Baindur: ವಿಎಗಳ ಕೊರತೆ: ಹೈರಾಣಾಗುತ್ತಿರುವ ಗ್ರಾಮಸ್ಥರು

ಒಬ್ಬೊಬ್ಬ ಅಧಿಕಾರಿಗೆ ಮೂರ್‍ನಾಲ್ಕು ಗ್ರಾಮಗಳು; ಗ್ರಾಮಾಡಳಿತಕ್ಕೆ ಅಧಿಕಾರಿ ಬಂದರೇ ಅದೃಷ್ಟ ; ಕೆಲಸ ಮಾಡಿದರೆ ದೊಡ್ಡ ಅದೃಷ್ಟ

Team Udayavani, Aug 14, 2024, 1:30 PM IST

Baindur: ವಿಎಗಳ ಕೊರತೆ: ಹೈರಾಣಾಗುತ್ತಿರುವ ಗ್ರಾಮಸ್ಥರು

ಬೈಂದೂರು: ಕೆಲವು ಗ್ರಾಮಗಳಲ್ಲಿ ಗ್ರಾಮ ಆಡಳಿತಾಧಿಕಾರಿಗಳನ್ನು ಹಿಡಿಯುವುದೇ ಗ್ರಾಮಸ್ಥರಿಗೆ ಹರಸಾಹಸ. ಯಾಕೆಂದರೆ ಇಂದು ಬಂದರೆ ಮುಂದಿನ ವಾರದವರೆಗೂ ದರ್ಶನವಿಲ್ಲ!

ಗ್ರಾಮ ಆಡಳಿತಾಧಿಕಾರಿಗಳ (ವಿಎ) ಕೊರತೆಯಿಂದ ಒಬ್ಬೊಬ್ಬ ಅಧಿಕಾರಿಗೆ ಮೂರ್ನಾಲ್ಕು ಗ್ರಾಮಗಳ ಉಸ್ತುವಾರಿ ಕೊಟ್ಟಿರುವುದರ ಪರಿಣಾಮವಿದು. ಇನ್ನೂ ವಿಚಿತ್ರವೆಂದರೆ ಒಂದೊಂದು ದಿನ ಒಂದೊಂದು ಗ್ರಾಮಕ್ಕೆ ನಿಗದಿಯಾಗಿರುತ್ತದೆ. ಅಂದೇನಾದರೂ ಜಿಲ್ಲಾ ಕಚೇರಿಯಲ್ಲೋ ತಾಲೂಕು ಕಚೇರಿಯಲ್ಲೋ ಹಿರಿಯ ಅಧಿಕಾರಿಗಳ ಸಭೆಗೆ ಬುಲಾವ್‌ ಇದ್ದರೆ ಮುಗಿಯಿತು. ಆ ಊರಿನ ಗ್ರಾಮಸ್ಥರು ಮುಂದಿನ ಅಮಾವಾಸ್ಯೆಗೋ, ಹುಣ್ಣಿಮೆಗೋ ಕಾಯಬೇಕು. ಆಗ ಅಧಿಕಾರಿಗಳು ಪ್ರತ್ಯಕ್ಷ ಆದರೂ ಆದಾರು!

ಇದು ಉಡುಪಿ ಜಿಲ್ಲೆಯ ಹಲವು ಗ್ರಾಮಗಳ ಕಥೆ. ಪಹಣಿಯಿಂದ ಹಿಡಿದು ಹಲವು ಕಾರ್ಯಗಳಿಗೆ ಈ ಆಡಳಿತಾಧಿಕಾರಿ ಬೇಕೇಬೇಕು. ಆದರೆ ಗ್ರಾಮಸ್ಥರಿಗೆ ಇವರನ್ನು ಹಿಡಿದು ಕೆಲಸ ಮಾಡಿಸಿಕೊಳ್ಳುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಗ್ರಾಮ ಆಡಳಿತಾಧಿಕಾರಿಗಳು ಈ ಹಿಂದಿನ ಗ್ರಾಮ ಲೆಕ್ಕಿಗನ ಕಾರ್ಯವನ್ನು ನಿಭಾಯಿಸುವುದರಿಂದ ಪ್ರತಿ ಕಾರ್ಯಕ್ಕೂ ಈ ರಾಯರ ಅಪ್ಪಣೆ ಇರಬೇಕು.

