ಹಿಟ್ ಲಿಸ್ಟ್ ಸೇರಿದ ರಮೇಶ್ ಅರವಿಂದ್ ಅಭಿನಯದ ‘ಶಿವಾಜಿ ಸುರತ್ಕಲ್ 2’ ಟ್ರೇಲರ್
ರಮೇಶ್ ಅರವಿಂದ್ ಅಭಿನಯದ ಸಸ್ಪೆನ್ಸ್, ಕ್ರೈಂ-ಥ್ರಿಲ್ಲರ್ ಚಿತ್ರ
Team Udayavani, Apr 3, 2023, 1:12 PM IST
ರಮೇಶ್ ಅರವಿಂದ್ ನಾಯಕನಾಗಿ ಅಬಿನಯಿಸಿರುವ “ಶಿವಾಜಿ ಸುರತ್ಕಲ್2′ ಸಿನಿಮಾದ ಬಿಡುಗಡೆಗೆ ದಿನಾಂಕ ನಿಗಧಿಯಾಗಿದೆ. ಇದೇ ಏಪ್ರಿಲ್ 14ರಂದು “ಶಿವಾಜಿ ಸುರತ್ಕಲ್ 2′ ಸಿನಿಮಾ ತೆರೆಗೆ ಬರುತ್ತಿದ್ದು, ಸದ್ಯ ಭರದಿಂದ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೀಗ “ಶಿವಾಜಿ ಸುರತ್ಕಲ್ 2′ ಸಿನಿಮಾದ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ.
ಇದೇ ವೇಳೆ ಮಾತನಾಡಿದ “ಶಿವಾಜಿ ಸುರತ್ಕಲ್ 2′ ಸಿನಿಮಾದ ನಿರ್ದೇಶಕ ಆಕಾಶ್ ಶ್ರೀವತ್ಸ, “ಎಲ್ಲರಿಗೂ ಗೊತ್ತಿರುವಂತೆ “ಶಿವಾಜಿ ಸುರತ್ಕಲ್’ ಸಿನಿಮಾ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಕೋವಿಡ್ ಲಾಕ್‌ಡೌನ್ ಜಾರಿಯಾಯಿತು. ಈ ಲಾಕ್‌ಡೌನ್ ಸಮಯದಲ್ಲೇ “ಶಿವಾಜಿ ಸುರತ್ಕಲ್ 2′ ಸಿನಿಮಾದ ಕಥೆ ಹುಟ್ಟಿತು. ನಾನು ಹಾಗೂ ರಮೇಶ್ ಅರವಿಂದ್ ವಾಟ್ಸಪ್ ಮೂಲಕ ಎರಡನೇ ಭಾಗದ ಕಥೆಯನ್ನು ಚರ್ಚಿಸಿದೆವು. ಎಲ್ಲರಿಗೂ ಲಾಕ್ ಡೌನ್ ನಿಂದ ತೊಂದರೆ ಆದರೆ, ನಮಗೆ ಮಾತ್ರ ಈ ಚಿತ್ರದ ಕಥೆ ಬರೆಯಲು ಅನುಕೂಲವಾಯಿತು. ಲಾಕ್ ಡೌನ್ ಮುಗಿಯುವ ವೇಳೆಗೆ “ಶಿವಾಜಿ ಸುರತ್ಕಲ್ 2′ ಸಿನಿಮಾದ ಬಹುತೇಕ ಸ್ಕ್ರಿಪ್ಟ್ಕೆ ಲಸಗಳು ಮುಗಿದಿತ್ತು. ಅದಾದ ನಂತರ ಸಿನಿಮಾದ ಶೂಟಿಂಗ್ ಶುರುವಾಯಿತು’ ಎಂದು “ಶಿವಾಜಿ ಸುರತ್ಕಲ್ 2′ ಸಿನಿಮಾದ ಹಿನ್ನೆಲೆ ತಿಳಿಸಿದರು.
