹ್ಲೋಟ್, ಸಾಂಖ್ಯೀಕ ಸಚಿವ ರಾವ್ ಇಂದ್ರಜಿತ್ ಸಿಂಗ್ ವಿಶೇಷ ಆಹ್ವಾನಿತರಾಗಿದ್ದಾರೆ.
ನೀತಿ ಆಯೋಗದ ಹಾಲಿ ಸದಸ್ಯರಾಗಿರುವ ವಿ.ಕೆ.ಸಾರಸ್ವತ್, ರಮೇಶ್ ಚಂದ್ ಮತ್ತು ವಿ.ಕೆ.ಪೌಲ್ ಅವರ ಸದಸ್ಯತ್ವವನ್ನು ನವೀಕರಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.