ಜಿಲ್ಲೆಯಲ್ಲಿ 188 ಗ್ರಾಮ ವೃತ್ತಗಳಿವೆ. ಅವುಗಳನ್ನು 98 ಮಂದಿ ಗ್ರಾಮ ಆಡಳಿತಾಧಿಕಾರಿಗಳು ನಿಭಾಯಿಸಬೇಕು. ಸದ್ಯಕ್ಕೆ ಲೆಕ್ಕಕ್ಕೆ 90 ಮಂದಿ ಈ ಆಧಿಕಾರಿಗಳ ಕೊರತೆ ಇದೆ. ಇದರೊಂದಿಗೆ ಇರುವ ಅಧಿಕಾರಿಗಳಲ್ಲೂ ಒಂದಿಷ್ಟು ಮಂದಿ ಆರೋಗ್ಯ ಕಾರಣಕ್ಕೆ ರಜೆಯೋ, ಮತಾöವುದೋ ಕಾರಣಕ್ಕೆ ರಜೆ, ಪ್ರವಾಸ ಎಂದು ಹೋದಾಗ ಉಳಿದ ಅಧಿಕಾರಿಗಳೇ ಎಲ್ಲವನ್ನೂ ನಿಭಾಯಿಸಬೇಕು. ಹಾಗಾಗಿ ಕೆಲವರಿಗೆ ನಾಲ್ಕೈದು ಗ್ರಾಮಗಳ ಹೊಣೆಯೂ ಇದೆ. ಒಟ್ಟಿನಲ್ಲಿ ಈ ಜಿಲ್ಲಾಡಳಿತದ ಸರ್ಕಸ್‌ನಲ್ಲಿ ಅಂತಿಮವಾಗಿ ಗ್ರಾಮಸ್ಥರು ಹೈರಾಣಾಗತೊಡಗಿದ್ದಾರೆ.

ಅಧಿಕಾರಿಗಳ ಮಹತ್ವ ಏಕೆ?

ಭೂದಾಖಲೆ, ಪಹಣಿ ಖಾತೆ ರಚಿಸುವುದು, ಎಂ ಆರ್‌ ನಿರ್ವಹಣೆ, ದಾಖಲೆ ನಿರ್ವಹಣೆ, ಜಮಾಬಂದಿ ಲೆಕ್ಕ ತಯಾರಿ, ಜನನ ಮರಣ ಪತ್ರ ನೋಂದಣಿ, ಬೆಳೆ ನಷ್ಟ ವರದಿ ನೀಡುವುದು, ಜಾತಿ, ಆದಾಯ ಸಹಿ ತ ವಿವಿಧ ದೃಢಪತ್ರ ನೀಡುವುದು, ವೃದ್ಧಾಪ್ಯ, ಅಂಗವಿಕಲ ಹಾಗೂ ವಿಧವಾ ವೇತನ ಕಡತ ರಚಿಸುವುದು, ಇತ್ಯಾದಿ ಈ ಗ್ರಾಮ ಆಡಳಿತಾಧಿಕಾರಿಗಳ ಪ್ರಮುಖ ಕೆಲಸವಾಗಿದೆ.

ಗ್ರಾಮಗಳು 26, ಅಧಿಕಾರಿಗಳು

ಬರೀ ಆರು ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ 18 ವೃತ್ತಗಳಿವೆ. 26 ಗ್ರಾಮಗಳಿವೆ. ಇವುಗಳ ಹೊಣೆಯನ್ನು 6 ಮಂದಿ ಅಧಿಕಾರಿಗಳು ನಿಭಾಯಿಸಬೇಕಿದೆ. ಅಂದರೆ ಒಬ್ಬೊಬ್ಬರಿಗೆ ಮೂರು ವೃತ್ತಗಳು, 4 ಗ್ರಾಮಗಳು. ಇದರ ಮಧ್ಯೆ ಜಿಲ್ಲಾಡಳಿತದಿಂದ ಬೈಂದೂರಿಗೆ ನಿಯುಕ್ತಿಗೊಂಡಿರುವ ಐದು ಅಧಿಕಾರಿಗಳು ತಾಲೂಕು ಕಚೇರಿಯಲ್ಲಿ ಗುಮಾಸ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಗ್ರಾಮಸ್ಥರು ಆಡಳಿತಾಧಿಕಾರಿಯ ದರ್ಶನ ಪಡೆಯಲು ವಾರಗಟ್ಟಲೆ ಕಾಯಬೇಕಿದೆ.

