Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Team Udayavani, Jan 5, 2025, 3:08 PM IST
ಮುಂಬಯಿ: ಅಕ್ಷಯ್ ಕುಮಾರ್ ( Akshay Kumar) ಅಭಿನಯದ ಬಾಲಿವುಡ್‌ನ ಬಹುನಿರೀಕ್ಷಿತ ʼಸ್ಕೈ ಫೋರ್ಸ್ʼ (Sky Force) ಚಿತ್ರದ ಟ್ರೇಲರ್ ರಿಲೀಸ್ ಆಗಿದೆ.
ಭಾರತದ ಮೊದಲ ವೈಮಾನಿಕ ದಾಳಿಯ ಕಥೆಯನ್ನು ʼಸ್ಕೈ ಫೋರ್ಸ್ʼ ಹೇಳಲಿದೆ. ಶತ್ರು ದೇಶ ಪಾಕಿಸ್ತಾನದ ಮೇಲೆ ಏರ್ ಸ್ಟ್ರೈಕ್ ಮಾಡುವ ದೃಶ್ಯವನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ.
ಅಂದಿನ ಪಾಕ್ ಅಧ್ಯಕ್ಷ ಮಹಮದ್ ಆಯೂಬ್ ಖಾನ್ ರೇಡಿಯೋ ಪಾಕಿಸ್ತಾನದಲ್ಲಿ ಭಾರತಕ್ಕೆ ಸವಾಲು ಎಸೆಯುವ ಧ್ವನಿಯನ್ನು ಕೇಳಿಸಲಾಗಿದೆ. ಯುದ್ಧದ ಬಗ್ಗೆ ಅಂದು ಅಯೂಬ್ ಖಾನ್ ಮಾತನಾಡಿರುವುದನ್ನು ತೋರಿಸುವ ಮೂಲಕ ಟ್ರೇಲರ್ ಝಲಕ್ ಆರಂಭವಾಗಿದೆ.
ನಮ್ಮ ಪಕ್ಕದ ದೇಶದವರಿಗೆ ನಾವು ಕೂಡ ನುಗ್ಗಿ ಹೊಡೆಯಬಹುದೆಂದು ಹೇಳಬಹುದು. ಇಲ್ಲ ನಾವು ಇದನ್ನು ಮಾಡಲು ಆಗುವುದಿಲ್ಲ ನಮ್ಮದು ಶಾಂತ ಬಯಸುವ ದೇಶವೆಂದು ಸೇನೆಯ ಅಧಿಕಾರಿಯೊಬ್ಬರು ಹೇಳಿರುವುದನ್ನು ತೋರಿಸಲಾಗಿದೆ. ಇದಕ್ಕೆ ನಮ್ಮ ಯೋಚನೆ ಬದಲಾಗಬೇಕು ಎಂದು ಹೇಳಿ ಯುದ್ಧಕ್ಕೆ ಅಣಿಯಾಗುವ ಸನ್ನಿವೇಶವನ್ನು ತೋರಿಸಲಾಗಿದೆ.
ಪಾಕಿಸ್ತಾನದ ಭಾರತೀಯ ಸೇನೆ ವೈಮಾನಿಕ ದಾಳಿಯನ್ನು ಮಾಡುವ ದೃಶ್ಯವನ್ನು ತೋರಿಸುವುದರ ಜತೆಗೆ ದೇಶ ಭಕ್ತಿಯನ್ನು ಉಕ್ಕಿಸುವ ಡೈಲಾಗ್ಸ್‌ಗಳು ಗಮನ ಸೆಳೆಯುತ್ತದೆ.
ಟಿ.ಕೆ. ವಿಜಯನ್ (ಟ್ಯಾಬಿ) ಎಂಬ ಏರ್ ಫೋರ್ಸ್ ಟೀಮ್ ಮೆಂಬರ್ ಏರ್ ಸ್ಟ್ರೈಕ್ ವೇಳೆ ನಾಪತ್ತೆಯಾಗಿದ್ದು, ಆತನ ಹುಡುಕಾಟದ ಸುತ್ತವೂ ಕಥೆ ಸಾಗಲಿದೆ ಎನ್ನುವುದನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ.
ಅಕ್ಷಯ್ ಕುಮಾರ್ ಅವರ ಜತೆಗೆ ನವನಟ ವೀರ್ ಪಹಾರಿಯಾ ಅವರು ಪ್ರಧಾನ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರೊಂದಿಗೆ ಸಾರಾ ಅಲಿ ಖಾನ್ ಮತ್ತು ನಿಮ್ರತ್ ಕೌರ್ ಅವರು ಕೂಡ ಪಾತ್ರವರ್ಗದಲ್ಲಿದ್ದಾರೆ.
ಸಂದೀಪ್ ಕೆಲ್ವಾನಿ ಮತ್ತು ಅಭಿಷೇಕ್ ಕಪೂರ್ ನಿರ್ದೇಶನ ಮಾಡಲಿದ್ದು, ದಿನೇಶ್ ವಿಜನ್ ಮತ್ತು ಜ್ಯೋತಿ ದೇಶಪಾಂಡೆ ನಿರ್ಮಿಸಲಿದ್ದಾರೆ.
ಜನವರಿ 24ಕ್ಕೆ ಚಿತ್ರ ರಿಲೀಸ್ ಆಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾನೇ ಇಂಡಿಯಾ..ನಾನೇ ಕ್ಯಾಬಿನೆಟ್.. ʼಎಮರ್ಜೆನ್ಸಿʼಯಲ್ಲಿ ಇಂದಿರಾ ಗಾಂಧಿಯಾಗಿ ಮಿಂಚಿದ ಕಂಗನಾ
Armaan Malik: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕ ಅರ್ಮಾನ್ ಮಲಿಕ್; ಇಲ್ಲಿದೆ ಫೋಟೋಸ್
ಹಲವು ಬಾರಿ ಸಾಯುವ ಬಗ್ಗೆ ಯೋಚಿಸಿದ್ದೆ.. #MeToo ಆರೋಪದ ಬಗ್ಗೆ ನಿರ್ದೇಶಕ ಸಾಜಿದ್ ಮಾತು
Transformation; ಕೇವಲ 18 ತಿಂಗಳಲ್ಲಿ 55 ಕೆ.ಜಿ. ತೂಕ ಕಳೆದುಕೊಂಡ ಖ್ಯಾತ ನಟ ರಾಮ್ ಕಪೂರ್
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.