“ಈ ಹಿಂದಿನ “ಶಿವಾಜಿ ಸುರತ್ಕಲ್’ ಸಿನಿಮಾದಲ್ಲಿದ್ದ ಬಹುತೇಕ ಪಾತ್ರಗಳು ಈ ಸಿನಿಮಾದಲ್ಲೂ ಮುಂದುವರೆಯಲಿವೆ. ಇದರ ಜೊತೆಗೆ ಇನ್ನಷ್ಟು ಹೊಸ ಪಾತ್ರಗಳು ಕೂಡ ಸೇರ್ಪಡೆಯಾಗಿವೆ. ಈ ಬಾರಿ ಶಿವಾಜಿ ಮತ್ತೂಂದು ಹೊಸ ಕೇಸ್ ಹೊತ್ತು ಬರಲಿದ್ದಾನೆ. ಎಲ್ಲರಲ್ಲೂ ಮನೆ ಮಾಡಿರುವ ಮಾಯಾವಿ ಯಾರು? ಎಂಬ ಪ್ರಶ್ನೆಗೆ ಸಿನಿಮಾ ರಿಲೀಸ್ ಆದ ನಂತರ ಉತ್ತರ ಸಿಗಲಿದೆ’ ಎಂಬುದು ನಿರ್ದೇಶಕ ಆಕಾಶ್ ಶ್ರೀವತ್ಸ ಮಾತು.
ಸಿನಿಮಾದ ಬಗ್ಗೆ ಮಾತನಾಡಿದ ನಟ ರಮೇಶ್ ಅರವಿಂದ್, “ಒಂದೊಳ್ಳೆ ತಂಡದ ಜೊತೆಗೆ ಕೆಲಸ ಮಾಡಿದ ಖುಷಿಯಿದೆ. “ಶಿವಾಜಿ ಸುರತ್ಕಲ್ 2′ ಸಿನಿಮಾದ ಟ್ರೇಲರ್ ಎಲ್ಲರಿಗೂ ಇಷ್ಟವಾಗುವಂತಿದೆ. ಇದೇ ಏಪ್ರಿಲ್ 14 ನಮ್ಮ ಸಿನಿಮಾ ಬಿಡುಗಡೆಯಾಗುತ್ತಿದೆ. ನಾನು ಪ್ರತಿ ವೀಕೆಂಡ್ ನಿಮ್ಮ ಮನೆಗೆ ಬರುತ್ತೇನೆ. ನೀವು ಕುಟುಂಬ ಸಮೇತ ನಮ್ಮ ಚಿತ್ರ ನೋಡಲು ಚಿತ್ರಮಂದಿರಕ್ಕೆ ಬನ್ನಿ’ ಎಂದರು. “ಸಿನಿಮಾ ತುಂಬ ಚೆನ್ನಾಗಿ ಬಂದಿದ್ದು, ಆಡಿಯನ್ಸ್‌ಗೆ ಇಷ್ಟವಾಗುವಂಥ ಹಲವು ಸಂಗತಿಗಳಿವೆ. ಎಲ್ಲರ ಸಹಕಾರದಿಂದ ಒಂದು ಒಳ್ಳೆಯ ಸದಭಿರುಚಿ ಸಿನಿಮಾ ನಿರ್ಮಿಸಿದ್ದೇವೆ ಎಂಬ ಹೆಮ್ಮೆಯಿದೆ’ ಎಂಬುದು ನಿರ್ಮಾಪಕ ಅನೂಪ್ ಗೌಡ ಮಾತು.
“ಶಿವಾಜಿ ಸುರತ್ಕಲ್ 2′ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ನಟಿಯರಾದ ರಾಧಿಕಾ ಚೇತನ್, ಮೇಘನಾ ಗಾಂವ್ಕರ್, ಸಂಗೀತಾ ಶೃಂಗೇರಿ ಕೂಡ ಸಿನಿಮಾದ ಬಗ್ಗೆ ಮತ್ತು ತಮ್ಮ ಪಾತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯನ್ನು ವ್ಯಕ್ತಪಡಿಸಿದರು. ನಟರಾದ ರಘು ರಮಣಕೊಪ್ಪ, ವಿನಾಯಕ ಜೋಶಿ, ವಿದ್ಯಾಮೂರ್ತಿ ಮುಂತಾದವರು ತಮ್ಮ ಪಾತ್ರ ಹಾಗೂ ಚಿತ್ರದ ಬಗ್ಗೆ ಮಾತನಾಡಿದರು. ಸದ್ಯ “ಆನಂದ್ ಆಡಿಯೋ’ ಯು-ಟ್ಯೂಬ್ ಚಾನೆಲ್‌ನಲ್ಲಿ “ಶಿವಾಜಿ ಸುರತ್ಕಲ್ 2′ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಸಿನಿಮಾದ ಬಗ್ಗೆ ಇರುವ ಎಲ್ಲ ಕುತೂಹಲಗಳಿಗೆ ಏಪ್ರಿಲ್ 14ಕ್ಕೆ ಉತ್ತರ ಸಿಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.