ವಾರಕ್ಕೊಮ್ಮೆ ಭೇಟಿ

ಉದಾಹರಣೆಗೆ ಉಡುಪಿ ತಾಲೂಕಿನ ಕೊಡವೂರು, ಮೂಡನಿಡಂಬೂರು, ಆತ್ರಾಡಿ, ಹಿರೇಬೆಟ್ಟು, ಪೆರ್ಣಂಕಿಲ ಗ್ರಾಮಕ್ಕೆ ಇರುವುದು ಒಬ್ಬರೇ ಅಧಿಕಾರಿ. ಅವರು ದಿನಕ್ಕೆ ಒಂದು ಗ್ರಾಮ ಎಂದರೂ ಐದು ದಿನಕ್ಕೆ ಐದು ಗ್ರಾಮಗಳಿಗೆ ಮಾತ್ರ ಭೇಟಿ ನೀಡಲು ಸಾಧ್ಯ. ಅದರಲ್ಲೂ ಮಳೆ ಹಾನಿ, ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಅಧಿಕಾರಿಗಳು ಇಲ್ಲಿಗೆ ಬರಬೇಕು. ಆಗ ಗ್ರಾಮಸ್ಥರಿಗೆ ವಾರದ ಒಂದು ದರ್ಶನವೂ ಕೈ ತಪ್ಪಿದಂತಾಗುತ್ತದೆ. ಇದರಿಂದ ಒಂದು ದಾಖಲೆ ಪಡೆಯಲು ಹಲವಾರು ಬಾರಿ ಸುತ್ತಾಡಬೇಕಾದ ಪರಿಸ್ಥಿತಿ ಇದೆ.  ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಇದೇ ಪರಿಸ್ಥಿತಿ ಇದೆ.

ಜಾಗ ಬಿಡದ ಲೆಕ್ಕಾಧಿಕಾರಿಗಳು!

ಸಿಬಂದಿ ಕೊರತೆಯ ಸಮಸ್ಯೆ ಒಂದೆಡೆಯಾದರೆ, ಇನ್ನೊಂದೆಡೆ ರಾಜಕೀಯ ಪ್ರಭಾವ, ಉನ್ನತ ಅಧಿಕಾರಿಗಳ ಕೃಪಾಕಟಾಕ್ಷದಿಂದ ಕೆಲವು ಗ್ರಾಮಗಳಲ್ಲಿ ಐದಾರು ವರ್ಷಗಳಿಂದ ಠಿಕಾಣಿ ಹೂಡಿರುವ ಅಧಿಕಾರಿಗಳು ಅಲ್ಲಿಂದ ಕದಲಲು ಸಿದ್ಧರೇ ಇಲ್ಲ. ಒಂದುವೇಳೆ ವರ್ಗಾವಣೆ ಪಟ್ಟಿಗೆ ಹೆಸರು ಸಿದ್ಧವಾದರೂ ಹೇಗಾದರೂ ಮಾಡಿ ರದ್ದು ಮಾಡಿಕೊಳ್ಳುವ ಕೆಲವರಿದ್ದಾರೆ. ಇನ್ನು ಕೆಲವರು ವರ್ಗಾವಣೆಯಾದರೂ ಹೊಸ ಸ್ಥಳಕ್ಕೆ ಹೋಗದೇ ಅಲ್ಲಿ ಇಲ್ಲಿ ಸುತ್ತಾಡಿ ವರ್ಗಾವಣೆ ರದ್ದುಪಡಿಸಿ ಕೊಂಡು ಹಳೆಯ ಜಾಗಕ್ಕೇ ವಾಪಸಾಗುವವರಿದ್ದಾರೆ. ರಾಜ್ಯ ಸರಕಾರ ನಾಲ್ಕೈದು ವರ್ಷ ಒಂದೇ ಗ್ರಾಮದಲ್ಲಿರುವ ಇಂಥ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ನಿರ್ಧರಿಸಿತಾದರೂ, ಜಿಲ್ಲಾ ಮಟ್ಟದಲ್ಲಿ ಅನುಷ್ಠಾನವಾಗದಿರುವುದು ಗ್ರಾಮ ಮಟ್ಟದ ಆಡಳಿತದಲ್ಲಿ ಭ್ರಷ್ಟಾಚಾರಕ್ಕೂ ಕಾರಣವಾಗುತ್ತಿರುವ ಆರೋಪ ಎದುರಾಗಿದೆ.

6 ತಿಂಗಳಲ್ಲಿ ಹುದ್ದೆ ಭರ್ತಿ

ಜಿಲ್ಲೆಗೆ ಬೇಕಿರುವ ವಿ.ಎ.ಗಳ ಮಾಹಿತಿಯನ್ನು ರಾಜ್ಯದಿಂದ ಕೇಳಲಾಗಿದ್ದು, ಮಾಹಿತಿ ಒದಗಿಸಿದ್ದೇವೆ. ಕಂದಾಯ ಇಲಾಖೆಯಿಂದ ರಾಜ್ಯಕ್ಕೆ ಅನ್ವಯವಾಗುವಂತೆ ನೇಮಕಾತಿ ಕೆಪಿಎಸ್‌ಸಿ ಮೂಲಕ ನಡೆಯಲಿದೆ. ಮುಂದಿನ 6 ತಿಂಗಳಲ್ಲಿ ಹುದ್ದೆ ಭರ್ತಿಯಾಗುವ ಸಾಧ್ಯತೆಯಿದೆ.

-ಡಾ| ಕೆ. ವಿದ್ಯಾಕುಮಾರಿ, ಜಿಲ್ಲಾಧಿಕಾರಿ ಉಡುಪಿ

ಅಧಿಕಾರಿಗಳ ಮಹತ್ವ ಏಕೆ?

ಭೂದಾಖಲೆ, ಪಹಣಿ ಖಾತೆ ರಚಿಸುವುದು, ಎಂ ಆರ್‌ ನಿರ್ವಹಣೆ, ದಾಖಲೆ ನಿರ್ವಹಣೆ, ಜಮಾಬಂದಿ ಲೆಕ್ಕ ತಯಾರಿ, ಜನನ ಮರಣ ಪತ್ರ ನೋಂದಣಿ, ಬೆಳೆ ನಷ್ಟ ವರದಿ ನೀಡುವುದು, ಜಾತಿ, ಆದಾಯ ಸಹಿತ ವಿವಿಧ ದೃಢಪತ್ರ ನೀಡುವುದು, ವೃದ್ಧಾಪ್ಯ, ಅಂಗವಿಕಲ ಹಾಗೂ ವಿಧವಾ ವೇತನ ಕಡತ ರಚಿಸುವುದು, ಇತ್ಯಾದಿ  ಈ ಗ್ರಾಮ ಆಡಳಿತಾಧಿಕಾರಿಗಳ ಪ್ರಮುಖ ಕೆಲಸವಾಗಿದೆ.

ಗ್ರಾಮಗಳು 26, ಅಧಿಕಾರಿಗಳು ಬರೀ ಆರು

ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ 18 ವೃತ್ತಗಳಿವೆ. 26 ಗ್ರಾಮಗಳಿವೆ. ಇವುಗಳ ಹೊಣೆಯನ್ನು 6 ಮಂದಿ ಅಧಿಕಾರಿಗಳು ನಿಭಾಯಿಸಬೇಕಿದೆ. ಅಂದರೆ ಒಬ್ಬೊºಬ್ಬರಿಗೆ ಮೂರು ವೃತ್ತಗಳು, 4 ಗ್ರಾಮಗಳು. ಇದರ ಮಧ್ಯೆ ಜಿಲ್ಲಾಡಳಿತದಿಂದ ಬೈಂದೂರಿಗೆ ನಿಯುಕ್ತಿಗೊಂಡಿರುವ ಐದು ಅಧಿಕಾರಿಗಳು ತಾಲೂಕು ಕಚೇರಿಯಲ್ಲಿ ಗುಮಾಸ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಗ್ರಾಮಸ್ಥರು ಆಡಳಿತಾಧಿಕಾರಿಯ ದರ್ಶನ ಪಡೆಯಲು ವಾರಗಟ್ಟಲೆ ಕಾಯಬೇಕಿದೆ.

–  ಅರುಣ್‌ ಕುಮಾರ್‌ ಶಿರೂರು

ಟಾಪ್ ನ್ಯೂಸ್

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು

Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು

Gurunandan

Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್‌ ಬಾಂಡ್‌’ ಚಿತ್ರ

2

N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು

Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು

Gurunandan

Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್‌ ಬಾಂಡ್‌’ ಚಿತ್ರ

2

N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.